ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೋಲಾರ:- ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ, ಹನುಮಂತರಾಯನ ದಿನ್ನೆ ಗ್ರಾಮದ ವಾಸಿ ಹೆಚ್.ಎನ್.ವೆಂಕಟೇಶ್ ಬಿನ್ ನಾರಾಯಣಸ್ವಾಮಿ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ, ಅತ್ಯಾಚಾರ ಎಸಗಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ರವರು ಆರೋಪಿಗೆ 20 ವರ್ಷ ಸಜೆ ತೀರ್ಪು ನೀಡಿದ್ದಾರೆ.
ಸದರಿ ಆರೋಪಿಯ ವಿರುದ್ದ ಕೋಲಾರ ಮಹಿಳಾ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾದ ಎನ್.ಬೈರ ರವರು ಹಾಗೂ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯವರು ಕಲಂ 6 ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿ ಆರೋಪಿತನ ವಿರುದ್ದ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ಸ್ಪೇಷಲ್ ಸಿ.(ಪೋಕ್ಸೋ) 82/2022 ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ಆರೋಪಿ ಹೆಚ್.ಎನ್.ವೆಂಕಟೇಶ್ ನಿಗೆ ಕಲಂ 6 ಪೋಕ್ಸೋ ಕಾಯ್ದೆ ಅಡಿಯಲ್ಲಿ 20 ವರ್ಷ ಸಜೆ ಜೊತೆಗೆ ರೂ.35 ಸಾವಿರರೂ ದಂಡ ವಿಧಿಸಿ ದಂಡ ತೆರಲು ವಿಫಲರಾದಲ್ಲಿ 6 ತಿಂಗಳು ಹೆಚ್ಚುವರಿ ಸಜೆ ವಿಧಿಸಿದ್ದಾರೆ.
ನೊಂದ ಬಾಲಕಿಗೆ ರೂ. 4 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಶ್ರೀಮತಿ ಡಿ.ಲಲಿತಕುಮಾರಿ ರವರು ವಾದ ಮಂಡಿಸಿದ್ದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಮ್ರಾಜ್ಯ ಗೆದ್ದ ಮಕ್ಕಳಿಗೆ ತಾಯಿಯೇ ಎದುರು ನಿಂತು ಕಿರೀಟ ಹಾಕಿ ಪಟ್ಟಾಭಿಷೇಕ ಮಾಡಿರುವುದು ಚರಿತ್ರೆಯ ಪುಟಗಳಲ್ಲಿ ನಾವು ಓದಿದ್ದೇವೆ. ಆದರೆ ಧಾರವಾಡದಲ್ಲಿ ರೈತರೊಬ್ಬರು ತಮ್ಮ ತಾಯಿಯ ಶತಮಾನೋತ್ಸವಕ್ಕೆ ಬೆಳ್ಳಿ ಕಿರೀಟ ತೊಡಿಸಿ ಸಾವಿರಾರು ಜನರ ಮಧ್ಯೆ ಅಭಿನಂದಿಸಿದ್ದಾರೆ. ಡಾಕ್ಟರ್, ಇಂಜಿನಿಯರ್ ಓದಿ ಕೆಲಸ ಸಿಕ್ಕ ಬಳಿಕ ವಿದೇಶದಲ್ಲಿ ಸುಖ ಜೀವನ ನಡೆಸುವ ಕೆಲ ಮಕ್ಕಳು ತಮ್ಮ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೋ, ಅನಾಥಾಶ್ರಮಕ್ಕೋ ಸೇರಿಸುವ ಕಾಲವಿದು. ಇಂಥಹ ಕಾಲದಲ್ಲಿ ಧಾರವಾಡ ಜಿಲ್ಲೆಯ ಹೊಲ್ತಿಕೋಟಿ ಗ್ರಾಮದ ರೈತ ಮಹದೇವಪ್ಪ ಕೋರಿ…
ಭಾರತದ ಹೆಮ್ಮೆಯ ಕ್ಷಿಪಣಿ ಬ್ರಹ್ಮೋಸ್ ಗೆ ಪರ್ಯಾಯ ಎಂದೇ ಕರೆಯಲಾಗುತ್ತಿದ್ದ ನಿರ್ಭಯ್ ಕ್ಷಿಪಣಿ ಸಿದ್ಧವಾಗಿ ದಶಕಗಳೇ ಕಳೆದರೂ ಈವರೆಗೆ ನಡೆದ ಎಲ್ಲ ಪರೀಕ್ಷಾರ್ಥ ಪ್ರಯೋಗಗಳಲ್ಲಿ ಅದು ವಿಫಲವಾಗಿತ್ತು. ಈ ಹಿಂದೆ ನಡೆದ ಒಟ್ಟು ನಾಲ್ಕು ಪರೀಕ್ಷೆಗಳಲ್ಲಿ ನಿರ್ಭಯ್ ವಿಫಲವಾಗುವ ಮೂಲಕ ವಿಜ್ಞಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿತ್ತು.
