ಸುದ್ದಿ

ತಮ್ಮ ಚಿತ್ರದ ಡೈಲಾಗ್‌ಗೆ ಟಿಕ್‌ಟಾಕ್‌ ಮಾಡಿದವರಿಗೆ ವಿಶೇಷ ಅವಕಾಶವೊಂದನ್ನು ನೀಡುತ್ತಿರುವ – ರಾಧಿಕಾ ಕುಮಾರಸ್ವಾಮಿ,.!

41

ತೆಲುಗಿನ ‘ಆರುಂಧತಿ’, ‘ಭಾಗಮತಿ’ ಚಿತ್ರಗಳ ಹಾಗೆಯೇ ಮಹಿಳಾ ಪ್ರಧಾನ ಚಿತ್ರವಾದ ‘ದಮಯಂತಿ’ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಇದೊಂದು ಎಂಭತ್ತರ ದಶಕದ ಕಥೆ ಎಂದು ಟೀಸರ್ ನೋಡಿದರೆ ಗೊತ್ತಾಗುತ್ತದೆ. ವಿಭಿನ್ನ, ವಿಶೇಷ ವೇಷ ಭೂಷಣದಲ್ಲಿಯೇ ರಾಧಿಕಾ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ದಮಯಂತಿ ಟೀಸರ್ ರಿಲೀಸ್ ಆಗಿದ್ದು YouTubeನಲ್ಲಿ ಟ್ರೆಂಡ್ ಆಗಿತ್ತು. ಅದರಲ್ಲಿರುವ ಪ್ರತಿಯೊಂದೂ ಡೈಲಾಗ್‌ ಈಗಾಗಲೇ ಸಾಕಷ್ಟು ಫೇಮಸ್‌ ಆಗಿದ್ದು, ಟಿಕ್‌ಟಾಕ್‌‌ನಲ್ಲಿ ಬಳಸುವವರಿಗೆ ರಾಧಿಕಾ ಸೂಪರ್ ಅವಕಾಶವೊಂದನ್ನು ಕೊಡುತ್ತಿದ್ದಾರೆ.

ರಾಧಿಕಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ ಹಾಯ್‌, ಎಲ್ಲರಿಗೂ ನಮಸ್ಕಾರ, ನಮ್ಮ ದಮಯಂತಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ಬರುವ ಡೈಲಾಗ್‌ಗಳನ್ನು ಯಾರು ತುಂಬಾ ಚೆನ್ನಾಗಿ ಟಿಕ್‌ಟಾಕ್‌ ಮಾಡಿ ಅತಿ ಹೆಚ್ಚು ಲೈಕ್‌ ಪಡೆಯುತ್ತಾರೋ ಅದರಲ್ಲಿ 10 ಮಂದಿಗೆ ನನ್ನೊಂದಿಗೆ ದಮಯಂತಿ ಪ್ರೀಮಿಯರ್ ಶೋ ನೋಡುವ ಅವಕಾಶವಿದೆ. Don’t miss it.ಥ್ಯಾಂಕ್ಯೂ ‘ ಎಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

ಈಗಾಗಲೇ ಸಾಕಷ್ಟು ಟಿಕ್‌ಟಾಕ್ ಬಳಕೆದಾರರೂ ಡಿಫರೆಂಟ್‌ ಆಗಿ ವೇಷ ಭೂಷಣ ಧರಿಸಿ ಮಾಡುತ್ತಿರುವ ವಿಡಿಯೋಗಳೂ ವೈರಲ್ ಆಗುತ್ತಿವೆ.ಇನ್ನು ಅಘೋರಿಯಾಗಿ ಅಭಿನಯಿಸುತ್ತಿರುವ ‘ಭೈರಾದೇವಿ’ ಚಿತ್ರಕ್ಕೂ ‘ದಮಯಂತಿ’ ಚಿತ್ರದ ಪಾತ್ರಕ್ಕೂ ಬಿಗ್‌ ಕನ್ಫ್ಯೂಷನ್ ಇತ್ತು. ಇದಕ್ಕೆ ಸ್ವತಃ ರಾಧಿಕಾ ಅವರೇ ಸ್ಪಷ್ಟನೆ ನೀಡಿದ್ದಾರೆ. ದಮಯಂತಿ ಚಿತ್ರವೂ ಅಮ್ಮ ಪಾತ್ರ, ಆಕೆ ಇಡೀ ಊರಿಗೇ ನೆರವು ನೀಡಿ, ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಾಳೆ ಎಂದು ಇತ್ತೀಚೆಗೆ ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