ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಾಜಿ ಸಚಿವ ಹಾಗೂ ಹೊಸದುರ್ಗ ಹಾಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ. ಮರಳು ಸಾಗಿಸಲು ಪರ್ಮಿಟ್ ಪಡೆದರು ಪೊಲೀಸರು ಅನಗತ್ಯವಾಗಿ ತಮ್ಮ ಬೆಂಬಲಿಗರ ವಿರುದ್ಧ ಕೇಸ್ ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಹೊಸದುರ್ಗ ಪೊಲೀಸ್ ಠಾಣೆ ಮುಂದೆ ಗೂಳಿಹಟ್ಟಿ ಶೇಖರ್ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು.
ತಮ್ಮನ್ನು ಭೇಟಿ ಮಾಡಲು ಬಂದಿದ್ದ ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಜೊತೆ ಮಾತನಾಡಿದ ಗೂಳಿಹಟ್ಟಿ ಶೇಖರ್, ತಮ್ಮ ಕ್ಷೇತ್ರದಲ್ಲಿ ಆದ ಘಟನೆಯನ್ನು ವಿವರಿಸಿದರು.
ತಮ್ಮ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ಸಾಗುತ್ತಿದೆ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಪ್ರತಿದಿನ ಸುಮಾರು 200 ಲೋಡ್ ಮರಳು ದೂರದ ಊರಿಗೆ ಅಕ್ರಮ ಸಾಗಾಣೆಯಾಗುತ್ತಿದೆ. ಒಂದು ಟ್ರಾಕ್ಟರ್ ಲೋಡ್ಗೆ 25 ಸಾವಿರದಂತೆ ಪೊಲೀಸರು ವಸೂಲಿ ಮಾಡುತ್ತಿದ್ದಾರೆ. ಅನೇಕ ಲಾರಿ ಮತ್ತು ಟ್ರಾಕ್ಟರ್ ಗಳನ್ನು ನಾನೇ ಖುದ್ದಾಗಿ ಹಿಡಿದಿದ್ದೇನೆ ಆದರೂ ಈ ದಂಧೆ ಮುಂದುವರೆಯುತ್ತಿದೆ ಎಂದರು.
ಬಡವರಿಗೆ ಮರಳೇ ಸಿಕ್ಕುತ್ತಿಲ್ಲ. ಸರ್ಕಾರದ ಕೆಲಸಕ್ಕೂ ಮರಳು ಇಲ್ಲ, ದೇವಸ್ಥಾನ ಕಟ್ಟಲು ಮರಳು ಸಿಗುತ್ತಿಲ್ಲ. ಸ್ಥಳೀಯರು ಇದರಿಂದ ಕೆಲಸ ಕಳೆದುಕೊಂಡು ಗುಳೇ ಹೋಗುತ್ತಿದ್ದಾರೆ. ಹೋಗಲಿ ಸಣ್ಣ ಹಳ್ಳ ಅಥವಾ ಮನೆ ಬಾಗಿಲಿನಿಂದ ಹರಿದ ನೀರಿನಿಂದ ಉಂಟಾದ ಮರಳನ್ನು ಕೂಡ ಬಡವರು ತೆಗೆದುಕೊಳ್ಳಲು ಈ ಅಧಿಕಾರಿಗಳು ಬಿಡುತ್ತಿಲ್ಲ.
ಸುಳ್ಳು ಕೇಸುಗಳನ್ನು ಬಡವರ ಮೇಲೆ ಅನ್ಯಾಯವಾಗಿ ಹಾಕಲಾಗುತ್ತಿದೆ. ಆದರೆ ಉಳ್ಳವರು ಮಾತ್ರ ತಮಗೆ ಬೇಕಾದಷ್ಟು ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಇದು ತಮಗೆ ನೋವುಂಟು ಮಾಡಿದೆ ಎಂದು ಗೂಳಿಹಟ್ಟಿ ಶೇಖರ್ ಈಶ್ವರಪ್ಪನವರ ಹತ್ತಿರ ಹೇಳಿಕೊಂಡರು.
