ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹುರುಳಿ ಟೀ ಮಾಡುವ ವಿಧಾನ!
ಸಾಮಾನ್ಯವಾಗಿ ಹುರುಳಿ ಕಾಳಿನ ಸಾರು, ಪಲ್ಯಾ, ಚಟ್ನಿ ರುಚಿ ಹೇಗಿರುತ್ತೆ ಅಂತ ಸವಿದು ತಿಳಿದಿರುತ್ತೀರಾ. ಆದರೆ ಹುರುಳಿ ಕಾಳಿನಿಂದ ಟೀ ಕೂಡ ಮಾಡುವ ವಿಚಾರ ಕೆಲವರಿಗೆ ಗೊತ್ತಿರಲ್ಲ. ಅಷ್ಟೇ ಅಲ್ಲದೆ ಈ ವಿಶೇಷ ಹುರುಳಿ ಟೀ ಹರ್ಬಲ್ ಟೀ ರೀತಿಯೇ ಆರೋಗ್ಯಕರವಾಗಿದ್ದು, ಹುರುಳಿ ಕಾಳು ಅಥವಾ ಹುರುಳಿ ಎಲೆಯಿಂದಲೂ ಟೀ ತಯಾರಿಸಿ ಸವಿಯಬಹುದಾಗಿದೆ.
ಹುರುಳಿ ಟೀ ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಲಾಭವಿದೆ. ಇದು ಮದುಮೇಹ ನಿಯಂತ್ರಿಸುತ್ತದೆ, ತೂಕ ಇಳಿಸುತ್ತದೆ, ಕಿಡ್ನಿ ಸಮಸ್ಯೆ ನಿವಾರಿಸಲು ಮದ್ದಾಗಿ ಕೆಲಸ ಮಾಡುತ್ತದೆ, ಹೃದಯದ ಆರೋಗ್ಯ, ಜೀರ್ಣ ಶಕ್ತಿ ವೃದ್ಧಿಸುತ್ತದೆ. ಇದರಲ್ಲಿರುವ ಫ್ಲೇವೋನಾಯ್ಡ್ ಅಂಶ ಆರೋಗಕ್ಕೆ ತುಂಬಾ ಒಳ್ಳೆಯದಾಗಿದೆ.
ಹುರುಳಿ ಟೀ ಮಾಡಲು ಬೇಕಾದ ಸಾಮಾಗ್ರಿ:
ನೀರು- 3 ಕಪ್ಹು, ರುಳಿ ಕಾಳು- 2 ಚಮಚ, ಜೇನು ತುಪ್ಪ- 1 ಚಮಚ
ಮಾಡುವ ವಿಧಾನ:
ಮೊದಲು ಸ್ಟವ್ ಹಚ್ಚಿ ಒಂದು ತವಾದಲ್ಲಿ ಹುರುಳಿ ಕಾಳುಗಳನ್ನು ಹುರಿದುಕೊಂಡು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ. ಬಳಿಕ ಚಹಾ ತಯಾರಿಸಲು ಪಾತ್ರೆಯಲ್ಲಿ ನೀರು ಕುದಿಯಲು ಇಡಿ.
ಬಳಿಕ ಕುದಿಯುತ್ತಿರುವ ನೀರಿಗೆ ಹುರಿಡದಿಟ್ಟುಕೊಂಡ ಹುರುಳಿ ಕಾಳನ್ನು ಹಾಕಿ 1ರಿಂದ 3 ನಿಮಿಷ ಕುದಿಯಲು ಬಿಡಿ. ಬೇಕಾದರೆ ಹುರಿದ ಹುರುಳಿ ಕಾಳನ್ನು ಪುಡಿ ಮಾಡಿ ಕೂಡ ಚಹಾ ತಯಾರಿಸಬಹುದು. ಅಷ್ಟೇ ಅಲ್ಲದೆ ಹುರುಳಿ ಎಲೆಗಳನ್ನು ಒಣಗಿಸಿ, ಪುಡಿ ಮಾಡಿ ಅದನ್ನು ಕೂಡ ಚಹಾ ಮಾಡಲು ಬಳಸಬಹುದು.
ಬಳಿಕ ಹುರುಳಿ ಕಾಳಿನ ಅಂಶ ನೀರಿನಲ್ಲಿ ಬೆರೆತ ಬಳಿಕ ಸ್ಟವನ್ನು ಆಫ್ ಮಾಡಿ. ಲೋಟದಲ್ಲಿ ಚಹಾ ಸೋಸಿ ಕುಡಿಯಿರಿ. ಈ ಚಹಾವನ್ನು ಹಾಗೆ ಕುಡಿಯಬಹುದು, ಇಲ್ಲವಾದರೇ ಇದಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ ಸೇವಿಸಬಹುದು.
