ಸೌಂದರ್ಯ

‘ಮೊಡವೆ’ ಸಮಸ್ಯೆಗೆ ಇಲ್ಲಿದೆ ಮನೆಮದ್ದು…!

79

ಮೊಡವೆ ಸಮಸ್ಯೆ ಹರೆಯದಲ್ಲಿ ಬಹುತೇಕರನ್ನು ಕಾಡುತ್ತದೆ. ಒತ್ತಡ, ಹಾರ್ಮೋನ್ ಸಮಸ್ಯೆ, ಔಷಧಗಳ ಅಡ್ಡ ಪರಿಣಾಮ ಸೇರಿದಂತೆ ಇನ್ನೂ ಹಲವು ಕಾರಣಗಳಿಂದ ಉಂಟಾಗುವ ಮೊಡವೆಗಳ ಕಲೆಗಳು ಉಳಿಯುವ ಸಾಧ್ಯತೆ ಇದೆ.ಆದ್ದರಿಂದ ಹಲವರು ಮೊಡವೆಗಳ ನಿವಾರಣೆಗೆ ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ. ಅವುಗಳು ತಾತ್ಕಾಲಿಕ ಪರಿಹಾರ ನೀಡಿದರೂ ಸಮಸ್ಯೆಯನ್ನು ನಿವಾರಿಸುವುದಿಲ್ಲ. ಆದ್ದರಿಂದ ಮನೆಮದ್ದನ್ನು ಟ್ರೈಮಾಡಿ. ಪರಿಣಾಮ ನಿಧಾನವಾದರೂ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ.

  • ಪ್ರತಿದಿನ ಕನಿಷ್ಠ ಎರಡರಿಂದ ಮೂರು ಲೀಟರ್ ನಷ್ಟು ನೀರು ಕುಡಿಯಬೇಕು.
  • ಪ್ರತಿದಿನ ತಪ್ಪದೆ ಆರರಿಂದ ಎಂಟು ಬಾರಿ ಮುಖವನ್ನು ಶುದ್ಧ ನೀರಿನಲ್ಲಿ ತೊಳೆಯಬೇಕು.
  • ಹಣ್ಣು, ಸೊಪ್ಪು ಮತ್ತು ತರಕಾರಿಗಳನ್ನು ಯಥೇಚ್ಛವಾಗಿ ಬಳಸಬೇಕು.
  • ಪುದೀನಾ ಎಲೆಯ ರಸವನ್ನು ಮುಖಕ್ಕೆ ಲೇಪನ ಮಾಡಿ 20 ನಿಮಿಷಗಳ ನಂತರ ಉಗುರು ಬೆಚ್ಚನೆಯ ನೀರಿನಿಂದ ಮುಖವನ್ನು ತೊಳೆಯಬೇಕು.
  • ಅರಿಶಿಣ ಪುಡಿ, ಪಪ್ಪಾಯ ಹಣ್ಣು, ಸವತೆಕಾಯಿ, ಕ್ಯಾರೆಟ್, ಟೊಮೆಟೊ, ಜೇನುತುಪ್ಪ ಇವುಗಳ ಫೇಸ್ ಪ್ಯಾಕ್ ಬಳಸಬೇಕು.
  • ಆಲೀವ್ ಎಣ್ಣೆಯನ್ನು ಮುಖಕ್ಕೆ ಮರ್ದನ ಮಾಡಿ 20 ನಿಮಿಷಗಳ ನಂತರ ಮುಖಕ್ಕೆ ಹಬೆಯನ್ನು ತೆಗೆದುಕೊಳ್ಳುವುದರಿಂದ ಮೊಡವೆಗಳು ನಿವಾರಣೆಯಾಗುತ್ತವೆ.
  • ಕಲ್ಲಂಗಡಿ ರಸ, ಕ್ಯಾರೆಟ್ ರಸ, ಬಾಳೆ ಹಣ್ಣಿನ ರಸವನ್ನು ಐಸ್ ಮಾಡುವ ಟ್ರೇ ನಲ್ಲಿ ಇರಿಸಿ ಐಸ್ ಕ್ಯೂಬ್ ಮಾಡಿಕೊಳ್ಳಬೇಕು. ಈ ಹಣ್ಣಿನ ರಸದ ಐಸ್ ಕ್ಯೂಬ್ ನಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ಮೊಡವೆ ನಿಯಂತ್ರಣದಲ್ಲಿರುತ್ತದೆ.
  • ನಿಂಬೆ ರಸ ಅಥವಾ ಜೇನುತುಪ್ಪ ಅಥವಾ ಮೊಟ್ಟೆಯ ಬಿಳಿ ಭಾಗವನ್ನು ಮುಖಕ್ಕೆ ಲೇಪನ ಮಾಡಿ 20 ನಿಮಿಷಗಳ ನಂತರ ಬೆಚ್ಚನೆಯ ನೀರಿನಲ್ಲಿ ತೊಳೆಯಬೇಕು.
  • ಚಂದನ ಪುಡಿಯನ್ನು ಗುಲಾಬಿ ನೀರಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ತೆಳುವಾಗಿ ಲೇಪನ ಮಾಡಿ ಬೆಳಗ್ಗೆ ಎದ್ದು ಮುಖವನ್ನು ತಣ್ಣೀರಿನಿಂದ ತೊಳೆಯಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದೇವರಿಗೆ ಪೂಜೆ ಮಾಡುವ ಸಮಯದಲ್ಲಿ ಒಡೆದ ತೆಂಗಿನಕಾಯಿ ಕೆಟ್ಟಿದ್ರೆ ಏನರ್ಥ ಗೊತ್ತಾ..?

