ಸುದ್ದಿ

ಎರಡು ತಿಂಗಳಿಂದ ರೇಷನ್ ಬಂದಿಲ್ಲ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಸ್ಪಷ್ಟನೆ.

86

ಮಠಕ್ಕೆ ಪೂರೈಕೆ ಆಗುತ್ತಿದ್ದ ಅಕ್ಕಿ ಹಾಗೂ ಗೋಧಿ ಎರಡು ತಿಂಗಳಿಂದ ಬಂದಿಲ್ಲ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಸ್ವಾಮೀಜಿಗಳು, ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಕೇಳಿತ್ತು. ಅದರಂತೆ ನಾವು ಸೂಕ್ತ ದಾಖಲೆ, ಮಾಹಿತಿ ಸಲ್ಲಿಸಿದ್ದೇವೆ. ಆದರೆ ಕೆಲ ಸಂಸ್ಥೆಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಅಕ್ಕಿ ಹಾಗೂ ಗೋಧಿ ವಿತರಣೆಯನ್ನು ನಿಲ್ಲಿಸಿರಬಹುದು. ಮುಂದಿನ ದಿನಗಳಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ರೇಷನ್ ಪೂರೈಕೆ ಮಾಡುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದರು.

ಖಾದರ್ ಆರೋಪ ಏನು?:
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಮಾಜಿ ಸಚಿವ ಯು.ಟಿ.ಖಾದರ್ ಅವರು, ಸಿದ್ದಗಂಗಾ ಮಠದ ಒಟ್ಟು 7,359 ವಿದ್ಯಾರ್ಥಿಗಳಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ 73,590 ಕೆಜಿ ಅಕ್ಕಿ ಹಾಗೂ 36,795 ಕೆಜಿ ಗೋಧಿ ವಿತರಣೆ ಮಾಡುತ್ತಿತ್ತು. ದಾಸೋಹ ಯೋಜನೆ ಅಡಿ ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಗೂ ಅಕ್ಕಿ, ಗೋಧಿ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರವು ಕಳೆದ ಮೂರು ತಿಂಗಳಿಂದ ಮಠಕ್ಕೆ ನೀಡುತ್ತಿದ್ದ ಅಕ್ಕಿಯನ್ನು ತಡೆ ಹಿಡಿದಿದೆ ಎಂದು ಆರೋಪಿಸಿದ್ದರು. ಜೊತೆಗೆ ಪ್ರಮುಖ ದಾಖಲೆ ಬಿಡುಗಡೆ ಮಾಡಿದ್ದರು.

ತುಮಕೂರು ಸಿದ್ದಗಂಗಾ ಮಠದಲ್ಲಿ ಸಾಕಷ್ಟು ಜನರು ವಸತಿ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಾಗಿ ಅಂತಹ ಶಿಕ್ಷಣ ಸಂಸ್ಥೆಗಳಿಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಿವಿಧ ಸಂಘಗಳ ಸಹಭಾಗಿತ್ವದಲ್ಲಿ ಅಕ್ಕಿ, ಗೋಧಿ ವಿತರಿಸುತ್ತಿತ್ತು. ಇದರಿಂದ ಸಂಸ್ಥೆಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಏಕಾಏಕಿ ಸಿದ್ದಗಂಗಾ ಮಠ ಹಾಗೂ ವಿವಿಧ ಸಂಸ್ಥೆಗಳಿಗೆ ವಿತರಿಸುತ್ತಿದ್ದ ಅಕ್ಕಿ ಹಾಗೂ ಗೋಧಿಯನ್ನು ನಿಲ್ಲಿಸಿದೆ ಎಂದು ದೂರಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ, ಹಣ

    ನೀವು ದುಡ್ಡು ಉಳಿಸಬೇಕು, ಅಂದ್ರೆ ಮಾತ್ರ ಓದಿ..ಶೇರ್ ಮಾಡಿ..

    ಏನ್ಮಾಡಿದರು ಖರ್ಚು ಕಡಿಮೆ ಆಗ್ತಿಲ್ಲ !ನಮ್ಮನ ಬಡವರು ಅಂತ ನಾವೇ ಕರೆದುಕೊಳ್ಳೋ ಸ್ಥಿತಿ ಬಂದ್ಬಿಟ್ಟಿದೆ. ಇದಕ್ಕೆ ಸರಿಯಾದ ಪರಿಹಾರ ನಿಮ್ಮ ಹತ್ತಿರಾನೆ ಇದೆ. ಈ ಹಳ್ಳಿ ಹುಡುಗರು ಮಾಡುವ ಬುದ್ದಿವಂತಿಕೆ ಮಾಡಿ ಸಾಕು – ಏನದು ತಿಳಿಹಿರಿ.

  • ಸುದ್ದಿ

    ತೆಲಂಗಾಣದ ಶಾಲಾ ಹಾಸ್ಟೆಲ್ ಬೆಂಕಿಗೆ ಆಹುತಿ: ವಿದ್ಯಾರ್ಥಿಯ ದುರ್ಮರಣ……!

    ಶಾಲಾ ಹಾಸ್ಟೆಲ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪುಟ್ಟ ಮಕ್ಕಳಿರುವ ಶಾಲೆ, ಹಾಸ್ಟೆಲ್‌ಗಳಲ್ಲಿ ಎಷ್ಟು ಮುಂಜಾಗ್ರತೆ ವಹಿಸಿದರೂ ಸಾಲದು. ಹಾಗಿರುವಾಗ ಬೆಂಕಿ, ಶಿಥಿಲ ಕಟ್ಟಡಗಳ ಬಗ್ಗೆ ನಿಗಾ ಇಡಬೇಕಾಗಿರುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ. ಶಾಲಾ ಹಾಸ್ಟೆಲ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ 10 ವರ್ಷದ ವಿದ್ಯಾರ್ಥಿ ಬೆಂಕಿಯಲ್ಲೇ ಬೆಂದು ಮೃತಪಟ್ಟಿದ್ದಾನೆ. ತೆಲಂಗಾಣಾದ ಖಮ್ಮಮ್‌ನಲ್ಲಿ ಈ ಘಟನೆ ನಡೆದಿದೆ. ಬಾಲಕನಿಗೆ ಹಾಸ್ಟೆಲ್‌ನಿಂದ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ. ಅಷ್ಟೇ ಅಲ್ಲದೆ ಹಾಸ್ಟೆಲ್‌…

  • ರಾಜಕೀಯ

    ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಸಂಸದ ಹಾಗೂ ಶಾಸಕ!ಈ ಸುದ್ದಿ ನೋಡಿ

    ಇತ್ತೀಚಿನ ದಿನಗಳಲ್ಲಿ ರಾಜಕೀಯ ಎಂಬುದು ಎಷ್ಟರ ಮಟ್ಟಿಗೆ ಹಾಳೆದ್ದು ಹೋಗಿದೆ ಎಂದರೆ ಜನಪ್ರತಿನಿಧಿಗಳು ತಮ್ಮ ಘನತೆ ಗಾಂಭೀರ್ಯ , ಗೌರವ ಜವಾಬ್ದಾರಿಗಳನ್ನು ಮರೆತು ಸಾರ್ವಜನಿಕವಾಗಿ ಕೀಳು ವರ್ತನೆ ತೋರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕರ್ನಾಟಕದ ಕಾಂಗ್ರೆಸ್ ಶಾಸಕರು ಹೊಡೆದಾಡಿಕೊಂಡು ಸುದ್ದಿಯಾಗಿದ್ದರು. ಈಗ ಬಿಜೆಪಿಯಲ್ಲಿ ಅಂತಹದೇ ಘಟನೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿ ತಲೆ ತಗ್ಗಿಸುವಂತಹ ಕೆಲಸವನ್ನು ಬಿಜೆಪಿ ಸಂಸದ ಹಾಗೂ ಶಾಸಕ ಮಾಡಿದ್ದಾರೆ. ಇವರಿಬ್ಬರೂ ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡು ತಮ್ಮ ಮಾನವನ್ನು ಹರಾಜು ಹಾಕಿಕೊಳ್ಳುವ…

  • ಉಪಯುಕ್ತ ಮಾಹಿತಿ

    ನಿಮ್ಗೆ ಹಾಗೂ ನಿಮ್ಗೆ ಗೊತ್ತಿರುವವರಿಗೆ ಮಧುಮೇಹ ಹಾಗೂ ಮಂಡಿ ನೋವು ಸಮಸ್ಯೆ ಇದ್ರೆ 4 ತಲೆಮಾರಿನ ರಾಮಭಾಣದಂತಹ ಔಷಧಿಗಾಗಿ ಈ ಪುತ್ತೂರು ನಾಟಿ ವೈದ್ಯರನ್ನು ಸಂಪರ್ಕಿಸಿ…

    ನನ್ನ ಹೆಸರು ಮಂಜುನಾಥ್ ನನ್ನ ಮೊಬೈಲ್ ನಂಬರ್ 9740093720,ನಮ್ಮದು ಶಿಡ್ಲಘಟ್ಟ ಬಳಿ ಯಣ್ಣಂಗುರೂ,ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುವುದು,ನಮ್ಮ ತಾಯಿಯವರಿಗೆ ಸುಮಾರು ವರ್ಷಗಳಿಂದ ಮಂಡಿ ನೋವು ಇತ್ತು,ಆರು ತಿಂಗಳ ಹಿಂದೆ ನೋವು ಹೆಚ್ಚಾಗಿ

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ..ನಿಮ್ಮ ನಕ್ಷತ್ರ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ…

    ಸೋಮವಾರ, 26/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಹೆಚ್ಚಿನ ಆದಾಯ ಬರಲಿದೆ. ಶುಭಮಂಗಲ ಕಾರ್ಯಗಳು ನಡೆದಾವು. ವಾಹನ ಮಾರಾಟದಿಂದ ಲಾಭ. ದೇಹಾರೋಗ್ಯದಲ್ಲಿ ಸಮಸ್ಯೆ ಇದ್ದು ಆರೋಗ್ಯದ ಭಾಗ್ಯ ಕಾಳಜಿ ಇರಲಿ. ಇವತ್ತಿನ ಕೆಲಸ ಕಾರ್ಯಗಳಲ್ಲಿ ಗೆಲುವು ನಿಮ್ಮದೆ. ವೃಷಭ:- ಆರ್ಥಿಕ ಸ್ಥಿತಿಯಲ್ಲಿ ಸಮತೋಲನ.ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲ. ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿ. ಬಂಧುಗಳ ಸಹಕಾರ ದೊರೆಯಲಿದೆ. ಪರಿಶ್ರಮದ ಬಲದಿಂದಲೇ ಉದ್ಯೋಗ ಲಾಭ. ಹಣಕಾಸಿನ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ದೇಹಾರೋಗ್ಯ ಸುಧಾರಿಸಲಿದ್ದು ಕಾಳಜಿ ಇರಲಿ. ಮಿಥುನ:–…

  • ದೇಗುಲ ದರ್ಶನ, ದೇವರು

    ಶಾರದಾ ಮಾತೆಯ ಮಹಿಮೆ. ಶೃಂಗೇರಿ ದೇಗುಲದ ಗರ್ಭಿಣಿ ಕಪ್ಪೆಯ ರಹಸ್ಯ ನಿಮಗೆ ಗೊತ್ತಾ, ನೋಡಿ.!

    ಶೃಂಗೇರಿಯಲ್ಲಿ ಶಾರದಾ ಮಾತೆಯ ಸ್ಥಾಪನೆ ಆಗಿದ್ದಾದರೂ ಹೇಗೆ ಇದರ ಬಗ್ಗೆ ನಿಮಗೆ ನಾವು ಹೆಚ್ಚು ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಹಾಗಾದರೆ ಸ್ನೇಹಿತರೇ ಶೃಂಗೇರಿಗೆ ಶೃಂಗೇರಿ ಅಂತ ಹೆಸರು ಬಂದಿದ್ದು ಹೇಗೆ ಮತ್ತು ಶೃಂಗೇರಿಯಲ್ಲಿ ಮಠ ಸ್ಥಾಪನೆ ಮಾಡಿದವರು ಯಾರು ಮತ್ತು ಇಲ್ಲಿಗೆ ಶಾರದಾ ಮಾತೆ ಬಂದು ನೆಲೆಸಿದ್ದಾರೆ ಹೇಗೆ ಅನ್ನೋದನ್ನು ನಾವು ತಿಳಿಯೋಣ . ಶೃಂಗೇರಿಯು ಚಿಕ್ಕಮಗಳೂರು ಜಿಲ್ಲೆಯಿಂದ ಸುಮಾರು ತೊಂಬತ್ತು ಕಿಲೋ ಮೀಟರ್ ದೂರದಲ್ಲಿದೆ ಮತ್ತು ಶೃಂಗೇರಿ ಶಾರದಾ ಮಾತೆ ತುಂಗಾ ನದಿಯ ದಡದಲ್ಲಿ ನೆಲೆಸಿದ್ದಾಳೆ ಮತ್ತು…