ಸುದ್ದಿ

ಈ ವರ್ಷ ಭಾರತೀಯರು ಗೂಗಲ್ ನಲ್ಲಿ ಅತೀ ಹೆಚ್ಚಾಗಿ ಸರ್ಚ್ ಮಾಡಿ ನೋಡಿದ್ದು ಏನ್ ಗೊತ್ತಾ..?

223

ಗೂಗಲ್ ನಲ್ಲಿ ಏನು ಸಿಗಲ್ಲ ಹೇಳಿ? ಪ್ರತಿಯೊಂದು ವಿಷ್ಯದ ಬಗ್ಗೆಯೂ ಗೂಗಲ್ ನಲ್ಲಿ ಮಾಹಿತಿ ಸಿಗುತ್ತದೆ. ಸಣ್ಣಗೆ ಕಾಲು ನೋವು ಬಂದ್ರೂ ಜನರು ಗೂಗಲ್ ನಲ್ಲಿ ಹುಡುಕಾಟ ನಡೆಸ್ತಾರೆ. ಪ್ರತಿಯೊಂದು ರೋಗ, ಅದ್ರ ಲಕ್ಷಣ, ಚಿಕಿತ್ಸೆ ಬಗ್ಗೆ ಗೂಗಲ್ ನಲ್ಲಿ ಮಾಹಿತಿ ಲಭ್ಯವಿದೆ. 2018ರಲ್ಲಿ ಗೂಗಲ್ ನಲ್ಲಿ ಯಾವ ರೋಗದ ಬಗ್ಗೆ ಹೆಚ್ಚು ಸರ್ಚ್ ಮಾಡಲಾಗಿದೆ ಎಂಬ ವರದಿ ಈಗ ಹೊರಬಿದ್ದಿದೆ.

2018ರಲ್ಲಿ ಗೂಗಲ್ ನಲ್ಲಿ ಭಾರತೀಯರು ಅತಿ ಹೆಚ್ಚು ಬಾರಿ ಕ್ಯಾನ್ಸರ್ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಈ ವರ್ಷ ಇರ್ಫಾನ್ ಖಾನ್, ಸೋನಾಲಿ ಬೇಂದ್ರೆ, ಆಯುಷ್ಮಾನ್ ಖುರಾನಾ ಪತ್ನಿ ತಹಿರಾ ಕ್ಯಾನ್ಸರ್ ಗೆ ಒಳಗಾಗಿರುವ ಬಗ್ಗೆ ಸುದ್ದಿ ಹೊರಬಿದ್ದಿತ್ತು. ಕಲಾವಿದರು ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಂತೆ ಅದ್ರ ಬಗ್ಗೆ ಅಭಿಮಾನಿಗಳು ಹೆಚ್ಚು ಸರ್ಚ್ ಮಾಡಿದ್ದಾರೆ.

2018ರಲ್ಲಿ ಅತಿ ಹೆಚ್ಚು ಸರ್ಚ್ ಆದ ರೋಗಗಳ ಪಟ್ಟಿಯಲ್ಲಿ ರಕ್ತದೊತ್ತಡ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಮೂರರಲ್ಲಿ ಒಬ್ಬರು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಬಹುಶಃ ಇದೇ ಕಾರಣಕ್ಕೆ ಇದ್ರ ಬಗ್ಗೆ ಸರ್ಚ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಮಧುಮೇಹದ ರಾಜಧಾನಿ ಭಾರತ. ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಅತಿ ಹೆಚ್ಚಿದೆ. ಹಾಗಾಗಿಯೇ ಗೂಗಲ್ ಸರ್ಚ್ ಟಾಪ್ ರೋಗಗಳ ಪಟ್ಟಿಯಲ್ಲಿ ಮಧುಮೇಹವೂ ಸ್ಥಾನ ಪಡೆದಿದೆ. ಟೈಫಾಯಿಡ್, ಡೆಂಗ್ಯೂ, ಮಾನಸಿಕ ಅಸ್ವಸ್ಥತೆ ಸೇರಿದಂತೆ ಅನೇಕ ರೋಗಗಳ ಬಗ್ಗೆ ಈ ವರ್ಷ ಗೂಗಲ್ ನಲ್ಲಿ ಭಾರತೀಯರು ಹುಡುಕಾಟ ನಡೆಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಸಿಎಂ “ಸಿದ್ದರಾಮಯ್ಯ”ನವರನ್ನು ಭೇಟಿಯಾದ “ಪ್ರಥಮ್ (MLA)! ಯಾಕೆ ಗೊತ್ತಾ ???