    ಹಿಂದೂ ಧರ್ಮದಲ್ಲಿ ದೇವರ ಪೂಜೆ ವೇಳೆ ತೆಂಗಿನ ಕಾಯಿ ಒಡೆಯುವ ಪದ್ಧತಿಯಿದೆ. ಅನೇಕ ಬಾರಿ ಒಡೆದ ತೆಂಗಿನಕಾಯಿ ಹಾಳಾಗಿರುತ್ತದೆ. ಪೂಜೆ ನಂತ್ರ ಹಾಳಾದ ತೆಂಗಿನಕಾಯಿ ನೀಡಿದ ಅಂಗಡಿ ಮಾಲೀಕನಿಗೆ ಕೆಲವರು ಬೈದ್ರೆ ಮತ್ತೆ ಕೆಲವರು ಭಯಪಟ್ಟುಕೊಳ್ತಾರೆ. ತೆಂಗಿನಕಾಯಿ ಹಾಳಾಗಲು ಕಾರಣವೇನು? ಇದು ಅಶುಭ ಫಲ ನೀಡುತ್ತಾ? ಇದು ಮುಂದೆ ಬರಲಿರುವ ಕಷ್ಟದ ಮುನ್ಸೂಚನೆಯಾ? ಹೀಗೆ ಅನೇಕ ಪ್ರಶ್ನೆಗಳು ಏಳುತ್ತವೆ. ನಿಮಗೂ ಈ ಸಮಸ್ಯೆ ಕಾಡಿದ್ದರೆ ಅವಶ್ಯವಾಗಿ ಈ ಸುದ್ದಿ ಓದಿ. ಪೂಜೆ ವೇಳೆ ಒಡೆದ ತೆಂಗಿನಕಾಯಿ ಹಾಳಾಗಿದ್ರೆ…

  • ರಾಜಕೀಯ

    ಹಳೆಯ 500, 1 ಸಾವಿರ ರೂ. ನೋಟುಗಳು ಈಗ ದಕ್ಷಿಣ ಆಫ್ರಿಕಾ ಚುನಾವಣೆಯಲ್ಲಿ ಬಳಕೆಯಾಗಲಿದೆ..!ತಿಳಿಯಲು ಈ ಲೇಖನ ಓದಿ…

    ಕಳೆದ ವರ್ಷ ನಿಷೇಧಗೊಂಡಿರುವ 500 ಮತ್ತು 1 ಸಾವಿರ ರೂ. ನೋಟುಗಳು ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಳಕೆಯಾಗಲಿದೆ.

