ಸುದ್ದಿ

ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡು ಅಭಿವೃದ್ಧಿಗೆ ಮುಂದಾದ ಡಿಬಾಸ್ ಫ್ಯಾನ್ಸ್,.!

32

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ‘ಡಿ ಕಂಪನಿ’ ಜಿಲ್ಲೆಯ ಕುಗ್ರಾಮವೊಂದರ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಸಕಲೇಶಪುರ ತಾಲೂಕಿನ ರಾಮೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ಎರಡು ವರ್ಷಕ್ಕೆ ದತ್ತು ಪಡೆದಿರುವ ದರ್ಶನ್ ಅಭಿಮಾನಿಗಳು ಶಾಲಾ ಅಭಿವೃದ್ಧಿಗೆ ಮುಂದಾಗಿದ್ದಾರೆ. ಶಾಲೆಯ ಮಕ್ಕಳಿಗೆ ಸಮವಸ್ತ್ರಗಳು, ಪುಸ್ತಕ, ಶಾಲಾ ಕಟ್ಟಡಕ್ಕೆ ಬಣ್ಣ, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ನೀಡುವ ವಾಗ್ದಾನವನ್ನು ದರ್ಶನ್ ಅಭಿಮಾನಿಗಳು ನೀಡಿದ್ದಾರೆ.

ಈ ನಿಟ್ಟಿನಲ್ಲಿ ಡಿ ಕಂಪನಿ ಈಗಾಗಲೇ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿದ್ದು, ರಾಮೇನಹಳ್ಳಿ ಸರ್ಕಾರಿ ಶಾಲೆಗೆ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದಾಗಿ ಶಾಲಾ ಮಕ್ಕಳೂ ಸೇರಿದಂತೆ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲೆಯ ಶಿಕ್ಷಕಿ ಕೃಪಾ ಅವರು, ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಶಾಲೆಗೆ ಭೇಟಿ ನೀಡಿ, ಅಗತ್ಯಗಳನ್ನು ಪಟ್ಟಿ ಮಾಡಿಕೊಂಡಿದ್ದಾರೆ. ಪೂರ್ವಭಾವಿಯಾಗಿ ಸೆಪ್ಟೆಂಬರ್ 22ರಂದು ದಿನಕರೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್, ಶಾಲೆಗೆ ಗ್ಲೋಬ್, ಗ್ರೀನ್ ಬೋರ್ಡ್ ಸೇರಿದಂತೆ ಅನೇಕ ಉಡುಗೊರೆ ನೀಡಿದ್ದಾರೆ ಎಂದು ತಿಳಿಸಿದರು.

ಬೇಸಿಗೆ ರಜೆಯಲ್ಲಿ ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚುವುದು, ಚಿತ್ರಗಳನ್ನು ಬಿಡಿಸುವುದು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಲು ದರ್ಶನ್ ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ಮೂಲಕ ನಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಮುಂದಾಗಿದ್ದಾರೆ. ಈ ವಿಚಾರ ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಗ್ರಾಮಸ್ಥರಿಗೆ ಖುಷಿಯನ್ನು ತಂದಿದೆ ಎಂದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Cinema

    ಪ್ರಥಮ್ ಈಗ ಬಿಲ್ಡಪ್ ರಾಜ!ಈ ನನ್ಮಗಂದ್ ಇದೇ ಆಯ್ತು ಗುರೂ!ಶಾಕ್ ಆಗ್ಬೇಡಿ…ಈ ಲೇಖನಿ ಓದಿ…

    ನಮ್ಮ ಹಳ್ಳಿ ಹೈದ,ಬಿಗ್‌ಬಾಸ್ ಶೋ ವಿನ್ನರ್ ಪ್ರಥಮ್ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗ್ತಾನೆ ಇರ್ತಾರೆ.  ಇತ್ತೀಚೆಗಷ್ಟೇ ತಮ್ಮ ಬಿಗ್‌ಬಾಸ್ ಸ್ನೇಹಿತ ಹಾಗೂ ಖಾಸಗಿ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ ಸಿರಿಯಲ್’ನಲ್ಲಿ ನಟಿಸುತ್ತಿರುವ ಭುವನ್’ರವರನ್ನು ಕಚ್ಚಿ ಸುದ್ದಿಯಾಗಿದ್ದರು.

