ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ಯಾಂಡಲ್ವುಡ್ ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರು ವಂಚನೆ ಪ್ರಕರಣದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬುಧವಾರ ಡಿಸಿಪಿ ರವಿ ಕುಮಾರ್ ಕಚೇರಿಗೆ ಆಗಮಿಸಿದ ಅವರು 1.60 ಕೋಟಿ ರೂ. ವಂಚನೆ ವಿರುದ್ಧ ದೂರು ದಾಖಲಿಸಿದ್ದಾರೆ.
ಕನ್ನಡದಲ್ಲಿ ನಿರ್ಮಾಪಕ, ನಿರ್ದೇಶಕ, ನಟರಾಗಿ ಗುರುತಿಸಿಕೊಂಡಿರುವ ಎಸ್. ನಾರಾಯಣ್ ಅವರು ಕಳೆದ ವರ್ಷ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದರು. ಮೂವರು ನಿರ್ಮಾಪಕರು ಸೇರಿ ನಿರ್ಮಿಸಬೇಕಿದ್ದ ಆ ಸಿನಿಮಾದ ಮುಹೂರ್ತ ಕೂಡ ನೆರವೇರಿಸಲಾಗಿತ್ತು.
ಇದೇ ವೇಳೆ ಪಾಲುದಾರರು ಸಂಭಾವನೆ ಬದಲು ನಿವೇಶನ ಖರೀದಿಸುವಂತೆ ಎಸ್.ನಾರಾಯಣ್ ಅವರಿಗೆ ಸೂಚಿಸಿದ್ದರು. ಅಂತೆಯೇ ಬೆಂಗಳೂರಿನ ಹೆಚ್ಬಿ.ಆರ್ ಬಡಾವಣೆಯಲ್ಲಿ 1.60 ಕೋಟಿ ಮೌಲ್ಯದ ನಿವೇಶನ ಖರೀದಿಸಿದ್ದರು.
ಆದರೆ ಆ ಬಳಿಕ ನಿವೇಶನದ ದಾಖಲೆಗಳು ನಕಲಿ ಎಂಬುದು ಗೊತ್ತಾಗಿದೆ. ನಕಲಿ ದಾಖಲೆಗಳನ್ನು ನೀಡಿ ನನ್ನಿಂದ ವಂಚಕರು ಹಣ ಪಡೆದುಕೊಂಡಿದ್ದಾರೆ ಎಂದು ಎಸ್.ನಾರಾಯಣ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಒಂದೆಡೆ ಸಾಲದ ಸುಳಿಯಲ್ಲಿ ಸಿಲುಕಿರುವ ನಾರಾಯಣ್ ಅವರು ಸಾಲವನ್ನು ಹಿಂತಿರುಗಿಸಲು ಪರದಾಡುತ್ತಿದ್ದಾರೆ. ಈಗಾಗಲೇ 2 ಕೋಟಿಗೂ ಅಧಿಕ ಸಾಲ ಹೊಂದಿದ್ದು, ನಕಲಿ ದಾಖಲೆ ಮೂಲಕ ವಂಚಿಸಿದ ವಂಚಕರಿಂದ ನ್ಯಾಯ ಒದಗಿಸಿ ಕೊಡಿ ಎಂದು ಡಿಸಿಪಿ ಅವರ ಹತ್ತಿರ ಎಸ್.ನಾರಾಯಣ್ ಅವರು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಠಕ್ಕೆ ಪೂರೈಕೆ ಆಗುತ್ತಿದ್ದ ಅಕ್ಕಿ ಹಾಗೂ ಗೋಧಿ ಎರಡು ತಿಂಗಳಿಂದ ಬಂದಿಲ್ಲ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ತಿಳಿಸಿದ್ದಾರೆ. ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಸ್ವಾಮೀಜಿಗಳು, ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಕೇಳಿತ್ತು. ಅದರಂತೆ ನಾವು ಸೂಕ್ತ ದಾಖಲೆ, ಮಾಹಿತಿ ಸಲ್ಲಿಸಿದ್ದೇವೆ. ಆದರೆ ಕೆಲ ಸಂಸ್ಥೆಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಅಕ್ಕಿ ಹಾಗೂ ಗೋಧಿ ವಿತರಣೆಯನ್ನು ನಿಲ್ಲಿಸಿರಬಹುದು. ಮುಂದಿನ ದಿನಗಳಲ್ಲಿ ಆಹಾರ ಮತ್ತು…
ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆದೇಶ ಹೊರಡಿಸಿದೆ. ಆದರೂ ಬೆಂಗಳೂರಿನ ವಿವಿಧೆಡೆ ಅನೇಕರು ಮಾಸ್ಕ್ ಧರಿಸದೇ ರಸ್ತೆಯಲ್ಲಿ ಹೊಡಾಡುತಿದ್ದರೆ ಇದನ್ನು ಕಂಡು ದಂಡವನ್ನು ವಿಧಿಸಿದ್ದಾರೆ. ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ವಲಯಗಳಲ್ಲಿ ಆರ್.ಆರ್ ನಗರ, ದಾಸರಹಳ್ಳಿ, ಯಲಹಂಕ, ಬೊಮ್ಮನಹಳ್ಳಿ ಸೇರಿದಂತೆ ಹಲವು ಕಡೆ ಒಂದೇ ದಿನದಲ್ಲಿ 69,400 ರೂ ದಂಡ ವಸೂಲಿ ಮಾಡಲಾಗಿದೆ. ಈ ರೀತಿ ಮಾಸ್ಕ್ ಧರಿಸದೇ ರಸ್ತೆಯಲ್ಲಿ ಓಡಾಡುವವರಿಗೆ ಬಿಸಿ…
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್-7ರಲ್ಲಿ ಶೈನ್ ಶೆಟ್ಟಿ ಅವರು ಸ್ಪರ್ಧಿ ಚಂದನಾ ಅವರ ಜೊತೆ ಜಗಳವಾಡಿ ಅವಾಜ್ ಹಾಕಿದ್ದಾರೆ. ಶೈನ್ ವರ್ತನೆ ನೋಡಿ ಚಂದನಾ ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಚಂದನಾ ಮತ್ತು ಶೈನ್ ಶೆಟ್ಟಿ, ವಾಸುಕಿ ವೈಭವ್ ಮೂವರು ಗೆಳೆಯರು. ಚಂದನಾ ವಿರುದ್ಧವಾಗಿ ಶೈನ್ ಶೆಟ್ಟಿ ಮತ್ತು ವಾಸುಕಿ ಇಲ್ಲಿಯವರೆಗೂ ಮಾತನಾಡಿಲ್ಲ. ಆದರೆ ಈಗ ಶೈನ್ ಶೆಟ್ಟಿ ಮಾತನಾಡಿದ ಬಗೆ ನೋಡಿ ಚಂದನಾ ಕಣ್ಣೀರು ಹಾಕಿದ್ದಾರೆ. ಚಂದನಾ ಅವರು ಟಾಸ್ಕ್ ಮಾಡಿ ಮೈ…
ಎಲ್ಲರಿಗೂ ರಕ್ಷಣೆಯೊದಗಿಸುವುದು ಪೊಲೀಸರ ಕರ್ತವ್ಯ… ಅದನ್ನು ನಮ್ಮ ಪೊಲೀಸರು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ… ತಾವು ಕಷ್ಟ ಅನುಭವಿಸಿದರೂ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಪೊಲೀಸರು… ಇಲ್ಲಿ ಎಂದಲ್ಲ ವಿಶ್ವದ ಯಾವ ಮೂಲೆಗೆ ಹೋದರೂ ಪೊಲೀಸರ ಕರ್ತವ್ಯ ನಿರ್ವಹಣೆ, ದ್ಯೇಯ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಆದರೆ, ಕೆಲವೊಮ್ಮೆ ಈ ಕರ್ತವ್ಯ ನಿರ್ವಹಣೆಯ ನಡುವೆ ಸಂಭವಿಸುವ ವಿದ್ಯಮಾನಗಳು ವಿಚಿತ್ರ ಮತ್ತು ವಿಶಿಷ್ಟವೆನಿಸುತ್ತವೆ. ಅಂತಹ ವಿಶಿಷ್ಟ ವಿದ್ಯಮಾನದಲ್ಲಿ ಇದೂ ಒಂದು. ಏವನ್ ಮತ್ತು ಸೋಮರ್‌ಸೆಟ್ ಕಾನ್‌ಸ್ಟಾಬ್ಯುಲರಿಯ ಅಧಿಕಾರಿಯೊಬ್ಬರು ಕೆಲಸ ನಿರ್ವಹಿಸಿ ಮನೆಗೆ ಹೋಗುವ…
ಸಾಮಾಜಿಕ ಜಾಲತಾಣಗಳಲ್ಲಿ ಹೊಸತೊಂದು ಚಾಲೆಂಜ್ ಬಂದಿದೆ; ಅದೇ ಬಾಟಲ್ ಕ್ಯಾಪ್ ಚ್ಯಾಲೆಂಜ್. ಇದರಲ್ಲಿ ಚಾಲೆಂಜ್ ತಗೊಂಡವರು ರೌಂಡ್ ಹೌಸ್ ಕಿಕ್ ಹೊಡೆದು ಬಾಟಲ್‌ಗೆ ಹಾಕಿದ ಮುಚ್ಚಳವನ್ನು ತೆಗೆಯಬೇಕು. ಜೇಸನ್ ಸ್ಟ್ಯಾಥಮ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್‌ರಂತಹ ನಟರು ಹಾಗೂ ಹಲವು ಫೈಟರ್‌ಗಳು ಇದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಲ್ಲೊಬ್ಬ ಗಾಯಕಿ ಕೇವಲ ತನ್ನ ಧ್ವನಿಯಿಂದಲೇ ಬಾಟಲ್ ಕ್ಯಾಪ್ ಎಗರಿಸಿರುವಂತೆ ಕಾಣುತ್ತದೆ. ಮರಿಯಾ ಕ್ಯಾರಿ ಎನ್ನುವ ಅಮೆರಿಕಾದ ಗಾಯಕಿ ಟ್ವೀಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅವರು ಹೈ ಪಿಚ್‌ನಲ್ಲಿ ರಾಗ ಎಳೆಯುತ್ತಿದ್ದಂತೆ…
ಇದೇ ತಿಂಗಳ ಇಪ್ಪತ್ತೊಂಬತ್ತನೇ ತಾರೀಕು ವೈಕುಂಠ ಏಕಾದಶಿ ಹಾಗೂ ಮೂವತ್ತರಂದು ಮುಕ್ಕೋಟಿ ದ್ವಾದಶಿ ಇದೆ. ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ. ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.