    ಒಂದಿಲ್ಲೊಂದು ಸುದ್ದಿಯಲ್ಲಿರುವ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್, ಈಗ ತಮ್ಮ ಹೊಸ ಚಿತ್ರಕ್ಕೆ ಕ್ಲ್ಯಾಪ್ ಮಾಡುವಂತೆ ನಮ್ಮ ರಾಜ್ಯದ ದಂಡನಾಯಕರನ್ನು ಭೇಟಿ ಮಾಡಿ ಆಹ್ವಾನಿಸಿದ್ದಾರೆ

  • ಸ್ಪೂರ್ತಿ

    ಕುರಿಕಾಯುವ ಹುಡುಗಿಯೊಬ್ಬಳು, ಆ ದೇಶದ ಶಿಕ್ಷಣ ಮಂತ್ರಿ ಹಾಗುವದೆಂದ್ರೆ ಸಾಮಾನ್ಯ ಅಲ್ಲ.!ಈ ಸ್ಟೋರಿ ಎಲ್ಲರಿಗೂ ಸ್ಪೂರ್ತಿ ಓದಿ ಮರೆಯದೇ ಶೇರ್ ಮಾಡಿ…

    ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಎಂತಹ ಒಳ್ಳೆಯ ಉದಾಹರಣೆಯಾಗಿರುವ ಈ ಯುವತಿ ಕುರಿ ಕಾಯುವವಳು. ವಲಸೆಗಾರರಾಗಿ ಬಂದು, ಬಡತನದಲ್ಲಿ ಬೆಳೆದು, ಆ ದೇಶ – ಭಾಷೆಯನ್ನು ಕಲಿತು, ಸಮಾಜವನ್ನು ತನ್ನದಾಗಿಸಿಕೊಂಡು ಅದೇ ದೇಶದಲ್ಲಿ ಮಂತ್ರಿಯಾಗುವುದು ಸಹಜ ಸಾಧನೆಯಲ್ಲ. ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಇಂತಹ ಒಳ್ಳೆಯ ಉದಾಹರಣೆ.   ಇವಳ ಹೆಸರು ನಜತ್ ವಲ್ಲದ್-ಬೆಲ್ಕಾಸೆಮ್. ಇಂದು ಇವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ. ಶಿಕ್ಷಣ ಇಲಾಖೆಗೆ ಮಂತ್ರಿಯಾಗಿ ಬಂದ ಮೊದಲ ಮಹಿಳೆಯಂತೆ. ನಜತ್ ವಲ್ಲದ್-ಬೆಲ್ಕಾಸೆಮ್(4…

  • ಸುದ್ದಿ

    ಕುಮಾರಣ್ಣ ಬಜೆಟ್ ನಲ್ಲಿ ರೈತರಿಗಾಗಿ ಮತ್ತೊಂದು ಭರ್ಜರಿ ಆಫರ್…

    ಸಾಲಮನ್ನಾ ಸೇರಿದಂತೆ ರೈತರಿಗೆ ಹಲವು ಅನುಕೂಲ ಕಲ್ಪಿಸಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತೊಂದು ಕೊಡುಗೆ ನೀಡಿದ್ದಾರೆ. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವುದಾಗಿ ಬಜೆಟ್ ನಲ್ಲಿ ಭರವಸೆ ನೀಡಲಾಗಿದೆ. ರಾಜ್ಯದಲ್ಲಿ ಸೌರಶಕ್ತಿ ಉತ್ಪಾದನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಮತ್ತು ರೈತರು ಎದುರಿಸುತ್ತಿರುವ ತೊಂದರೆಯನ್ನು ನಿವಾರಿಸುವ ಉದ್ದೇಶದಿಂದ ನೀರಾವರಿ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ತಿಳಿಸಲಾಗಿದೆ. ಉಚಿತವಾಗಿ ನೀಡಲಾಗುತ್ತಿರುವ ನೀರಾವರಿ ಪಂಪ್ ಸೆಟ್, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಗ್ರಾಹಕರಿಗೆ 9,250 ಕೋಟಿ…

  • ಸ್ಪೂರ್ತಿ

    ಮಸೀದಿಯಲ್ಲಿ ತಯಾರದ ಶಿವ ಭಂಡಾರಾದ ಅಡುಗೆ ……!