ಆರೋಗ್ಯಕರ ಲಾಭವೇನು?
1. ಕಿಡ್ನಿ ಸಮಸ್ಯೆಗೆ ಮದ್ದು
ಹುರುಳಿ ಕಾಳಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಹಾಗೂ ರುಟಿನ್ ಅಂಶ ಕಿಡ್ನಿ ಸಮಸ್ಯೆಗೆ ರಾಮಬಾಣ. ಪ್ರತಿನಿತ್ಯ ಹುರುಳಿ ಟೀ ಸೇವನೆ ಮಾಡಿದರೆ ಕಿಡ್ನಿ ಸಮಸ್ಯೆ ನಿಧಾನವಾಗಿ ಗುಣವಾಗುತ್ತದೆ.
2. ಮಧುಮೇಹ ನಿಯಂತ್ರಣಕ್ಕೆ ಸಹಕಾರಿ:
ಮಧುಮೇಹಿಗಳು ಹುರುಳಿ ಟೀ ಕುಡಿದರೆ ಅವರ ದೇಹದಲ್ಲಿ ಸಕ್ಕರೆಯಂಶವನ್ನು ಅದು ನಿಯಂತ್ರಿಸುತ್ತದೆ. ಈ ಟೀ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಕಾಪಾಡಿ, ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಯುತ್ತದೆ.
3. ಹೃದಯದ ಆರೋಗ್ಯಕ್ಕೆ ಉತ್ತಮ:
ಹುರುಳಿ ಟೀ ಪ್ರತಿದಿನ ಕುಡಿಯುವುದರಿಂದ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ಇದರಲ್ಲಿ ಫ್ಲೇವೋನಾಯ್ಡ್ ಅಂಶವಿರುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು ಇದು ತಡೆಗಟ್ಟುತ್ತದೆ. ಪಾಶ್ರ್ವವಾಯು, ಹೃದಯಾಘಾತ ಆಗದಂತೆ ನೋಡಿಕೊಳ್ಳುತ್ತದೆ.
4. ಜೀರ್ಣಕ್ರಿಯೆಗೆ ಒಳ್ಳೆದು:
ಹುರುಳಿ ಕಾಳಿನಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುವಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಬರುವುದಿಲ್ಲ. ಆಗಾಗ ಹೊಟ್ಟೆ ಉಬ್ಬುವ ಸಮಸ್ಯೆ ಇರುವವರು ಹುರುಳಿ ಟೀ ಸೇವಿಸಿದರೆ ಒಳ್ಳೆದು.
5. ತೂಕ ಇಳಿಸುತ್ತದೆ:
ಹುರುಳಿಕಾಳು ತೂಕ ಇಳಿಕೆಯಲ್ಲಿ ಉತ್ತಮ ಕಾರ್ಯ ನಿರ್ವಸುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಅಧಿಕ ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ಮೆಟಬಾಲಿಸಂ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ನೀರಿನ ಅಂಶ ಹೆಚ್ಚಿಸಿ ಬೇಡದ ಪೌಂಡ್ಸ್ ಗಳನ್ನು ನಾಶ ಮಾಡುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ.
6. ಕ್ಯಾನ್ಸರ್ ತಡೆಗಟ್ಟುತ್ತದೆ:
ಹುರುಳಿ ಕಾಳಿನಲ್ಲಿರುವ ರುಟಿನ್ ಅಂಶ ಇರುತ್ತದೆ. ಈ ರುಟಿನ್ ಅಂಶ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಫ್ಲೇವೋನಾಯ್ಡ್ ಅಂಶವಿರುವ ಆಹಾರ ಸೇವಿಸುವುದರಿಂದ ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಕಿಡ್ನಿ, ಗರ್ಭಕೋಶದ ಕ್ಯಾನ್ಸರ್ ಮುಂತಾದ ಕಾಯಿಲೆಗಳು ಬರುವುದಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(21 ನವೆಂಬರ್, 2018) ಕೌಟುಂಬಿಕ ಒತ್ತಡ ನಿಮ್ಮ ಗಮನ ಬೇರೆಡೆಗೆಸೆಳೆಯದಿರಲಿ. ಕೆಟ್ಟ ಸಮಯಗಳು ನಮಗೆ ಇನ್ನೂ ಹೆಚ್ಚನ್ನು ನೀಡುತ್ತವೆ. ಸ್ವಾನುಕಂಪದಲ್ಲಿ ಸಮಯ ವ್ಯರ್ಥ…
2018ರ ಮೊದಲ ದಿನದ ಪ್ರಕಾರ ವಿಶ್ವದಲ್ಲಿ 3,86,000 ಲಕ್ಷ ಶಿಶುಗಳ ಜನನವಾಗಿದೆ. ಆದ್ರೆ ಇದರಲ್ಲಿ ಭಾರತದ ಪಾಲು 69,070. ಈ ಮೂಲಕ ಈ ವರ್ಷದ ಮೊದಲ ದಿನ ಹೆಚ್ಚು ಮಕ್ಕಳು ಜನಿಸಿದ ದೇಶದ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ ಲಭಿಸಿದೆ.