ಇದರಿಂದ ಬೇಸತ್ತ ತಾವು ತಮ್ಮ ಬೆಂಬಲಿಗರಿಗಾದ ಅನ್ಯಾಯ ಖಂಡಿಸಿ ಬಡವರಿಗೆ ಮರಳು ಸಿಗದಿರುವುದನ್ನು ವಿರೋಧಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದೆ ಅಷ್ಟೆ. ಮರಳನ್ನು ಕೂಡ ನೀಡದ ಈ ಸರ್ಕಾರಕ್ಕೆ ಏನು ಹೇಳಬೇಕೋ ತಮಗೆ ಗೊತ್ತಿಲ್ಲ. ಇದುವರೆಗೂ ಸುಮಾರು 500ಕ್ಕೂ ಹೆಚ್ಚು ಬಡವರನ್ನು ಜೈಲಿಗೆ ಕಳಿಸಲಾಗಿದೆ. ಹೀಗೆ ಸುಳ್ಳು ಸುಳ್ಳು ಕೇಸು ಹಾಕುವುದನ್ನು ಅಧಿಕಾರಿಗಳು ನಿಲ್ಲಿಸಬೇಕು ಎಂದರು.
ಅಕ್ರಮವಾಗಿ ಮರಳು ಸಾಗಾಣೆ ಮಾಡುವವರನ್ನು ಬಿಟ್ಟು ಪರ್ಮಿಟ್ ಇದ್ದವರ ವಿರುದ್ದವೇ ಕೇಸು ದಾಖಲಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳು ಉದ್ದಟತನದ ಮಾತನಾಡುತ್ತಾರೆ ಎಂದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
“ಓದುವುದಕ್ಕಿಂತ ದೊಡ್ಡ ಸಂತೋಷವಿಲ್ಲ, ಸ್ನೇಹಿತರಿಗಿಂತ ದೊಡ್ಡವರಲ್ಲ ..” ಎಂದು ಪ್ರಧಾನಿ ನರೇಂದ್ರ ಹೇಳಿದರು. 50 ವರ್ಷಗಳಿಗಿಂತ ಹೆಚ್ಚು ಕಾಲ ಅಂತರರಾಷ್ಟ್ರೀಯ ಸಾಕ್ಷರತಾ ದಿನವು ಎಲ್ಲರಿಗೂ ಸಾಕ್ಷರತೆಯ ಮಹತ್ವದ ಬಗ್ಗೆ ನೆನಪಿಸುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ ವಿಶ್ವದ ಮಿಲಿಯನ್ ಜನರಲ್ಲಿ ಸುಮಾರು 733 ಮಿಲಿಯನ್ ಜನರಿಗೆ ಓದಲು ಮತ್ತು ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಯುನೆಸ್ಕೋ ಹೇಳಿದೆ. ನಾವು .. ಸಾಕ್ಷರತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವಾಗ, ಸುಧಾರಣೆಯನ್ನು ತೋರಿಸಿದ ಭಾರತೀಯ ರಾಜ್ಯಗಳ ನೋಟ ಇಲ್ಲಿದೆ. ಜನಗಣತಿ…
ಸ್ಯಾಂಡಲ್ವುಡ್ ನಲ್ಲಿ ನಟ-ನಟಿಯರು ಸ್ಕ್ರೀನ್ ಮೇಲಿನ ಅನೇಕ ಜೋಡಿಗಳು ನಿಜ ಜೀವನದಲ್ಲೂ ಒಂದಾಗುತ್ತಿದ್ದಾರೆ. ಈಗ ಹಿರಿಯ ಖ್ಯಾತ ನಟ ಸಿಹಿ-ಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ ಕೂಡ ದಾಪಂತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ‘ಹಾಗೆ ಸುಮ್ಮನೆ’ ಖ್ಯಾತಿಯ ನಟ ಕಿರಣ್ ಶ್ರೀನಿವಾಸ್ ಹಾಗೂ ‘ಒಂಥರಾ ಬಣ್ಣಗಳು’ ಚಿತ್ರದಲ್ಲಿ ಅಭಿನಯಿಸಿರುವ ಹಿತಾ ಚಂದ್ರಶೇಖರ್ ಪ್ರೀತಿಸುತ್ತಿದ್ದು, ಅವರು ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.ಕಿರಣ್ ನಮ್ಮ ಕುಟುಂಬದವರಿಗೆ ಪರಿಚಯವಿದ್ದಾರೆ. ಎರಡು ಕುಟುಂಬದವರ ನಡುವೆ ಉತ್ತಮ ಒಡನಾಟವಿದೆ. ಕಿರಣ್, ನಾನು ಮೊದಲಿಗೆ…
ಈ ರೀತಿ ತಿನ್ನುವ ವ್ಯಕ್ತಿಯನ್ನು ಅನುಪ್ ಓಜಾ ಎಂದು ಗುರುತಿಸಲಾಗಿದೆ. ಈತ ದಿನದಲ್ಲಿ ತಿಂಡಿಗೆ ಬರೋಬ್ಬರಿ 40 ಚಪಾತಿಗಳನ್ನು ತಿಂದಿದ್ದಾನೆ. ಜೊತೆಗೆ ಊಟದ ಸಮಯದಲ್ಲಿ ಹತ್ತು ಪ್ಲೇಟ್ ಅನ್ನವನ್ನು ತಿಂದಿದ್ದಾನೆ. ಈ ಅಧುನಿಕ ಬಕಾಸುರನನ್ನು ನೋಡಿದ ಅಲ್ಲಿ ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ. ಈ ಘಟನೆ ಬಿಹಾರದ ಬಕ್ಸಾರ್ ನಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ. ಅನುಪ್ ರಾಜಸ್ಥಾನದಿಂದ ಬಿಹಾರಕ್ಕೆ ಮರಳಿದ್ದ, ಆದ್ದರಿಂದ ಸರ್ಕಾರದ ನಿಮಯದಂತೆ ಆತನನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಈ ವೇಳೆ ಈತ ದಿನಕ್ಕೆ ತಿಂಡಿಯ ವೇಳೆಗೆ 40…
ಭಾರತದಲ್ಲೇ ಮೊದಲ ವಿದ್ಯುತ್ ಪಡೆದ ನಗರ
ಭಾರತದಲ್ಲೇ ಅತಿ ಹೆಚ್ಚು ಚರ್ಚ್ಗಳನ್ನ ಒಂದಿರೊ ನಗರ
ರೈಲ್ವೆಯನ್ನು ಹೊಂದಿದ ಕರ್ನಾಟಕದ ಮೊದಲ ನಗರ
ಕನಕದಾಸರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಒಮ್ಮೆ ಯುದ್ಧದಲ್ಲಿ ಹೆಚ್ಚು ಗಾಯವಾಗಿದ್ದಾಗ, ಬೇಸರಗೊಂಡು ಯುದ್ಧವನ್ನು ಬಿಟ್ಟು, ದೇವರನಾಮಗಳನ್ನು ಬರೆದು ಪರಮಾತ್ಮನನ್ನು ಧ್ಯಾನಿಸತೊಡಗಿದರು.
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ. ಮದುವೆಯಾದ ಮಹಿಳೆ ಕಾಲುಂಗುರ ಧರಿಸಿದರೆ ಶೋಭೆ. ಇದು ಮದುವೆಯ ಪ್ರತೀಕ ಎಂದು ಕೆಲವರು ತಿಳಿದಿದ್ದರೆ ಮತ್ತೆ ಕೆಲವರು ಇದೊಂದು ಸಂಪ್ರದಾಯವೆಂದು ನಂಬುತ್ತಾರೆ. ಆದರೆ ಇದಕ್ಕೊಂದು ವೈಜ್ಞಾನಿಕ ಕಾರಣ ಇದೆ. ಅದರ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ.