ಉಪಯುಕ್ತ ಮಾಹಿತಿ

ರುಚಿಕರವಾದ ಹಯಗ್ರೀವ ಮಾಡುವ ವಿಧಾನ ಹೇಗೆ ಗೊತ್ತಾ.?

125

ಹಯಗ್ರೀವ ಹೆಚ್ಚಾಗಿ ಕರ್ನಾಟಕದ ಉಡುಪಿ ಪ್ರದೇಶದಲ್ಲಿ ಮಾಡುವ ಸಿಹಿತಿಂಡಿ.
ಸಾಕಷ್ಟು ಜನರಿಗೆ ಪ್ರೀಯವಾದ ತಿನಿಸು ಎಂದರೆ ಹಯಗ್ರೀವ. ರುಚಿಯಾದ ಹಯಗ್ರೀವವನ್ನು ಮಾಡುವುದು ಬಹಳ ಸುಲಭ! ಹಬ್ಬ ಹರಿದಿನಗಳಲ್ಲಿ ಈ ಸಿಹಿಯನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಇದನ್ನು ಹೆಚ್ಚಾಗಿ ದೇವರ ನೈವೇದ್ಯಕ್ಕೆ ಇಡಲು ಮಾಡುತ್ತಾರೆ. ಹಯಗ್ರೀವ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು : ಕಡ್ಲೆ ಬೇಳೆ – 2 ಕಪ್‌‌‌, ತೆಂಗಿನ ತುರಿ – 1ಕಪ್‌, ಬೆಲ್ಲ – 1 ಕಪ್‌‌‌‌, ತುಪ್ಪ – 1 ಕಪ್‌‌‌
ಏಲಕ್ಕಿ ಪುಡಿ – 1/2 ಸ್ಪೂನ್, ಗಸಗಸೆ – 1/4 ಕಪ್‌‌, ಗೋಡಂಬಿ – 1/4 ಕಪ್‌‌‌, ಬಾದಾಮಿ – 1/4ಕಪ್‌‌‌
ಒಣದ್ರಾಕ್ಷಿ – 1/4 ಕಪ್‌‌‌.

ತಯಾರಿಸುವ ವಿಧಾನ

ಒಂದು ಬೌಲ್ನಲ್ಲಿ ಕಡಲೇ ಬೇಳೆಯನ್ನು ಹಾಕಿ. ಅದಕ್ಕೆ 2 ಕಪ್ ನೀರನ್ನು ಸೇರಿಸಿ ಅರ್ಧ ಗಂಟೆ ನೆನೆಯಲು ಬಿಡಿ. ನೆನೆಸಿಕೊಂಡ ಕಡಲೇ ಬೇಳೆಯನ್ನು ಕುಕ್ಕರ್‌ಗೆ ಹಾಕಿ. ಅರ್ಧ ಕಪ್ ನೀರನ್ನು ಸೇರಿಸಿ. 4-5 ಸೀಟಿ ಕೂಗಿಸಿ ಬೇಯಿಸಿ. ನಂತರ ಆರಲು ಬಿಡಿ. ಮುಚ್ಚಳವನ್ನು ತೆರೆದು, ಲಘು ಪ್ರಮಾಣದಲ್ಲಿ ಬೇಳೆಯನ್ನು ಅರೆದು ಒಂದೆಡೆ ಇಡಿ. ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಸೇರಿಸಿ ಬಿಸಿ ಮಾಡಿ. ತಕ್ಷಣವೇ ಅರ್ಧ ಕಪ್ ನೀರನ್ನು ಬೆರೆಸಿ. ಬೆಲ್ಲ ಸಂಪೂರ್ಣವಾಗಿ ಕರಗಲು, ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಕುದಿಸಿ. ಬೆಲ್ಲದ ಪಾಕಕ್ಕೆ ಬೇಯಿಸಿಕೊಂಡ ಬೇಳೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಗಸಗಸೆಯನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ, 3 ಟೇಬಲ್ ಚಮಚ ತುಪ್ಪವನ್ನು ಸೇರಿಸಿ. ಇವೆಲ್ಲವನ್ನು 15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ, ಒಣದ್ರಾಕ್ಷಿ ಮತ್ತು ಒಣ ತೆಂಗಿನ ತುರಿಯನ್ನು ಸೇರಿಸಿ. ಪುನಃ 5 ಟೇಬಲ್ ಚಮಚ ತುಪ್ಪವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ಇದನ್ನು 2 ನಿಮಿಷ ಬೇಯಿಸಲು ಬಿಡಿ. ಈ ಮಧ್ಯೆ, ಒಂದು ಚಿಕ್ಕ ಪಾತ್ರೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇರಿಸಿ ಬಿಸಿ ಮಾಡಿ, ಕತ್ತರಿಸಿಕೊಂಡ ಗೋಡಂಬಿಯನ್ನು ಹಾಕಿ 2 ನಿಮಿಷ ಹುರಿಯಿರಿ. ಅವು ಹುರಿದು ಹೊಂಬಣ್ಣಕ್ಕೆ ತಿರುಗಬೇಕು,ನಂತರ ಲವಂಗವನ್ನು ಸೇರಿಸಿ ಬೇಯಿಸಿದ ಗೋಡಂಬಿ ಮಿಶ್ರಣವನ್ನು ಬೆಲ್ಲ ಮತ್ತು ಬೇಳೆಯ ಮಿಶ್ರಣಕ್ಕೆ ಸೇರಿಸಿ. ಏಲಕ್ಕಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ, ಬಿಸಿ ಇರುವಾಗಲೇ ಸವಿಯಲು ನೀಡಿ.

ಸಲಹೆ : ಕಡಲೇ ಬೇಳೆಯನ್ನು ನೆನೆಸಿಕೊಂಡರೆ ನುಣ್ಣಗೆ ಬೇಯುತ್ತದೆ. ಒಣಗಿದ ತೆಂಗಿನ ತುರಿ ಸೇರಿಸುವುದು ನಿಮ್ಮ ಆಯ್ಕೆ. ಗಸಗಸೆಯನ್ನು ಸೇರಿಸುವುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.
ಕ್ಯಾಲೋರಿ – 256.9 ಕ್ಯಾಲ್ ಫ್ಯಾಟ್ – 11.4 ಗ್ರಾಂ. ಪ್ರೋಟೀನ್ – 21.1 ಗ್ರಾಂ. ಕಾರ್ಬೋಹೈಡ್ರೇಟ್ – 61 ಗ್ರಾಂ. ಸಕ್ಕರೆ – 24.8 ಗ್ರಾಂ. ಫೈಬರ್ – 6.2 ಗ್ರಾಂ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕರೀನಾಳ “ಸ್ನೇಕ್ ಚೈನ್ ‘’ ಬೆಲೆ ಕೇಳಿದರೆ ಅಚ್ಚರಿಯಂತು ಗ್ಯಾರಂಟಿ..!ಅಷ್ಟಕ್ಕೂ ಅದರ ಬೆಲೆ ಎಷ್ಟು ಗೊತ್ತ.?

    ಬಾಲಿವುಡ್ ನಟಿ ಕರೀನಾ ಕಪೂರ್ ಹುಟ್ಟು ಹಬ್ಬದ ನಂತ್ರ ಡಾನ್ಸ್ ಇಂಡಿಯಾ ಡಾನ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಡಾನ್ಸ್ ಇಂಡಿಯಾ ಡಾನ್ಸ್ ಫೈನಲ್ ನಲ್ಲಿ ಜಡ್ಜ್ ಆಗಿ ಕರೀನಾ ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ಕರೀನಾ ಸ್ಟೈಲ್ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ. ಸೆಟ್ ನಲ್ಲಿ ಕರೀನಾ ಫ್ಯಾಷನ್ ಎಲ್ಲರನ್ನು ಆಕರ್ಷಿಸಿದೆ. ವಿಶೇಷವಾಗಿ ಕರಿನಾ ಕತ್ತಿಗೆ ಹಾಕಿದ್ದ ಸ್ನೇಕ್ ಚೈನ್. ಕರೀನಾ ಡೈಮಂಡ್ ಸ್ನೇಕ್ ಚೈನ್ ಧರಿಸಿ ಬಂದಿದ್ದರು. ಕರೀನಾರ ಈ ಚೈನ್ ಐಷಾರಾಮಿ ಕಾರುಗಳಿಗಿಂತ ದುಬಾರಿ ಎನ್ನಲಾಗಿದೆ. ಇದ್ರ…

