ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಲ್ಲರಿಗೂ ರಕ್ಷಣೆಯೊದಗಿಸುವುದು ಪೊಲೀಸರ ಕರ್ತವ್ಯ… ಅದನ್ನು ನಮ್ಮ ಪೊಲೀಸರು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ… ತಾವು ಕಷ್ಟ ಅನುಭವಿಸಿದರೂ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಪೊಲೀಸರು… ಇಲ್ಲಿ ಎಂದಲ್ಲ ವಿಶ್ವದ ಯಾವ ಮೂಲೆಗೆ ಹೋದರೂ ಪೊಲೀಸರ ಕರ್ತವ್ಯ ನಿರ್ವಹಣೆ, ದ್ಯೇಯ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಆದರೆ, ಕೆಲವೊಮ್ಮೆ ಈ ಕರ್ತವ್ಯ ನಿರ್ವಹಣೆಯ ನಡುವೆ ಸಂಭವಿಸುವ ವಿದ್ಯಮಾನಗಳು ವಿಚಿತ್ರ ಮತ್ತು ವಿಶಿಷ್ಟವೆನಿಸುತ್ತವೆ. ಅಂತಹ ವಿಶಿಷ್ಟ ವಿದ್ಯಮಾನದಲ್ಲಿ ಇದೂ ಒಂದು.
ಏವನ್ ಮತ್ತು ಸೋಮರ್‌ಸೆಟ್ ಕಾನ್‌ಸ್ಟಾಬ್ಯುಲರಿಯ ಅಧಿಕಾರಿಯೊಬ್ಬರು ಕೆಲಸ ನಿರ್ವಹಿಸಿ ಮನೆಗೆ ಹೋಗುವ ಸಂದರ್ಭದಲ್ಲಿ ಕೋಳಿಯೊಂದನ್ನು ಕಂಡಿದ್ದರು. ಈ ಕೋಳಿ ರಸ್ತೆಯ ಬದಿಯಲ್ಲಿ ನಿಂತು ದಾಟಲು ಯತ್ನಿಸುತ್ತಿತ್ತು. ಇದನ್ನು ಕಂಡು ಬಹುಶಃ ಈ ಪೊಲೀಸ್ ಅಧಿಕಾರಿಗೆ ಮರುಕ ಉಂಟಾಗಿರಬೇಕು. ಹೀಗಾಗಿ, ಜನವಸತಿ ಪ್ರದೇಶದ ಮಾರ್ಗ ಮಧ್ಯದಲ್ಲೇ ನಿಂತು ಅವರು ಬರುತ್ತಿದ್ದ ಎಲ್ಲಾ ವಾಹನಗಳನ್ನು ಒಮ್ಮೆ ನಿಲ್ಲಿಸಿದ್ದರು.
ಇತ್ತ, ವಾಹನ ಸಂಚಾರ ನಿಲ್ಲುತ್ತಿದ್ದಂತೆಯೇ ಕೋಳಿ ನಿಶ್ಚಿಂತೆಯಿಂದ ರಸ್ತೆಯನ್ನು ದಾಟಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಏವನ್ ಮತ್ತು ಸೋಮರ್‌ಸೆಟ್ ಪೊಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. `ನಮ್ಮ ಅಧಿಕಾರಿ ಗರಿಗಳ ನಾಗರಿಕನನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದ್ದಾರೆ’ ಎಂದೂ ಪೊಲೀಸರು ಬರೆದುಕೊಂಡಿದ್ದಾರೆ. ಈ ಫೋಟೋ ಕಂಡು ನೆಟ್ಟಿಗರು ಪೊಲೀಸ್ ಅಧಿಕಾರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಒಂದಷ್ಟು ಜನ ಹಾಸ್ಯದ ದಾಟಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಿದ್ಯಾರ್ಥಿನಿಯೊಬ್ಬಳು ಯುವಕನೊಬ್ಬನನ್ನು ತಬ್ಬಿಕೊಂಡ ಕಾರಣ ಯೂನಿವರ್ಸಿಟಿ, ಅವಳನ್ನು ಕಾಲೇಜಿನಿಂದ ಉಚ್ಚಾಟಿಸಿದ್ದು, ಇದೀಗ ಅಪ್ಪುಗೆಯೇ ಆಕೆಯ ವಿದ್ಯಾರ್ಥಿ ಜೀವನಕ್ಕೆ ಸಂಚಕಾರ ತಂದಿದೆ. ಈಜಿಪ್ಟ್ ನ ಅಲ್-ಅಝರ್ ಯೂನಿವರ್ಸಿಟಿ, ವಿದ್ಯಾರ್ಥಿನಿಯ ಈ ವರ್ತನೆಯಿಂದ ಸಂಸ್ಥೆಯ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಹೇಳಿ ಈ ಕ್ರಮಕೈಗೊಂಡಿದೆ. ಅಲ್-ಅಝರ್ ಯೂನಿವರ್ಸಿಟಿಯ ಮನ್ಸೌರಾದಲ್ಲಿರುವ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೊಬ್ಬ ಮಂಡಿಯೂರಿ ಹೂವಿನ ಬೊಕ್ಕೆ ಕೊಟ್ಟಿದ್ದು, ಬಳಿಕ ಇಬ್ಬರೂ ಪರಸ್ಪರ ಅಪ್ಪಿಕೊಂಡಿದ್ದರು. ಇದರ ವಿಡಿಯೊ ಎಲ್ಲ ಕಡೆ ಹರಿದಾಡಿದ್ದು, ಯೂನಿವರ್ಸಿಟಿಯ ಆಡಳಿತ ಮಂಡಳಿಯವರೆಗೂ ತಲುಪಿತ್ತು. ಅವಿವಾಹಿತ ಮಹಿಳೆ-ಪುರುಷ…
ಬಿಸಿಲು,ಬಿಸಿಲು, ಎಲ್ಲಿ ನೋಡಿದರೂ ಬಿಸಿಲ ಬೇಗೆ, ಧಗೆ. ಇಷ್ಟು ದಿನ ಕಣ್ಣಿಗೆ, ಮನಸಿಗೆ ತಂಪಾಗಿದ್ದ ಬೆಂಗಳೂರು, ಈಗ ಬಿರು ಬಸಿಲಿನ ನಾಡಾಗಿದೆ. ಜನರಿಗೆ ಕುಳಿತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದ ಹಾಗೆ ಮಾಡಿದೆ ಈ ಬಿಸಿಲು. ಬೇಸಿಗೆಯು ಶುಭಾರಂಭವಾಗಿ 4 ದಿನ ಆಗಿಲ್ಲ ಆಗಲೇ ಜನರ ಮೈನೀರಿಳಿಸುತ್ತಿದೆ ಈ ಬೇಸಿಗೆ. ತಂಪು ತಂಪಾದ ತಂಪು ಪಾನೀಯಗಳ ಬಳಕೆ ಹೆಚ್ಚಾಗಿದೆ. ಹಾಗೆ ಕಲ್ಲಂಗಡಿ, ಕಿತ್ತಳೆ ಮತ್ತು ಎಳೆನೀರಿನ ಉಪಯೋಗ ಆಗಲೇ ಶುರುವಾಗಿದೆ. ನೀರಿನ ಕಷ್ಟ ಎದುರಾಗಿದೆ. ಪ್ರಾಣಿಗಳು ಪಕ್ಷಿಗಳಿಗೂ ಈ…
ರಾಜಧಾನಿ ಬೆಂಗಳೂರು ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿದ್ದರೆ ಮತ್ತೊಂದೆಡೆ ಸ್ಮಾರ್ಟ್ ಖದೀಮರು ಹೆಚ್ಚಾಗಿದ್ದಾರೆ. ಕೋಟಿ ಕೋಟಿ ಲೂಟಿಯ ಐಎಂಎ ಪ್ರಕರಣ ಮಾಸುವ ಮುನ್ನವೇ ರಾಜಧಾನಿ ಬೆಚ್ಚಿಬೀಳುವಂತ ಘಟನೆ ಇದಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಐಸಿಐಸಿಐ ಬ್ಯಾಂಕಿಗೆ 1 ಕೋಟಿ 90 ಲಕ್ಷ ಹಣ ತುಂಬಲು ಬಂದಾಗ ಆರೋಪಿಗಳು ನೆಲಮಂಗಲ ಪೊಲೀಸರ ಅತಿಥಿಗಳಾಗಿದ್ದಾರೆ. ಆನ್ ಲೈನ್‌ನಲ್ಲಿ ಅಕೌಂಟ್‌ಗೆ ಸಂಬಂಧಪಟ್ಟ ಮೊಬೈಲ್ ನಂಬರ್ ಚೇಂಜ್ ಮಾಡಿ ಬರೋಬ್ಬರಿ 3ಕೋಟಿ ಹಣವನ್ನು ಡ್ರಾ ಮಾಡಿದ್ದ ಆರೋಪಿಗಳು, ಆ ಹಣವನ್ನು ಬ್ಯಾಂಕ್‌ನಲ್ಲಿ ಜಮೆ…
ಇತ್ತೀಚಿನ ಜೀವನ ಶೈಲಿಯಲ್ಲಿ ಎಲ್ಲವು ಕಷ್ಟವಾಗುತ್ತಿವೆ. ಕೀಲು ನೋವು, ಮೂಳೆ ಸವೆತ ಮಂಡಿ ನೋವು ಇತ್ತೀಚೆಗೆ 30, 40 ವರ್ಷದವರಿಗೆ ದೊಡ್ಡವರಿಗೆ ಮಾತ್ರ ಮಂಡಿ ನೋವು ಅಥವಾ ಕೀಲುಗಳ ನೋವು ಕಾಣಿಸುಕೊಳ್ಳುತಿತ್ತು, ಆದರೆ ಈಗ ಎಲ್ಲಾ ಬದಲಾಗಿದೆ.
ಹುರುಳಿ ಟೀ ಮಾಡುವ ವಿಧಾನ! ಸಾಮಾನ್ಯವಾಗಿ ಹುರುಳಿ ಕಾಳಿನ ಸಾರು, ಪಲ್ಯಾ, ಚಟ್ನಿ ರುಚಿ ಹೇಗಿರುತ್ತೆ ಅಂತ ಸವಿದು ತಿಳಿದಿರುತ್ತೀರಾ. ಆದರೆ ಹುರುಳಿ ಕಾಳಿನಿಂದ ಟೀ ಕೂಡ ಮಾಡುವ ವಿಚಾರ ಕೆಲವರಿಗೆ ಗೊತ್ತಿರಲ್ಲ. ಅಷ್ಟೇ ಅಲ್ಲದೆ ಈ ವಿಶೇಷ ಹುರುಳಿ ಟೀ ಹರ್ಬಲ್ ಟೀ ರೀತಿಯೇ ಆರೋಗ್ಯಕರವಾಗಿದ್ದು, ಹುರುಳಿ ಕಾಳು ಅಥವಾ ಹುರುಳಿ ಎಲೆಯಿಂದಲೂ ಟೀ ತಯಾರಿಸಿ ಸವಿಯಬಹುದಾಗಿದೆ. ಹುರುಳಿ ಟೀ ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಲಾಭವಿದೆ. ಇದು ಮದುಮೇಹ ನಿಯಂತ್ರಿಸುತ್ತದೆ, ತೂಕ ಇಳಿಸುತ್ತದೆ, ಕಿಡ್ನಿ…
ಸಾಮಾನ್ಯವಾಗಿ ನೀವು ಯಾವುದೇ ದೇಶದಲ್ಲಿ ಗಣ್ಯ ವ್ಯಕ್ತಿಗಳಿಗೆ, ಹಾಗು ಐತಿಹಾಸಿಕ ಸ್ಥಳಗಳಿಗೆ ಭದ್ರತೆ ಹಾಗು ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಿರುವುದನ್ನು ನೀವು ನೋಡಿರುತ್ತೀರಿ, ಆದರೆ ಭಾರತದಲ್ಲಿ ಇರುವ ಈ ಒಂದು ಮರಕ್ಕೆ ದಿನದ 24 ಗಂಟೆ ಮತ್ತು ವಾರದಲೂ ದಿನವೂ ಕೂಡ ವಿಶೇಷ ಭದ್ರತೆ ಒದಗಿಸಲಾಗುತ್ತದೆ ಎಂದರೆ ನೀವು ನಂಬುತ್ತೀರಾ, ನಿಜಕ್ಕೂ ಇದು ಸತ್ಯ. ಹೌದು ಭಾರತದ ಈ ಮರಕ್ಕೆ ವಿಶೇಷ ಕಾಳಜಿ ನೀಡಿ ಏಕೆ ರಕ್ಷಣೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ ಈ ವಿಶೇಷ ವರದಿ ನೋಡಲೇಬೇಕು….