ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮ್ಮ ದೇಹ ತೂಕವನ್ನು ಬೇಗನೆ ಇಳಿಸಬೇಕೆಂದಿದ್ದರೆ ಬೆಳಗಿನ ಉಪಹಾರವನ್ನು ಬಿಟ್ಟುಬಿಡಿ. ಮಧ್ಯಾಹ್ನ ಊಟದ ವರೆಗೆ ಏನೂ ತಿನ್ನದೆ ಉಪವಾಸ ವಿದ್ದರೆ ಪ್ರತಿನಿತ್ಯ ಸುಮಾರು 350 ರಷ್ಟು ಕಡಿಮೆ ಕ್ಯಾಲೊರಿ ಆಹಾರ ಸೇವಿಸಬಹುದು ಮತ್ತು ಇದರಿಂದ ದೇಹದ ತೂಕವನ್ನು ಇಳಿಸಬಹುದು ಎಂದು ಅಧ್ಯಯನವೊಂದು ಹೇಳುತ್ತದೆ.

ನಾವು ಸೇವಿಸುವ ಆಹಾರದಲ್ಲಿ ಬೆಳಗಿನ ಉಪಹಾರ ಅತ್ಯಂತ ಪ್ರಮುಖ ಎಂಬ ಸಾಮಾನ್ಯ ನಂಬಿಕೆ ನಮ್ಮಲ್ಲಿದೆ. ಆದರೆ ಇಂದಿನ ಜೀವನಕ್ರಮದಲ್ಲಿ ಹಲವು ದೇಶಗಳಲ್ಲಿ ಮೂರರಲ್ಲಿ ಒಬ್ಬರು ಮಕ್ಕಳು ಮತ್ತು ವಯಸ್ಕರು ಬೆಳಗಿನ ಉಪಹಾರ ಸೇವಿಸುವುದಿಲ್ಲ ಎನ್ನುತ್ತಾರೆ ಅಧ್ಯಯನದ ಲೇಖಕ ಡಾ.ಕೀತ್ ಟೋಲ್ಫ್ರೆ.
ಉಪವಾಸ ಮಾಡುವ ಮೂಲಕ ದೇಹದ ತೂಕವನ್ನು ಇಳಿಸುವುದರಿಂದ ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದು. ಇದರಿಂದ ಕಾಲ ಕ್ರಮೇಣ ವ್ಯಕ್ತಿಯು ಸೇವಿಸುವ ಆಹಾರದ ಕ್ಯಾಲೊರಿ ಪ್ರಮಾಣ ಕಡಿಮೆಯಾಗುತ್ತದೆಯಲ್ಲದೆ ಕೊಬ್ಬಿನ ಶೇಖರಣೆಯಲ್ಲಿ ತೊಡಗಿಸಿ ಕೊಂಡಿರುವ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ ಎಂದು ಅಮೆರಿಕಾ ದ ಲೌಬರೂ ಮತ್ತು ಬೆಡ್ಫೋಡ್ರೇಜೈರ್ ವಿಶ್ವವಿದ್ಯಾಲಯಗಳು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಅಧ್ಯಯನ ತಂಡ 11ರಿಂದ 15 ವರ್ಷದೊಳಗಿನ 4೦ ಹೆಣ್ಣು ಮಕ್ಕಳ ಮೇಲೆ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ ಭಾಗಿಯಾದವರು ಮೂರು ದಿನಗಳವರೆಗೆ ಬೆಳಗಿನ ಉಪಹಾರ ಸೇವಿಸಿರಲಿಲ್ಲ ಹಗುರವಾಗಿ ಹಾಲು, ಜ್ಯೂಸ್ ಇತ್ಯಾದಿಗಳನ್ನು ಮಾತ್ರ ಸೇವಿಸಿದ್ದರು. ಆದರೆ ಅವರ ದೈಹಿಕ ಚಟುವಟಿಕೆಗಳಲ್ಲಿ ಯಾವುದೇ ಕುಂಠಿತವಾಗಿರಲಿಲ್ಲ. ಅಲ್ಲದೆ ಬೆಳಗಿನ ಉಪಹಾರವನ್ನು ಬಿಡುವುದರಿಂದ ಇಡೀ ದಿನದಲ್ಲಿ ಸೇವಿಸುವ ಒಟ್ಟಾರೆ ಆಹಾರ ಪ್ರಮಾಣದಲ್ಲಿ 353 ಕ್ಯಾಲರಿಗಳಷ್ಟು ಕಡಿಮೆಯಾಗುತ್ತಿತ್ತು, ಇದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ.

