ಕಾನೂನು

ಪೋಕ್ಸೊ ಕಾಯಿದೆ ಅಡಿ 4 ಆರೋಪಿಗೆ ಜೀವಿತಾವಧಿವರೆಗೂ ಸಜೆ

108

ಕೋಲಾರ ಜಿಲ್ಲೆಯ ಕಾಮಸಮುದ್ರಂ ಪೊಲೀಸ್ ಠಾಣೆ, ಬಂಗಾರಪೇಟೆ ತಾಲ್ಲೂಕು, ಕೆ.ಜಿ.ಎಫ್. ಉಪ-ವಿಭಾಗದ ಸರಹದ್ದಿನ ಬಂಗಾರಪೇಟೆ ತಾಲ್ಲೂಕು, ಹೊಸಕೋಟೆ ಗ್ರಾಮದ ವಾಸಿ ಆನಂದ್ ಬಿನ್ ಮುನಿವೆಂಕಟಪ್ಪ ಮತ್ತು ಕೆ.ಜಿ.ಎಫ್. ತಾಲ್ಲೂಕು, ಕ್ಯಾಸಂಬಳ್ಳಿ ಹೋಬಳಿ, ತಿಮ್ಮಾಪುರ ಗ್ರಾಮದ ವಾಸಿ ಕಾಂತ್‌ರಾಜ್ ಬಿನ್ ವೆಂಕಟೇಶಪ್ಪ ಮತ್ತು ಎ.ಕೆ. ಕಾಲೋನಿ, ಕಾಮಸಮದ್ರಂ, ಬಂಗಾರಪೇಟೆ ತಾಲ್ಲೂಕಿನ ವಾಸಿ ಪ್ರವೀಣ್ ಕೆ. ಬಿನ್ ಕೋದಂಡಪ್ಪ, ಮತ್ತು ಬೆಂಗನೂರು ಗ್ರಾಮ, ಬಂಗಾರಪೇಟೆ ತಾಲ್ಲೂಕಿನ ವಾಸಿ ವೇಣು ಬಿನ್ ಗೋವಿಂದಪ್ಪರವರುಗಳು ದಿನಾಂಕ 18-02-2022 ರಂದು ಆಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪದ ಮೇಲೆ ಕಾಮಸಮುದ್ರಂ ಪೋಲೀಸ್ ಠಾಣಾಧಿಕಾರಿ ಸಿ.ಆರ್. 19/2022 ರಂತೆ ಕಲಂ 363, 376 (ಡಿಎ), 376 (3), 34 ಐ.ಪಿ.ಸಿ. ಮತ್ತು ಕಲಂ 6 ಪೋಕ್ಸ್ ಕಾಯ್ದೆ ರೀತಿ ಪರ‍್ಯಾದಿ ಪೋಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಕೈಗೊಂಡು ಜೆ. ಎನ್. ಆನಂದ್ ಕುಮಾರ್, ವೃತ್ತ ನಿರೀಕ್ಷಕರು, ಕಾಮಸಮುದ್ರಂ ವೃತ್ತ ರವರು ಆರೋಪಿತರ ವಿರುದ್ಧ ದೋಷಾರೋಪಣಾಪಟ್ಟಿಯನ್ನು ಸಲ್ಲಿಸಿದ್ದರು.

