ಉಪಯುಕ್ತ ಮಾಹಿತಿ

ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು

479

ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು ಎಂಬುದು ನಿಮಗೆ ಸರಕಾರದಿಂದ ಸಂದೇಶ ಬರಲಿದೆ ಹಾಗೂ ಈ ಲಿಂಕ್ ಮುಖಾಂತರ ತಿಳಿದುಕೊಳ್ಳಬಹುದು

8147500500  ಸಂಖ್ಯೆ ಗೆ ರೇಷನ್ ಕಾರ್ಡ್ ನಂಬರ್ SMS ಮಾಡಿದ ಬಳಿಕ ನೋಂದಣಿ ಸ್ಥಳ ದಿನಾಂಕ ಮತ್ತು ಸಮಯ ತಿಳಿಯ ಬಹುದು

ಈ ಲಿಂಕ್ ತೆರೆದು ರೇಷನ್ ಕಾರ್ಡ್ ನಂಬರ್ ಹಾಕಿದರೆ
ದಿನಾಂಕ ಸ್ಥಳ ಮತ್ತು ಸಮಯವನ್ನು ತಿಳಿಯ ಬಹುದು

ಅಥವಾ

8147500500
ಸಂಖ್ಯೆ ಗೆ ರೇಷನ್ ಕಾರ್ಡ್ ನಂಬರ್ SMS ಮಾಡಿದ ಬಳಿಕ ನೋಂದಣಿ ಸ್ಥಳ ದಿನಾಂಕ ಮತ್ತು ಸಮಯ ತಿಳಿಯ ಬಹುದು
https://sevasindhugs1.karnataka.gov.in/gl-stat-sp/Slot_Track

ದಯವಿಟ್ಟು ನಿಮಗೆ ತಿಳಿಸಿದ ನೊಂದಣಿ ಸಮಯದಲ್ಲಿಯೇ ಬರತಕ್ಕದ್ದು.

ಗೃಹ ಲಕ್ಷ್ಮೀ – ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ರೂ 2000/-
ದಯವಿಟ್ಟು ಈ ಸಂದೇಶವನ್ನು ಕೊನೆಯವರೆಗೂ ಗಮನವಿಟ್ಟು ಓದಿ. ಯಾವುದೇ ಗೊಂದಲ ಬೇಡ.
ಗೃಹ ಲಕ್ಷ್ಮೀ ಯೋಜನೆ ಗೆ ಅರ್ಜಿ ಸಲ್ಲಿಸಲು ದಿನಾಂಕ 19/07/2023 ರಿಂದ ಚಾಲನೆ . 

ಗೃಹ ಲಕ್ಷ್ಮೀ ಯೋಜನೆ ಗೆ ಅರ್ಜಿ ಸಲ್ಲಿಸಲು ಕುಟುಂಬದ ಯಜಮಾನಿಯ ಆಧಾರ್ ಲಿಂಕ್ ಆದ ಮೊಬೈಲ್ ಗೆ ಯಾವ ದಿನಾಂಕ ಅರ್ಜಿ ಸಲ್ಲಿಸಬೇಕು ಎಂಬ ಮೆಸೇಜ್ ಬರುತ್ತದೆ. ಆದುದರಿಂದ ಕುಟುಂಬದ ಯಜಮಾನಿಯ ಮೊಬೈಲ್ ರೀಚಾರ್ಜ್ ಮುಗಿದಿದ್ದರೆ ತಕ್ಷಣ ರೀಚಾರ್ಜ್ ಮಾಡಿಸಿ ಇಡಿ. ಮೊಬೈಲ್ ನಲ್ಲಿ ಮೆಸೇಜ್ ಪುಲ್ ಆಗಿದ್ದರೆ ಎಲ್ಲಾ ಮೆಸೇಜ್ ಡಿಲೀಟ್ ಮಾಡಿ ಇಡಿ. ಇಲ್ಲದಿದ್ದರೆ ಮೆಸೇಜ್ ಬರುವುದಿಲ್ಲ. ಮೊಬೈಲ್ ನಲ್ಲಿ ಬಂದ ಮೆಸೇಜಿನಲ್ಲಿ ಹೇಳಿದ ದಿನದಂದು ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರ ಕ್ಕೆ ಹೋಗಿ ಅಥವಾ ಸರಕಾರ ನೇಮಿಸಿದ ಪ್ರಜಾಪ್ರತಿನಿಧಿ ಮೂಲಕ ಅರ್ಜಿ ಸಲ್ಲಿಸಬೇಕು.

ದಯವಿಟ್ಟು ಗಮನಿಸಿ ‌ ಬೇರೆ ಎಲ್ಲಿಯೂ ಅರ್ಜಿ ಸಲ್ಲಿಸಿದ್ದರೆ ಆ ಅರ್ಜಿ ತಿರಸ್ಕೃತ ಗೊಳ್ಳುತ್ತದೆ. ಒಮ್ಮೆ ಅರ್ಜಿ ರಿಜೆಕ್ಟ್ ಆದರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಖಂಡಿತಾ ಇಲ್ಲ. ದಯವಿಟ್ಟು ಯಾವುದೇ ತಪ್ಪು ಮಾಡಿ ಪಶ್ಚಾತ್ತಾಪ ಪಡಬೇಡಿ. ಅರ್ಜಿ ಸಲ್ಲಿಸಿದ ನಂತರ ಮಂಜೂರಾತಿ ಪತ್ರ ನೀಡಲಾಗುವುದು. ಪ್ರಜಾಪ್ರತಿನಿಧಿ ಮೂಲಕ ಅರ್ಜಿ ಸಲ್ಲಿಸಿದ್ದರೆ ಅಂಚೆ ಮೂಲಕ ಅರ್ಜಿ ಮನೆಗೆ ತಲುಪಲಿದೆ. ಗೃಹ ಲಕ್ಷ್ಮೀ ಯೋಜನೆ ಗೆ ಅರ್ಜಿ ಸಲ್ಲಿಸಲು ಕುಟುಂಬದ ಯಜಮಾನಿಯ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಗಂಡನ ಆಧಾರ್ ಕಾರ್ಡ್ ( ಜೀವಂತ ಇದ್ದರೆ ಮಾತ್ರ) ತರಬೇಕು. ಕಡ್ಡಾಯವಾಗಿ ಮೆಸೇಜ್ ನಲ್ಲಿ ನಿಗದಿ ಪಡಿಸಿದ ದಿನಾಂಕದಂದೇ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಆತ ದಿನ ಅರ್ಜಿ ಸಲ್ಲಿಸಲು ಸಾಧ್ಯ ಆಗದಿದ್ದರೆ ಮರುದಿನ ಸಂಜೆ 5 ಗಂಟೆಯಿಂದ 7 ಗಂಟೆಯ ಒಳಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ. ದಯವಿಟ್ಟು ಯಾವುದೇ ರೀತಿಯ ಗೊಂದಲ ಬೇಡ. ಈ ಸಂದೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಇತರರಿಗೂ ತಿಳಿಸಿ.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