  • ಸುದ್ದಿ

    ಒಂದು ಕೋಳಿ ರಸ್ತೆ ದಾಟಲು ಪೊಲೀಸ್ ಅಧಿಕಾರಿ ಮಾಡಿದ ಕೆಲಸವೇನು ಗೊತ್ತಾ? ತಿಳಿದರೆ ಶಾಕ್ ಆಗ್ತೀರಾ,.!

    ಎಲ್ಲರಿಗೂ ರಕ್ಷಣೆಯೊದಗಿಸುವುದು ಪೊಲೀಸರ ಕರ್ತವ್ಯ… ಅದನ್ನು ನಮ್ಮ ಪೊಲೀಸರು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ… ತಾವು ಕಷ್ಟ ಅನುಭವಿಸಿದರೂ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಪೊಲೀಸರು… ಇಲ್ಲಿ ಎಂದಲ್ಲ ವಿಶ್ವದ ಯಾವ ಮೂಲೆಗೆ ಹೋದರೂ ಪೊಲೀಸರ ಕರ್ತವ್ಯ ನಿರ್ವಹಣೆ, ದ್ಯೇಯ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಆದರೆ, ಕೆಲವೊಮ್ಮೆ ಈ ಕರ್ತವ್ಯ ನಿರ್ವಹಣೆಯ ನಡುವೆ ಸಂಭವಿಸುವ ವಿದ್ಯಮಾನಗಳು ವಿಚಿತ್ರ ಮತ್ತು ವಿಶಿಷ್ಟವೆನಿಸುತ್ತವೆ. ಅಂತಹ ವಿಶಿಷ್ಟ ವಿದ್ಯಮಾನದಲ್ಲಿ ಇದೂ ಒಂದು. ಏವನ್ ಮತ್ತು ಸೋಮರ್‌ಸೆಟ್‌ ಕಾನ್‌ಸ್ಟಾಬ್ಯುಲರಿಯ ಅಧಿಕಾರಿಯೊಬ್ಬರು ಕೆಲಸ ನಿರ್ವಹಿಸಿ ಮನೆಗೆ ಹೋಗುವ…

  • ಸಾಧನೆ, ಸುದ್ದಿ

    7 ವರ್ಷ ಕಾದು, ಕೊನೆಗೂ ವಿಶ್ವದ ಅತೀ ಎತ್ತರದ ಬಿಲ್ಡಿಂಗ್ ಗೆ ಮಿಂಚು ಬಡಿಯೋದನ್ನ ಸೆರೆಹಿಡಿದ.

    ಸಂಯುಕ್ತ ಅರಬ್ ಎಮಿರೇಟ್ಸ್‌ (UAE) ಸದ್ಯ ಭಾರೀ ಮಳೆ, ಗುಡುಗು ಹಾಗೂ ಸಿಡಿಲುಗಳಿಗೆ ಸಾಕ್ಷಿಯಾಗಿದೆ. ಇದೇ ವೇಳೆ ಒಂದು ವಿಶಿಷ್ಟ ಚಿತ್ರವೊಂದನ್ನು ಸೆರೆಹಿಡಿದಿರುವ ಛಾಯಾಗ್ರಾಕನೊಬ್ಬ ತನ್ನ ಬಹುದಿನಗಳ ಕನಸೊಂದನ್ನು ಈಡೇರಿಸಿಕೊಂಡಿದ್ದಾನೆ. ಜಗತ್ತಿನ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ನೆತ್ತಿ ಮೇಲೆ ಸಿಡಿಲು ಬಡಿದಿದೆ.ಈ ಅದ್ಭುತ ಘಳಿಗೆಯನ್ನು ಸೆರೆ ಹಿಡಿದ ಝೋಹೆಯ್ಬ್ ಅಂಜುಮ್, ಈ ಘಳಿಗೆಗೆಂದು ಸತತ ಏಳು ವರ್ಷಗಳ ಕಾಲ ಈ ಕ್ಷಣಕ್ಕಾಗಿ ಕಾದು ಕುಳಿತಿದ್ದರಂತೆ. ದುಬಾಯ್‌ನಲ್ಲಿ ಮಳೆ ಆದಾಗಲೆಲ್ಲ ರಾತ್ರಿಗಳನ್ನು ಆಚೆಯೇ ಕಳೆಯುತ್ತಿದ್ದ ಈತನ…

