ದೇವರು-ಧರ್ಮ

ಸಹಸ್ರ ದೇವತೆಗಳ ಅನುಗ್ರಹಕ್ಕಾಗಿ ಕಾರ್ತಿಕ ಹುಣ್ಣಿಮೆಯಂದು ಹೀಗೆ ಮಾಡಿ…!

30

ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಪೂರ್ಣಿಮೆಯು ಅತ್ಯಂತ ಶ್ರೇಷ್ಠವಾದ ದಿನ. ಧಾರ್ಮಿಕವಾಗಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡ ಈ ದಿನ ಸಮಸ್ತ ದೇವತೆಗಳಿಗೂ ಪೂಜೆ ಹಾಗೂ ಪ್ರಾರ್ಥನೆಯನ್ನುಸಲ್ಲಿಸಬೇಕು. ಈ ದಿನ ಹರಿ-ಹರರ ಭಕ್ತರು ತಮ್ಮ ದೇವರಿಗಾಗಿ ವಿಶೇಷ ಉಪವಾಸ ವ್ರತಗಳನ್ನು ಕೈಗೊಂಡರೆ ಅವರು ಪ್ರಸನ್ನರಾಗುವರು. ಜೊತೆಗೆ ಭಕ್ತರ ಜೀವನೋದ್ಧಾರಕ್ಕೆ ಆಶೀರ್ವದಿಸುವರು ಎನ್ನಲಾಗುವುದು.

ಕಾರ್ತಿಕ ಹುಣ್ಣಿಮೆಯನ್ನು ಈ ಬಾರಿ ನವೆಂಬರ್12 ರಂದು ಆಚರಿಸಲಾಗುತ್ತದೆ, ಇದನ್ನು ವಿಶೇಷವಾಗಿ ಶಿವನಿಗೆ ಮೀಸಲಾದ ದಿನ ಎಂದು ಹೇಳಲಾಗುವುದು. ಕೆಲವು ಪುರಾಣ ಕಥೆಗಳ ಪ್ರಕಾರತ್ರಿಪುರಾಸುರ ಎನ್ನುವ ರಾಕ್ಷಸನನ್ನು ಶಿವನು ಕಾರ್ತಿಕ ಹುಣ್ಣಿಮೆಯ ದಿನ ವಧಿಸಿದನು. ಶಿವನ ಈ ವಿಜಯದ ನೆನಪಿಗಾಗಿಯೇ ಕಾರ್ತಿಕ ಹುಣ್ಣಿಮೆಯನ್ನು “ತ್ರಿಪುರ ಪೂರ್ಣಿಮ” ಎಂದು ಆಚರಿಸಲಾಗುವುದು. ಈ ಪವಿತ್ರ ದಿನವು ಕೃತಿಕಾ ನಕ್ಷತ್ರದಲ್ಲಿ ಬಂದಾಗ ಅದು ಇನ್ನಷ್ಟು ಮಹತ್ವವನ್ನು ಪಡೆದುಕೊಳ್ಳುವುದು. ಆಗ ಕಾರ್ತಿಕ ಹುಣ್ಣಿಮೆಯನ್ನುಮಾಹಾ ಕಾರ್ತಿಕ ಎಂದು ಕರೆಯಲಾಗುವುದು.

ಹುಣ್ಣಿಮೆಯ ವಿಶೇಷ ದಿನದಂದು ಪವಿತ್ರ ನೀರಿನ ಸ್ನಾನ ಮಾಡಿ ವ್ರತ ಹಾಗೂ ಪೂಜೆಯನ್ನು ಕೈಗೊಂಡರೆ ಅತ್ಯಂತ ಶ್ರೇಷ್ಠ ಹಾಗೂ ಶ್ರೇಯಸ್ಸು ದೊರೆಯುವುದು ಎಂದು ಹೇಳಲಾಗುತ್ತದೆ. ಭಕ್ತರು ಈ ದಿನ ಮುಂಜಾನೆ ಸೂರ್ಯೋದಯ ಆಗುತ್ತಿದ್ದಂತೆ ಸ್ನಾನ ಮಾಡಿ ದೇವತೆಗಳಿಗೆ ಪೂಜೆಯನ್ನು ಸಲ್ಲಿಸಿದರೆ ಅತ್ಯಂತ ಶುಭ ಸಂಗತಿ. ಭಕ್ತರ ನಿರ್ಮಲ ಮನಸ್ಸಿನ ಪೂಜೆ ಕೈಗೊಂಡರೆ ದೇವರು ಯಶಸ್ವಿ ಬದುಕನ್ನು ಆಶೀರ್ವದಿಸುವನು ಎಂದು ಹೇಳಲಾಗುವುದು.

ವಿಶೇಷ ಶಕ್ತಿ ಹಾಗೂ ಹಿನ್ನೆಲೆಯನ್ನು ಹೊಂದಿರುವ ಕಾರ್ತಿಕ ಹುಣ್ಣಿಮೆಯನ್ನು ದೇವ್ ದೀಪಾವಳಿ ಎಂದು ಆಚರಿಸಲಾಗುತ್ತದೆ. ಈ ದಿನ ದೇವತೆಗಳು ದೀಪಾವಳಿ ಹಬ್ಬವನ್ನು ಆಚರಿಸುವರು. ಈ ದಿನ ದೇವತೆಗಳು ಪವಿತ್ರ ನದಿಗಳ ಮೂಲಕ ಭೂಮಿಗೆ ಇಳಿಯುತ್ತಾರೆ ಎನ್ನುವ ನಂಬಿಕೆಯಿದೆ. ಹಾಗಾಗಿ ಭಕ್ತರು ಕಾರ್ತಿಕ ಹುಣ್ಣಿಮೆಯ ದಿನ ನದಿ ನೀರು ಅಥವಾ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದರೆ ಎಲ್ಲಾ ದೇವತೆಗಳ ಆಶೀರ್ವಾದ ದೊರೆಯುವುದು ಎಂದು ಹೇಳಲಾಗುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