ಸಿನಿಮಾ, ಸುದ್ದಿ

ಅಪಘಾತವಾಗಿ 40 ನಿಮಿಷಗಳ ಕಾಲ ವಿಲವಿಲ ಎಂದು ಒದ್ದಾಡಿ ನಿಧನ ಹೊಂದಿದ ನಟ ಸುನಿಲ್.!

659

ಹುಡುಗಿಯರ ಎದೆಗೆ ಕನ್ನ ಹಾಕಿದ ಚಾಕ್ಲೇಟ್ ಹೀರೋ. ತನ್ನ ಮುದ್ದು ಮುಖದ ಚೆಲುವಿನಿಂದ ಹುಡುಗಿಯರ ನಿದ್ದೆ ಕದ್ದ ಚೋರನೀತ. ಹುಡುಗ ಅಂದ್ರೆ ಇವನ ತರ ಸುಂದರವಾಗಿರಬೇಕು ಅಂತ ಹುಡುಗಿಯರ ಮನದಲ್ಲಿ ಆಸೆ ಹುಟ್ಟಿಸಿದವ. ಅವನೇ ಸುನಿಲ್. ಬೆಳ್ಳಿಕಾಲುಂಗುರ ಸುನಿಲ್ ಅಂತಾನೆ ಇವತ್ತಿಗೂ ಫೇಮಸ್. ಮಂಗಳೂರು ಮೂಲದವರಾದ ಸುನೀಲ್ 1991 ರಲ್ಲಿ ಚಿತ್ರರಂಗಕ್ಕೆ ದ್ವಾರಕೀಶ್ ಅವರ ನಿರ್ದೇಶನದ ಶ್ರುತಿ ಚಿತ್ರದ ಮೂಲಕ ಎಂಟ್ರಿ ಕೊಡ್ತಾರೆ. ನಂತರ ಕನಸಿನ ರಾಣಿ ಮಾಲಾಶ್ರಿ ಜೊತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಾರೆ. ತೊಂಬತ್ತರ ದಶಕದಲ್ಲಿ ಇವರಿಬ್ಬರದು ಹಿಟ್ ಜೋಡಿ.

ಸುನಿಲ್ ಮತ್ತು ಮಾಲಾಶ್ರೀ ಹಲವಾರು ಹಿಟ್ ಚಿತ್ರಗಳನ್ನು ನೀಡಿದರು. ಬೆಳ್ಳಿ ಕಾಲುಂಗುರ ,ಸಿಂಧೂರ ತಿಲಕ, ಮನಮೆಚ್ಚಿದ ಸೊಸೆ ,ಮರಣ ಮೃದಂಗ ಹೀಗೆ ಅನೇಕ ಚಿತ್ರಗಳಲ್ಲಿ ಈ ಜೋಡಿ ರೊಮ್ಯಾಂಟಿಕ್ ಆಗಿ ನಡೆಸಿ ಸೈ ಎನಿಸಿಕೊಂಡರು ಈ ಜೋಡಿ ತೆರೆಯ ಮೇಲೆ ಬಹಳ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುತ್ತಿತ್ತು. ಮಾಲಾಶ್ರೀ ಸ್ವಲ್ಪ ಜೋರು ಅನಿಸ್ಸಿದ್ರು ಸುನಿಲ್ ಅವರ ಚಾಕಲೇಟು ಹೀರೊ ಇಮೇಜ್ ಅದಕ್ಕೆ ಹೇಳಿ ಮಾಡಿಸಿದ ಹಾಗೆ ಇರ್ತಿತ್ತು.

