ಸಿನಿಮಾ, ಸುದ್ದಿ

ಕಿಚ್ಚ ಸುದೀಪ್ ಗೆ ಪತ್ನಿಯಿಂದಲೇ ಧಮ್ಕಿ, ಪತ್ನಿಗೆ ಹೆದರಿ ಹನ್ನೊಂದು ಬಾರಿ ಒಂದೇ ಸಿನಿಮಾ ನೋಡಿದ ಕಿಚ್ಚ.!

56

ತಿಯೊಬ್ಬ ಸಿನಿಮಾ ಅಭಿಮಾನಿಯಾಗಲಿ ನಟನಾಗಲಿ‌ ಒಂದು ಸಿನಿಮಾವನ್ನು ಎಷ್ಟು ಬಾರಿ ನೋಡಬಹುದು ಹೇಳಿ? ಹೇಗಾದರು ಮಾಡಿ ಎರಡರಿಂದ ಮೂರು ಬಾರಿ ಸಿನಿಮಾ ವೀಕ್ಷಣೆ ಮಾಡಬಹುದು. ಅದರಲ್ಲೂ ಸ್ಟಾರ್ ನಟರಂತೂ ತಾವು ಮಾಡಿದ ಸಿನಿಮಾವನ್ನು ಒಂದು ಬಾರಿ ನೋಡುವುದೇ ಕಷ್ಟದ ಪರಿಸ್ಥಿತಿ. ಆದರೆ, ಚಿತ್ರರಂಗದ ಕಿಚ್ಚ ಮಾತ್ರ ಒಂದೇ ಸಿನಿಮಾವನ್ನು ಹತ್ತರಿಂದ ಹನ್ನೊಂದು ಬಾರಿ ನೋಡಿದ್ದಾರಂತೆ. ಅದೂ ಅವರ ಪತ್ನಿಯೊಂದಿಗೆ! ಪತ್ನಿಯ ಧಮ್ಕಿಗೆ ಹೆದರದೆ ಫೈಲ್ವಾನ್ ಈ ರೀತಿ ಮಾಡಿದ್ದಾರಂತೆ.

ಕಿಚ್ಚ ಸುದೀಪ್ ಅಭಿನಯದ ದಬಾಂಗ್-3 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸದ್ಯ ಚಿತ್ರ ತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಚಿತ್ರದ ಕುರಿತ ಸಂದರ್ಶನವೊಂದರಲ್ಲಿ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿ ಈ ರೀತಿ ಹೇಳಿದ್ದಾರೆ. ನನ್ನ ಪತ್ನಿಯಿಂದಾಗಿ ಹೃತಿಕ್ ರೋಷನ್ ಅಭಿನಯದ ಕಹೋ ನಾ ಪ್ಯಾರ್ ಹೈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಹತ್ತರಿಂದ ಹನ್ನೊಂದು ಬಾರಿ ನೋಡಿದ್ದೇನೆ. ನೀನು ನನ್ನನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗದಿದ್ದರೆ ನಾನು ಬೇರೆಯವರ ಜೊತೆ ಹೋಗುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಳು. ಹೀಗಾಗಿ ಪ್ರತೀ ಬಾರಿ ಅವಳ ಜೊತೆ ಚಿತ್ರಮಂದಿರಕ್ಕೆ ಹೋಗಿ ಕುಳಿತು, ಚಿತ್ರ ನೋಡಿ ಮರಳಿ ಬರುತ್ತಿದ್ದೆ ಎಂದು ಮಡದಿಯ ಧಮ್ಕಿ ಕುರಿತು ಹೇಳಿದ್ದಾರೆ.

ಮೊದಲ ಬಾರಿ ಸಿನಿಮಾ ನೋಡಿದಾಗ ಹೃತಿಕ್ ರೋಷನ್ ಅವರ ನಟನೆ, ಡ್ಯಾನ್ಸ್, ಸ್ಟೈಲ್ ಸೇರಿದಂತೆ ಅವರ ಅಭಿನಯ ನನಗೆ ತುಂಬಾ ಇಷ್ಟವಾಗಿತ್ತು. ಸಿನಿಮಾದಲ್ಲಿ ಹೃತಿಕ್ ಡ್ಯಾನ್ಸ್ ಮಾಡುತ್ತಿದ್ದಾಗ, ಇಲ್ಲಿ ನನ್ನ ಪತ್ನಿ ನನ್ನ ಕೈ ಚಿವುಟುತ್ತಿದ್ದರು. ಆಗ ನನಗೆ ಸಿಟ್ಟು ಬರುತ್ತಿತ್ತು. ನಾನು ಒಬ್ಬ ನಟ. ನನಗೂ ರಾಜ್ಯದ ತುಂಬ ಅಭಿಮಾನಿಗಳು ಇದ್ದರು. ಆದರೆ, ನನ್ನ ಪತ್ನಿ ಬೇರೆ ನಟನ ಅಭಿಮಾನಿಯಾಗಿದ್ದು, ಬೇಸರ ಮೂಡಿಸುತ್ತಿತ್ತು ಎಂದು ಹಾಸ್ಯಭರಿತವಾಗಿ ಹೇಳಿದರು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕರ್ನಾಟಕ

    ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ಮುಖಂಡ ಎನ್.ಧರಂಸಿಂಗ್ ಇನ್ನಿಲ್ಲ…

    ಕರ್ನಾಟಕದ ಮಾಜಿ ಮುಖ್ಯಮಂತ್ರಿ, 80 ವರ್ಷದ ಧರಂಸಿಂಗ್’ರವರು ಉಸಿರಾಟದ ತೊಂದರೆ, ಅಸ್ತಮಾ, ಮಧುಮೇಹ, ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ

  • ಜ್ಯೋತಿಷ್ಯ

    ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ಇಂದು ಬುಧವಾರ, 14/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಕೆಲಸ ಕಾರ್ಯಗಳಲ್ಲಿ ಅಡಚಣೆ. ಕಾರ್ಯಸಾಧನೆಗಾಗಿ ಸಂಚಾರದ ಸಾಧ್ಯತೆ. ನಿಮ್ಮ ಪಾಲಿಗೆ ಬರಬೇಕಾಗಿದ್ದ ಆಸ್ತಿಯು ಕೈಸೇರುವುದು.ಕುಟುಂಬದಲ್ಲಿ ಮಾತಿನ ಚಕಮಕಿ. ಅಧಿಕಾರಿ ವರ್ಗದವರಿಗೆ ವೃತ್ತಿರಂಗದಲ್ಲಿ ಅಭಿವೃದ್ಧಿ. ಕೌಟುಂಬಿಕವಾಗಿ ಸಂತೋಷ. ವೃಷಭ:- ಬಂಧುಗಳೊಂದಿಗೆ ಮನಸ್ತಾಪ. ಆರ್ಥಿಕ ಸ್ಥಿತಿಯಲ್ಲಿ ಏರುಪೇರು. ಅನವಶ್ಯಕ ವೆಚ್ಚ. ದೂರದ ಪ್ರಯಾಣ ಉಚಿತವಲ್ಲ. ಯೋಗ್ಯ ವಯಸ್ಕರಿಗೆ ಕಂಕಣಬಲ. ಮನೆಯ ಹಿರಿಯರ ಮಾತಿಗೆ ಎದುರಾಡದಿರಿ. ವಿದ್ಯಾರ್ಥಿಗಳಿಗೆ ಆಗಾಗ ನಿರುತ್ಸಾಹ ತರಲಿದೆ. ಆರೋಗ್ಯದಲ್ಲಿ ಏರುಪೇರು. ಮಿಥುನ:– ವ್ಯಾಪಾರದಲ್ಲಿ…

  • ಉಪಯುಕ್ತ ಮಾಹಿತಿ

    ನೀವು ಜಿಮ್ ಗೆ ಹೋಗುತ್ತಿದ್ದರೆ, ಹೋಗುವ ಮುನ್ನ ಮರೆಯದೇ ಇದನ್ನು ಸೇವಿಸಿ!

