ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹುಡುಗಿಯರ ಎದೆಗೆ ಕನ್ನ ಹಾಕಿದ ಚಾಕ್ಲೇಟ್ ಹೀರೋ. ತನ್ನ ಮುದ್ದು ಮುಖದ ಚೆಲುವಿನಿಂದ ಹುಡುಗಿಯರ ನಿದ್ದೆ ಕದ್ದ ಚೋರನೀತ. ಹುಡುಗ ಅಂದ್ರೆ ಇವನ ತರ ಸುಂದರವಾಗಿರಬೇಕು ಅಂತ ಹುಡುಗಿಯರ ಮನದಲ್ಲಿ ಆಸೆ ಹುಟ್ಟಿಸಿದವ. ಅವನೇ ಸುನಿಲ್. ಬೆಳ್ಳಿಕಾಲುಂಗುರ ಸುನಿಲ್ ಅಂತಾನೆ ಇವತ್ತಿಗೂ ಫೇಮಸ್. ಮಂಗಳೂರು ಮೂಲದವರಾದ ಸುನೀಲ್ 1991 ರಲ್ಲಿ ಚಿತ್ರರಂಗಕ್ಕೆ ದ್ವಾರಕೀಶ್ ಅವರ ನಿರ್ದೇಶನದ ಶ್ರುತಿ ಚಿತ್ರದ ಮೂಲಕ ಎಂಟ್ರಿ ಕೊಡ್ತಾರೆ. ನಂತರ ಕನಸಿನ ರಾಣಿ ಮಾಲಾಶ್ರಿ ಜೊತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಾರೆ. ತೊಂಬತ್ತರ ದಶಕದಲ್ಲಿ ಇವರಿಬ್ಬರದು ಹಿಟ್ ಜೋಡಿ.

ಸುನಿಲ್ ಮತ್ತು ಮಾಲಾಶ್ರೀ ಹಲವಾರು ಹಿಟ್ ಚಿತ್ರಗಳನ್ನು ನೀಡಿದರು. ಬೆಳ್ಳಿ ಕಾಲುಂಗುರ ,ಸಿಂಧೂರ ತಿಲಕ, ಮನಮೆಚ್ಚಿದ ಸೊಸೆ ,ಮರಣ ಮೃದಂಗ ಹೀಗೆ ಅನೇಕ ಚಿತ್ರಗಳಲ್ಲಿ ಈ ಜೋಡಿ ರೊಮ್ಯಾಂಟಿಕ್ ಆಗಿ ನಡೆಸಿ ಸೈ ಎನಿಸಿಕೊಂಡರು ಈ ಜೋಡಿ ತೆರೆಯ ಮೇಲೆ ಬಹಳ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುತ್ತಿತ್ತು. ಮಾಲಾಶ್ರೀ ಸ್ವಲ್ಪ ಜೋರು ಅನಿಸ್ಸಿದ್ರು ಸುನಿಲ್ ಅವರ ಚಾಕಲೇಟು ಹೀರೊ ಇಮೇಜ್ ಅದಕ್ಕೆ ಹೇಳಿ ಮಾಡಿಸಿದ ಹಾಗೆ ಇರ್ತಿತ್ತು.
ಶ್ರುತಿ ಚಿತ್ರದಿಂದ ಪ್ರಾರಂಭವಾದ ಸುನಿಲ್ ಅವರ ಸಿನಿ ಪಯಣ ತದನಂತರ, ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಬೆಳ್ಳಿ ಕಾಲುಂಗುರ, ಮಾಂಗಲ್ಯ, ನಗು ನಗುತಾ ನಲಿ, ನಗರದಲ್ಲಿ ನಾಯಕರು, ಸಿಡಿದೆದ್ದ ಶಿವ ಹೀಗೆ ಹತ್ತು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ ಸುನಿಲ್ ತೆಲುಗು ಚಿತ್ರರಂಗದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರು. ಮಾಲಾಶ್ರೀ ಮತ್ತು ಸುನೀಲ್ ಅವರ ಜೋಡಿ ಆ ಸಮಯದಲ್ಲಿ ಕನ್ನಡ ಚಿತ್ರರಂಗದ ಮೋಸ್ಟ್ ಫೇವರಿಟ್ ಜೋಡಿಯಾಗಿತ್ತು.

ಇವರು ಒಟ್ಟಾಗಿ ಅಭಿನಯಿಸಿದ ಚಿತ್ರಗಳು ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ತೆರೆಯ ಮೇಲೆ ಮೋಡಿ ಮಾಡಿದ್ದ ಈ ಜೋಡಿ ನಿಜಜೀವನದಲ್ಲಿ ಒಂದಾಗಬೇಕು ಎಂದು ಅದೆಷ್ಟೋ ಅಭಿಮಾನಿಗಳು ಕನಸು ಕಂಡಿದ್ದರು. ಅಂತೆಯೇ ಸುನೀಲ್ ಮತ್ತು ಮಾಲಾಶ್ರೀ ಪ್ರೇಮದಲ್ಲಿದ್ದಾರೆ ಎಂಬ ವಿಷಯ ಸಿನಿಮಾ ರಂಗದಲ್ಲಿ ಹರಡಿತ್ತು. ಮೂಲಗಳ ಪ್ರಕಾರ ತಾವು ವಿವಾಹವಾಗುತ್ತೇನೆ ಎಂದು ಹೇಳಿಕೊಂಡಿದ್ದರಂತೆ.
ಯಶಸ್ಸಿನ ಮೆಟ್ಟಿಲು ಹತ್ತುತ್ತಿರಬೇಕಾದರೆನೇ ಜವರಾಯ ಸುನೀಲ್ ಗಾಗಿ ಕಾಯುತ್ತಿದ್ದ ಅನ್ಸತ್ತೆ. 1994 ರಂದು ಸುನಿಲ್ ಮಾಲಾಶ್ರೀ ಮತ್ತು ಪ್ರೊಡ್ಯೂಸರ್ ಸಚಿನ್ ಮಲ್ಲಿ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಲ್ಲಿ ಬರಬೇಕಾದರೆ ಟ್ರಕ್ಕೊಂದು ಸುನೀಲ್ ಅವರ ಕಾರಿಗೆ ಗುದ್ದತ್ತೆ. ಸುನಿಲ್ ಸ್ಥಳದಲ್ಲೇ ಸಾವನ್ನಪ್ಪುತ್ತಾರೆ.
ದುಃಖಕರ ವಿಷಯವೇನೆಂದರೆ ಅಪಘಾತವಾದ ನಂತರ ನಲವತ್ತು ನಿಮಿಷಗಳ ಕಾಲ ಸುನೀಲ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಆದರೆ ಸುನೀಲ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಸಾವಿನಿಂದ ಚಿತ್ರರಂಗ ಬಹಳ ಭಾವುಕದಿಂದ ಕೂಡಿತ್ತು.

ಸುನೀಲ್ ಅವರ ಸಮಾಧಿಯಲ್ಲಿ ಒಂದು ಮರವನ್ನು ನೆಟ್ಟಿದ್ದ ಸುನಿಲ್ ತಾಯಿ, ಈಗಲೂ ಕೂಡ ಆ ಮರವನ್ನೆ ತನ್ನ ಮಗ ಎಂದು ನಂಬಿ ಜೀವನ ಸಾಗಿಸುತ್ತಿದ್ದಾರೆ.! ಮಗನ ಸಾವಿನಿಂದ ಮನ ನೊಂದಿರುವ ಆ ವಯಸ್ಸಾದ ತಾಯಿ, ನನ್ನ ಮಗನ ಸಾವಿಗೆ ಇಲ್ಲಸಲ್ಲದ ಬಣ್ಣಗಳನ್ನು ಕಟ್ಟಬೇಡಿ, ಇಡೀ ಚಿತ್ರರಂಗ ನನ್ನ ಮಗನ ಜೊತೆ ಆತ್ಮೀಯವಾಗಿತ್ತು. ಅವನ ಸಾವು ಆಕಸ್ಮಿಕ ,ಅವನ ಹಣೆಯಲ್ಲಿ ಬರೆದದ್ದು ಇಷ್ಟೇ ಇದು ವಿಧಿಲಿಖಿತ. ಎಂದು ಭಾವುಕರಾಗಿದ್ದಾರೆ. ಅಂದು ಕರ್ನಾಟಕ ಫಿಲಂ ಇಂಡಸ್ಟ್ರಿ ಒಂದು ಒಳ್ಳೆಯ ನಾಯಕನನ್ನು ಕಳೆದುಕೊಳ್ಳುತ್ತೆ. ಸಾವು ಯಾರಿಗೆ ಯಾವಾಗ ಹೇಗೆ ಬರುತ್ತೆ ಅಂತ ಹೇಳಕಾಗಲ್ಲ. ಯಾರೇ ಆದ್ರು ಸಾವಿಗೆ ಸೋಲಲೇ ಬೇಕು. ಆದ್ರೆ ಇನ್ನು ಬಾಳಿ ಬದುಕಬೇಕಾಗಿದ್ದ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಸುನಿಲ್ ಅವರ ಸಾವು ಕನ್ನಡ ಚಿತ್ರ ರಂಗಕ್ಕೆ ತುಂಬಾಲಾರದ ನಷ್ಟ ಅಂತಾನೆ ಹೇಳಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಮಾನ್ಯವಾಗಿ ಎಲ್ಲರೂ ಯಾವುದೊ ಒಂದು ಕಡೆ ಅಥವಾ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಾರೆ . ಮುಖ್ಯವಾಗಿ ಹೆಚ್ಚಿನ ಆದಾಯ ಬರುವ ಭರವಸೆಗಳನ್ನು ನೀಡುವ ಕಡೆ ಮೊರೆ ಹೋಗುತ್ತಾರೆ. ಆದಾಯವನ್ನು ನೋಡುತ್ತಾರೆ ಹೊರತು ಕಂಪನಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರುವುದಿಲ್ಲ, ಮತ್ತು ಏಜೆಂಟ್‌ಗಳ ಮೂಲಕ ತಮ್ಮಉತ್ಪನ್ನಗಳನ್ನು ಮಾರಾಟ ಮಾಡಿ ಮೋಸಮಾಡಿರುವ ಕಂಪನಿಗಳ ಉದಾಹರಣೆಯು ಸಹ ಸಾಕಷ್ಟಿದೆ.ಹಣ ಹೂಡಿಕೆ ಮಾಡಿದ ನಂತರ ಲಾಭವನ್ನು ಗಳಿಸದೆ, ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಪರದಾಡುವ ಜನರು ಸಾಕಷ್ಟಿದ್ದಾರೆ. ಸಮಾಜದಲ್ಲಿ ಒಂದೇ ಬಾರಿಗೆ ಹಣ ಡಬಲ್ಆಗಬೇಕೆಂದು…
‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿದೆ.ಈಗ ಗಾದೆ ಏತಕ್ಕೆ ಬಂತು ಅಂತೀರಾ…ವಿಷಯ ಇದೆ.ಅದೆಂದರೆ ನಮಗೆಲ್ಲಾ ಗೊತ್ತಿರುವ ಹಾಗೆ , ಸರ್ಚ್ ಎಂಜಿನ್ ಗೂಗಲ್ ನಲ್ಲಿ ಸಿಗದೇ ಇರೋ ವಿಷಯವೇ ಇಲ್ಲ.