ಶ್ರುತಿ ಚಿತ್ರದಿಂದ ಪ್ರಾರಂಭವಾದ ಸುನಿಲ್ ಅವರ ಸಿನಿ ಪಯಣ ತದನಂತರ, ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಬೆಳ್ಳಿ ಕಾಲುಂಗುರ, ಮಾಂಗಲ್ಯ, ನಗು ನಗುತಾ ನಲಿ, ನಗರದಲ್ಲಿ ನಾಯಕರು, ಸಿಡಿದೆದ್ದ ಶಿವ ಹೀಗೆ ಹತ್ತು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ ಸುನಿಲ್ ತೆಲುಗು ಚಿತ್ರರಂಗದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರು. ಮಾಲಾಶ್ರೀ ಮತ್ತು ಸುನೀಲ್ ಅವರ ಜೋಡಿ ಆ ಸಮಯದಲ್ಲಿ ಕನ್ನಡ ಚಿತ್ರರಂಗದ ಮೋಸ್ಟ್ ಫೇವರಿಟ್ ಜೋಡಿಯಾಗಿತ್ತು.

ಇವರು ಒಟ್ಟಾಗಿ ಅಭಿನಯಿಸಿದ ಚಿತ್ರಗಳು ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ತೆರೆಯ ಮೇಲೆ ಮೋಡಿ ಮಾಡಿದ್ದ ಈ ಜೋಡಿ ನಿಜಜೀವನದಲ್ಲಿ ಒಂದಾಗಬೇಕು ಎಂದು ಅದೆಷ್ಟೋ ಅಭಿಮಾನಿಗಳು ಕನಸು ಕಂಡಿದ್ದರು. ಅಂತೆಯೇ ಸುನೀಲ್ ಮತ್ತು ಮಾಲಾಶ್ರೀ ಪ್ರೇಮದಲ್ಲಿದ್ದಾರೆ ಎಂಬ ವಿಷಯ ಸಿನಿಮಾ ರಂಗದಲ್ಲಿ ಹರಡಿತ್ತು. ಮೂಲಗಳ ಪ್ರಕಾರ ತಾವು ವಿವಾಹವಾಗುತ್ತೇನೆ ಎಂದು ಹೇಳಿಕೊಂಡಿದ್ದರಂತೆ.

ಯಶಸ್ಸಿನ ಮೆಟ್ಟಿಲು ಹತ್ತುತ್ತಿರಬೇಕಾದರೆನೇ ಜವರಾಯ ಸುನೀಲ್ ಗಾಗಿ ಕಾಯುತ್ತಿದ್ದ ಅನ್ಸತ್ತೆ. 1994 ರಂದು ಸುನಿಲ್‌ ಮಾಲಾಶ್ರೀ ಮತ್ತು ಪ್ರೊಡ್ಯೂಸರ್ ಸಚಿನ್ ಮಲ್ಲಿ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಲ್ಲಿ ಬರಬೇಕಾದರೆ ಟ್ರಕ್ಕೊಂದು ಸುನೀಲ್ ಅವರ ಕಾರಿಗೆ ಗುದ್ದತ್ತೆ. ಸುನಿಲ್ ಸ್ಥಳದಲ್ಲೇ ಸಾವನ್ನಪ್ಪುತ್ತಾರೆ. 
ದುಃಖಕರ ವಿಷಯವೇನೆಂದರೆ ಅಪಘಾತವಾದ ನಂತರ ನಲವತ್ತು ನಿಮಿಷಗಳ ಕಾಲ ಸುನೀಲ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಆದರೆ ಸುನೀಲ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಸಾವಿನಿಂದ ಚಿತ್ರರಂಗ ಬಹಳ ಭಾವುಕದಿಂದ ಕೂಡಿತ್ತು.