  • ಸುದ್ದಿ

    ಈ ಎರಡು 2 ಆ್ಯಪ್ ನಿಮ್ಮಲ್ಲಿದ್ದರೆ ಸಾಕು, ದುಬಾರಿ ದಂಡದಿಂದ ಬಚಾವ್ ಆಗಬಹುದು,.! ಇಲ್ಲಿದೆ ನೋಡಿ ಮಾಹಿತಿ!

    ಬೆಂಗಳೂರು, ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ ವಾಹನ ಸವಾರರು ಲೈಸೆನ್ಸ್, ವಿಮೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿರಲೇ ಬೇಕು. ಫೋಟೋಕಾಪಿ(ಝೆರಾಕ್ಸ್) ಡೂಪ್ಲಿಕೇಟ್ ಕಾಪಿ ಇದ್ದರೆ ದಂಡ ಬೀಳುವುದು ಖಚಿತ. ದುಬಾರಿ ದಂಡದಿಂದ ಪಾರಾಗಲು 2 ಆ್ಯಪ್‌ಗಳಿವೆ. ಇವುಗಳಲ್ಲಿ ಯಾವುದಾದರು ಒಂದು ಆ್ಯಪ್ ಇದ್ದರೆ ಹೊಸ ಟ್ರಾಫಿಕ್ ಪನ್‌ನಿಂದ ಬಚಾವ್ ಆಗಬಹುದು. ಹೊಸ ನಿಯಮ ಜಾರಿಯಾದ ಮೇಲೆ ಯಾವುದೂ ಕೂಡ ಫೋಟೋ ಕಾಪಿ  ಇಟ್ಟುಕೊಳ್ಳುವಂತಿಲ್ಲ. ಪ್ರತಿಯೊಂದು ದಾಖಲೆಯೂ ಒರಿಜನಲ್ ಇರಲೇ ಬೇಕು. ಇನ್ನು ಪ್ರತಿ ಬಾರಿ ಮೂಲ ಪ್ರತಿ…

  • ಆರೋಗ್ಯ

    ಈ ಸೊಳ್ಳೆಗಳು ಬೇರೆಯವರಿಗಿಂತ ನಿಮ್ಮನ್ನೇ ಯಾಕೆ ಹೆಚ್ಚು ಕಚ್ಚುತ್ತವೆ ಗೊತ್ತಾ…!ಈ ಲೇಖನಿ ಓದಿ, ಗೊತ್ತಾಗುತ್ತೆ…

    ಮನೆಯಲ್ಲಿ ಫ್ಯಾನ್, ಕೂಲರ್ ಇಲ್ಲಾಂದ್ರೆ ನೀವು ಸೊಳ್ಳೆಮಹರಾಯನಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ. ಅದರಲ್ಲೂ ಮನೆಯಲ್ಲಿ ಕರೆಂಟ್ ಏನಾದ್ರೂ ಹೋದ್ರೆ ನಿಮ್ಮ ಕತೆ ಮುಗಿದ ಹಾಗೆ. ಇನ್ನೂ ಚಳಿಗಾಲದಲ್ಲಂತೂ ಕೇಳದೇ ಬೇಡ. ಕೆಲವೊಂದು ಸಾರಿ ನಮ್ಗೆ ಅನ್ನಿಸುವುದೇನಂದ್ರೆ ಈ ಸೊಳ್ಳೆಗಳು ನಮಗೆ ಯಾಕೆ ಕಚ್ಚುತ್ತವೆ ಅಂತ ಬಹಳ ತಲೆ ಕೆಡಿಸಿಕೊಳ್ಳುತ್ತೇವೆ.