ಸಾಮಾನ್ಯವಾಗಿ ಜನರು 115 ಕ್ಯಾಲೊರಿಗಳಷ್ಟು ಬೆಳಗಿನ ಉಪಹಾರದಿಂದ ಪಡೆದರೆ ಮಧ್ಯಾಹ್ನದ ಊಟವೊಂದ ರಿಂದಲೇ 468 ಕ್ಯಾಲೂರಿಗಳಷ್ಟು ಸಿಗುತ್ತದೆ. ಬೆಳೆಗಿನಉಪಹಾರ ಸೇವನೆಯನ್ನು ದೇಹದ ತೂಕ ನಿಯಂತ್ರಿಸುವಲ್ಲಿ ಪರಿಣಾಮಕಾರಿ ಯಾಗಿ ಬಳಸಬಹುದು ಎಂದು ಡಾ.ಟೊಲ್ಫ್ರಿ ಹೇಳುತ್ತಾರೆ. ಈ ಅಧ್ಯಯನ ನ್ಯೂಟ್ರಿಶನ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾರಿಗೆ ನೌಕರರಿಗೆ 12.50% ವೇತನ ಹೆಚ್ಚಳ: ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಕರ್ನಾಟಕ ಸರ್ಕಾರ 12.50% ವೇತನ ಹೆಚ್ಚಳ ಘೋಷಿಸಿದ್ದು, ಈ ನಿರ್ಧಾರ ಇದೀಗ ಸಾರಿಗೆ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸರ್ಕಾರವು ನೌಕರ ಸಂಘಟನೆಗಳೊಂದಿಗೆ ಅಂತಿಮ ಒಪ್ಪಂದಕ್ಕೆ ಬರದೇ ಏಕಪಕ್ಷೀಯವಾಗಿ ವೇತನ ಹೆಚ್ಚಳ ಪ್ರಕಟಿಸಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಹಲವು ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಯಾವ ನಿಗಮಗಳ ನೌಕರರಿಗೆ ಅನ್ವಯ? ಈ ವೇತನ ಹೆಚ್ಚಳವು ರಾಜ್ಯದ ನಾಲ್ಕು…
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕಜಿಎಫ್’ ಸಿನಿಮಾ ಭಾರತದಾದ್ಯಂತ ಎಲ್ಲೆಡೆ ಹವಾ ಕ್ರಿಯೆಟ್ ಮಾಡಿದ್ದು, ಸಿನಿತಾರೆಯರು ಸೇರಿದಂತೆ ಅಭಿನಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆಯುತ್ತಿದೆ. ಅಭಿಮಾನಿಗಳ ರೀತಿ ಎಂಜಾಯ್ ಮಾಡಿಕೊಂಡು ಸಿನಿಮಾ ನೋಡಲು ಸ್ಯಾಂಡಲ್ವುಡ್ ನಟ ಲುಂಗಿ, ಹವಾಯಿ ಚಪ್ಪಲಿ ಧರಿಸಿಕೊಂಡು ಸಿನಿಮಾ ನೋಡಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರು ಮಾರು ವೇಷದಲ್ಲಿ ಥಿಯೇಟರ್ಗೆ ಹೋಗಿ ಕೆಜಿಎಫ್ ಚಿತ್ರ ವೀಕ್ಷಣೆ ಮಾಡಿದ್ದು, ಈ ವೇಳೆ ಥಿಯೇಟರ್ ನಲ್ಲಿ ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ.ನಟ ಜಗ್ಗೇಶ್ ಅವರು ಲುಂಗಿ, ಹವಾಯಿ…
ದೇಶದ ಖ್ಯಾತ ಧಾರ್ಮಿಕ ನಾಯಕ, ಸ್ವಘೋಷಿತ ದೇವಮಾನವ, ಗುರುಮೀತ್ ರಾಮ್ ರಹೀಂ ಬಾಬಾ ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾಗಿದೆ.
ಸ್ವತಂತ್ರ ಹೋರಾಟಗಾರರು, ಕವಿಗಳು, ಸೈನಿಕರು, ಸಿನಿಮಾ ಕಲಾವಿದರು, ಕ್ರೀಡಾಪಟುಗಳು, ಕುರಿತು ಹಲವು ಚಿತ್ರಗಳು ತೆರೆಮೇಲೆ ಬಂದಿವೆ.
ಬೊಜ್ಜು ಕರಗಲು ಸರಳ ಯೋಗಾಸನವಾದ ಊರ್ಧ್ವ ಪ್ರಸಾರಿತ ಪಾದಾಸನದ ಅಭ್ಯಾಸ ಮಾಡಬಹುದು. ಊರ್ಧ್ವ ಎಂದರೆ ಮೇಲ್ಮುಖ, ಪ್ರಸಾರಿತ ಎಂದರೆ ವಿಸ್ತ್ರತ. ಪಾದ ಎಂದು ಕಾಲು ಮತ್ತು ಆಸನ ಎಂದರೆ ಯೋಗಭಂಗಿ. ಸಾಮಾನ್ಯ ಎಲ್ಲ ವಯಸ್ಸಿನವರು ಅಭ್ಯಾಸ ಮಾಡಬಹುದು. ಆರಂಭದಲ್ಲಿ ಹೊಸಬರು ಗೋಡೆಯ ಸಹಾಯ ತೆಗೆದುಕೊಳ್ಳಬಹುದು. ವಿಧಾನ: ನೆಲದ ಮೇಲೆ ಆರಾಮವಾಗಿ ವಿಶ್ರಾಂತಿ ಮಾಡಿ. ಆಮೇಲೆ ಕಾಲುಗಳು ಜೋಡಣೆ, ಕೈಗಳನ್ನು ತೊಡೆಯ ಪಕ್ಕದಲ್ಲಿ ಇರಿಸಿ. ಸ್ವಲ್ಪ ಹೊತ್ತು ಈ ಸ್ಥಿತಿಯಲ್ಲಿದ್ದು, ಉಸಿರನ್ನು ತೆಗೆದುಕೊಳ್ಳುತ್ತ ನಿಧಾನವಾಗಿ ಎರಡೂ ಕಾಲುಗಳನ್ನು 30ರಿಂದ…
ಬೆಳ್ಳುಳ್ಳಿ ಮುಖ್ಯ ತರಕಾರಿಗಳಲ್ಲಿ ಒಂದು. ಕೆಲವರಿಗೆ ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆಹಾರವಲ್ಲದೆ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ. 1) ಒಂದೆರಡು ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಹುಳು ಮಾಯವಾಗುತ್ತದೆ. 2) ತುಪ್ಪದೊಂದಿಗೆ ಉರಿದು ಸೇವಿಸುವುದರಿಂದ ಅಗ್ನಿ ಮಾಧ್ಯ ಅಥವಾ ಉದರ ಶೂಲೆ ಗುಣವಾಗುತ್ತದೆ. 3) ಅರ್ಧಗಂಟೆಗೆ ಒಮ್ಮೆ ಬೆಳ್ಳುಳ್ಳಿಯ ರಸವನ್ನು ಸೇವಿಸುತ್ತಿದ್ದರೆ ಕಾಲರ ಗುಣವಾಗುತ್ತದೆ ಮತ್ತು ಊರಲ್ಲಿ ಕಾಲರ ಬಂದಾಗ ಮುನ್ನೆಚ್ಚರಿಕೆಗೆ ತೆಗೆದುಕೊಳ್ಳಬಹುದು. 4) ಇದರ ರಸವನ್ನು ಸೇವಿಸುವುದರಿಂದ ಕ್ಯಾನ್ಸರ್ ಕಣಗಳನ್ನು ಸಾಯಿಸಬಹುದು…