ಕಾನೂನು

ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ

125

ಪೋಕ್ಸೊ ಕಾಯಿದೆ ಅಡಿ ಆರೋಪಿಗೆ
20 ವರ್ಷ ಸಜೆ-30 ಸಾವಿರ ದಂಡ
ಕೋಲಾರ:- ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ, ಅತ್ತಿಗಿರಿಕೊಪ್ಪ ಗ್ರಾಮದ ನಾಗೇಂದ್ರ @ ಚಿನ್ನಿ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ, ಅತ್ಯಾಚಾರ ಎಸಗಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ರವರು ಆರೋಪಿಗೆ 20 ವರ್ಷ ಸಜೆ ತೀರ್ಪು ನೀಡಿದ್ದಾರೆ.


ಸದರಿ ಆರೋಪಿಯ ವಿರುದ್ದ ಬೂದಿಕೋಟೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು ಕಲಂ 6 ಪೋಕ್ಸೋ ಕಾಯ್ದೆ ಹಾಗೂ ಕಲಂ 9 ಬಾಲ್ಯ ವಿವಾಹ ನಿಷೇಧ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿ ಆರೋಪಿತನ ವಿರುದ್ದ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ಸ್ಪೇಷಲ್ ಸಿ.(ಪೋಕ್ಸೋ) 98/2022 ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ಆರೋಪಿ ನಾಗೇಂದ್ರ @ ಚಿನ್ನಿ ಎಂಬಾತನಿಗೆ ಕಲಂ 6 ಪೋಕ್ಸೋ ಕಾಯ್ದೆ ಅಡಿಯಲ್ಲಿ 20 ವರ್ಷ ಸಜೆ ಜೊತೆಗೆ ರೂ.30 ಸಾವಿರ ರೂ ದಂಡ ವಿಧಿಸಿ ದಂಡ ತೆರಲು ವಿಫಲರಾದಲ್ಲಿ 6 ತಿಂಗಳು ಹೆಚ್ಚುವರಿ ಸಜೆ ವಿಧಿಸಿದ್ದಾರೆ.


ನೊಂದ ಬಾಲಕಿಗೆ ರೂ. 4 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಶ್ರೀಮತಿ ಡಿ.ಲಲಿತಕುಮಾರಿ ರವರು ವಾದ ಮಂಡಿಸಿದ್ದರು.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಬಾಳೆಹಣ್ಣಿನ ಈ ಉಪಯೋಗಗಳನ್ನು ಕೇಳಿದ್ರೇ, ನೀವು ಮರೆಯದೆ ದಿನಾ ಬಾಳೆಹಣ್ಣು ತಿಂತೀರಾ…

    ಬಾಳೆ ಹಣ್ಣು ತಿನ್ನೋದ್ರಿಂದ ಸಾಕಷ್ಟು ಪ್ರಯೋಜನವಿದೆ ಎಂಬುದನ್ನು ಸಂಶೋಧನೆ ಕೂಡ ಹೇಳಿದೆ. ದಿನಕ್ಕೆ ಮೂರು ಸಣ್ಣ ಬಾಳೆಹಣ್ಣು ತಿನ್ನೋದ್ರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ. ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ.

  • ಜೀವನಶೈಲಿ

    ಸರಿಯಾಗಿ “ನಿದ್ದೆಮಾಡಿಲ್ಲ” ಅಂದ್ರೆ ಏನಾಗುತ್ತೆ ಗೊತ್ತಾ? ಇದನ್ನು ಓದಿ ಶಾಕ್ ಆಗೋದು ಪಕ್ಕಾ!

    ನಮ್ಮ ಜೀವನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ನಿದ್ರೆ ಅತ್ಯಾವಶ್ಯಕವಾಗಿದ್ದು, ನಮ್ಮ ಜೀವನದ ಮೂರನೇ ಒಂದು ಭಾಗವನ್ನು ನಾವು ನಿದ್ರೆಯಲ್ಲೇ ಕಳೆಯುತ್ತೇವೆ. ಆದರೆ ಬದಲಾದ ಜೀವನ ಶೈಲಿಯಿಂದಾಗಿ ಇಂದು ನಿದ್ದೆಗೆಡುವುದು ಸಾಮಾನ್ಯ ಎಂಬಂತಾಗಿ ಹೋಗಿದ್ದು, ಇದರಿಂದಾಗಿ ಭವಿಷ್ಯದಲ್ಲಿ ಸಾಕಷ್ಟು ಆರೋಗ್ಯಕರ ದುಷ್ಪರಿಣಾಮಗಳು ಸಂಭವಿಸುತ್ತವೆ

  • ಸುದ್ದಿ

    ಜಗತ್ತಿನಲ್ಲೇ ಅತಿ ದುಬಾರಿ ಡೈವೋರ್ಸ್; ಪತ್ನಿಗೆ 2.4 ಲಕ್ಷ ಕೋಟಿ ರೂ ಪರಿಹಾರ ಕೊಟ್ಟಿದ್ದು ಯಾರು ಗೊತ್ತೇ.??

    ವಿಶ್ವದ ಅತೀದೊಡ್ಡ  ಶ್ರೀಮಂತ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಅಮೇಜಾನ್​​​​ ಸಂಸ್ಥಾಪಕ ಹಾಗೂ ಸಿಇಒ ಜೆಫ್​​​ ಬೆಜೋಸ್ ಈ ಬಾರಿ 2ನೇ ಸ್ಥಾನಕ್ಕಿಳಿದಿದ್ದಾರೆ. 2019-20 ವರ್ಷದ ಮೂರನೇ ತ್ರೈಮಾಸಿಕದಲ್ಲಿ ಅಮೇಜಾನ್ ಕಂಪನಿಯ ನಿವ್ವಳ ಲಾಭಾಂಶ ಕಡಿಯಾಗಿದೆ. ಹಾಗಾಗಿ ಜೆಫ್​​​ ಬೆಜೋಸ್ ಒಟ್ಟು ಆಸ್ತಿ ಮೌಲ್ಯ 103.9 ಬಿಲಿಯನ್ ಡಾಲರ್​​ಗೆ ಇಳಿಕೆಯಾಗಿದ್ದು, 2ನೇ ಸ್ಥಾನಕ್ಕಿಳಿದಿದ್ದಾರೆ. ಇದೀಗ ವಿಶ್ವದ ಅತ್ಯಂತ ದೊಡ್ಡ ಶ್ರೀಮಂತ ಸ್ಥಾನವನ್ನು ಮತ್ತೆ ಮೈಕ್ರೋಸಾಫ್ಟ್​​​ ಸಹ ಸಂಸ್ಥಾಪಕ ಬಿಲ್​​ ಗೇಟ್ಸ್​ ಅಲಂಕರಿಸಿದ್ದಾರೆ. ಫೋರ್ಬ್ಸ್​​​ ಬಿಡುಗಡೆ ಮಾಡಿರುವ ಜಗತ್ತಿನ ಶ್ರೀಮಂತರ…

  • ಜೀವನಶೈಲಿ, ವಿಸ್ಮಯ ಜಗತ್ತು

    ಮಾನವನ ಅಂಗಾಂಗಳನ್ನು ಇಲ್ಲಿ ಹೀಗೆ ತಿಂತಾರೆ..!ಶಾಕ್ ಆಗ್ಬೇಡಿ ಮುಂದೆ ನೋಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಸಾಮಾನ್ಯವಾಗಿ ತಿನ್ನೋ ಆಹಾರವನ್ನು, ತಯಾರಿಸಬೇಕಾದ್ರೂ ಕೂಡ ಶುಚಿ ರುಚಿಯಲ್ಲದೇ, ಸಾಕಷ್ಟು ಮಡಿವಂತಿಕೆ ಪಾಲಿಸುವ ಜನರು ನಮ್ಮ ಭಾರತದಲ್ಲಿ ಇದ್ದಾರೆ.ನಾವು ಮನೆಯಲ್ಲಿ ಊಟ ಮಾಡಬೇಕಾದ್ರೆ, ಅಪ್ಪಿ ತಪ್ಪಿ ಒಂದು ಕೂದಲು ಕಾಣಿಸಿದರೂ ಸಹ ದೊಡ್ಡ ಜಗಳವನ್ನೇ ಮಾಡಿಬಿಡುತ್ತೇವೆ. ಮನುಷ್ಯರಾದ ನಮ್ಮ ಅಂಗಾಂಗಗಳನ್ನ  ನಾವೇ ನೋಡಿದಾಗ ನಮಗೆ ಸಹಜವಾಗಿಯೇ ಭಯವಾಗುತ್ತದೆ.ಆದ್ರೆ ಈ ದೇಶದ ಜನರು ವಿಚಿತ್ರ. ಮನುಷ್ಯನ ಅಂಗಾಂಗಗಳನ್ನಷ್ಟೇ ಅಲ್ಲದೇ ವಿವಿಧ ಹಾವು ಜಿರಳೆ ಮುಂತಾದ ಪ್ರಾಣಿ ಪಕ್ಷಿಗಳನ್ನೂ ಕೂಡ ಕೇಕ್ ರೂಪದಲ್ಲಿ ಮಾಡಿ…

  • ಗ್ಯಾಜೆಟ್

    ಗ್ರಾಹಕರಿಗೊಂದು ಖುಷಿಯ ಸುದ್ದಿ ‘ಜಿಯೋ 4ಜಿ ಫೀಚರ್ ಫೋನ್ ‘ ..!ತಿಳಿಯಲು ಈ ಲೇಖನ ಓದಿ ..

    ಜಿಯೋ ಫೋನ್ ನಿರೀಕ್ಷೆಯಲ್ಲಿರುವ ಗ್ರಾಹಕರಿಗೊಂದು ಖುಷಿ ಸುದ್ದಿ. ಮುಂಗಡ ಬುಕ್ಕಿಂಗ್ ಮಾಡಿದ್ದ ಗ್ರಾಹಕರ ಕೈಗೆ ಈ ವಾರಾಂತ್ಯದಲ್ಲಿ ಜಿಯೋ 4ಜಿ ಫೀಚರ್ ಫೋನ್ ಸಿಗಲಿದೆ. ಮೂಲಗಳ ಪ್ರಕಾರ ಅಕ್ಟೋಬರ್ 1ರಂದು ಜಿಯೋ ತನ್ನ ಫೀಚರ್ ಫೋನ್ ಡಿಲೆವರಿ ಶುರು ಮಾಡಲಿದೆ. ಮೊದಲ ಬಾರಿ ಪ್ರಿ ಬುಕ್ಕಿಂಗ್ ವೇಳೆ 60 ಲಕ್ಷಕ್ಕೂ ಹೆಚ್ಚು ಫೋನ್ ಬುಕ್ಕಿಂಗ್ ಆಗಿತ್ತು.