ಕೆಮಿಕಲ್ ಗೋಡಾನ್ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಪಶ್ಚಿಮ ಬಂಗಾಳದ ಹೌರಾ ಬ್ರಿಡ್ಜ್ನಲ್ಲಿ ನಡೆದಿದೆ. ಇಂದು ನಸುಕಿನ ಜಾವ 2 ಗಂಟೆಗೆ ಗೋಡಾನ್ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವಿಷಯ ತಿಳಿದು 20 ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯನ್ನು ನಂದಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಜಗನ್ನಾಥ್ ಘಾಟ್ನಲ್ಲಿ ಗೋಡಾನ್ ಇದ್ದು, ಇಂದು ಬೆಳಗ್ಗೆ ಬೆಂಕಿ ಹೊತ್ತಿಗೊಂಡಿದೆ. ಈಗ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಸಚಿವ…
ಹಿಂದೂ, ಮುಸ್ಲಿಂ ಎಂಬ ಭೇದವಿಲ್ಲದೆ ಅಯೋಧ್ಯೆಯಲ್ಲಿ ಶ್ರೀರಾಮನನ್ನು ಆರಾಧಿಸಲಾಗುತ್ತಿದೆ. ಇದಕ್ಕೆ ಅಯೋಧ್ಯೆಯ ಮುಸ್ಲಿಂ ಕುಟುಂಬವೊಂದು ಸಾಕ್ಷಿಯಾಗಿದೆ. ತಮ್ಮ ಮಗ, ಮಗಳ ಮದುವೆ ಆಮಂತ್ರಣ ಪ್ರತಿಕೆಯಲ್ಲಿ ರಾಮನ ಭಂಟ ಹನುಮನ ಚಿತ್ರವನ್ನು ಮುದ್ರಿಸಿ ಕುಟುಂಬ ಭಕ್ತಿ ಮೆರೆದಿದೆ. ಹೌದು. ಉತ್ತರ ಪ್ರದೇಶ ಚಾರೇರ ಗ್ರಾಮದ ಮುಸ್ಲಿಂ ಕುಟುಂಬ ಶ್ರೀರಾಮನ ಬಂಟ ಹನುಮನ ಚಿತ್ರವುಳ್ಳ ಕ್ಯಾಲೆಂಡರ್ ಒಂದನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದೆ. ಅಷ್ಟೇ ಅಲ್ಲದೆ ಈ ಪತ್ರಿಕೆಯಲ್ಲಿ ಬ್ರಹ್ಮ, ವಿಷ್ಣು, ಶಿವ ಹಾಗೂ ನಾರದರ ಚಿತ್ರವನ್ನೂ ಕೂಡ ಕುಟುಂಬ…
ದೇವಸ್ಥಾನದ ಮುಂದೆ ಭಿಕ್ಷಾಟನೆ ನಡೆಸುತ್ತಿರುವ ಓರ್ವ ಮಹಿಳೆ ದೇವಸ್ಥಾನದ ನವೀಕರಣಕ್ಕಾಗಿ ಎರಡು ಲಕ್ಷ ರೂ. ದೇಣಿಗೆ ನೀಡಿ ನಿಬ್ಬೆರಗಾಗುವಂತೆ ಮಾಡಿದ್ದಾಳೆ. ಮೈಸೂರು ಅರಮನೆಯ
ಮುಂಭಾಗದಲ್ಲಿರುವ ಪ್ರಸಿದ್ದ ಪ್ರಸನ್ನ ಅಂಜನೇಯ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಿರುವ ಎಂ.ವಿ.ಸೀತಾ, ದೇವಸ್ಥಾನದ ನವೀಕರಣಕ್ಕೆ ದೇಣಿಗೆ ನೀಡಿದ ಮಹಾನ್ ಭಕ್ತೆ.
ಸಮಾಜ ಅಂದಮೇಲೆ ಅವರಲ್ಲಿ ಜನರ ನಡುವೆ ಎಂಥ ಸಂಬಂಧ ಇರಬೇಕು, ಎಂತೆಂಥ ನೀತಿಗಳಿರಬೇಕು ಅನ್ನೋ ವಿಷಯದ ಬಗ್ಗೆ ಎಲ್ಲಾ ಅವರು ತುಂಬಾ ಬರೆದಿಟ್ಟು ಹೋಗಿದ್ದಾರೆ.