ಸುದ್ದಿ

ಬಿಗ್ ಬಾಸ್ ಶೋಗಳ TRP ರಿಲೀಸ್ ಮಾಡಿದ ‘ಎಂಡೆಮೊಲ್’: ಈ ಸಲ ಇತಿಹಾಸವನ್ನು ಸೃಷ್ಟಿಸಿದ ತೆಲುಗು ಬಿಗ್ ಬಾಸ್,.!

58

ಭಾರತ ಜನಪ್ರಿಯ ಯಶಸ್ವಿ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ ತುಂಬಾನೇ ಮುಖ್ಯವಾದುದು. ಹಾಲಿವುಡ್ ನಿಂದ ಭಾರತಕ್ಕೆ ಬಂದಿರುವ ಈ ಶೋ 2006ರಲ್ಲಿ ಮೊದಲ ಸಲ ಹಿಂದಿಯಲ್ಲಿ ಆರಂಭವಾಯಿತು. ಅದಾದ ಬಳಿಕ ಭಾರತದ ವಿವಿಧ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರವಾಗಿದೆ. ಹಿಂದಿಯಲ್ಲಿ 13ನೇ ಆವೃತ್ತಿ, ಕನ್ನಡದಲ್ಲಿ 7ನೇ ಆವೃತ್ತಿ, ತೆಲುಗು, ತಮಿಳು, ಮರಾಠಿ, ಬೆಂಗಾಳಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಗ್ ಬಾಸ್ ಬಂದಿದೆ. ಇಷ್ಟು ವರ್ಷಗಳ ಇತಿಹಾಸದಲ್ಲಿ ಯಾವ ಶೋಗೂ ಸಿಗದ ಟಿ.ಆರ್.ಪಿ ತೆಲುಗಿಗೆ ಸಿಕ್ಕಿದೆ.

ಈ ಮಾಹಿತಿಯನ್ನ ಖುದ್ದು ಬಿಗ್ ಬಾಸ್ ಶೋ ಹಕ್ಕು ಹೊಂದಿರುವ ಎಂಡೆಮೊಲ್ ಬಹಿರಂಗಪಡಿಸಿದೆ. ಅಷ್ಟಕ್ಕೂ, ತೆಲುಗು ಬಿಗ್ ಬಾಸ್ ನಿರ್ಮಿಸಿರುವ ಆ ದಾಖಲೆ ಏನು? ಮುಂದೆ ಓದಿ….
ಅತಿ ಹೆಚ್ಚು TRP ಪಡೆದ ಫೈನಲ್ ಎಪಿಸೋಡ್  ಬಿಗ್ ಬಾಸ್ ಎಲ್ಲ ಭಾಷೆಗಳನ್ನು ಒಳಗೊಂಡಂತೆ ಇದುವರೆಗೂ ಯಾವ ಫೈನಲ್ ಎಪಿಸೋಡ್ ಗೂ ಸಿಗದಷ್ಟು ಟಿ.ಆರ್.ಪಿ ಪಡೆದಿದೆ ತೆಲುಗು ಬಿಗ್ ಬಾಸ್ ಮೂರನೇ ಆವೃತ್ತಿಯ ಫೈನಲ್. ಎಂಡೆಮೊಲ್ ಪ್ರಕಟ ಮಾಡಿರುವ ಪ್ರಕಾರ, 4.5 ಗಂಟೆಯಲ್ಲಿ 18.29 ಟಿ.ಆರ್.ಪಿ ರೇಟಿಂಗ್ ಪಡೆದುಕೊಂಡಿದೆ. ಇದು ಬಿಗ್ ಬಾಸ್ ಇತಿಹಾಸದಲ್ಲಿ ಹೊಸ ದಾಖಲೆ ಅಂತೆ.

ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿರುವ ಬಿಗ್ ಬಾಸ್ 13 ಆವೃತ್ತಿ ನಡೆಯುತ್ತಿದೆ. ಸಲ್ಮಾನ್ ಹಾಗೂ ಹಿಂದಿ ಬಿಗ್ ಬಾಸ್ ಗೆ ಹೆಚ್ಚು ವೀಕ್ಷಕರಿದ್ದಾರೆ. ಈ ಕಡೆ ಕನ್ನಡದಲ್ಲಿ ಸುದೀಪ್ ನಡೆಸಿಕೊಡುತ್ತಿರುವ ಕನ್ನಡ ಬಿಗ್ ಬಾಸ್ ಹಾಗೂ ಆ ಕಡೆ ಕಮಲ್ ಹಾಸನ್ ನಡೆಸಿಕೊಡುತ್ತಿರುವ ತಮಿಳು ಬಿಗ್ ಬಾಸ್ ಗೂ ಹೆಚ್ಚು ವೀಕ್ಷಕರಿದ್ದಾರೆ. ಆದರೆ, ಫೈನಲ್ ಎಪಿಸೋಡ್ ಗಳನ್ನ ಲೆಕ್ಕಾಚಾರಕ್ಕೆ ತೆಗೆದುಕೊಂಡಾಗ, ನಾಗಾರ್ಜುನ ಸಾರಥ್ಯದ ತೆಲುಗು ‘ಕಿಂಗ್’ ಎನಿಸಿಕೊಂಡಿದೆ. ವಿಶೇಷ ಅಂದ್ರೆ ನಾಗಾರ್ಜುನ ಬಿಗ್ ಬಾಸ್ ಹೋಸ್ಟ್ ಮಾಡಿದ್ದು ಇದೇ ಮೊದಲ ಸಲ.

ಫೈನಲ್ ನಲ್ಲಿ ಏನು ಸ್ಪೆಷಲ್ ಇತ್ತು : ತೆಲುಗು ಬಿಗ್ ಬಾಸ್ ಫೈನಲ್ ದಿನ ಅಂತಹದ್ದೇನಿತ್ತು ವಿಶೇಷ ಎಂದು ಗಮನಿಸಿದ್ರೆ, ಅಂದು ಫೈನಲ್ ವೇದಿಕೆ ಮೆಗಾಸ್ಟಾರ್ ಚಿರಂಜೀವಿ ಎಂಟ್ರಿಕೊಟ್ಟಿದ್ದರು. ಚಿರು ಎಂಟ್ರಿಯಿಂದ ಶೋಗೆ ಮತ್ತಷ್ಟು ಟಿ.ಆರ್.ಪಿ ಲಭಿಸಿದೆ ಎನ್ನುತ್ತಿವೆ ಟಾಲಿವುಡ್ ಮೂಲಗಳು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