ಸುನೀಲ್ ಅವರ ಸಮಾಧಿಯಲ್ಲಿ ಒಂದು ಮರವನ್ನು ನೆಟ್ಟಿದ್ದ ಸುನಿಲ್ ತಾಯಿ, ಈಗಲೂ ಕೂಡ ಆ ಮರವನ್ನೆ ತನ್ನ ಮಗ ಎಂದು ನಂಬಿ ಜೀವನ ಸಾಗಿಸುತ್ತಿದ್ದಾರೆ.! ಮಗನ ಸಾವಿನಿಂದ ಮನ ನೊಂದಿರುವ ಆ ವಯಸ್ಸಾದ ತಾಯಿ, ನನ್ನ ಮಗನ ಸಾವಿಗೆ ಇಲ್ಲಸಲ್ಲದ ಬಣ್ಣಗಳನ್ನು ಕಟ್ಟಬೇಡಿ, ಇಡೀ ಚಿತ್ರರಂಗ ನನ್ನ ಮಗನ ಜೊತೆ ಆತ್ಮೀಯವಾಗಿತ್ತು. ಅವನ ಸಾವು ಆಕಸ್ಮಿಕ ,ಅವನ ಹಣೆಯಲ್ಲಿ ಬರೆದದ್ದು ಇಷ್ಟೇ ಇದು ವಿಧಿಲಿಖಿತ. ಎಂದು ಭಾವುಕರಾಗಿದ್ದಾರೆ. ಅಂದು ಕರ್ನಾಟಕ ಫಿಲಂ ಇಂಡಸ್ಟ್ರಿ ಒಂದು ಒಳ್ಳೆಯ ನಾಯಕನನ್ನು ಕಳೆದುಕೊಳ್ಳುತ್ತೆ. ಸಾವು ಯಾರಿಗೆ ಯಾವಾಗ ಹೇಗೆ ಬರುತ್ತೆ ಅಂತ ಹೇಳಕಾಗಲ್ಲ. ಯಾರೇ ಆದ್ರು ಸಾವಿಗೆ ಸೋಲಲೇ ಬೇಕು. ಆದ್ರೆ ಇನ್ನು ಬಾಳಿ ಬದುಕಬೇಕಾಗಿದ್ದ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಸುನಿಲ್ ಅವರ ಸಾವು ಕನ್ನಡ ಚಿತ್ರ ರಂಗಕ್ಕೆ ತುಂಬಾಲಾರದ ನಷ್ಟ ಅಂತಾನೆ ಹೇಳಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಈ ʼಮೊಬೈಲ್‍‌ʼ ನಲ್ಲಿ ಇನ್ಮುಂದೆ ಸಿಗಲ್ಲ ಗೂಗಲ್ ಪ್ಲೇ ಸ್ಟೋರ್…..?

    ಹುವಾವೇ ಮೊಬೈಲ್‍ ಬಳಕೆ ಮಾಡ್ತಿರೋ ಗ್ರಾಹಕರೇ ಗಮನಿಸಿ. ಇನ್ಮುಂದೆ ಹುವಾವೇ ಮೊಬೈಲ್‍ ಗಳಿಗೆ ಗೂಗಲ್ ಪ್ಲೇ, ಗೂಗಲ್‍ ಪ್ಲೇ ಸ್ಟೋರ್, ಜಿ ಮೇಲ್‍, ಗೂಗಲ್‍ ಮ್ಯಾಪ್‍ ಹಾಗೂ ಯೂಟೂಬ್‍ ಆಪ್‍ ಗಳು ಲಭ್ಯವಾಗಲ್ಲ. ಕಾರಣ ಚೀನಾದ ಹುವಾವೇ ಸಂಸ್ಥೆಯೊಂದಿಗೆ ಗೂಗಲ್‍ ಸಂಸ್ಥೆ ಸಂಬಂಧ ಕಡಿದುಕೊಂಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ಸರ್ಕಾರ ಹುವಾವೇ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಇದೀಗ ಗೂಗಲ್‍ ಕೂಡಾ ಈ ನಿರ್ಧಾರ ತೆಗೆದುಕೊಂಡಿದ್ದು, ಹುವಾವೇ ಕಂಪನಿಯೊಂದಿಗೆ ವ್ಯವಹಾರಗಳನ್ನು ಕಡಿತಗೊಳಿಸಿದೆ. ಸದ್ಯ ಗ್ರಾಹಕರು ಈಗ…

  • ಸುದ್ದಿ

    ಮೀನು ತಿನ್ನುವ ಅದೆಷ್ಟೋ ಜನರಿಗೆ ಈ ವಿಷಯ ಇನ್ನು ತಿಳಿದಿಲ್ಲ, ನೋಡಿ.

    ಪ್ರಕೃತಿ ನಮಗೆ ನೀಡಿರುವ ಆರೋಗ್ಯಕರ ಆಹಾರಗಳಲ್ಲಿ ಮೀನು ಕೂಡ ಒಂದು, ಇನ್ನು ಮೀನು ಮಾಂಸದ ಆಹಾರದ ಪ್ರೀತಿಯರಿಗೆ ತುಂಬಾ ಪ್ರಿಯವಾದ ಆಹಾರ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಮೀನನ್ನ ಪ್ರಪಂಚದಲ್ಲಿ ಹೆಚ್ಚಿನ ಜನರು ತಿನ್ನುತ್ತಾರೆ. ಇನ್ನು ಕರಾವಳಿ ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ಮೀನು ಅಂದರೆ ಪಂಚಪ್ರಾಣ, ಮೀನು ತುಂಬಾ ಆರೋಗ್ಯಕರವಾದ ಆಹಾರ ಅನ್ನುವುದು ನಮಗೆ ತಿಳಿದಿರುವ ವಿಚಾರ ಆಗಿದೆ ಮತ್ತು ಅದನ್ನ ವೈದ್ಯಲೋಕ ದೃಡಪಸಿಡಿದೆ, ಮೀನಿನಲ್ಲಿ ಇರುವ ಹಲವು ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ತುಂಬಾ…

  • ಸುದ್ದಿ

    ಗುಂಡೇಟಿಗೆ ಬಲಿಯಾದ ಟಿಕ್ ಟಾಕ್ ಖ್ಯಾತಿಯ ಮೋಹಿತ್…..!

    ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿದ್ದ 24 ವರ್ಷದ ಮೋಹಿತ್ ಮೋರ್ ಅವರನ್ನು ಮೂವರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಟಿಕ್ ಟಾಕ್ ಮೂಲಕ ಅರ್ಧ ಮಿಲಿಯನ್ ಸಂಖ್ಯೆಯ ಫಾಲೋಯರ್ಸ್ ಗಳನ್ನು ಹೊಂದಿರುವ ಮೋಹಿತ್ ಅವರು ಫಿಟ್ ನೆಸ್ ಗೆ ಸಂಬಂಧಿಸಿದಂತೆ ನಿರಂತರವಾಗಿ ವಿಡಿಯೋ ಅಪ್ ಲೋಡ್ ಮಾಡುತ್ತಿದ್ದರು. ಮಂಗಳವಾರ ಸಂಜೆ ಐದು ಗಂಟೆ ವೇಳೆಗೆ ನಜಾಫ್ ಗಡದಲ್ಲಿ ಅವರು ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಏಕಾಏಕಿ ಮೂರು ಜನ ದಾಳಿ ಮಾಡಿದ್ದು, ಸಿಸಿ ಟಿವಿಯಲ್ಲಿ…

  • ಆರೋಗ್ಯ

    ನೀವು ಕಾಫಿ ಪ್ರಿಯರಾ? ಹಾಗೇನಾದರೂ ಆಗಿದ್ದರೆ ಹುಷಾರು.