    ಉತ್ತಮ ಆರೋಗ್ಯ ಹಾಗೂ ಸದೃಢ ದೇಹಕ್ಕಾಗಿ ಜನ ಜಿಮ್ ಗೆ ಹೋಗ್ತಾರೆ. ಕೆಲವರಿಗೆ ಸದೃಢ ದೇಹ ಹೊಂದುವ ಆಸೆ ಸಿಕ್ಕಾಪಟ್ಟೆ ಇರುತ್ತೆ. ಹಾಗಾಗಿ ಏನೂ ತಿನ್ನದೆ ಜಿಮ್ ಗೆ ಹೋಗ್ತಾರೆ. ಇದ್ರಿಂದ ಆರೋಗ್ಯ ಹಾಗೂ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಖಾಲಿ ಹೊಟ್ಟೆಯಲ್ಲಿ ಜಿಮ್ ಗೆ ಹೋಗುವುದು ಒಳ್ಳೆಯದಲ್ಲ. ಅಲ್ಪ ಆಹಾರ ಸೇವನೆ ಮಾಡಿ ಜಿಮ್ ಗೆ ಹೋಗುವುದು ಬೆಸ್ಟ್. ಜಿಮ್ ಗೆ ಹೋಗುವ ಮೊದಲು ಹಾಲು ಮತ್ತು ಓಟ್ಸ್ ಸೇವನೆ ಮಾಡಿ. ಹೀಗೆ ಮಾಡುವುದರಿಂದ…

  • ಸುದ್ದಿ

    ಚಂದನಾರನ್ನು ಅಪ್ಪಿಕೊಂಡು ಮುತ್ತುಕೊಟ್ಟ ಕಿಶನ್. ಚಂದನಾ ಶಾಕ್!

    ಬಿಗ್ ಬಾಸ್ ಸೀಸನ್-7ರಲ್ಲಿ ಡ್ಯಾನ್ಸರ್ ಕಿಶನ್ ಸ್ಪರ್ಧಿ ಚಂದನಾರಿಗೆ ಮುತ್ತು ನೀಡಿದ್ದಾರೆ. ಮುತ್ತು ನೀಡಿದ್ದ ಕಿಶನ್‍ಗೆ ಡೈರೆಕ್ಟ್ ನಾಮಿನೇಟ್ ಮಾಡುವ ಮೂಲಕ ಚಂದನಾ ಶಾಕ್ ಕೊಟ್ಟಿದ್ದಾರೆ. ಸೋಮವಾರ ಡೈನಿಂಗ್ ಏರಿಯಾದಲ್ಲಿ ವಾಸುಕಿ, ದೀಪಿಕಾ, ಚೈತ್ರಾ ಕೊಟ್ಟೂರು ಹಾಗೂ ಶೈನ್ ಶೆಟ್ಟಿ ಕುಳಿತಿರುತ್ತಾರೆ. ಈ ವೇಳೆ ಚಂದನಾ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಿಶನ್ ಹಾಗೂ ಚೈತ್ರಾರ ರೊಮ್ಯಾಂಟಿಕ್ ದೃಶ್ಯ ಸೆರೆ ಹಿಡಿಯುತ್ತಿದ್ದರು. ಆಗ ವಾಸುಕಿ, ಕಿಶನ್ ಅವರನ್ನು ಕರೆದು ಚಂದನಾರಿಗೆ ಮುತ್ತು ನೀಡುವಂತೆ ಹೇಳುತ್ತಾರೆ. ವಾಸುಕಿ ಮಾತನ್ನು ಕೇಳಿ ಕಿಶನ್,…

  • ಸುದ್ದಿ

    ಇನ್ಮುಂದೆ 6 ಮತ್ತು 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಮುಂದಾದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌,.!

    ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಿ ಪರೀಕ್ಷೆ ಬಗ್ಗೆ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ 6 ಮತ್ತು 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ತಿಳಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಳಿಕ ಬುಧವಾರ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಬ್ಯಾಡಮೂಡ್ಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಚರ್ಚಿಸಿದ ಬಳಿಕ…