ನೋಡಲು ಡ್ರಾಗನ್ ಅನ್ನು ಹೋಲುವ ಆಕೃತಿ ಇರುವ ಕಾರಣ ಇದಕ್ಕೆ ಡ್ರಾಗನ್ ಹಣ್ಣು ಎಂಬ ಹೆಸರು ಬಂದಿದೆ. ಈ ಹಣ್ಣಿನ ರುಚಿ ಕಿವಿ, ಪೈನಾಪಲ್ ಅನ್ನು ಹೋಲುತ್ತದೆ. ಈ ಹಣ್ಣನ್ನು ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಅಂತ ತಿಳಿಯೋಣ. * ಡ್ರಾಗನ್ ಹಣ್ಣು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯಕ್ಕೆ ಪ್ರಯೋಜನವಾಗುವಂತೆ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಪುನಃ ಸ್ಥಾಪಿಸಲು ನೆರವಾಗುತ್ತದೆ. * ಜೀರ್ಣಕಾರಿ ತೊಂದರೆಗಳಿಂದ ಬಳಲುತ್ತಿದ್ದರೆ, ಈ ಹಣ್ಣುಗಳನ್ನು ತಿನ್ನಬಹುದು. ಇದರಲ್ಲಿರುವ ಫೈಬರ್ ಅಂಶ ಕಳಪೆ…
ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಬದಲಿಸಲು ಅಥವಾ ನವೀಕರಿಸಲು ಬಯಸುತ್ತಿರುವವರಲ್ಲಿ ನೀವು ಒಬ್ಬರಾಗಿದ್ದರೆ, ಇಲ್ಲಿದೆ ನಿಮಗೊಂದು ಸಂತೋಷದ ವಿಷಯ. ಆಧಾರ್ ನಲ್ಲಿನ ಅಸ್ಪಷ್ಟ,ಕಳಪೆ ಗುಣಮಟ್ಟದ ಮತ್ತು ದೋಷಪೂರಿತ ಫೋಟೋಗಳು ಅಥವಾ ಚಿಕ್ಕ ವಯಸ್ಸಿನಲ್ಲಿ ತೆಗೆಸಿದ ಫೋಟೋ ಕೆಲವರನ್ನು ಅನೇಕ ಸಮಸ್ಯೆಗಳಿಗೆ ಸಲುಕಿಸಿತ್ತವೆ. ಹಾಗಾಗಿ ತಮ್ಮ ಆಧಾರ್ ನಲ್ಲಿ ತಮ್ಮ ಫೋಟೋವನ್ನು ಬದಾಲಾಯಿಸಲು ಬಹುತೇಕ ಜನರು ಇಚ್ಛಿಸಿರುತ್ತಾರೆ..ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ. ನಿಮ್ಮ ಆಧಾರ್ ಕಾರ್ಡ್ ನೊಂದಿಗೆ…
ಮುಂಗಾರು ಆಗಮನಕ್ಕೂ ಮೊದಲು ಎಲ್ಲೂ ಮಳೆಯಾಗುತ್ತಿಲ್ಲವಲ್ಲ ಎನ್ನುವ ಆತಂಕ ಈಗ ಮುಂಗಾರು ಆರಂಭವಾದ ಬಳಿಕ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಯಾವಾಗ ಮಳೆ ನಿಲ್ಲುತ್ತೋ ಎನ್ನುವಂತಾಗಿದೆ. ಹೌದು ಬಿಹಾರದ ಜನತೆ ಪ್ರವಾಹದಿಂದ ತತ್ತರಿಸಿದೆ. ಈಗಾಗಲೇ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿಯನ್ನು ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಲಾಗಿದೆ. ನದಿಗಳಲ್ಲಿ ನೀರಿನ ಮಟ್ಟವೂ ಕೂಡ ಹೆಚ್ಚಾಗುತ್ತಿದೆ. ಅರಾರಿಯಾ, ಕಿಶನ್‌ಗಂಜ್, ದರ್ಬಾಂಗಾ, ಮಧುಬನಿ, ಮುಜಾಫರ್‌ಪುರ್ ಜಿಲ್ಲೆಗಳಿಗೆ ಅಪಾಯ ಉಂಟಾಗಿದೆ. ಸೀತಾಮರಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಅರಾರಿಯಾದಲ್ಲಿ 11 ಮಂದಿ, ಕಿಶನ್‌ಗಂಜ್‌ನಲ್ಲಿ ನಾಲ್ಕು…
ಚಂದನವನಕ್ಕೆ ರಾಧಿಕಾ ಮತ್ತೆ ಬ್ಯಾಕಪ್ ಆಗಿದ್ದಾರೆ.ಈಗ ದಮಯಂತಿ’ ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಈ ಚಿತ್ರದಲ್ಲಿನ ವಿಭಿನ್ನ ಪಾತ್ರಕ್ಕಾಗಿ ರಾಧಿಕಾ ಕುಮಾರಸ್ವಾಮಿ ಬರೋಬ್ಬರಿ 10 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ. ಈಗಾಗಲೇ ಚಿತ್ರದ ಶೇಕಡ 80 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.ತಾವು ನಟಿಸುತ್ತಿರುವ ದಮಯಂತಿ ಚಿತ್ರಕ್ಕಾಗಿ 80 ದಿನಗಳ ಕಾಲ ಕಾಲ್ ಶೀಟ್ ಕೊಟ್ಟಿದ್ದು, ಇದಕ್ಕಾಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರಂತೆ. ಈಗಾಗಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ…