ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’ ಗ್ರಾಂಡ್ ಫಿನಾಲೆಯಲ್ಲಿ ಮಂಗಳೂರಿನ ಕೀರ್ತನ್ ಹೊಳ್ಳ ವಿನ್ನರ್ ಆಗಿದ್ದಾರೆ. ಹಾವೇರಿಯ ಚೀಲೂರು ಬಡ್ನಿ ತಾಂಡಾದ ಹನುಮಂತ ಅವರು ರನ್ನರ್ ಆಗಿದ್ದಾರೆ.
ಕೀರ್ತನ್ ಹೊಳ್ಳ ಆರಂಭದಿಂದಲೂ ಅದ್ಭುತವಾಗಿ ಹಾಡುವ ಮೂಲಕ ಜಡ್ಜಸ್ ಗಳು ಹಾಗೂ ಮಹಾಗುರುಗಳ ಮೆಚ್ಚುಗೆ ಗಳಿಸಿದ್ದರು. ಅದೇ ರೀತಿ ಹನುಮಂತ ತಮ್ಮ ಮುಗ್ಧತೆಯಿಂದಲೇ ಜನಪ್ರಿಯರಾಗಿದ್ದರು.

ಶನಿವಾರ ನಡೆದ ಗ್ರಾಂಡ್ ಫಿನಾಲೆಯಲ್ಲಿ ನಿಹಾಲ್ ತಾವ್ರೊ, ಹನುಮಂತ, ಕೀರ್ತನ ಹೊಳ್ಳ, ವಿಜೇತ್, ಹೃತ್ವಿಕ್ ಹಾಗೂ ಸಾಧ್ವಿನಿ ಅವರು ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು. ಅವರಲ್ಲಿ ಕೀರ್ತನ್ ಹೊಳ್ಳ, ಸಾದ್ವಿನಿ ಮತ್ತು ಹನುಮಂತ ಗ್ರಾಂಡ್ ಫಿನಾಲೆಗೆ ಪ್ರವೇಶಿಸಿದ್ದು, ಅಂತಿಮವಾಗಿ ಕೀರ್ತನ್ ಹೊಳ್ಳ ವಿನ್ನರ್ ಆಗಿದ್ದಾರೆ. ಹನುಮಂತ ರನ್ನರ್ ಅಪ್ ಆಗಿದ್ದಾರೆ.

ಇದೇ ಮೊದಲ ಬಾರಿಗೆ ‘ಸರಿಗಮಪ’ ಶೋನಲ್ಲಿ ರನ್ನರ್ ಅಪ್ ಆದವರಿಗೆ ಭಾರಿ ಮೊತ್ತದ ಬಹುಮಾನ ನೀಡಲಾಗಿದೆ. ಹನುಮಂತ ಅವರಿಗೆ 15 ಲಕ್ಷ ರೂ. ಮೊತ್ತದ ಸೈಟ್ ಬಹುಮಾನವಾಗಿ ಸಿಕ್ಕಿದೆ. ಇನ್ನು ಮುಗ್ಧತೆಯಿಂದಲೇ ತಮ್ಮ ಹಾಡಿನ ಮೂಲಕ ಎಲ್ಲರ ಮನಗೆದ್ದಿರುವ ಹನುಮಂತ ಅವರಿಗೆ ಬಂಪರ್ ಆಫರ್ ಸಿಕ್ಕಿದೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರೇ ಈ ಮಾಹಿತಿಯನ್ನು ‘ಸರಿಗಮಪ’ ವೇದಿಕೆಯಲ್ಲಿ ತಿಳಿಸಿದ್ದಾರೆ. ಫಿನಾಲೆ ರೌಂಡ್ ನಲ್ಲಿ ಹನುಮಂತ ‘ಅಶ್ವಮೇಧ’ ಚಿತ್ರದ ‘ಹೃದಯ ಸಮುದ್ರ’ ಹಾಡನ್ನು ಹಾಡಿದ್ದು, ಜಡ್ಜಸ್ ಗಳು ಹನುಮಂತ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಅರ್ಜುನ್ ಜನ್ಯ, ಹನುಮಂತ ಅವರಿಗೆ ದೊಡ್ಡ ಸಿನಿಮಾವೊಂದರಲ್ಲಿ ಅವಕಾಶ ಸಿಕ್ಕಿದೆ. ಅವರಿಗಾಗಿ ದೊಡ್ಡ ನಿರ್ದೇಶಕರು ಕಾಯುತ್ತಿದ್ದಾರೆ. ಆ ಸಿನಿಮಾದಲ್ಲಿ ಹನುಮಂತ ಹಾಡಲಿದ್ದಾರೆ. ಇನ್ನು 2-3 ದಿನದಲ್ಲಿ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ. ಗಾಯಕರಾದ ವಿಜಯ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಂಸಲೇಖ ಅವರು, ಜನಪದ ನಾಯಕ ಹನುಮಂತ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಖಾಸಗಿ ಶಾಲೆಗಳು ಇದೀಗ ಎಲ್ಲೆಂದರೆಲ್ಲಿ ತಲೆಯೆತ್ತುತ್ತಿವೆ. ಗಲ್ಲಿಗೊಂದರಂತೆ ಶಾಲೆಗಳು ನಮಗೆ ಕಾಣಸಿಗುತ್ತವೆ. ಶಿಕ್ಷಣವು ಮೂಲಭೂತ ಹಕ್ಕಾಗಿರದೇ, ಇದೀಗ ವ್ಯಾಪಾರದ ಸರಕಾಗಿ ಮಾರ್ಪಟ್ಟಿದೆ.
ಶನಿವಾರದಂದು ವಿಧಿವಶರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಅಂಬರೀಶ್ ಅವರ ಅಂತ್ಯಕ್ರಿಯೆ, ಸೋಮವಾರದಂದು ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ.ಅಂಬರೀಶ್ ನಿಧನದ ಸಂದರ್ಭದಲ್ಲಿ ಸಂತಾಪ ಕೋರಿ ಟ್ವೀಟ್ ಮಾಡಿದ್ದ ನಟಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ರಮ್ಯಾ, ಅಂತ್ಯಕ್ರಿಯೆಗೆ ಬಾರದಿರುವುದು ಅಂಬರೀಶ್ ಅಭಿಮಾನಿಗಳನ್ನು ಕೆರಳಿಸಿತ್ತು. ಅಂಬರೀಶ್ ಸಾವಿಗೀಡಾದ ಸುದ್ದಿ ತಿಳಿದಾಗಿನಿಂದಲೂ ಇಡೀ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೆ ಹಲವು ಭಾಷೆಗಳ ಚಿತ್ರರಂಗದ ಖ್ಯಾತನಾಮರು, ಅಂತಿಮ ದರ್ಶನದಿಂದ ಅಂತ್ಯಸಂಸ್ಕಾರದವರೆಗೆ ಹಾಜರಾಗಿದ್ದರೂ ರಮ್ಯಾ…
ಪಕ್ಕದಲ್ಲಿರುವವರ ನಿದ್ದೆ ಹಾಳು ಮಾಡುವ ಸುಲಭ ಉಪಾಯ ಗೊರಕೆ. ನಿದ್ದೆಯಲ್ಲಿ ಗೊರಕೆ ಸಾಮಾನ್ಯ. ಆದ್ರೆ ಪಕ್ಕದಲ್ಲಿ ಮಲಗಿರುವವರಿಗೆ ಈ ಗೊರಕೆ ಕಿರಿಕಿರಿಯನ್ನುಂಟು ಮಾಡುತ್ತೆ.ನಿಮ್ಮ ಈ ಗೊರಕೆಗೆ ಕಾರಣಗಳೇನು ಗೊತ್ತೇ? ತೂಕ ನಷ್ಟ ಮತ್ತು ವ್ಯಾಯಾಮ :- ಅತಿಯಾದ ತೂಕ ಅಥವಾ ದೊಡ್ಡ ಕುತ್ತಿಗೆ ಸುತ್ತಳತೆ ಹೊಂದುವ ಕೊಬ್ಬುನ್ನು ಕರಗಿಸುವುದು, ಹಾಗೂ ಪ್ರತಿನಿತ್ಯ ವ್ಯಾಯಾಮ ಪ್ರಾರಂಭಿಸುವುದು, ಇವೆಲ್ಲವೂ ಗಮನಾರ್ಹವಾಗಿ ಅನೇಕ ವ್ಯಕ್ತಿಗಳಲ್ಲಿ ಗೊರಕೆ ಕಡಿಮೆ ಮಾಡಲು ಸಹಕಾರಿಯಾಗುತ್ತವೆ. ಮಲಗುವ ಸ್ಥಿತಿ ಬದಲಿಸಿ :- ಒಂದು ಬದಿಯಲ್ಲಿ ನಿದ್ರಿಸುವುದನ್ನು…
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ್ದ ಬಿಜೆಪಿ ಇದೀಗ ಎರಡನೇ ಪಟ್ಟಿಯನ್ನು 24 ಗಂಟೆಗಳಲ್ಲಿಯೇ ಎರಡನೇ ಪಟ್ಬಿ ಬಿಡುಗಡೆ ಮಾಡಿದೆ. ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್, ಬಸವನ ಬಾಗೇವಾಡಿ- ಎಸ್.ಕೆ ಬೆಳ್ಳುಬ್ಬಿ, ಇಂಡಿ- ಕಾಸಾಗೌಡ ಬಿರಾದಾರ್, ಗುರಮಿಠಕಲ್- ಲಲಿತಾ ಅನಾಪುರ್, ಬೀದರ್- ಈಶ್ವರ್ ಸಿಂಗ್ ಠಾಕೂರ್, ಭಾಲ್ಕಿ- ಪ್ರಕಾಶ್ ಖಂಡ್ರೆ, ಗಂಗಾವತಿ- ಪರಣ್ಣ ಮುನವಳ್ಳಿ, ಕಲಘಟಗಿ-…
70 ಮತ್ತು 80ರ ದಶಕಗಳಲ್ಲಿನ ನಿಮ್ಮ ಬಾಲ್ಯದ ಅದ್ಭುತ ನೆನಪುಗಳು…
ಪ್ರತಿಯೊಂದು ದೇಶವೂ ಕೂಡ ತನ್ನ ದೇಶದ ಭೌಗೋಳಿಕ ಸಂಪತ್ತನ್ನು ಹುಡುಕುವ ಪ್ರಯತ್ನವನ್ನು ಯಾವಾಗಲೂ ಕೂಡ ಮಾಡುತ್ತಲೇ ಇರುತ್ತದೆ. ಅದೇ ರೀತಿಯಲ್ಲಿ ಭಾರತದಲ್ಲಿ ಕೂಡ ಅದೆಷ್ಟೋ ಭಾಗಗಲ್ಲಿ ಚಿನ್ನದ ಗಣಿಯನ್ನು ಹುಡುಕುವ ಅದೆಷ್ಟೋ ಪ್ರಯತ್ನಗಳು ನಡೆದಿದ್ದವು. ಆದರೆ ಯಾವುದು ಕೂಡ ಅಷ್ಟೊಂದು ದೊಡ್ಡ ಮಟ್ಟದ ಯಶಸ್ಸು ನೀಡಿರಲಿಲ್ಲ. ಆದರೆ ಸದ್ಯಕ್ಕೆ ಈಗ ಭಾರತದಲ್ಲಿ ಇರುವ ಒಟ್ಟಾರೆ ಚಿನ್ನದ ನಿಕ್ಷೇಪಕ್ಕಿಂತ ಐದು ಪಟ್ಟು ಹೆಚ್ಚು ಚಿನ್ನದ ಗಣಿ ಪತ್ತೆಯಾಗಿದೆ ಎನ್ನುವ ಸುದ್ದಿಯೊಂದು ಇದ್ದಕಿದ್ದಂತೆ ದೇಶದ ಎಲ್ಲ ಮಾಧ್ಯಮಗಳು ಈ ಸುದ್ದಿ…