ದೇವರು-ಧರ್ಮ

ಸಹಸ್ರ ದೇವತೆಗಳ ಅನುಗ್ರಹಕ್ಕಾಗಿ ಕಾರ್ತಿಕ ಹುಣ್ಣಿಮೆಯಂದು ಹೀಗೆ ಮಾಡಿ…!

31

ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಪೂರ್ಣಿಮೆಯು ಅತ್ಯಂತ ಶ್ರೇಷ್ಠವಾದ ದಿನ. ಧಾರ್ಮಿಕವಾಗಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡ ಈ ದಿನ ಸಮಸ್ತ ದೇವತೆಗಳಿಗೂ ಪೂಜೆ ಹಾಗೂ ಪ್ರಾರ್ಥನೆಯನ್ನುಸಲ್ಲಿಸಬೇಕು. ಈ ದಿನ ಹರಿ-ಹರರ ಭಕ್ತರು ತಮ್ಮ ದೇವರಿಗಾಗಿ ವಿಶೇಷ ಉಪವಾಸ ವ್ರತಗಳನ್ನು ಕೈಗೊಂಡರೆ ಅವರು ಪ್ರಸನ್ನರಾಗುವರು. ಜೊತೆಗೆ ಭಕ್ತರ ಜೀವನೋದ್ಧಾರಕ್ಕೆ ಆಶೀರ್ವದಿಸುವರು ಎನ್ನಲಾಗುವುದು.

ಕಾರ್ತಿಕ ಹುಣ್ಣಿಮೆಯನ್ನು ಈ ಬಾರಿ ನವೆಂಬರ್12 ರಂದು ಆಚರಿಸಲಾಗುತ್ತದೆ, ಇದನ್ನು ವಿಶೇಷವಾಗಿ ಶಿವನಿಗೆ ಮೀಸಲಾದ ದಿನ ಎಂದು ಹೇಳಲಾಗುವುದು. ಕೆಲವು ಪುರಾಣ ಕಥೆಗಳ ಪ್ರಕಾರತ್ರಿಪುರಾಸುರ ಎನ್ನುವ ರಾಕ್ಷಸನನ್ನು ಶಿವನು ಕಾರ್ತಿಕ ಹುಣ್ಣಿಮೆಯ ದಿನ ವಧಿಸಿದನು. ಶಿವನ ಈ ವಿಜಯದ ನೆನಪಿಗಾಗಿಯೇ ಕಾರ್ತಿಕ ಹುಣ್ಣಿಮೆಯನ್ನು “ತ್ರಿಪುರ ಪೂರ್ಣಿಮ” ಎಂದು ಆಚರಿಸಲಾಗುವುದು. ಈ ಪವಿತ್ರ ದಿನವು ಕೃತಿಕಾ ನಕ್ಷತ್ರದಲ್ಲಿ ಬಂದಾಗ ಅದು ಇನ್ನಷ್ಟು ಮಹತ್ವವನ್ನು ಪಡೆದುಕೊಳ್ಳುವುದು. ಆಗ ಕಾರ್ತಿಕ ಹುಣ್ಣಿಮೆಯನ್ನುಮಾಹಾ ಕಾರ್ತಿಕ ಎಂದು ಕರೆಯಲಾಗುವುದು.

ಹುಣ್ಣಿಮೆಯ ವಿಶೇಷ ದಿನದಂದು ಪವಿತ್ರ ನೀರಿನ ಸ್ನಾನ ಮಾಡಿ ವ್ರತ ಹಾಗೂ ಪೂಜೆಯನ್ನು ಕೈಗೊಂಡರೆ ಅತ್ಯಂತ ಶ್ರೇಷ್ಠ ಹಾಗೂ ಶ್ರೇಯಸ್ಸು ದೊರೆಯುವುದು ಎಂದು ಹೇಳಲಾಗುತ್ತದೆ. ಭಕ್ತರು ಈ ದಿನ ಮುಂಜಾನೆ ಸೂರ್ಯೋದಯ ಆಗುತ್ತಿದ್ದಂತೆ ಸ್ನಾನ ಮಾಡಿ ದೇವತೆಗಳಿಗೆ ಪೂಜೆಯನ್ನು ಸಲ್ಲಿಸಿದರೆ ಅತ್ಯಂತ ಶುಭ ಸಂಗತಿ. ಭಕ್ತರ ನಿರ್ಮಲ ಮನಸ್ಸಿನ ಪೂಜೆ ಕೈಗೊಂಡರೆ ದೇವರು ಯಶಸ್ವಿ ಬದುಕನ್ನು ಆಶೀರ್ವದಿಸುವನು ಎಂದು ಹೇಳಲಾಗುವುದು.

ವಿಶೇಷ ಶಕ್ತಿ ಹಾಗೂ ಹಿನ್ನೆಲೆಯನ್ನು ಹೊಂದಿರುವ ಕಾರ್ತಿಕ ಹುಣ್ಣಿಮೆಯನ್ನು ದೇವ್ ದೀಪಾವಳಿ ಎಂದು ಆಚರಿಸಲಾಗುತ್ತದೆ. ಈ ದಿನ ದೇವತೆಗಳು ದೀಪಾವಳಿ ಹಬ್ಬವನ್ನು ಆಚರಿಸುವರು. ಈ ದಿನ ದೇವತೆಗಳು ಪವಿತ್ರ ನದಿಗಳ ಮೂಲಕ ಭೂಮಿಗೆ ಇಳಿಯುತ್ತಾರೆ ಎನ್ನುವ ನಂಬಿಕೆಯಿದೆ. ಹಾಗಾಗಿ ಭಕ್ತರು ಕಾರ್ತಿಕ ಹುಣ್ಣಿಮೆಯ ದಿನ ನದಿ ನೀರು ಅಥವಾ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದರೆ ಎಲ್ಲಾ ದೇವತೆಗಳ ಆಶೀರ್ವಾದ ದೊರೆಯುವುದು ಎಂದು ಹೇಳಲಾಗುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಮಂಗಳವಾರದ ನಿಮ್ಮ ದಿನ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(25 ಡಿಸೆಂಬರ್, 2018) ಸಕಾರಾತ್ಮಕವಾಗಿರುವ ಮತ್ತು ಬೆಂಬಲ ನೀಡುವ ಸ್ನೇಹಿತರೊಂದಿಗೆಹೊರಗೆ ಹೋಗಿ. ಇಂದು ನೀವು ನೀವು ಸುತ್ತಲೂ ನಿಮ್ಮ ಪ್ರಿಯತಮೆಯ ಪ್ರೀತಿಯನ್ನು…

  • ಸುದ್ದಿ

    ರಾಜ್ಯ ಸರ್ಕಾರದ ಹೊಸ ಟ್ರಾಫಿಕ್​ ರೂಲ್ಸ್ ಕಡಿತ ಬಗ್ಗೆ ಆದೇಶ ನೀಡಿದ ಮುಖ್ಯಮಂತ್ರಿ ಬಿಎಸ್​ವೈ,!ಇಷ್ಟಕ್ಕೂ ಏನು ಆ ಆದೇಶ ತಿಳಿಯಿರಿ,.?

    ಬೆಂಗಳೂರು,  ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆಗೆ ಹಲವು ವಾಹನ ಸವಾರರು ಈ ಕಾಯ್ದೆಯ ವಿರುದ್ಧ ಧ್ವನಿ ಎತ್ತಿದ್ದರು. ಇದರ ಬೆನ್ನಲೆಯಲ್ಲಿ ಇಂದು ರಾಜ್ಯ ಸರ್ಕಾರ ಹೊಸ ಟ್ರಾಫಿಕ್​ ಫೈನ್ ಇಳಿಕೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್​ ಮಾದರಿಯಲ್ಲಿ ರಾಜ್ಯದಲ್ಲೂ ಟ್ರಾಫಿಕ್ ಫೈನ್ ಇಳಿಕೆ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ ಎಂದ ಅವರು, ನಮ್ಮ ಅಧಿಕಾರಿಗಳ ಚರ್ಚೆ ನಡೆಸಿದ…

  • ಆಧ್ಯಾತ್ಮ

    ಭಗವಾನ್ ಶಿವನ ಈ ವಸ್ತುಗಳು ಕನಸಿನಲ್ಲಿ ಬಂದ್ರೆ ಏನಾಗುತ್ತೆ ಗೊತ್ತಾ ???

    ಪ್ರತಿಯೊಬ್ಬರಿಗೂ ಕನಸು ಬೀಳುವುದು ಸಾಮಾನ್ಯ. ಅದರಲ್ಲಿ ಬೆಳಗ್ಗೆ ನಾಲ್ಕು ಗಂಟೆಯಿಂದ 5 ಗಂಟೆಯ ಒಳಗೆ ಬೀಳುವ ಕನಸುಗಳು ನಿಜವಾಗುತ್ತವೆ ಎಂಬ ನಂಬಿಕೆ ಇದೆ.ಕನಸಿನಲ್ಲಿ ಅನೇಕ ವ್ಯಕ್ತಿಗಳು ಹಾಗೂ ವಸ್ತುಗಳು ಬಂದು ಹೋಗುತ್ತವೆ.ಆದ್ರೆ ಕನಸಿನಲ್ಲಿ ಬರೋದೆಲ್ಲಾ ಒಳ್ಳೆಯದೋ ಅಥವಾ ಕೆಟ್ಟದ್ದೋ ಅಂತ ಅನೇಕರಿಗೆ ಗೊತ್ತಿರುವುದಿಲ್ಲ.ಅದರಲ್ಲಿ ದೇವರ ದೇವ ಮಹಾದೇವ ಸಂಭಂದಿಸಿದ ವಸ್ತುಗಳು ಕನಸಿನಲ್ಲಿ ಬಂದ್ರೆ ಅದೃಷ್ಟ ಬಾಗಿಲು ತೆರೆದಿದೆ ಎಂದೇ ಅರ್ಥ

  • ಸುದ್ದಿ

    ಅಂದ ಹೆಚ್ಚಿಸಿಕೊಳ್ಳಲು ಹೋದ ವೈದ್ಯೆ ಆಸ್ಪತ್ರೆ ಪಾಲು ….! ಬ್ಯೂಟಿಪಾರ್ಲರ್​ಗೆ ಹೋಗುವ ಹೆಂಗಸರೇ ಎಚ್ಚರ…ಎಚ್ಚರ!!

    ಹಬ್ಬ ಬಂತು ಅಂದ್ರೆ ಖುಷಿ ಖುಷಿಯಿಂದ ಆಚರಣೆಗೆ ಸಿದ್ಧವಾಗೋ ಹೆಣ್ಣುಮಕ್ಕಳು ಏನೇ ವಿಶೇಷ ಕಾರ್ಯಕ್ರಮ ಇದ್ದರೂ ಬ್ಯೂಟಿಪಾರ್ಲರ್​ಗೆ ಒಮ್ಮೆ ಭೇಟಿ ಕೊಟ್ಟು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳೋ ಪ್ರಯತ್ನ ಮಾಡ್ತಾರೆ. ಆದರೆ ಇಂತಹದ್ದೆ ಆಸೆಯಿಂದ ಬ್ಯೂಟಿಪಾರ್ಲರ್​ಗೆ ಹೋಗಿದ್ದ ವೈದ್ಯೆಯೊಬ್ಬರು ತಮ್ಮ ಮುಖವನ್ನು ಶಾಶ್ವತವಾಗಿ ಹಾಳುಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಿಎಂಎಚ್​ ರಸ್ತೆಯಲ್ಲಿರುವ ಕ್ಲಬ್​ ಸಿಟ್ರಸ್​​ ಸಲೂನ್​ನಲ್ಲಿ ಈ ಘಟನೆ ನಡೆದಿದೆ. ಯಶೋಧಾ ಎಂಬ ವೈದ್ಯೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಪೇಶಿಯಲ್ ಮಾಡಿಸಿಕೊಳ್ಳಲು ಪಾರ್ಲರ್​ಗೆ ತೆರಳಿದ್ದರು. ಈ ವೇಳೆ…

  • ಸುದ್ದಿ

    ರಾಮ ಭಂಟ ಆಂಜನೇಯನ ‘ಜಾತಿ’ ಪ್ರಮಾಣ ಪತ್ರಕ್ಕಾಗಿ ಅರ್ಜಿ!

    ಈಗಂತೂ ರಾಜಕಾರಣಿಗಳು ತಾವು ಗೆಲ್ಲುವುದಕ್ಕಾಗಿ ಏನು ಬೇಕೋ ಮಾಡುತ್ತಾರೆ, ಹೇಗೆಂದರೆ ಹಾಗೆ ಮಾತನಾಡುತ್ತಾರೆ ಕೂಡ. ಕೊನೆಗೂ ರಾಜಕೀಯಕ್ಕೆ ದೇವರನ್ನು ಎಳೆದು ತಂದು ದೇವರಿಗೂ ಜಾತಿಯ ಪಟ್ಟಿಯನ್ನು ಕಟ್ಟಿಬಿಟ್ಟಿದ್ದಾರೆ. ಹನುಮಂತ ಅರಣ್ಯವಾಸಿ. ಆತ ದಲಿತ ವರ್ಗಕ್ಕೆ ಸೇರಿದ್ದವನೆಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಬಳಿಕ ಈ ಕುರಿತು ಪರ-ವಿರೋಧದ ಚರ್ಚೆಗಳು ಮುಂದುವರೆದಿವೆ. ಆದಿತ್ಯನಾಥ್ ಅವರ ಹೇಳಿಕೆಗೆ ಸ್ವಪಕ್ಷೀಯರಿಂದಲೂ ವಿರೋಧ ವ್ಯಕ್ತವಾಗಿದ್ದು, ಯೋಗಿ ಹೇಳಿಕೆಯನ್ನು ಖಂಡಿಸಿದ್ದ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಫುಲೆ ಈಗ ಪಕ್ಷ ತೊರೆದಿದ್ದಾರೆ….

  • ಆಧ್ಯಾತ್ಮ

    ತುಳಸಿ ಗಿಡದಿಂದ ಮನೆಯಲ್ಲಿ ನಡೆಯಬಹುದಾದ, ಒಳ್ಳೆಯ ಮತ್ತು ಕೆಟ್ಟ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದಂತೆ..!ಅದು ಹೇಗೆ ಗೊತ್ತಾ..?

    ತುಳಸಿ ಎಲೆಗಳಿಂದ ನಾವು ಹಲವು ರೋಗಗಳನ್ನು ಗುಣಪಡಿಸಬಹುದು. ಎಲೆಗಳಿಂದಾಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ…