ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೀವನದಲ್ಲಿ ಎಲ್ಲರೂ ತಮಗೆ ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎಂಬ ಆಸೆ ಎಲ್ಲರಲ್ಲಿಯೂ ಇದ್ದೆ ಇರುತ್ತೆ. ಹಾಗಾಗಿ ಮನೆ ಹೀಗಿರಬೇಕು, ಪೀಠೋಪಕರಣಗಳು ಮಾದರಿ, ಮನೆಯ ವಿನ್ಯಾಸ ಸೇರಿದಂತೆ ಪ್ರತಿಯೊಂದರಲ್ಲಿ ಸೂಕ್ತವಾದದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಬಜೆಟ್ ಅನುಗುಣವಾಗಿ ಮನೆಯನ್ನು ಸುಂದರಗೊಳಿಸುವ ಖರೀದಿಸಲು ಬ್ಲೂಪ್ರಿಂಟ್ ಸಿದ್ಧಮಾಡಿಕೊಂಡಿರುತ್ತಾರೆ. ಆದರೆ ಅಮೆರಿಕದ ವಿಲ್ ಬ್ರೆಕ್ಸ್ ಎಂಬವರು 11 ಶಿಪ್ ಕಂಟೇನರ್ ಗಳಲ್ಲಿ ಮನೆ ಕಟ್ಟಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ವಿಲ್ ಬ್ರೆಕ್ಸ್ ಹಣದ ಅಡಚಣೆಯಿಂದಾಗಿ ಕಂಟೇನರ್ ಗಳ ಮೂಲಕ ಮನೆ ಕಟ್ಟಲು ನಿರ್ಧರಿಸದ್ದರು. 2017ರಲ್ಲಿ 11 ಕಂಟೇನರ್ ಗಳನ್ನು ಬಳಸಿ ಮೂರು ಅಂತಸ್ತಿನ ಮನೆ ಕಟ್ಟಿದ್ದರು. ಅಂದು ಸಹ ವಿಲ್ ಮನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು. ಅಂದು ಮನೆ ನಿರ್ಮಿಸಿದ್ದ ವಿಲ್ ಹಣದ ಅಡಚಣೆಯಿಂದಾಗಿ ಒಳಾಂಗಣ ವಿನ್ಯಾಸ ಮಾಡಿಸಿರಲಿಲ್ಲ. ಎರಡು ವರ್ಷಗಳ ಬಳಿಕ ಮನೆಯನ್ನು ಅಲಂಕರಿಸಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿಲ್ ಬ್ರೆಕ್ಸ್, 2017ರಲ್ಲಿ ಮನೆ ನಿರ್ಮಾಣವಾಗಿತ್ತು. ಅಂದು ಮನೆಯ ಒಳಾಂಗಣ ಸುಂದರಗೊಳಿಸಲು ನನ್ನ ಬಳಿ ಹಣ ಇರಲಿಲ್ಲ. ಹಾಗಾಗಿ ಪ್ರತಿನಿತ್ಯ ನಿಧಾನವಾಗಿ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸ ತೊಡಗಿದೆ. ಸದ್ಯ ಮನೆ ಪೂರ್ಣಗೊಂಡಿದ್ದು, ಫೋಟೋಗಳು ವೈರಲ್ ಆಗುತ್ತಿವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಮನೆ ಸದೃಡವಾಗಿದ್ದು, ಮಳೆ-ಗಾಳಿಯನ್ನು ಎದುರಿಸಬಲ್ಲದು. ಮನೆಯ ಒಳಗಡೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಮೊದಲು ಫೋಟೋಗಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದರು. ಹಾಗಾಗಿ ಫೋಟೋಗಳ ಕೆಳಗೆ ಮನೆಯ ಮಾಹಿತಿ ನೀಡಲು ಆರಂಭಿಸಿದೆ ಎಂದು ವಿಲ್ ಬ್ರೇಕ್ಸ್ ಹೇಳುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮರಣಾ ನಂತರದ ದೇಹದ ವಿಸರ್ಜನ ಕ್ರಿಯೆಗೆ ಅಂತ್ಯೇಷ್ಟಿ ಅಥವಾ ಅಂತಿಮ ಸಂಸ್ಕಾರ ಎಂದು ಕರೆಯಲಾಗುತ್ತದೆ.ನಮ್ಮ ಭಾರತ ದೇಶದಲ್ಲಿ ಅಂತ್ಯಸಂಸ್ಕಾರವು ಧರ್ಮದಿಂದ ಧರ್ಮಕ್ಕೆ ವಿಭಿನ್ನವಾಗಿರುತ್ತದೆ. ಆದರೆ ನಮ್ಮ ಪಕ್ಕದ ದೇಶವಾದ ಟಿಬೇಟಿನಲ್ಲಿ ವಿಚಿತ್ರ ರೀತಿಯ ಶವ ಸಂಸ್ಕಾರ ಮಾಡುತ್ತಾರೆ. ಸಾಮಾನ್ಯರು ಸತ್ತಾಗ ಹಳೆಯ ಟೈರು ಮತ್ತಿತರ ಉರಿಯುವ ವಸ್ತುಗಳನ್ನು ಉಪಯೋಗಿಸಿ ಶವದಹನ ಮಾಡುವ ಪದ್ಧತಿ ಇದು. ಎರಡನೆಯದು ಹೊಂಡ ತೆಗೆದು ಹೂಳುತ್ತಾರೆ.ಮೂರನೆಯದು ಸತ್ತ ಮೂರೂ ದಿನಗಳ ನಂತರ ಹೆಣವನ್ನು ಬಟ್ಟೆಯಲ್ಲಿ ಸುತ್ತಿ ನೀರಿನಲ್ಲಿ ಹಾಕುತ್ತಾರೆ. ನಾಲ್ಕನೆಯ ಶವ ಸಂಸ್ಕಾರ ಮಾಡುವ…
ಬಹಳಷ್ಟು ಮಂದಿಯ ಮನೆಯಲ್ಲಿ ಈ ಸೊಳ್ಳೆ ಬ್ಯಾಟ್‌ಗಳು ಇದ್ದೇ ಇರುತ್ತವೆ. ನೀವು ಮನೆ ಬಾಗಿಲು ಹಾಕಿಟ್ಟಿದ್ದರೂ ಒಂದು ಕ್ಷಣಕ್ಕೆ ಬಾಗಿಲು ತೆರೆದರೆ ಸಾಕು ಸೊಳ್ಳೆಗಳೆಲ್ಲಾ ಮನೆಯೊಳಗಡೆ ಸೇರಿಕೊಂಡು ಬಿಡುತ್ತವೆ. ಮಧ್ಯರಾತ್ರಿಯಲ್ಲಿ ಸೊಳ್ಳೆ ಬ್ಯಾಟ್ ಹಿಡಿದುಕೊಂಡು ಸೊಳ್ಳೆಯನ್ನು ಹುಡುಕಿ ಹುಡುಕಿ ಸಾಯಿಸಬೇಕಾಗುತ್ತದೆ. ಬೇಸಿಗೆಗಾಲದಲ್ಲಂತೂ ಸೊಳ್ಳೆಗಳ ಕಾಟ ಸಿಕ್ಕಾಪಟ್ಟೆ ಇರುತ್ತವೆ. ಈ ಸೊಳ್ಳೆಗಳ ಕಾಟದಿಂದ ಮುಕ್ತಿ ಸಿಗಬೇಕಾ? ನಾವು ನಿಮಗೆ ಸೊಳ್ಳೆ ಓಡಿಸಲು ಉಪಯೋಗಕ್ಕೆ ಬರುವ ಕೆಲವು ಸುಲಭವಾದ ಟಿಪ್ಸ್‌ನ್ನು ಹೇಳಿಕೊಡಲಿದ್ದೇವೆ. ಇದಕ್ಕೆ ಮನೆಯಲ್ಲಿರುವ ಕೆಲವು ವಸ್ತುಗಳೇ ಸಾಕು. ಅದಕ್ಕೆ…
ನಟ, ನಟಿಯರು ಶೂಟಿಂಗ್‌ಗೆ ತೆರಳುವಾಗ ಅವರೊಂದಿಗೆ “ವ್ಯಾನಿಟಿ ವ್ಯಾನ್’ ಕೂಡಾ ತೆರಳುವುದು ಸಾಮಾನ್ಯ. ಕೆಲವರದ್ದು ಸಾಮಾನ್ಯ ಸೌಲಭ್ಯ ಇರುವ ವ್ಯಾನ್ ಆದರೆ ಇನ್ನು ಕೆಲವರನ್ನು ಅತ್ಯಾಧುನಿಕ ಸೌಲಭ್ಯ ಇರುವ ವ್ಯಾನಿಟಿ ವ್ಯಾನ್. ಈ ಅತ್ಯಾಧುನಿಕ ವ್ಯಾನಿಟಿ ವ್ಯಾನ್ ಹೊಂದಿರುವವರ ಸಾಲಿಗೆ ಇದೀಗ ನಟ ಶಾರುಖ್ ಖಾನ್ ಕೂಡಾ ಸೇರ್ಪಡೆಯಾಗಿದ್ದಾರೆ.
ರಿಯಲನ್ಸ್ ಮಾಲೀಕತ್ವದ ಜಿಯೋ ದೇಶದ ಟೆಲಿಕಾಂ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ತನ್ನ ಆಕರ್ಷಕ ಆಫರ್ ಮತ್ತು ವೇಗದ ಇಂಟರ್ನೆಟ್ ನಿಂದಾಗಿ ಜನರಿಗೆ ಹತ್ತಿರವಾಗಿದೆ.
ಕೈಲಾಸ ಪರ್ವತವು ಟಿಬೆಟ್ ನ ಹಿಮಾಲಯ ಶ್ರೇಣಿಯ ಗಾಂಗ್ ಡೈಸ್ ಸರಣಿಯ ಒಂದು ಶಿಖರ. ಈ ಪರ್ವತಪ್ರದೇಶವು ಏಷ್ಯಾದ ಹಲವು ಮಹಾನದಿಗಳಿಗೆ ಮೂಲಸ್ಥಾನವಾಗಿದೆ. ಸಿಂಧೂ ನದಿ , ಸಟ್ಲೆಜ್ ನದಿ ಮತ್ತು ಬ್ರಹ್ಮಪುತ್ರ ಈ ಆಸುಪಾಸಿನಲ್ಲಿಯೇ ಉಗಮಿಸುತ್ತವೆ. ಕೈಲಾಸಪರ್ವತವು ಹಿಂದೂ ಬೌದ್ಧ, ಜೈನ ಮತ್ತು ಬಾನ್ಧರ್ಮೀಯರಿಗೆ ಪವಿತ್ರ ತಾಣವಾಗಿದೆ. ಹಿಂದೂ ನಂಬಿಕೆಗಳ ಪ್ರಕಾರ ಕೈಲಾಸಪರ್ವತವು ಪರಶಿವನ ನೆಲೆ. ಕೈಲಾಸಪರ್ವತವು ಟಿಬೆಟ್ ನಲ್ಲಿ ಮಾನಸಸರೋವರ ಮತ್ತು ರಾಕ್ಷಸ್ ತಾಲ್ ಗಳ ಮಗ್ಗುಲಲ್ಲಿದೆ. ಕೈಲಾಸಪರ್ವತದ ಆರೋಹಣವನ್ನು ಮಾಡಿದುದರ ಬಗೆಗೆ ಯಾವುದೇ ದಾಖಲೆಗಳಿಲ್ಲ. ಹಿಂದೂ ಮತ್ತು ಬೌದ್ಧ ಧರ್ಮೀಯರು ಕೈಲಾಸಪರ್ವತವನ್ನು ಅತಿ ಪವಿತ್ರ ತಾಣವಾಗಿ ಪರಿಗಣಿಸುವುದರಿಂದಾಗಿ ಈ…
ಏಳೆಂಟು ದಶಕಗಳ ಇತಿಹಾಸ ಹೊಂದಿರುವ ದೇಶದ ಅತ್ಯಂತ ದೊಡ್ಡ ಬಿಸ್ಕತ್ ತಯಾರಿಕಾ ಸಂಸ್ಥೆ ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಸುಮಾರು 10 ಸಾವಿರ ಉದ್ಯೋಗಿಗಳನ್ನು ಕೈಬಿಡುವ ಸಾಧ್ಯತೆಯಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಟೋ ಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಉದ್ಯೋಗ ನಷ್ಟ ಉಂಟಾಗಿರುವ ವರದಿಯ ಬೆನ್ನಲ್ಲೇ ಬೇಡಿಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಇದೀಗ ಪಾರ್ಲೆ ಬಿಸ್ಕತ್ ಸಂಸ್ಧೆ ತನ್ನ 10 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದೆ ಎಂದು ಸುದ್ದಿ ಸಂಸ್ಧೆಯೊಂದು ವರದಿ ಮಾಡಿದೆ. ಜಿಎಸ್ ಟಿ ಕಡಿತಗೊಳಿಸುವಂತೆ ನಾವು…