ಶ್ರದ್ಧಾಂಜಲಿ

ಖ್ಯಾತ ನಟ ನಂದಮೂರಿ ತಾರಕರತ್ನ ನಿಧನ

98

ಬೆಂಗಳೂರು: ಟಾಲಿವುಡ್​ ಖ್ಯಾತ ನಟ ನಂದಮೂರಿ ತಾರಕರತ್ನ (Nandamuri Taraka Ratna) ನಿಧನರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಇಂದು(ಫೆ.18) ಬೆಂಗಳೂರಿನ ನಾರಾಯಣ ಹೃದಯಾಲದಲ್ಲಿ ತಾರಕರತ್ನ(39) ಕೊನೆಯುಸಿರೆಳೆದಿದ್ದಾರೆ.  ಜನವರಿ 27ರಂದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಕುಪ್ಪಂ ಬಳಿ ಟಿಡಿಪಿ ಪಾದಯಾತ್ರೆ ವೇಳೆ ಕುಸಿದುಬಿದ್ದಿದ್ದರು. ಆ ವೇಳೆ ತಾರಕರತ್ನಗೆ ಹೃದಯಸ್ತಂಭನವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಶಿಫ್ಟ್​ ಮಾಡಲಾಗಿತ್ತು.  23 ದಿನಗಳಿಂದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ತಾರಕರತ್ನ ಅವರಿಗೆ, ಬೆಂಗಳೂರಿನ ನಾರಾಯಣ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದರು. ಇತ್ತ ತಾರಕರತ್ನ ಶೀಘ್ರ ಗುಣಮುಖರಾಗಿ ವಾಪಸ್‌ ಬರಲಿ ಎಂದು ತೆಲುಗು ದೇಶಂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಂದಮೂರಿ ಕುಟುಂಬಸ್ಥರು ಹಾರೈಸಿದ್ದರು. ಆಸ್ಪತ್ರೆಗೆ ಆಂಧ್ರ ಪ್ರದೇಶ ಸಚಿವರು, ಮಾಜಿ ಸಚಿವರು ಸೇರಿದಂತೆ ಹಲವು ರಾಜಕೀಯ ಗಣ್ಯರು ಆಸ್ಪತ್ರೆಗ ಭೇಟಿ ನೀಡಿ ತಾರಕರತ್ನ ಅವರ ಆರೋಗ್ಯದ ಬಗ್ಗೆ ವೈದ್ಯರ ಜೊತೆ ಚರ್ಚಿಸಿದ್ದರು. ಆದ್ರೆ, ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ.

1983ರ ಫೆಬ್ರವರಿ 22ರಂದು ಜನಿಸಿದ್ದ ತೆಲುಗು ನಟ ತಾರಕರತ್ನ, ಒಕಟೋ ನಂಬರ್ ಕುರ್ರಾಡು, ಭದ್ರಾದಿ ರಾಮುಡು, ಯುವರತ್ನ ಸೇರಿದಂತೆ 20 ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ನಂದಮೂರಿ ಮೋಹನ್‌ಕೃಷ್ಣ, ನಂದಮೂರಿ ಶಾಂತಿ ಮೋಹನ್ ದಂಪತಿಯ ಪುತ್ರ, ಹೆಸರಾಂತ ನಟ, ಮಾಜಿ ಸಿಎಂ ಎನ್‌ಟಿಆರ್‌ ಮೊಮ್ಮಗ ತಾರಕರತ್ನ ಅವರು 2012ರಲ್ಲಿ ಅಲೇಖ್ಯಾ ರೆಡ್ಡಿ ಎನ್ನುವವರನ್ನು ಮದುವೆಯಾಗಿದ್ದರು.

39 ವರ್ಷ ವಯಸ್ಸಿನ ನಟ 2002 ರ ತೆಲುಗು ಸಿನಿಮಾ ಒಕಾಟೊ ನಂಬರ್ ಕುರ್ರಾಡು ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ತಾರಕ್, ಭದ್ರಿ ರಾಮುಡು, ಮನಮಂತ ಮತ್ತು ರಾಜಾ ಚೆಯ್ಯಿ ವೇಷದಂತಹ ಸಿನಿಮಾಗಳ ಮೂಲಕ ಫೇಮಸ್ ಆದರು. ಅವರು ಇತ್ತೀಚೆಗೆ ಡಿಸ್ನಿ+ ಹಾಟ್‌ಸ್ಟಾರ್‌ನ ತೆಲುಗು ವೆಬ್ ಸಿರೀಸ್ 9 ಅವರ್ಸ್‌ನಲ್ಲಿ ಕೂಡಾ ಅವರು ನಟಿಸಿದ್ದಾರೆ. ಇನ್ನು ಅಮರಾವತಿ ಚಿತ್ರಕ್ಕಾಗಿ ತಾರಕರತ್ನ ಅವರಿಗೆ 2009ರಲ್ಲಿ ಆಂಧ್ರದ ಪ್ರತಿಷ್ಠಿತ ನಂದಿ ಅವಾರ್ಡ್‌ (ಬೆಸ್ಟ್‌ ವಿಲನ್‌) ಪ್ರಶಸ್ತಿ ದೊರೆತಿದೆ.

 

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಂಧ ಸಹೋದರಿಯರಿಗೆ ಅನುಶ್ರೀ ಕೊಟ್ಟ ಉಡುಗೊರೆ ಏನು ಗೊತ್ತಾ, ನೋಡಿ ಅನುಶ್ರೀಯ ಗಿಫ್ಟ್.

    ಕನ್ನಡ ಕಿರುತೆರೆಯಲ್ಲಿ ಮೂಡಿಬರುವ ಸರಿಗಮಪ ಕಾರ್ಯಕ್ರಮ ಯಾರಿಗೆ ತಿಳಿದಿಲ್ಲ ಹೇಳಿ, ಹೌದು ಪ್ರತಿಭೆಗಳನ್ನ ಹೊರತಂದ ಕಾರ್ಯಕ್ರಮ ಅಂದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಸರಿಗಮಪ ಏನು ಹೇಳಿದರೆ ತಪ್ಪಾಗಲ್ಲ. ಹೌದು ಬಡವ, ಶ್ರೀಮಂತ ಅನ್ನದೆ ಎಲ್ಲರೂ ಕೂಡ ಈ ವೇಧಿಕೆಯಲ್ಲಿ ತಮ್ಮ ತೋರ್ಪಡಿಸಬಹುದಾಗಿದೆ, ಇನ್ನು ಈ ಕಾರ್ಯಕ್ರಮದ ಅನೇಕ ಜನರಿಗೆ ಆಶಾಕಿರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಕಳೆದ ಭಾರಿ ಹನುಮಂತ ತನ್ನ ಹಾಡುಗಳ ಮೂಲಕ ಇಡೀ ಕರ್ನಾಟಕದ ಜನರ ಮನಗೆದ್ದರೆ ಈ ಭಾರಿ ರತ್ನಮ್ಮ ಮತ್ತು ಮಂಜಮ್ಮ…

  • ರಾಜಕೀಯ

    ಬುದ್ದಿವಂತ ಉಪ್ಪಿಯ 24 ಅಂಶಗಳ ಈ ಸೂಪರ್ ಪ್ರಣಾಳಿಕೆಯಲ್ಲಿ ಏನೇನಿವೆ ಗೊತ್ತಾ..?ನಾನುಗೆ ನೀವೂ ಕೂಡ ಸಲಹೆ ನೀಡಲು ಇಲ್ಲಿದೆ ಮೊಬೈಲ್ ನಂಬರ್ ವಿಳಾಸ…

    ಚುನಾವಣೆ ಹತ್ತಿರವಾದಂತೆ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳು ಬಿರುಸುಗೊಂಡಿವೆ. ನಟ ಹಾಗೂ ನಿರ್ದೇಶಕ ರಿಯಲ್​ ಸ್ಟಾರ್​ ಉಪೇಂದ್ರ ಸಾರಥ್ಯದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವು ಮೊದಲ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸಂಪೂರ್ಣ ಪಾರರ್ದಶಕ ಹಾಗೂ ಸರಳ ಆಡಳಿತ ನಡೆಸುವ ಭರವಸೆಯನ್ನು ನೀಡಿದ್ದಾರೆ.

  • UPSC, ಸಾಧನೆ

    ರಾಜಸ್ಥಾನದ ಒಂದೇ ಕುಟುಂಬದ 3 ಅಕ್ಕತಂಗಿಯರು ಸಿವಿಲ್ ಸರ್ವೀಸ್ ನಲ್ಲಿ ಮಾಡಿರುವ ಸಾಧನೆ ನೋಡಿ

    ರಾಜಸ್ಥಾನದಿಂದ ಸಿವಿಲ್ ಸರ್ವಿಸಸ್‌ಗೆ ಒಂದೇ ಕುಟುಂಬದ ಮೂವರು ಅಕ್ಕತಂಗಿಯರು ಕಮಲ, ಗೀತ, ಮಮತಾರಿಗೆ (ಜಿಲ್ಲಾಧಿಕಾರಿಯಾಗಿ) ರ‍್ಯಾಂಕ್ 32, 64, 128 ಬಂದಿದೆ.

  • Information, karnataka, ಆರೋಗ್ಯ, ಜೀವನಶೈಲಿ

    ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

  • ಸುದ್ದಿ

    ರಜನಿಕಾಂತ್‌ ಬಳಿ ಇರುವ ಆಸ್ಥಿಯ ಮೌಲ್ಯವೆಷ್ಟು ಗೊತ್ತಾ?

    ಟಾಲಿವುಡ್‌ ಸ್ಟಾರ್‌ ರಜಿನಿಕಾಂತ್‌ ಎಲ್ಲರೂ ಮೆಚ್ಚುವ ಬಹುದೊಡ್ಡ ಕಲಾವಿದ. ಅವರು ಚಿತ್ರರಂಗ ಕಾಲಿಟ್ಟ ದಿನದಿಂದ ಇಂದಿನವರೆಗೂ ಅದೇ ಪ್ರಾಮುಖ್ಯತೆಯನ್ನೂ ಮುಂದುವರೆಸಿಕೊಡೇ ಬಂದಿದ್ದಾರೆ. 1975ರಲ್ಲಿ ತೆರೆಕಂಡ ಅಪೂರ್ವ ರಾಗಂಗಳ್ ಚಿತ್ರದಿಂದ ಇದುವರೆಗೂ 150 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ಅವರು ಸೂಪರ್ ಸ್ಟಾರ್ ಆಗಿದ್ದೇ ಒಂದು ಅದ್ಭುತ ಸ್ಟೋರಿ. 45 ವರ್ಷಗಳ ಕಾಲ ಚಿತ್ರರಂಗದಲ್ಲಿ ಮೆರೆದ ರಜಿನಿಕಾಂತ್ ಅವರ ಚಿತ್ರಗಳು ಅನೇಕ ಬಾರಿ ವಿವಾದಗಳಿಗೂ ಕಾರಣವಾಗಿವೆ. ರಜನಿಕಾಂತ್‌ ತಮ್ಮ ನಾಲ್ಕು ದಶಕಗಳ ಚಿತ್ರರಂಗದ…

  • ಸುದ್ದಿ

    ಕೇವಲ 12 ವರ್ಷಗಳಲ್ಲಿ 9 ಸಿನಿಮಾ ; ಶಂಕ್ರಣ್ಣ ನಿರ್ದೇಶಿಸಿದ ಸಿನಿಮಾಗಳಿಗೆ ಸಿಕ್ಕಿದ ಬಿರುದುಗಳೆಷ್ಟು ಗೊತ್ತಾ?

    ಶಂಕರ್ ನಾಗ್ ನಟಿಸಿದ್ದ ಬಹುತೇಕ ಸಿನಿಮಾಗಳು ಕಮರ್ಷಿಯಲ್‌ ಮಾದರಿಯಲ್ಲೇ ಇದ್ದವು. ಆದರೆ, ಅವರು ನಿರ್ದೇಶನಕ್ಕೆ ಆಯ್ದುಕೊಳ್ಳುತ್ತಿದ್ದ ಕಥಾ ವಸ್ತುಗಳು ಮಾತ್ರ ಭಿನ್ನವಾಗಿರುತ್ತಿದ್ದವು. ಜತೆಗೆ ಆ ಸಿನಿಮಾಗಳಿಗೆ ಅನೇಕ ಪ್ರಶಸ್ತಿಗಳು ಸಿಕ್ಕಿದ್ದವು. ಶಂಕರ್ ನಾಗ್  ಬದುಕಿದ್ದರೆ, ಇಂದು ಅವರಿಗೆ 65 ವರ್ಷ ತುಂಬುತ್ತಿತ್ತು. 1954ರ ನವೆಂಬರ್ 9 ರಂದು ಹೊನ್ನಾವರದಲ್ಲಿ ಜನಿಸಿದ ಶಂಕರ್‌, ತಮ್ಮ 36ನೇ ವಯಸ್ಸಿನಲ್ಲೇ ಅಪಘಾತದಲ್ಲಿ ಮರಣ ಹೊಂದಿದರು. ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ ಎರಡೇ ವರ್ಷಗಳಲ್ಲಿ ‘ಮಿಂಚಿನ ಓಟ’ ಸಿನಿಮಾ ಮೂಲಕ ನಿರ್ದೇಶಕರಾದರು. ಮೊದಲ…