ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದು ಸ್ಫೂರ್ತಿಯ ಕತೆ ಆ ಹುಡುಗಿ ಮೂರು ಚಿನ್ನದ ಪದಕ ಗೆದ್ದು ವಿಶ್ರಾಂತಿ ಪಡೆಯುತ್ತಿದ್ದಳು. ಈ ವೇಳೆ, ಈಕೆ ಎಲ್ಲರ ಗಮನ ಸೆಳೆದದ್ದು ಗೆದ್ದ ಪದಕಗಳಿಂದ ಅಲ್ಲ. ಬದಲಾಗಿ ಸಾಧನೆಯ ಹಿಂದಿನ ಛಲದಿಂದ.
ಸಾಧಿಸುವ ಛಲ, ಉತ್ಸಾಹ ಒಂದಿದ್ದರೆ ಏನನ್ನು ಬೇಕಾದರೂ ಸಾಧಿಸಿ ತೋರಿಸಬಹುದು. ಸತತ ಶ್ರಮ, ಛಲ, ಪ್ರಾಮಾಣಿಕ ಪ್ರಯತ್ನವಿದ್ದರೆ ಕಷ್ಟಗಳು ಅಡ್ಡಿಯೇ ಅಲ್ಲ. ಈ ಮಾತಿಗೆ ಸಾಕ್ಷಿ ಫಿಲಿಪೈನ್ಸ್‌ನ ಈ ಬಾಲಕಿ. 11 ವರ್ಷದ ಈ ಬಾಲಕಿಯ ಕತೆ ಕೇಳಿದರೆ ಹೃದಯ ಭಾರವಾಗುತ್ತದೆ. ಈಕೆಯನ್ನು ಹರಸಲು ಮನಸ್ಸು ಬಯಸುತ್ತದೆ… ಯಾಕೆಂದರೆ, ಈಕೆಯ ಸಾಧನೆ ಅಂತಿಂಥಹದ್ದಲ್ಲ…!
ರಿಯಾ ಬುಲೋಸ್… ಈ ಕತೆಯ ನಾಯಕಿ. ಫಿಲಿಪೈನ್ಸ್‌ನ 11 ವರ್ಷದ ಈ ಟ್ರ್ಯಾಕ್ ಅಥ್ಲೀಟ್ ತನ್ನ `ತಾತ್ಕಾಲಿಕ ಶೂ’ ತೊಟ್ಟು ಓಟದಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ, ಸದ್ಯ ಈ ಬಾಲಕಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ತನ್ನ ಛಲದ ಮೂಲಕ ವಿಶ್ವದ ಹೃದಯ ಗೆದ್ದಿದ್ದಾಳೆ. ನೆಟ್ಟಿಗರಂತೂ ರಿಯಾ ಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇಲೊಯಿಲೊ ಪ್ರಾಂತ್ಯದ ಸ್ಥಳೀಯ ಶಾಲೆಯಲ್ಲಿ ಇಂಟರ್ ಸ್ಕೂಲ್ ಕ್ರೀಡಾಕೂಟ ಆಯೋಜನೆಗೊಂಡಿತ್ತು. ಶಾಲೆಗಳ ಕ್ರೀಡಾಕೂಟದಲ್ಲಿ ರಿಯಾ ಬುಲೋಸ್ 400 ಮೀಟರ್, 800 ಮೀಟರ್ ಮತ್ತು 1,500 ಮೀಟರ್ ಸ್ಪರ್ಧೆಗಳಲ್ಲಿ ಮೂರು ವಿಭಾಗಗಳಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ಬಾಲಕಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ. ಈ ವೇಳೆ, ಈಕೆಯ ಸಾಧನೆಯ ಜೊತೆಜೊತೆ ಎಲ್ಲರ ಹೃದಯ ಭಾರವಾಗಿಸಿದ್ದು ಬಾಲಕಿಯ `ತಾತ್ಕಾಲಿಕ ಶೂ’ ಮತ್ತು ಆಕೆಯ ಬಡತನ.
ರಿಯಾ ಮೂರು ಚಿನ್ನದ ಪದಕ ಗೆದ್ದಿರುವ ಹಿಂದೆ ನೋವಿನ ಕತೆ ಇದೆ. ಈಕೆಗೆ ಸಾಧಿಸುವ ಛಲವಿತ್ತು ನಿಜ. ಆದರೆ, ಇದಕ್ಕೆ ಬಡತನ ಅಡ್ಡಿಯಾಗಿತ್ತು. ಹಾಗಂತ, ರಿಯಾ ಮನೆಯಲ್ಲಿ ಸುಮ್ಮನೆ ಕುಳಿತಿರಲಿಲ್ಲ. ಆಟದಲ್ಲಿ ಪಾಲ್ಗೊಂಡಿದ್ದಳು. ಸ್ಪೋರ್ಟ್ಸ್ ಶೂ ಕೊಳ್ಳಲೂ ಹಣ ಇರಲಿಲ್ಲ. ಆದರೆ, ಆಟದಲ್ಲಿ ಪಾಲ್ಗೊಳ್ಳದೆ ಮನಸ್ಸು ಕೇಳಿರಲಿಲ್ಲ. ಹೀಗಾಗಿ, ಬಾಲಕಿಯೇ ಒಂದು ತಾತ್ಕಾಲಿಕ ಶೂ ತಯಾರಿಸಿದ್ದಳು. ಅದೇ ಬ್ಯಾಂಡೇಜ್ ಶೂ…! ನಿಜ, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸಲುವಾಗಿಯೇ ರಿಯಾ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಓಡಿದ್ದಳು…!
ರಿಯಾಳ ಜಯವನ್ನು ಇಲಾಯ್ಲೊ ಸ್ಪೋಟ್ರ್ಸ್ ಕೌನ್ಸಿಲ್ ಮೀಟ್ ಕೋಚ್ ಪ್ರೆಡೆರಿಕ್ ಬಿ. ವೇಲೆನ್‍ಜುವೆಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಿಯಾ ಆಟದ ವೇಳೆ ಶೂಗಳನ್ನು ಧರಿಸುವುದಿಲ್ಲ. ಬದಲಿಗೆ ತನ್ನ ಪಾದಗಳಿಗೆ ಬ್ಯಾಂಡೇಜ್ ಧರಿಸಿದ್ದಾಳೆ. ಅಷ್ಟೇ ಅಲ್ಲದೆ ಪಾದಗಳಿಗೆ ಶೂಗಳಂತೆ ಸುತ್ತಿಕೊಂಡ ಬ್ಯಾಂಡೇಜ್ ಮೇಲೆ ನೈಕ್ ಎಂದು ಬರೆದುಕೊಂಡಿದ್ದಾಳೆ.
ವೇಲೆನ್‍ಜುವೆಲಾ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೂರಾರು ನೆಟ್ಟಿಗರು ರಿಯಾಳಿಗೆ ಹೊಸ ಶೂಗಳನ್ನು ನೀಡಲು ಮುಂದಾದರು. ಬ್ಯಾಸ್ಕೆಟ್‍ಬಾಲ್ ಅಂಗಡಿಯೊಂದರ ಮಾಲೀಕರು ಟ್ವಿಟ್ ಮೂಲಕ ಬಾಲಕಿಯ ಶೂ ಸೈಜ್ ಕೇಳಿ ಸಹಾಯ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು. .ನಿಮ್ಮ…
ಮಹಾತ್ಮ ಗಾಂಧೀಜಿ 150ನೇ ಜನ್ಮ ದಿನಾಚರಣೆ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿ ‘ನಮ್ಮೊಳಗೆ ಬದಲಾವಣೆ’ (ಚೇಂಜ್ ವಿಥಿನ್) ಹೆಸರಿನಲ್ಲಿ ಬಾಲಿವುಡ್ ಸೆಲಬ್ರಿಟಿಗಳನ್ನು ಭೇಟಿಯಾಗಿದ್ದರು. ಬಾಲಿವುಡ್ ನಟರೊಂದಿಗಿನ ಮೋದಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗಿದ್ದವು. ಮತ್ತು ಎಲ್ಲರ ಟ್ವೀಟ್ಗಳಿಗೂ ಉತ್ತರಿಸಿರುವ ಮೋದಿಕೂಡ ಚಿತ್ರರಂಗದ ದಿಗ್ಗಜರೊಂದಿಗೆ ಶನಿವಾರದ ಸಂಜೆಯನ್ನು ಕಳೆದಿರುವುದುಖುಷಿ ನೀಡಿದೆ ಎಂದು ಉತ್ತರಿಸಿದ್ದಾರೆ. ಆದರೆ, ಬಾಲಿವುಡ್ ಚಿತ್ರರಂಗವನ್ನು ಮಾತ್ರ ಭಾರತೀಯ ಚಿತ್ರರಂಗವೆಂದು ಪರಿಗಣಿಸುತ್ತಿರುವುದಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ವಿರೋಧಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ…
ತಮಿಳುನಾಡಿನ ಪಲ್ಲಾಪಟ್ಟಿ ಗ್ರಾಮದ 18 ವರ್ಷದ ಬಾಲಕ ರಿಫತ್ ಶಾರೂಕ್ 64 ಗ್ರಾಮ್ ತೂಕದ ಸ್ಯಾಟ್‍ಲೈಟ್ ರೂಪಿಸಿದ್ದು, ಇದು ವಿಶ್ವದ ಅತ್ಯಂತ ಕಿರಿಯ ಸ್ಯಾಟ್‍ಲೈಟ್ ಎಂಬ ಹಿರಿಮೆಗೆ ಪಾತ್ರವಾಗಿದೆ.
ಲಿಂಬೆಯನ್ನು ಅಡುಗೆಯ ರುಚಿಗೆ ಮತ್ತು ಔಷಧಿಗೆ ಬಳಸುತ್ತಾರೆ, ನಮ್ಮ ಆರೋಗ್ಯಕ್ಕೂ ಸಹ ಲಿಂಬೆ ಉತ್ತಮ ಆರೈಕೆ. ಸಾಮಾನ್ಯವಾಗಿ ನಿಂಬೆಹಣ್ಣಿನ ರಸವನ್ನು ಹಿಂಡಿ ಎಲ್ಲರೂ ಸಿಪ್ಪೆಯನ್ನು ಬಿಸಾಡುತ್ತಾರೆ ಆದರೆ ನಮಗೆ ತಿಳಿದಿಲ್ಲ ಲಿಂಬೆ ರಸಕ್ಕಿಂತ ಹತ್ತು ಪಟ್ಟು ಸಿಪ್ಪೆಯಲ್ಲಿ ಹತ್ತಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದು. ಲಿಂಬೆಯ ಸಿಪ್ಪೆಯಲ್ಲಿ ಮಿಟಮಿನ್ಸ್ , ಖನಿಜ, ಕರಗದೇ ಇರುವಂತಹ ನಾರುಗಳು ಹಾಗೂ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಹಾಗೂ ಮಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿ ಇರುತ್ತದೆ. ಇವು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇರಿಸುತ್ತದೆ. ಹಾಗಾಗಿ…
ಬಳ್ಳಾರಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಭಾರೀ ಅಂತರದಲ್ಲಿ ಜಯ ಸಾಧಿಸಿದ್ದಾರೆ.ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಉಗ್ರಪ್ಪ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಶಾಂತಾ ಅವರಿಗಿಂತ ಒಂದೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದು, ಹೊಸ ದಾಖಲೆ ಬರೆದಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಚುನಾವಣಾ ಆಯೋಗ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಬೇಕಿದೆ.ಇದೇ…
ಮನೆಯಲ್ಲಿರುವ ಜಿರಳೆ ಶಾಶ್ವತವಾಗಿ ತೊಲಗಿಸಲು ಸರಳ ಮನೆಮದ್ದು. ಮನೆ ಮಳಿಗೆ ಎಂದ ಮೇಲೆ ಕೀಟಗಳ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ ಇದು ಸಾಮಾನ್ಯ ಸಮಸ್ಯೆಯಂತು ಅಲ್ಲ. ಏಕೆಂದರೆ ಮನೆ ಎಷ್ಟೇ ಸ್ವಚ್ಛಂದವಾಗಿದ್ದರೂ ಅತಿಥಿಗಳ ಬಂದಾಗ ಒಂದು ಜಿರಲೆ ಕಾಣಿಸಿಕೊಂಡರೂ ಮುಜುಗರಕ್ಕೀಡಾಗುತ್ತೀರಿ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಇಲಿ ಜಿರಳೆ ಇರುತ್ತದೆ ಇವುಗಳು ನಾನು ರೀತಿಯ ಸಾಂಕ್ರಮಿಕ ರೋಗಗಳು ತರಿಸುವಂತಹ ಕ್ರಿಮಿಗಳು ಇದ್ದೇ ಇರುತ್ತದೆ ಮನೆಯಲ್ಲಿರುವ ವಸ್ತುಗಳನ್ನು ಹಾಳುಮಾಡುವುದು ಆಹಾರ ಪದಾರ್ಥವನ್ನು ನಾಶಮಾಡುವುದು ಜಿರಳೆಗಳ ಕೆಲಸವಾಗಿದೆ. ಹಾಗೆಯೇ ಅಡುಗೆ ಕೋಣೆಯಲ್ಲಿ ಜಿರಳೆಗಳು ಹೆಚ್ಚಾದಂತೆ…