A1  ANAND                                                 A2  KANTHARAJ

A3    PRAVEEN                                              A4  VENU
ಸ್ಪೆಷಲ್ ಸಿ. (ಪೋಕ್ಸ್) 36/2022 ರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಬಿ. ಪಿ. ದೇವಮಾನೆ ಯವರು ವಿಚಾರಣೆ ನಡೆಸಿದ್ದು, ಸದರಿ ಪ್ರಕರಣದಲ್ಲಿ ವಾದ ವಿವಾದಗಳನ್ನು ಆಲಿಸಿದ ನಂತರ ಆರೋಪಿತರಾದ ಎ1 ಆನಂದ್, ಎ2 ಕಾಂತ್‌ರಾಜ್, ಎ3 ಪ್ರವೀಣ್ ಮತ್ತು ಎ4 ವೇಣು ರವರ ವಿರುದ್ಧ ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ದಿನಾಂಕ 17-02-2023 ರಂದು ಆರೋಪಿತರಿಗೆ ಕಲಂ 363, 376 (ಡಿಎ), 376 (3), 34 ಐ.ಪಿ.ಸಿ. ಮತ್ತು ಕಲಂ 6 ಪೋಕೋ ಕಾಯ್ದೆ ಆಡಿಯಲ್ಲಿ ಜೀವಿತಾವಧಿವರೆಗೂ ಸಜೆ, ಜೊತೆಗೆ ತಲಾ ರೂ. 25,000/- ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳ ಸಜೆಯನ್ನು ವಿಧಿಸಿ, ತೀರ್ಪು ಪ್ರಕಟಿಸಿದೆ. ಸದರೀ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಡಿ. ಲಲಿತಕುಮಾರಿ ರವರು ವಾದ ಮಂಡಿಸಿದ್ದರು.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ, ಜ್ಯೋತಿಷ್ಯ

    ಶುಭ ಶನಿವಾರದಂದು ಈ ವಸ್ತುಗಳು ನಿಮ್ಮ ಕಣ್ಣಿಗೆ ಬಿದ್ರೆ ಅದೃಷ್ಟವೋ ಅದೃಷ..!

    ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ವಾರದ ಏಳೂ ದಿನವನ್ನು ಒಂದೊಂದು ದೇವತೆಗಳಿಗೆ ಅರ್ಪಣೆ ಮಾಡಲಾಗಿದೆ. ಅದ್ರಲ್ಲೂ ಶನಿವಾರಕ್ಕೆ ವಿಶೇಷ ಮಹತ್ವವಿದೆ. ಶನಿವಾರ ಶನಿದೇವನಿಗೆ ಪೂಜೆ ಮಾಡಲಾಗುತ್ತದೆ. ಕೋಪದ ದೇವರು ಶನಿ ಕೃಪೆಗೆ ಪಾತ್ರರಾಗಲು ಭಕ್ತರು ಹರಸಾಹಸ ಪಡ್ತಾರೆ. ಸಾಡೆಸಾತ್ ಶನಿ ಇದ್ದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಅಂತವರು ಶನಿಯ ವಿಶೇಷ ಆರಾಧನೆ ಮಾಡಬೇಕಾಗುತ್ತದೆ. ಶನಿವಾರ ವಿಶೇಷ ಪೂಜೆ, ವೃತದ ಜೊತೆ ಶನಿವಾರ ಬೆಳಿಗ್ಗೆ ಕೆಲವೊಂದು ವಸ್ತುಗಳು ಕಣ್ಣಿಗೆ ಬಿದ್ರೆ ಶುಭಕರ. ಕಪ್ಪು ನಾಯಿ ಮೇಲೆ ಶನಿ ಸವಾರಿ ಮಾಡ್ತಾನೆ…

  • ಮನೆ

    ಗೃಹಿಣಿ ನೆನಪಿಟ್ಟುಕೊಳ್ಳಬೇಕಾದ 10 ಸಂಗತಿಗಳು ಯಾವುವು ಗೋತಾ..?ತಿಳಿಯಲು ಈ ಲೇಖನ ಓದಿ ..

    ಜಾಮ್‌ ಬಾಟ್ಲಿಯ ಮುಚ್ಚಳ ತೆಗೆಯುವುದು ಸಾಹಸದ ಕೆಲಸ. ಎರಡೂ ಕೈಗಳನ್ನು ಚೆನ್ನಾಗಿ ಸೋಪು ನೀರಿನಲ್ಲಿ ತೊಳೆದು ಒಣ ಬಟ್ಟೆಯಲ್ಲಿ ಒರೆಸಿ. ಈಗ ಒಣಗಿದ ಕೈಗಳಿಂದ ಬಾಟ್ಲಿಯ ಮುಚ್ಚಳವನ್ನು ತಿರುಗಿಸಿದರೆ ಸುಲಭವಾಗಿ ತೆರೆಯುವುದು.

  • ವಿಚಿತ್ರ ಆದರೂ ಸತ್ಯ

    ಈ ಗ್ರಾಮದಲ್ಲಿ, ಮೊದಲು ಮಕ್ಕಳು, ಆಮೇಲೆ ಮದುವೆ..!ತಿಳಿಯಲು ಇದನ್ನು ಓದಿ…

    ಅವಿವಾಹಿತ ಜೋಡಿಯೊಂದು ಮುಂದಿನ ಜೀವನವನ್ನು ಜೊತೆಯಾಗಿ ಕಳೆಯುವ ನಿರ್ಧಾರ ಕೈಗೊಂಡಾಗ ಇಬ್ಬರೂ ಮುಂದಿನ ಜೀವನದ ಸಾಧಕ ಬಾಧಕಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಯಾವ ಸಮಾಜ ತಮ್ಮನ್ನು ಸ್ವೀಕರಿಸುತ್ತದೆ ಎಂಬುದರಿಂದ ಹಿಡಿದು ಇತರ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ.

  • ಜ್ಯೋತಿಷ್ಯ

    ವೆಂಕಟೇಶ್ವರ ಸ್ವಾಮಿಯ ಕೃಪೆಯಿಂದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮ್ಮ ವರ್ಚಸ್ಸನ್ನು ವಿಸ್ತರಿಸಿಕೊಳ್ಳಲು ಅನುಕೂಲವಾಗುವ ಒಳ್ಳೆಯ ಅವಕಾಶಗಳು ಲಭ್ಯವಾಗುವವು. ಆ ಉತ್ತಮ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಇದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.   .ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ…

  • ಸುದ್ದಿ

    ಕನ್ನಡಿಗರಿಗೆ ಹೆಚ್ಚು ಉದ್ಯೋಗ ಆದ್ಯತೆ ಸಿಎಂ ಯಡಿಯೂರಪ್ಪ ಭರವಸೆ…!

    ಇಂಗ್ಲಿಷ್ ಸಂಬಳಕ್ಕಾದರೆ, ಕನ್ನಡ ಉಂಬಳಕ್ಕೆ ಎಂಬ ಮಾತು ನಾಡಿನಲ್ಲಿ ಪ್ರಚಲಿತದಲ್ಲಿದೆ. ಆದರೆ, ಕನ್ನಡ ನಮ್ಮ ಸಂಬಳ ಹಾಗೂ ಉಂಬಳ ಎರಡಕ್ಕೂ ಆಗಬೇಕು. ಈ ದಿಸೆಯಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವ ದಿಸೆಯಲ್ಲಿ ಪ್ರಯತ್ನ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎರಡು ಸಂಸ್ಥೆಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ೨೦೧೯ನೇ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ. ಮಾತನಾಡಿದ…

  • ಸುದ್ದಿ

    ಸಿಎಂ ಯಡಿಯೂರಪ್ಪ ಮುಂದಿವೆ 2 ಸವಾಲುಗಳು…!

    ಬೆಂಗಳೂರು:  ಬಿಜೆಪಿ ಸರ್ಕಾರವೇನೋ ಅಸ್ಥಿತ್ವಕ್ಕೆ ಬಂದಿದೆ. ಆದರೆ, ನೂತನ ಸಿಎಂ ಯಡಿಯೂರಪ್ಪ ಈಗ ಪ್ರಮುಖ 2 ಸವಾಲುಗಳಿವೆ. ಒಂದು ಬಹುಮತಸಾಬೀತು, ಮತ್ತೊಂದು ಸಂಪುಟ ರಚನೆ. ಇದು ಬಿಜೆಪಿ ನಾಯಕರಲ್ಲೂ ತಳಮಳ ಸೃಷ್ಟಿಸಿದೆ. ಮುಂದಿನ ವಾರ ನೂತನ ಸರ್ಕಾರ ಬಹುಮತ ಸಾಬೀತು ಮಾಡುವ ಸಾಧ್ಯತೆ ಇದೆ. 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರಕ್ಕೇರಿದ್ದಾರೆ. 14 ತಿಂಗಳ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಬಳಿಕ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಬಹುಮತ ಸಾಬೀತು ಈಗ ಯಡಿಯೂರಪ್ಪ ಮುಂದಿರುವ…