    ಗರ್ಭಿಣಿಯರು ಹೆಚ್ಚಾಗಿ ಕಾಫಿ ಸೇವಿಸುವುದು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದಲ್ಲ. ದಿನಕ್ಕೊಮ್ಮೆಯೋ, ಎರಡು ಬಾರಿಯೋ ಕಾಫಿ ಸೇವಿಸಿದರೆ ಅದು ಚೈತನ್ಯ ನೀಡುವುದಲ್ಲದೆ, ಚಟುವಟಿಕೆಯಿಂದ ಇರಲು ಸಹಕರಿಸುತ್ತದೆ. ಆದರೆ ಇದೇ ಅಭ್ಯಾಸ ಅತಿಯಾಗಿ, ದಿನಕ್ಕೆ ಐದಾರು ಬಾರಿ ಅಥವಾ ಇನ್ನೂ ಹೆಚ್ಚು ಬಾರಿ ಕಾಫಿ ಸೇವಿಸುತ್ತಲೇ ಇರುವುದರಿಂದ ಶರೀರದ ಆರೋಗ್ಯ ಸಂಪೂರ್ಣ ಹದಗೆಡುವುದು ಖಂಡಿತ. ಮಾನಸಿಕ ಆರೋಗ್ಯದ ಮೇಲೂ ಇದು ಪ್ರಭಾವ ಬೀರುತ್ತದೆ ಎಂಬುದೂ ಸಹ ಇತ್ತೀಚೆಗೆ ದೃಢಪಟ್ಟಿದೆ. ಅತಿಯಾಗಿ ಕಾಫಿ ಸೇವಿಸುವ ವ್ಯಕ್ತಿ…

  • ಗ್ಯಾಜೆಟ್

    ಮೊಬೈಲ್ ನಿರ್ಮಾಣ ಕಂಪೆನಿಗಳಲ್ಲಿ ನಡುಕ ಹುಟ್ಟಿಸಿದ ನೂತನ ಈ ಜಿಯೋ ಫೋನ್ ಬೆಲೆ!ಈ ಲೇಖನಿ ಓದಿ ಶಾಕ್ ಆಗ್ತೀರಾ…

    ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿ, ಟೆಲಿಕಾಂ ಕಂಪನಿಗಳ ಬೆವರಿಲಿಸಿದ್ದ, ಮುಖೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ಕಂಪನಿ ಈಗ ಮತ್ತೊಂದು ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜಾಗಿದೆ.

  • ಸುದ್ದಿ

    ಹೀರೋ ಪಾತ್ರಕ್ಕೆ ಪ್ರಮೋಷನ್ ಪಡೆದ ಕಮಿಡಿಯನ್ ಚಿಕ್ಕಣ್ಣ…!

    ಶರಣ್ ಮತ್ತು ಕೋಮಲ್ ನಂತರ ಮತ್ತೊಬ್ಬ ಹಾಸ್ಯನಟ ಚಿಕ್ಕಣ್ಣ ಹೀರೋ ಆಗಿ ಬದಲಾಗುತ್ತಿದ್ದಾರೆ. ಉಪಮಾತಿ ಬ್ಯಾನರ್ ನಲ್ಲಿ ಚಿಕ್ಕಣ್ಣ ಹೀರೋ ಆಗಿ ನಟಿಸುತ್ತಿದ್ದಾರೆ. ರಾಬರ್ಟ್, ಮದಗಜ ನಿರ್ದೇಶಕ ಮಂಜು ಮಾಂಡವ್ಯ ಚಿಕ್ಕಣ್ಣ ನಟನೆಯ ಇನ್ನೂ ಹೆಸರಿಡದ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಭರತ ಬಾಹುಬಲಿ ಎಂಬ ಸಿನಿಮಾದಲ್ಲಿ ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ಜೊತೆಯಾಗಿ ನಟಿಸುತ್ತಿದ್ದಾರೆ,.ಇದೇ ಸಿನಿಮಾದಲ್ಲಿ ನಿರ್ದೇಶಕರಾಗಿದ್ದ ಮಂಜು ಮಾಂಡವ್ಯ ನಟನಾಗಿ ಪಾದಾರ್ಪಣೆ ಮಾಡಿದ್ದಾರೆ. 9 ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ…