ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕುರಿಗಾಯಿ ಹನುಮಂತ ಅವರು ಜೀ ಕನ್ನಡ ವಾಹಿನಿಯ ‘ಸರಿಗಮಪ’ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ವೀಕ್ಷಕರ ಮನಗೆದ್ದಿದ್ದಾರೆ.
ತಮ್ಮದೇ ಶೈಲಿಯಲ್ಲಿ ಹಾಡುವ ಮೂಲಕ ಹನುಮಂತ ಅವರು ಮನೆ ಮಾತಾಗಿದ್ದಾರೆ. ಅವರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಕೊಡುವುದಾಗಿ ನಿರ್ದೇಶಕ ಯೋಗರಾಜ ಭಟ್ ಈಗಾಗಲೇ ಭರವಸೆ ನೀಡಿದ್ದಾರೆ.
‘ಸರಿಗಮಪ’ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಲಂಬಾಣಿ ಉಡುಗೆ ತಂದುಕೊಡುವಂತೆ ಕೇಳಿಕೊಂಡಿದ್ದರಂತೆ. ಹನುಮಂತ ಅವರ ತಾಯಿ ಲಂಬಾಣಿ ಉಡುಗೆ ತಂದುಕೊಟ್ಟಿದ್ದು, ಅದನ್ನು ಧರಿಸಿ ಸಂತಸ ಹಂಚಿಕೊಂಡ ಅನುಶ್ರೀ ಕ್ಷಮೆ ಕೂಡ ಕೇಳಿದ್ದಾರೆ.
‘ತಮ್ಮ ಹನುಮಂತ ಕೊಟ್ಟ ಕೊಡಿಗೆ ಅವರ ತಾಯಿಯ ಉಡುಗೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದ ಅನುಶ್ರೀ ಅವರು, ಕಾರ್ಯಕ್ರಮದ ನಿರೂಪಣೆ ಸಂದರ್ಭದಲ್ಲಿ ಈ ಉಡುಗೆ ತೊಟ್ಟಿದ್ದರಿಂದ ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ದಾರೆ.
‘ನಾನು ಈ ಬಟ್ಟೆಯನ್ನು ಧರಿಸಿರುವುದಕ್ಕೆ ಸಂತೋಷವಾಗುತ್ತಿದೆ. ಅವರು ನನಗೆ ಕೊಟ್ಟ ಗೌರವ ಇದು ಎಂದು ಭಾವಿಸುತ್ತೇನೆ. ಯಾರ ಭಾವನೆಗೂ ಧಕ್ಕೆ ತರುವ, ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶವಿಲ್ಲ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಅನುಶ್ರೀ ವೇದಿಕೆಯಲ್ಲಿ ಹೇಳಿದ್ದಾರೆ.
ಈ ಹಿಂದೆ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶೀಲವ್ವರನ್ನು ನೋಡಿದ್ದ ಅನುಶ್ರೀ ನನಗೂ ಇದೇ ರೀತಿ ಬಟ್ಟೆ ಮತ್ತು ಆಭರಣಗಳು ಬೇಕೆಂದು ಕೇಳಿಕೊಂಡಿದ್ದರು. ರಿಯಾಲಿಟಿ ಶೋದಲ್ಲಿಯೂ ಹನುಮಂತನಿಗೆ ನಿಮ್ಮ ತಾಯಿ ಬಟ್ಟೆ ಬೇಕು ಅಂತ ಹೇಳಿದ್ದರು.
ಹೀಗಾಗಿ ರಿಯಾಲಿಟಿ ಶೋಗೆ ಆಗಮಿಸಿದ್ದ ಶೀಲವ್ವ ಅವರು ಕೊಟ್ಟ ಮಾತಿನಂತೆ ತಾವೇ ಕೈಯಿಂದ ಕಸೂತಿ ಮಾಡಿದ ಬಣ್ಣ ಬಣ್ಣದ ಉಡುಪನ್ನು ಅನುಶ್ರೀ ಅವರಿಗೆ ನೀಡಿದ್ದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪತಿಗೆ ಆಯಸ್ಸು ಆರೋಗ್ಯ, ಅಭಿವೃದ್ಧಿ ನೀಡಲೆಂದು ಬೇಡಿಕೊಂಡು ದೀರ್ಘಕಾಲ ಸುಮಂಗಲಿಯಾಗಿರುವಂತೆ ಹರಸಲು ಬೇಡುವ ಹಬ್ಬವೇ ‘ಭೀಮನ ಅಮವಾಸ್ಯೆ.
ಮಲಯಾಳಂ ಚಲನಚಿತ್ರ ನಟಿ ಸಂಗೀತ ಕ್ರಿಶ್ ತಮ್ಮ ತಾಯಿಯ ಆರೋಪಕ್ಕೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಶ್ ತಾಯಿ ಇತ್ತೀಚೆಗೆ ಮಗಳು ತನ್ನನ್ನ ವೃದ್ಧಾಪ್ಯದಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆಸ್ತಿಗಾಗಿ ಕ್ರಿಶ್ ನನ್ನನ್ನ ಮನೆಯಿಂದ ಹೊರ ಹಾಕಲು ಮುಂದಾಗಿದ್ದಾಳೆ ಎಂದು ಆರೋಪಿಸಿದ್ದರು. ಈ ಹೇಳಿಕೆ ಕ್ರಿಶ್ ಳನ್ನ ಹೆಚ್ಚು ಸುದ್ದಿಯಲ್ಲಿರುವ ಹಾಗೆ ಮಾಡಿತ್ತು. ಈ ಆರೋಪಗಳಿಗೆ ಕ್ರಿಶ್ ಟ್ವಟರ್ ಮೂಲಕ ಸರಿಯಾಗೇ ಉತ್ತರ ನೀಡಿದ್ದಾರೆ. ತಾನು 13 ವರ್ಷದ ಬಾಲಕಿಯಾಗಿದ್ದಾಗ ಹೇಗೆ ತನ್ನನ್ನ ಶೋಷಿಸಲಾಯಿತು ಎಂದು ವಿವರಿಸಿದ್ದಾಳೆ. ಕುಡುಕ…
ರಿಯಾಲಿಟಿ ಶೋ ‘ಬಿಗ್ಬಾಸ್ ಸೀಸನ್ 7’ 90 ದಿನಗಳನ್ನು ಮುಗಿಸಿದೆ. ಈ ಕಾರ್ಯಕ್ರಮ ಮುಗಿಯಲು ಇನ್ನೂ ಕೆಲವು ದಿನಗಳು ಇರುವಾಗಲೇ ಭಾನುವಾರ ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಡಬಲ್ ಎಲಿಮಿನೇಟ್ ಆಗಿದ್ದಾರೆ. ಹೌದು.ಭಾನುವಾರ ನಟ ಸುದೀಪ್ ಅವರು ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಇಬ್ಬರನ್ನು ಎಲಿಮಿನೇಟ್ ಮಾಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರಿಗೂ ಸರ್ಪ್ರೈಸ್ ಕೊಟ್ಟಿದ್ದಾರೆ. ಮುಂದಿನ ವಾರ ಡಬಲ್ ಎಲಿಮಿನೇಷನ್ ಇದೆ. ಹೀಗಾಗಿ ಈ ವಾರ ಎಲಿಮಿನೇಟ್ ಇರಲಿಲ್ಲ. ಈ ವಿಚಾರ ಮನೆಯ ಸದಸ್ಯರಿಗೆ ಗೊತ್ತಿರಲಿಲ್ಲ….
ಹಸಿವೆಯಿಂದ ಮಣ್ಣು ತಿಂದು ಮೃತಪಟ್ಟ ಏಳು ವರ್ಷದ ಮಗು ವೆನೆಲ್ಲಾಳ ಪೋಷಕರಾದ ಮಹೇಶ್ ಮತ್ತು ನಾಗಮಣಿಯ ವಿವರ ಪತ್ತೆ ಹಚ್ಚಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಇನ್ನೂ ಸಾಧ್ಯವಾಗಿಲ್ಲ. ಮಗುವಿನ ಹಿರಿಯರು ನೆರೆಯ ಆಂಧ್ರ ಪ್ರದೇಶದಲ್ಲಿ ನೆಲೆಸಿದ್ದು ಅವರು ಹೇಳುವ ಪ್ರಕಾರ ಕುಟುಂಬದವರು ಕರ್ನಾಟಕ ಸರ್ಕಾರದ ಯಾವುದೇ ಸೌಲಭ್ಯ ಅಥವಾ ಇಲ್ಲಿನ ಮತದಾನ ಗುರುತು ಪತ್ರ ಹೊಂದಿಲ್ಲ ಎಂದು ತಮ್ಮ ತನಿಖೆ ವೇಳೆ ತಿಳಿದುಬಂದಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ ಅನಿರುದ್ಧ ಶ್ರಾವಣ್ ತಿಳಿಸಿದ್ದಾರೆ. ಅಲ್ಲದೆ ಮಗುವಿನ ಪೋಷಕರು ಅಲ್ಲಿ…
ಮೈಸೂರು ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾದ ರೈತರ ಬ್ಯಾಂಕಿನ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಪ್ರವಾಹದಿಂದ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ, ಟಿ. ನರಸೀಪುರ, ಪಿರಿಯಾಪಟ್ಟಣ, ನಂಜನಗೂಡು, ಹುಣಸೂರು ತಾಲ್ಲೂಕಿನ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಇದರಿಂದ ಸಕಾಲಕ್ಕೆ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕಿಗೆ ರಾಜ್ಯ ಸರ್ಕಾರ ಈ ಕುರಿತಾಗಿ ಮನವಿ ಸಲ್ಲಿಸಿದ್ದು, ಸರ್ಕಾರದ ಮನವಿ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೈತರು ಪಡೆದ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷದ…
ಮಂಗಳವಾರ, 24/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಅನಿರೀಕ್ಷಿತ ಸಂಚಾರ. ಹೂವು ವ್ಯಾಪಾರಿಗಳಿಗೆ ಲಾಭ.ನಿರುದ್ಯೋಗಿಗಳಿಗೆ ಶುಭವಾರ್ತೆ. ಬಂದುಗಳ ಆಗಮನ. ಜೀವನದಲ್ಲಿ ಹೆಚ್ಚು ಧನಾತ್ಮಕ ಬದಲಾವಣೆಗಳನ್ನು ಪಡೆಯುತ್ತೀರಿ. ವೃಷಭ:- ಮನೆಯಲ್ಲಿ ದೇವತಾಕಾರ್ಯಗಳು ನಡೆಯಲಿವೆ. ಮನೆಯವರ ಹಾಗೂ ಸ್ನೇಹಿತರ ಸಹಕಾರ ಇರಲಿದೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ.ನಿಮ್ಮ ಹಣದ ಖರ್ಚಿನ ಬಗ್ಗೆ ಜಾಗ್ರತೆ ಇರಲಿ. ದೀರ್ಘ ಪ್ರಯಾಣ ಅನುಕೂಲಕರವಾಗಿರುತ್ತದೆ.ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಮಿಥುನ:– ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಆದಾಯ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.ವೃತ್ತಿರಂಗದಲ್ಲಿ…