ಒಂದು ಕಾಲದಲ್ಲಿ ಮಾಧ್ಯಮ ಎಂದರೆ ಜ್ಞಾನದ ಕಣಜ ಎಂದೇ ಕರೆಯಲಾಗುತ್ತಿತ್ತು. ವಿಶ್ವದ ಎಲ್ಲಾ ಆಗುಹೋಗುಗಳ ಜೊತೆ ಅವುಗಳ ಬಗೆಗಿನ ವಿಮರ್ಶಾತ್ಮಕ ದೃಷ್ಟಿಕೋನವನ್ನು ನೀಡುತ್ತಿದ್ದರು.
ಕಪ್ಪುಹಣ ಹೊಂದಿರುವ ಅನುಮಾನಾಸ್ಪದ ಖಾತೆಯ ಮಾಹಿತಿಗಳನ್ನು ಭಾರತದೊಂದಿದೆ ಹಂಚಿಕೊಳ್ಳುವುದಾಗಿ ಸ್ವಿಡ್ಜರ್ ಲ್ಯಾಂಡ್
ಮಂಗಳವಾರ, 03/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಉದ್ಯೋಗಾಕಾಂಕ್ಷಿಗಳಿಗೆ ಸದವಕಾಶ ಒದಗಿ ಬರಲಿದೆ. ಕೂಲವಾದೀತು. ವೃತ್ತಿರಂಗದಲ್ಲಿ ನಿಮ್ಮ ವ್ಯಕ್ತಿತ್ವದ ಘನತೆಯನ್ನು ಕಾಪಾಡಿಕೊಳ್ಳುವುದು ಅಗತ್ಯವಿದೆ. ವಿಶ್ವಾಸದ ದುರುಪಯೋಗವಾಗುತ್ತದೆ. ಆಗಾಗ ಅಡಚಣೆಗಳಿಂದಲೇ ಕಾರ್ಯಾನು ವೈಯಕ್ತಿಕ ಸಮಸ್ಯೆಗಳು ಬಗೆಹರಿದು ಮನೋಲ್ಲಾಸ ಮೂಡಲಿದೆ. ದಾರ್ಶನಿಕ ಸಂತರ ಸಮಾಗಮದಿಂದ ಆಧ್ಯಾತ್ಮ ಜೀವನಕ್ಕೆ ಹೊಸ ಆಯಾಮ. ವೃಷಭ:- ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರುತ್ಸಾಹ ತಂದೀತು. ಸನ್ಮಾರ್ಗದಲ್ಲಿ ಸಾಗುವುದರಿಂದ ಕುಟುಂಬದ ಬಾಧ್ಯತೆಗಳ ನಿರ್ವಹಣೆ ಸರಾಗ. ಅವಿವಾಹಿತರಿಗೆ ಸಂಬಂಧಗಳು ಕೂಡಿಬರಲಿವೆ. ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ತೆರೆದುಕೊಳ್ಳಲಿವೆ. ಆರೋಗ್ಯದ…
ಮೊಬೈಲ್ ಆಧಾರ್ ಲಿಂಕ್ ಮಾಡುವ ಸಲುವಾಗಿ ಈ ಮೊದಲು ಟೆಲಿಕಾಂ ಆಪರೇಟರ್ ಗಳ ಔಟ್ ಲೈಟ್ಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಇದಕ್ಕೆ ಕಡಿವಾಣ ಹಾಕಿ ಅತ್ಯಂತ ಸುಲಭವಾಗಿ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲು, ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಮಾಡುವ ಅವಕಾಶವನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಾಡಿಕೊಟ್ಟಿದೆ.