    ಇತ್ತೀಚಿಗೆ ಅಯೋಧ್ಯೆಯ ಸೀತಾರಾಮ ದೇವಸ್ಥಾನ, ಮುಸ್ಲಿಮರಿಗಾಗಿ ಇಫ್ತಾರ್ ಕೂಟ ಏರ್ಪಡಿಸಿ ಬಾಂಧವ್ಯದ ಬೆಸುಗೆಯನ್ನು ಎತ್ತಿ ಹಿಡಿದಿತ್ತು. ಇದೀಗ ಅದೇ ರೀತಿಯಲ್ಲಿ ಉತ್ತರ ಪ್ರದೇಶದ ಮೀರಥ್‌ನ ಜಾಮಾ ಮಸೀದಿಯಲ್ಲಿ ಶಿವ ಭಂಡಾರಾದ ಊಟದ ತಯಾರಿ ನಡೆಸಲು ಮುಂದಾಗುವ ಮೂಲಕ ಸಾಮರಸ್ಯವನ್ನು ಸಾರಿದೆ. ನಗರದಲ್ಲಿರುವ ಸೋಮನಾಥ ಶಿವ ದೇವಸ್ಥಾನದ 150ನೇ ಪ್ರತಿಷ್ಠಾಪನೆಯ ದಿನವನ್ನು ಆಚರಿಸುವ ಸಂದರ್ಭದಲ್ಲಿ ಶಿವ ಭಂಡಾರವನ್ನು ಏರ್ಪಡಿಸಿದ್ದು, ಈ ವೇಳೆ ಜಾಮಿಯಾ ಮಸೀದಿಯ ಮುಖ್ಯ ಖಾಝಿ ಜೇನ್-ಉಸ್-ಸಜಿದಿನ್ ಆಹಾರ ವ್ಯವಸ್ಥೆಯನ್ನು ನೋಡಿಕೊಳ್ಳಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ತರಕಾರಿ…

  • ಆಧ್ಯಾತ್ಮ, ಉಪಯುಕ್ತ ಮಾಹಿತಿ

    ದೇವರಿಗೆ ಅಗರಬತ್ತಿ ಹಚ್ಚಿ ಪೂಜೆ ಮಾಡುವುದು ಏಕೆ ಗೊತ್ತಾ?ಇದರ ಹಿಂದೆ ಕಾರಣ…

    ಭಗವಂತನ ಸಾನಿಧ್ಯದಲ್ಲಿ ಅಗರ್ಬತ್ತಿ ಹಚ್ಚುವುದು ಪೂಜೆ ಮತ್ತು ಪ್ರಾರ್ಥನೆಯ ಮಹತ್ವದ ಅಂಶ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಧ್ಯಾನದ ವೇಳೆ ಊದಿನಕಡ್ಡಿ ಹಚ್ಚುವ ಸಂಪ್ರದಾಯವಿದೆ. ಇದೊಂದು ಪುರಾತನ ಆಚರಣೆ. ಊದಿನಕಡ್ಡಿ ಮನೆ ತುಂಬ ಸುಗಂಧ ಪಸರಿಸುವುದು ಮಾತ್ರವಲ್ಲ, ಇದನ್ನು ಹಚ್ಚುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಪುರಾತನ ಕಾಲದಲ್ಲಿ ಹಲವು ಔಷಧೀಯ ವಸ್ತುಗಳನ್ನು ಊದಿನಕಡ್ಡಿಯಲ್ಲಿ ಅಳವಡಿಸಲಾಗುತ್ತಿತ್ತು. ಲೋಬಾನ ಹಾಗೂ ಗುಗ್ಗಲ್ ಅತ್ಯಂತ ಜನಪ್ರಿಯವಾಗಿದ್ದವು. ಅದನ್ನು ಇಂದಿಗೂ ಬಳಸಲಾಗುತ್ತದೆ. ಲೋಬಾನವನ್ನು ಬಾಸ್ವೆಲ್ಲಿಯಾ ಎಂಬ ಮರದ ಅಂಟಿನಿಂದ ತಯಾರಿಸಲಾಗುತ್ತದೆ. ನಾವು ಅದರ ಸುಗಂಧವನ್ನು…