ಮನರಂಜನೆ

ಒಂದು ಕಾಲದಲ್ಲಿ 100ರೂ. ಸಿಕ್ಕರೆ ಸಾಕು ಎಂದುಕೊಳ್ಳುತ್ತಿದ್ದ ಹುಡುಗ ಇಂದು ಹಾಡಿಗೆ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ…

116

ಕಠಿಣ ಪರಿಶ್ರಮ ಹಾಗೂ ಪ್ರಯತ್ನದ ಫಲವಾಗಿ  ರ್ಯಾಪರ್  ಚಂದನ್ ಶೆಟ್ಟಿ ಸ್ಯಾಂಡಲ್ವುಡ್ ನಲ್ಲಿ ಒಂದು ಹೆಸರು ಪಡೆದು ಇದೀಗ ದೊಡ್ಡ ಮಟ್ಟದ ಸಂಭಾವನೆ ಪಡೆಯುವ ಮೂಲಕ ಸಾಧನೆಯ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ..

ಹೌದು, ದಂಗಾಗುವಂತಿದೆ ಚಂದನ್ ಶೆಟ್ಟಿ ಸಂಭಾವನೆ. ಹೌದು, ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ‘ಬಿಗ್ ಬಾಸ್’ನಿಂದ ಬಂದ ಬಳಿಕ ಫುಲ್ ಬ್ಯುಸಿಯಾಗಿದ್ದಾರೆ.

ವಿವಿಧೆಡೆ ಕಾರ್ಯಕ್ರಮ ನೀಡುವ ಚಂದನ್ ಶೆಟ್ಟಿ ಅವರ ಅಭಿಮಾನಿಗಳ ಸಂಖ್ಯೆ ಭಾರೀ ಜಾಸ್ತಿಯಾಗಿದೆ. ರಿಯಾಲಿಟಿ ಶೋ, ಸಿನಿಮಾಗಳಲ್ಲಿಯೂ ಅವರು ಬ್ಯುಸಿಯಾಗಿದ್ದಾರೆ. ಚಂದನ್ ಶೆಟ್ಟಿ ಅವರು ಯಾರೂ ನಿರೀಕ್ಷೆ ಮಾಡದ ಸಂಭಾವನೆ ಪಡೆದುಕೊಂಡಿದ್ದಾರೆ.

ಲಹರಿ ಮ್ಯೂಸಿಕ್ ಜೊತೆ ಒಪ್ಪಂದ ಮಾಡಿಕೊಂಡಿರುವ ಚಂದನ್ ಶೆಟ್ಟಿ 5 ಹಾಡುಗಳನ್ನು ಹಾಡಲಿದ್ದಾರೆ. ಈ ಹಾಡುಗಳ ಸಿದ್ಧತೆಯಲ್ಲಿ ತೊಡಗಿರುವ ಚಂದನ್ ಶೆಟ್ಟಿ ಅವರಿಗೆ ಅತಿ ದೊಡ್ಡ ಸಂಭಾವನೆ ದೊರೆತಿದೆ.

100 ರೂ. ಸಿಕ್ಕರೆ ಸಾಕು, ಒಂದು ದಿನ ಕಳೆಯಬಹುದು ಎನ್ನುವ ದಿನವಿತ್ತು. ಈಗ ಅದೇ ವ್ಯಕ್ತಿಗೆ 1 ಕೋಟಿ ರೂ. ಸಿಕ್ಕಿದೆ ಎಂದರೆ ಆಗುವ ಸಂತೋಷವೇ ಬೇರೆ. ಅದನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಏನೋ ಸಾಧನೆ ಮಾಡುತ್ತಾನೆ ಎಂದು ತಂದೆ ತಾಯಿ ನಂಬಿದ್ದರು. ಅವರಿಗೆ ಖುಷಿ ಇದೆ. ಇಂತಹ ಅವಕಾಶ ನೀಡಿದ ಲಹರಿ ಕಂಪನಿಗೆ ಧನ್ಯವಾದಗಳು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