  • ಸಿನಿಮಾ

    ನಾಯಕ ನಟ ದುನಿಯಾ ವಿಜಿ ರವರಿಗೆ ಕೋಲಾರದಲ್ಲಿ ಭರ್ಜರಿ ಸ್ವಾಗತ

    ಕೋಲಾರ: ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಚಲನಚಿತ್ರದ ಪ್ರಚಾರಕ್ಕಾಗಿ ಭಾನುವಾರ ಕೋಲಾರ ನಗರಕ್ಕೆ ಆಗಮಿಸಿದ ದುನಿಯಾ ವಿಜಿ ಮತ್ತು ಚಿತ್ರದ ನಿರ್ದೇಶದ ಗೋಪಿಚಂದ್ ಮಲಿನೇನಿ ಅವರಿಗೆ ಎನ್‌ಬಿಕೆ ಹೆಲ್ಪಿಂಗ್ ಹ್ಯಾಂಡ್ಸ್ ಮತ್ತು ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು. ವೀರಸಿಂಹಾರೆಡ್ಡಿ ಚಿತ್ರದ ನಿರ್ದೇಶಕ ಗೋಪಿಚಂದ್ ಮಲಿನೇನಿ ಮತ್ತು ಜಗನ್ ಶನಿವಾರ ರಾತ್ರಿಯೇ ಕೋಲಾರಕ್ಕೆ ಆಗಮಿಸಿ ನಗರದ ಹೊರವಲಯದ ನಾಗಾರ್ಜುನ ಹೋಟೆಲ್‌ನಲ್ಲಿ ವಾಸ್ತವ್ಯಹೂಡಿದ್ದರು. ಭಾನುವಾರ ಬೆಳಿಗ್ಗೆ ಬೆಂಗಳೂರಿನಿಂದ ಆಗಮಿಸಿದ್ದ ದುನಿಯಾ ವಿಜಿ ಅವರನ್ನು ಸೇರಿಕೊಂಡರು. ಉಪಹಾರದ ನಂತರ ಇವರನ್ನು ಕೋಲಾರದ…

  • KOLAR NEWS PAPER

    ಕೆಎಂಎಫ್ ನಂದಿನಿ ಅಮುಲ್ ಜತೆ ವಿಲೀನದ ಪ್ರಸ್ತಾಪಕ್ಕೆ ಖಂಡನೆ

    ಕೋಲಾರ;- ಕೋಟ್ಯಾಂತರ ರೈತರ ಆಸ್ತಿಯಾಗಿರುವ ನಂದಿನಿಯನ್ನು ಯಾವುದೇ ಕಾರಣಕ್ಕೂ ಅಮುಲ್ ಜೊತೆ ವಿಲೀನ ಮಾಡಬಾರದೆಂದು ರೈತಸಂಘದಿOದ ಕೋಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ನೀಡಿ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತರು ನೆಲ ಜಲ ನುಡಿಯ ಮೇಲೆ ಸದಾ ತಮ್ಮ ಪ್ರತಾಪವನ್ನು ತೋರಿಸುತ್ತಿರುವ ಕೇಂದ್ರ ಸರ್ಕಾರ ಈಗ ರಾಜ್ಯದಲ್ಲಿ ತನ್ನದೇ ಆದ ಪ್ರಾಬಲ್ಯ ಅಸ್ತಿತ್ವವನ್ನು ಹೊಂದಿರುವ ನಂದಿನಿ ಹಾಲಿನ ಮೇಲೆ ಗುಜರಾತಿನ ಹುಳಿ ಇಂಡಲು ಮುಂದಾಗಿರುವುದು ಖಂಡನೀಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕನ್ನಡಿಗರ ತಾಳ್ಮೆಯನ್ನೇ ಕೆಣಕಲು…

  • inspirational, ಜ್ಯೋತಿಷ್ಯ

    ಭಾನುವಾರದ ದಿನ ಭವಿಷ್ಯ..ಈ ದಿನದ ನಿಮ್ಮ ನಕ್ಷತ್ರ ಭವಿಷ್ಯ ಶುಭವೋ, ಅಶುಭವೋ ನೋಡಿ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9663218892,  ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು  ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9663218892 call/ whatsapp/ mail raghavendrastrology@gmail.com ಮೇಷ ರಾಶಿ ಹೊಸ ಆರ್ಥಿಕ…

  • ಜ್ಯೋತಿಷ್ಯ

    ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಮಾಡಿ ಕನಸನ್ನು ನನಸಾಗಿಸಿಕೊಂಡ ಸೋದರರು………!

    ಬಿಹಾರ ಮೂಲದ 24ರ ಯುವಕನೊಬ್ಬ ತನ್ನ ಕನಸನ್ನು ನನಸು ಮಾಡಿಕೊಳ್ಳಲು ತನ್ನ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಆಗಿ ವಿನ್ಯಾಸಗೊಳಿಸಿ ಎಲ್ಲರ ಗಮನ ಸೆಳೆದಿದ್ದಾನೆ.ಬಿಹಾರದ ಬನಿಯಾಪುರದ ಸಿಮಾರಿ ಗ್ರಾಮದ ನಿವಾಸಿ ಮಿಥಿಲೇಶ್ ಪ್ರಸಾದ್(24) ಈ ಅಪರೂಪದ ಹೆಲಿಕಾಪ್ಟರ್ ತಯಾರಿಸಿದ್ದಾನೆ. ಮಿಥಿಲೇಶ್ 12ನೇ ತರಗತಿಯವರೆಗೆ ಓದಿದ್ದಾನೆ. ಈತ ವೃತ್ತಿಯಲ್ಲಿ ಪೈಪ್ ಫಿಟ್ಟರ್ ಆಗಿದ್ದು, ತನ್ನ ಬಳಿ ಇದ್ದ ಟಾಟಾ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ರೀತಿ ವಿನ್ಯಾಸಗೊಳಿಸಿ ತನ್ನ ಆಸೆ ತೀರಿಸಿಕೊಂಡಿದ್ದಾನೆ. ಚಿಕ್ಕ ವಯಸ್ಸಿನಿಂದಲೂ ಹೆಲಿಕಾಪ್ಟರ್‍ಗಳನ್ನು ಮಾಡುವ ಕನಸು ಹೊಂದಿದ್ದನು. ಅದು…

  • ಜೀವನಶೈಲಿ

    ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳ ನಿರ್ಮೂಲನೆ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಮನೆಯಲ್ಲಿನ  ಎಲ್ಲಾ ಮೂಲೆಗಳಲ್ಲಿ ಉಪ್ಪು ಅಥವಾ ಉಪ್ಪು ತುಂಡುಗಳನ್ನು ಹಾಕಿ. 48 ಗಂಟೆಗಳ ನಂತರ ತೆಗೆದುಹಾಕಿ. ಉಪ್ಪು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಚೆನ್ನಾಗಿ ಕೆಲಸ ಮಾಡುತ್ತದೆ. ಈ ಉಪ್ಪಿನಲ್ಲಿ ಕೆಲವು ಸಾಸೇಜ್ ಸೇರಿಸಿ. ಮನೆಯಲ್ಲಿನ  ಎಲ್ಲಾ ಕೋಣೆಗಳನ್ನು  ಸ್ವಚ್ಛಗೊಳಿಸಿ  ಮತ್ತು ನಿಮ್ಮ ಮನೆಯನ್ನು ಸದಾ ಸ್ವಚ್ಛವಾಗಿರಿಸಿಕೊಳ್ಳಿ. ನಿಮ್ಮ ಬೆಡ್ ಶೀಟ್ಗಳು, ಕಂಬಳಿಗಳು, ರತ್ನಗಂಬಳಿಗಳನ್ನು ಸ್ವಚ್ಛಗೊಳಿಸಿ . ಕನಿಷ್ಠ ಎರಡು ವಾರಗಳಿಗೆ ಒಮ್ಮೆ ಸ್ವಚ್ಛಗೊಳಿಸಿ. ಹಳೆಯ ಪುಸ್ತಕಗಳು ಮತ್ತು ಬಟ್ಟೆಗಳನ್ನು ಜಾಸ್ತಿ ಮನೆಯಲ್ಲಿ ಇಡಬೇಡಿ. ದಯವಿಟ್ಟು ಯಾರಿಗಾದರೂ…