ಕವಿ

ಸಾಹಿತಿ ಕಾಮರೂಪಿ ಇನ್ನಿಲ್ಲ

53

ಕೋಲಾರ ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಎಂ.ಎಸ್.ಪ್ರಭಾಕರ (ಕಾಮರೂಪಿ) (87) ಇಂದು ಕೋಲಾರ ಕಠಾರಿಪಾಳ್ಯದ ಸ್ವಗೃಹದಲ್ಲಿ ವಯೋಸಹಜತೆಯಿಂದ ವಿಧಿವಶರಾದರು.
ಕೋಲಾರದಲ್ಲಿ ಹುಟ್ಟಿ ಬೆಳೆದು ಉಪನ್ಯಾಸಕರಾಗಿ ಸೇವೆ ಆರಂಭಿಸಿ ಪತ್ರಕರ್ತ ಅಂಕಣಕಾರರಾಗಿ ಹೆಸರು ಸಂಪಾದಿಸಿ ದ ಹಿಂದೂ ಪತ್ರಿಕೆಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿ ಖ್ಯಾತರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ನೀಗ್ರೋ ಜನಾಂಗದ ನೆಲ್ಸನ್ ಮಂಡೇಲಾ ಅವರನ್ನು ಸಂದರ್ಶನ ಮಾಡಿದ ಏಕೈಕ ಭಾರತೀಯ ಪತ್ರಕರ್ತ ಇವರಾಗಿದ್ದರು. ಕುದುರೆಮೊಟ್ಟೆ ಕಥಾ ಸಂಕಲನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಕೋಲಾರ ಜಿಲ್ಲಾ ಪತ್ರಕರ್ತರ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ದೇಹವನ್ನು ಅವರ ಇಚ್ಛೆಯಂತೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾನ ನೀಡಲು ಆತ್ಮೀಯರು ವ್ಯವಸ್ಥೆ ಮಾಡಿದ್ದರು.

ಶಿಕ್ಷಕರಾಗಿದ್ದ ತಂದೆ .ಎಸ್. ಸೂರಪ್ಪ ಹಾಗೂ ತಾಯಿ ಸುಬ್ಬಮ್ಮ ಅವರ 11 ಮಕ್ಕಳಲ್ಲಿ ಇವರು ಕೊನೆಯವರು

ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಎಂ.ಎಸ್.ಪ್ರಭಾಕರ (ಕಾಮರೂಪಿ) ಅವರ ನಿಧನಕ್ಕೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘವು ತೀವ್ರ ಸಂತಾಪ ಸೂಚಿಸಿದೆ.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