  • inspirational

    ಗರ್ಭಿಣಿ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ ಮಾಡಿದ ಪೊಲೀಸರು.

     ಪೊಲೀಸ್ ಮಹಿಳಾ ಸಿಬ್ಬಂದಿಯ ಮಾನಸಿಕ ಒತ್ತಡ ಕಡಿಮೆ ಮಾಡಲು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಗರ್ಭಿಣಿಯರಿಗೆ ಪೊಲೀಸ್ ಠಾಣೆಯಲ್ಲಿ ಸೀಮಂತ ಮಾಡಿದ್ದಾರೆ. ಪೊಲೀಸರು ಗರ್ಭಿಣಿ ಸಿಬ್ಬಂದಿಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಮಾಡಿದ್ದು, ಠಾಣೆಯ ಎಲ್ಲಾ ಸಿಬ್ಬಂದಿ ಸೇರಿ ಶಾಸ್ತ್ರೋಕ್ತವಾಗಿ ಸೀಮಂತ ನೆರವೇರಿಸಿದ್ದಾರೆ. ಠಾಣೆಯ ಮಹಿಳಾ ಪೊಲೀಸ್ ಪೇದೆಯಾಗಿದ್ದ ಲಕ್ಷ್ಮೀ ಹಾಗೂ ಮತ್ತೊಬ್ಬ ಮಹಿಳಾ ಪೇದೆ ವೀರಮ್ಮ ಅವರಿಗೆ ಸೀಮಂತ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗೆ ಕೆಲಸದ ಒತ್ತಡ, ಮಾನಸಿಕ…

  • ಸುದ್ದಿ

    ‘ಮೇಕಪ್ ಮಾಡದ ದೃಶ್ಯಗಳನ್ನೆ ಹೆಚ್ಚು ತೋರಿಸಿದ್ದಾರೆ’ ಎಂದ ಚೈತ್ರಾ ಹೇಳಿಕೆಗೆ ಸುದೀಪ್ ಗರಂ..!

    ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯ ಎರಡನೇ ವಾರ ಚೈತ್ರಾ ವಾಸುದೇವನ್ ಎಲಿಮಿನೇಟ್ ಆದರು. ದೊಡ್ಮನೆಯಿಂದ ಚೈತ್ರಾ ಅವರನ್ನ ಹೊರಗೆ ಕರೆದ ಸುದೀಪ್ ವೇದಿಕೆ ಮೇಲೆ ಮಾತುಕತೆ ಮುಂದುವರಿಸಿದರು. ಈ ವೇಳೆ ಚೈತ್ರಾ ವಾಸುದೇವನ್ ಅವರಿಗೆ ತಮ್ಮ ಎರಡು ವಾರದ ಜರ್ನಿ ಕುರಿತು VT (ವಿಡಿಯೋ ದೃಶ್ಯ) ತೋರಿಸಲಾಯಿತು. ಈ ವಿಡಿಯೋ ನೋಡಿದ ಚೈತ್ರಾ ವಾಸುದೇವನ್’ ಮೇಕಪ್ ಇಲ್ಲದ ದೃಶ್ಯ ಹೆಚ್ಚು ತೋರಿಸಿದ್ದಾರೆ’ ಒಂದು ವಿಚಾರಕ್ಕೆ ಕಾಮೆಂಟ್ ಮಾಡಿದರು. ಈ ಮಾತಿನಿಂದ ಬೇಸರಗೊಂಡ ಸುದೀಪ್ ಅವರು, ವೇದಿಕೆಯಲ್ಲೇ…

  • ಸುದ್ದಿ

    40 ಗ್ರಾಂ ಚಿನ್ನವನ್ನೂ ನುಂಗಿದ ಗೂಳಿ ನಂತರ ಏನಾಯ್ತು ಗೊತ್ತೇ,.??

    ಇಲ್ಲಿನ ಕಲನವಾಲಿ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯೊಬ್ಬರಿಗೆ ಸೇರಿದ ಸುಮಾರು 40 ಗ್ರಾಂ ಚಿನ್ನಾಭರಣವನ್ನು ಗೂಳಿಯೊಂದು ಆಕಸ್ಮಿಕವಾಗಿ ನುಂಗಿರುವ ಘಟನೆ ನಡೆದಿದ್ದು, ಅದನ್ನು ಹೊರತೆಗೆಯಲು ಮಹಿಳೆ ಇನ್ನಿಲ್ಲದಷ್ಟು ಸರ್ಕಸ್ ​ಮಾಡುತ್ತಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಮಹಿಳೆಯ ಪತಿ ಜನಕರಾಜ್​, ಅಕ್ಟೋಬರ್​ 29ರಂದು ಈ ಘಟನೆ ನಡೆಯಿತು. ತರಕಾರಿ ಕತ್ತರಿಸಿ ತುಂಬಲಾಗಿದ್ದ ಬೌಲ್​ನಲ್ಲಿ ನನ್ನ ಪತಿ ಹಾಗೂ ಸೊಸೆ ತಮ್ಮ ಚಿನ್ನಾಭರಣವನ್ನು ಅದರಲ್ಲಿಟ್ಟಿದ್ದರು. ಆದರೆ, ಆಕಸ್ಮಿಕವಾಗಿ ಚಿನ್ನದಮೇಲೆ ತರಕಾರಿ ತ್ಯಾಜ್ಯವನ್ನು ಇಡಲಾಗಿತ್ತು.ಕೊನೆಯಲ್ಲಿ ಇದರ ಅರಿವಿಲ್ಲದೆ ಅದನ್ನು ಕಸದ ಗುಂಡಿಗೆ ಎಸೆಯಲಾಗಿತ್ತು….

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ,ಈ ದಿನದ ರಾಶಿ ಭವಿಷ್ಯದಲ್ಲಿ ನಿಮಗೆ ಶುಭಕರವಾಗಿದಯೇ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 call/ whatsapp/ mail raghavendrastrology@gmail.com ಮೇಷ(6 ನವೆಂಬರ್, 2018) ದೂರದ ಸಂಬಂಧಿಗಳಿಂದ ಅನಿರೀಕ್ಷಿತವಾದ ಒಳ್ಳೆಯಸುದ್ದಿ ಇಡೀ ಕುಟುಂಬಕ್ಕೆ ಸಂತೋಷದ ಕ್ಷಣಗಳನ್ನು…

  • ದೇಶ-ವಿದೇಶ, ವಿಸ್ಮಯ ಜಗತ್ತು

    ಮಹಿಳೆಯರಿಗೆ ವಾಸಿಸಲು ಅತ್ಯಂತ ಕಷ್ಟಕರವಾದ ದೇಶಗಳು ಯಾವುದು ಗೊತ್ತಾ..? ತಿಳಿಯಲು ಈ ಲೇಖನ ಓದಿ…

    ಇದು ಬಹುಶಃ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿದ್ದು, ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲ ದಾಳಿಯನ್ನು (Acid Attack )ಹೊಂದಿದೆ ಮತ್ತು ಅವುಗಳಲ್ಲಿ ಹೆಚ್ಚಿನವು ನ್ಯಾಯವನ್ನು ಪಡೆಯುವುದಿಲ್ಲ .ಈ ದೇಶದಲ್ಲಿ 2015 ರಲ್ಲಿ ಸುಮಾರು 45,000 ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ.