ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಚೆ ಶಾಲೆಯ ಬಾಗಿಲಿನ ಬಳಿ ಬಾಲಕಿಯೊಬ್ಬಳು ತನ್ನ ಕೈಯಲ್ಲಿ ಖಾಲಿ ಬಟ್ಟಲು ಹಿಡಿದುಕೊಂಡು ತರಗತಿ ಹೊರಗೆ ನಿಂತು ಇಣುಕಿ ನೋಡುತ್ತಿರುವ ಫೋಟೋವೊಂದು ತುಂಬಾ ವೈರಲ್ ಆಗಿತ್ತು. ಫೋಟೋ ವೈರಲ್ ಆದ ಬಳಿಕ ಬಾಲಕಿಗೆ ಅದೇ ಶಾಲೆಯಲ್ಲಿ ದಾಖಲಾತಿ ಮಾಡಿಕೊಂಡಿದ್ದಾರೆ.
ದಿವ್ಯಾ ಗುಡಿಸುವವನ ಮಗಳಾಗಿದ್ದು, ಶಾಲೆಯ ಹತ್ತಿರದಲ್ಲಿಯೇ ಇರುವ ಸ್ಲಂನಲ್ಲಿ ವಾಸಿಸುತ್ತಿದ್ದಳು. ಪೋಷಕರು ಆಕೆಯನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ಹೋದಾಗ ದಿವ್ಯಾ ಊಟ ಸಿಗಬಹುದೆಂಬ ಭರವಸೆಯಿಂದ ಪ್ರತಿದಿನ ಶಾಲೆಯ ಬಳಿ ಹೋಗುತ್ತಿದ್ದಳು. ಈ ಸಮಯದಲ್ಲಿ ಅವುಲಾ ಶ್ರೀನಿವಾಸ್ ಎಂಬುವವರು ಈ ಫೋಟೋವನ್ನು ಕ್ಲಿಕ್ಕಿಸಿದ್ದು. ಅವುಲಾ ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿ ಅದಕ್ಕೆ ‘ಹಸಿವಿನ ನೋಟ’ ಎಂದು ಟೈಟಲ್ ಕೊಟ್ಟಿದ್ದರು.
ಈ ಫೋಟೋವನ್ನು ಹೈದರಾಬಾದ್‍ನ ಗುಡಿಮಲಕಪುರದ ದೇವಲ್ ಜಾಮ್ ಸಿಂಗ್ ಸರ್ಕಾರಿ ಶಾಲೆಯಲ್ಲಿ ಕ್ಲಿಕ್ಕಿಸಲಾಗಿದೆ. ತರಗತಿ ಹೊರಗೆ ನಿಂತಿದ್ದ ಬಾಲಕಿ ಮೋತಿ ದಿವ್ಯಾ ತರಗತಿ ಹೊರಗೆ ನಿಂತಿದ್ದ ಮನಕಲಕುವ ಫೋಟೋವನ್ನು ತೆಲುಗು ಪ್ರತಿಕೆಯೊಂದು ಪ್ರಕಟಿಸಿತ್ತು.
ಆದರೆ ಇದೀಗ ಆ ಫೋಟೋದಿಂದ ಬಾಲಕಿಗೆ ಅದೇ ಶಾಲೆಯಲ್ಲಿ ಅಡ್ಮಿಶನ್ ಮಾಡಿಕೊಂಡಿದ್ದಾರೆ. ಈ ವೈರಲ್ ಫೋಟೋ ವೆಂಕಟ್ ರೆಡ್ಡಿ ಎಂಬುವವರ ಕಣ್ಣಿಗೆ ಬಿದ್ದಿದೆ. ವೆಂಕಟ್ ರೆಡ್ಡಿ ಅವರು ಎಂವಿ ಫೌಂಡೇಶನ್‍ನಲ್ಲಿ ರಾಷ್ಟ್ರೀಯ ಕನ್ವೀನರ್ ಆಗಿದ್ದು, ಇದು ಹೆಣ್ಣು ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಎನ್‍ಜಿಓ. ಬಾಲಕಿ ತನ್ನ ಶಿಕ್ಷಣದ ಹಕ್ಕಿನಿಂದ ವಂಚಿತಳಾಗದಂತೆ ನೋಡಿಕೊಳ್ಳಲು ವೆಂಕಟ್ ರೆಡ್ಡಿ ತನ್ನ ಸಂಸ್ಥೆ ಮತ್ತು ಸ್ಥಳೀಯ ಸ್ವಯಂಸೇವಕರನ್ನು ಸಂಪರ್ಕಿಸಿದ್ದಾರೆ.
ವೆಂಕಟ್ ರೆಡ್ಡಿ ಈ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಅದಕ್ಕೆ, “ಯಾಕೆ ಈ ಬಾಲಕಿಗೆ ದಾಖಲಾತಿ ನೀಡಿಲ್ಲ. ಆ ಬಾಲಕಿಗೂ ಕೂಡ ಓದುವ ಹಾಗೂ ಊಟ ಮಾಡುವ ಅಧಿಕಾರ ಇದೆ. ಇದು ನಾಚಿಕೆಗೇಡಿನ ಸಂಗತಿ” ಎಂದು ಬರೆದು ಶೇರ್ ಮಾಡಿದ್ದಾರೆ. ಇದಾದ ನಂತರ
ಸದ್ಯ ಬಾಲಕಿ ಈಗ ಅದೇ ಶಾಲೆಯಲ್ಲಿ ದಾಖಲಾಗಿ ಶಿಕ್ಷಣ ಪಡೆಯುತ್ತಿದ್ದಾಳೆ. ಬಳಿಕ ವೆಂಕಟ್ ಅವರು ದಿವ್ಯಾ ತನ್ನ ಪೋಷಕರೊಂದಿಗೆ ಮೊದಲನೇ ದಿನ ಶಾಲೆಗೆ ಹೋದ ಫೋಟೋವನ್ನು ಕ್ಲಿಕ್ಕಿಸಿ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ದಿವ್ಯಾ ಶಾಲಾ ಯೂನಿಫಾರಂ ಧರಿಸಿದ್ದಳು. ಈ ಪೋಸ್ಟ್ ನೋಡಿ ಹಲವು ಮಂದಿ ವೆಂಕಟ್ ರೆಡ್ಡಿ ಹಾಗೂ ಫೋಟೋ ಕ್ಲಿಕ್ಕಿಸಿದ ಪತ್ರಕರ್ತನ ಬಗ್ಗೆ ಮೆಚ್ಚುಗೆಯ ಮಾತುಗಳನಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ 22, 1947 ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ 15, 1947 ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ.
ಸಸ್ಯಾಹಾರಿ ಖಾದ್ಯವನ್ನು ಆರ್ಡರ್ ಮಾಡಿದ್ದ ವಕೀಲರೊಬ್ಬರಿಗೆ ಮಾಂಸಾಹಾರಿ ಖಾದ್ಯವನ್ನು ಡೆಲಿವರಿ ಮಾಡಿದ್ದಕ್ಕಾಗಿ ಆಹಾರ ಸರಬರಾಜು ಮಾಡುವ ಝೊಮ್ಯಾಟೋ ಹಾಗೂ ಆ ಮಾಂಸಾಹಾರಿ ಖಾದ್ಯವನ್ನು ನೀಡಿದ ಹೋಟೆಲ್ ಗೆ ಪುಣೆಯ ಗ್ರಾಹಕ ನ್ಯಾಯಾಲಯವು 55 ಸಾವಿರ ರುಪಾಯಿ ದಂಡ ವಿಧಿಸಿದೆ. ಮಾಧ್ಯಮದ ವರದಿ ಪ್ರಕಾರ, ಇನ್ನು ನಲವತ್ತೈದು ದಿನದೊಳಗೆ ವಕೀಲ ಷಣ್ಮುಖ್ ದೇಶ್ ಮುಖ್ ಗೆ ದಂಡದ ಮೊತ್ತ ಪಾವತಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಶುಭಾಂಗಿ ದುನಾಖೆ ಮತ್ತು ಅನಿಲ್ ಜವಲೇಕರ್ ಅವರಿದ್ದ ಪೀಠ,…
ನೋಡಿದ ಕೂಡಲೇ ಮುಖ ಸಿಂಡರಿಸಿಕೊಂಡರೂ ರುಚಿ ನೋಡಿದ ಮೇಲೆ ಮತ್ತೆ ಮತ್ತೆ ತಿನ್ನಬೇಕೆಂಬ ಆಸೆ ಹುಟ್ಟಿಸುವ “ಪಪ್ಪಾಯಿ’ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಔಷಧೀಯ ಗುಣವನ್ನು ಕೂಡ ಹೊಂದಿರುವ ಪಪ್ಪಾಯಿ ಹಲವು ಖಾಯಿಲೆಗಳಿಗೆ ಔಷಧಿಯಾಗಿಯೂ ಬಳಕೆಯಾಗುತ್ತಿದೆ
ಹಾರ್ಟ್ ಅಟ್ಯಾಕ್ ಇದು ಮನುಷ್ಯನಿಗೆ ದೊಡ್ಡ ಸವಾಲಾಗಿರುವ ಕಾಯಿಲೆ.ಯಾಕೆಂದ್ರೆ ಇದು ಬರುವ ಮುನ್ಸೂಚನೆ ಯಾರಿಗೂ ಗೊತ್ತಾಗೊದಿಲ್ಲಾ. ಹಾರ್ಟ್ ಅಟ್ಯಾಕ್ ಯಾವಾಗ ಇಲ್ಲಿ ಆಗುತ್ತೆ ಅಂತ ಹೇಳೋದಕ್ಕೆ ಬರೋದಿಲ್ಲ.
ಈ ತರಕಾರಿ ವ್ಯಾಪಾರಿಯ ಸಮಯೋಚಿತ ನಿರ್ಧಾರದಿಂದ ಆಗಬಹುದಾದ ಭಾರೀ ಅನಾಹುತ ತಪ್ಪಿದೆ. ಕಂಜೂರ್ ಮಾರ್ಗ್ ಮತ್ತು ಭಂದೂಪ್ ರೈಲು ನಿಲ್ದಾಣಗಳ ನಡುವೆ ಸುಮಾರು ಒಂದೂವರೆ ಅಡಿಗಳಷ್ಟು ರೈಲು ಹಳಿ ಕಾಣಿಸದಿರುವುದನ್ನು ಈ ವ್ಯಾಪಾರಿ ಗಮನಿಸಿದ್ದಾರೆ. ಅದೇ ವೇಳೆಗೆ ರೈಲೊಂದು ಬರುತ್ತಿರುವುದನ್ನೂ ನೋಡಿದ್ದಾರೆ. ರೈಲು ಇಲ್ಲಿಗೆ ಬಂದರೆ ಭಾರೀ ಅನಾಹುತ ಸಂಭವಿಸುವುದು ಗ್ಯಾರಂಟಿ ಎಂಬುದನ್ನು ಅರಿತ ಆತ ತಡ ಮಾಡದೇ ತನ್ನ ಕೈಲಿದ್ದ ಛತ್ರಿಯನ್ನು ಓಪನ್ ಮಾಡಿ ರೈಲು ಹಳಿಗಳ ಮಧ್ಯೆ ನಿಂತು ರೈಲು ನಿಲ್ಲಿಸುವಂತೆ ಸೂಚಿಸಿದ್ದಾರೆ. ಇದನ್ನು…
ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಖ್ಯಾತ ಲೇಖಕಿ ಹಾಗೂ ಜನಾನುರಾಗಿ ಸುಧಾ ಮೂರ್ತಿ ಅವರು ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ‘ಕೌನ್ ಬನೇಗಾ ಕರೋಡ್ಪತಿ 11’ರ (ಕೆಬಿಸಿ) ಹಾಟ್ ಸೀಟ್ ಅಲಂಕರಿಸುತ್ತಿದ್ದು ಈ ಎಪಿಸೋಡ್ ಕಿರುತೆರೆ ವೀಕ್ಷಕರಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದೆ. ಕೆಬಿಸಿ ಸೆಟ್ನಲ್ಲಿ ಬಿಗ್ ಬಿಯನ್ನು ಸುಧಾ ಮೂರ್ತಿ ಭೇಟಿಯಾಗಿರುವ ಫೋಟೋಗಳನ್ನು ಬಿಗ್ ಬಿ ತಮ್ಮ ಬ್ಲಾಗ್ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸುಧಾ ಮೂರ್ತಿ, “ನಾನು ಸಿನಿಮಾ ಪ್ರೇಮಿ ಹಾಗಾಗಿ ಅಮಿತಾಭ್ ಬಚ್ಚನ್ ಅವರಂತಹ ಮೇರು ಪ್ರತಿಭೆಯನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಗಿದೆ….