ಸುದ್ದಿ

ಪ್ರಧಾನಿ ಮೋದಿ ಹೆಲಿಕಾಪ್ಟರ್ ನಿಂದ ಇಳಿಸಲಾಗಿದ್ದ ಟ್ರಂಕ್ ನಲ್ಲಿ ಇದ್ದಿದೇನು.?ಕೊನೆಗೆ ಬಹಿರಂಗ ಆಯ್ತು ಆ ರಹಸ್ಯ!?

82

ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 9ರಂದು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದು, ಅವರಿದ್ದ ಹೆಲಿಕಾಪ್ಟರ್ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಬಂದಿಳಿದ ವೇಳೆ ಅದರಲ್ಲಿದ್ದ ಟ್ರಂಕ್ ಒಂದನ್ನು ತರಾತುರಿಯಲ್ಲಿ ಸಾಗಿಸಲಾಗಿತ್ತು.

ಮೂರ್ನಾಲ್ಕು ಮಂದಿ ಈ ಟ್ರಂಕ್ ಹೊತ್ತುಕೊಂಡು ಹೋಗಿ ಅಲ್ಲಿಯೇ ನಿಲ್ಲಿಸಿದ್ದ ಇನ್ನೋವಾ ಒಂದರಲ್ಲಿ ಇಟ್ಟಿದ್ದರು. ಬಳಿಕ ಆ ವಾಹನ ಕ್ಷಣಾರ್ಧದಲ್ಲಿ ಶರವೇಗದಲ್ಲಿ ಸಾಗಿ ಹೋಗಿತ್ತು.

ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚುನಾವಣೆಯಲ್ಲಿ ಬಳಸಲು ಈ ಟ್ರಂಕ್ ನಲ್ಲಿ ಅಪಾರ ಹಣವನ್ನು ತರಲಾಗಿದೆ ನಮ್ಮ ಮಾತುಗಳು ಕೇಳಿ ಬಂದಿತ್ತು. ಈ ಕುರಿತು ಕಾಂಗ್ರೆಸ್ ಕೂಡಾ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿತ್ತು.

ಇದೀಗ ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿ ಡಾ. ಕೆ. ಅರುಣ್ ಟ್ರಂಕ್ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಟ್ರಂಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಗೆ ಸೇರಿದ ಸಾಮಗ್ರಿಗಳಿದ್ದವು ಎಂದು ಅವರು ಹೇಳಿದ್ದು, ಈ ಕುರಿತು ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿರುವುದಾಗಿ ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