ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವರ ಬೋಳುಮಂಡೆಯವನೆಂದು ಗೊತ್ತಾಗಿ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ವರ ರವಿ ಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ತಾನು ಭೇಟಿಯೇ ಆಗದ ಯುವತಿಯೊಂದಿಗೆ ಮದುವೆಯಾಗಲು ದೆಹಲಿಯಿಂದ 1 ಸಾವಿರ ಕಿ.ಮೀ ದೂರದಲ್ಲಿರುವ ಬಿಹಾರದ ಸುಗೌಲಿ ಗ್ರಾಮಕ್ಕೆ ಬಂದಿದ್ದರು.
ಹುಡುಗಿಯ ತಂದೆ ವರ ರವಿಕುಮಾರ್ ಅವರ ತಂದೆಯ ಮನೆಯಲ್ಲಿ ಮೂರು ಬಾರಿ ಉಳಿದುಕೊಂಡಿದ್ದ ಬಳಿಕ 1 ವರ್ಷ ಮುಂಚಿತವಾಗಿಯೇ ಕುಟುಂಬಸ್ಥರು ಮದುವೆಯನ್ನ ನಿಶ್ಚಯಿಸಿದ್ದರು. ನಿಗದಿಪಡಿಸಿದಂತೆ ಮದುವೆಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಅತಿಥಿಗಳು ಮದುವೆ ತಯಾರಿಯಲ್ಲಿ ತೊಡಗಿ, ಊಟೋಪಚಾರವೂ ನಡೆದಿತ್ತು.
ಆದ್ರೆ ಶಾಸ್ತ್ರ ಮಾಡುವಾಗ ವರ ರವಿಕುಮಾರ್ ತನ್ನ ಪೇಟವನ್ನು ತೆಗೆಯಬೇಕಿತ್ತು. ಹೀಗಾಗಿ ಅವರು ಪೇಟ ತೆಗೆದಿದ್ದು, ಮುಂದೆ ನಿಂತಿದ್ದ ವಧುಗೆ ಶಾಕ್ ಆಗಿತ್ತು. ತಾನು ಮದುವೆಯಾಗ್ತಿರೋ ಹುಡುಗ ಬಾಲ್ಡ್ ಆಗ್ತಿದ್ದಾನೆ ಎಂದು ಆಗಲೇ ವಧುವಿಗೆ ಗೊತ್ತಾಗಿದ್ದು. ಯಾಕಂದ್ರೆ ಅಲ್ಲಿಯವರೆಗೆ ಆಕೆ ರವಿಕುಮಾರ್ ಅವರನ್ನ ಫೋಟೋಗಳಲ್ಲಿ ಮಾತ್ರ ನೋಡಿದ್ದಳು.
ವರನ ಕೂದಲ ಉದುರುವಿಕೆಯನ್ನೇ ದೊಡ್ಡದಾಗಿ ಪರಿಗಣಿಸಿದ ವಧು ಸ್ಥಳದಲ್ಲೇ ಮದುವೆ ಕ್ಯಾನ್ಸಲ್ ಮಾಡಿದ್ದು, ಕುಟುಂಬಸ್ಥರು ಹಾಗೂ ಮದುವೆಗೆ ಬಂದಿದ್ದ ಅತಿಥಿಗಳು ಬೆರಗಾಗುವಂತೆ ಮಾಡಿದ್ದಾಳೆ. ಎರಡೂ ಕುಟುಂಬದವರು ಎಷ್ಟೇ ಹೇಳಿದ್ರೂ ವಧು ತನ್ನ ನಿರ್ಧಾರ ಬದಲಾಯಿಸಲು ಸಿದ್ಧಳಿರಲಿಲ್ಲ. ಆದ್ರೆ ವರ ರವಿಕುಮಾರ್ ಅಷ್ಟು ದೂರದಿಂದ ಬಂದು, ಮದುವೆಯಾಗಿಯೇ ಮನೆಗೆ ಹಿಂದಿರುಗಬೇಕು ಎಂದು ಸಂಕಲ್ಪ ಮಾಡಿದ್ದರು. ಹೀಗಾಗಿ ರವಿಕುಮಾರ್ ಕುಟುಂಬದವರು ಗ್ರಾಮ ಪಂಚಾಯ್ತಿಯ ಮೊರೆ ಹೋದ್ರು.
ಅವರು ಗ್ರಾಮದ ಬಡ ತರಕಾರಿ ವ್ಯಾಪಾರಿಯ ಮಗಳಾದ ನೇಹಾ ಕುಮಾರಿಯನ್ನು ಮದುವೆಯಾಗುವಂತೆ ಸೂಚಿಸಿದ್ದರು. ಹೀಗಾಗಿ ಮದುವೆ ಮುರಿದು ಬಿದ್ದ ಎರಡು ದಿನಗಳ ಬಳಿಕ ರವಿಕುಮಾರ್ ದೇವಸ್ಥಾನವೊಂದರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನೇಹಾ ಕುಮಾರಿ ಜೊತೆ ಮದುವೆ ಆಗಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವು ಹುಟ್ಟುವಾಗ ಒಬ್ಬರಾಗಿ ಈ ಪ್ರಪಂಚಕ್ಕೆ ಬರುತ್ತೇವೆ ಮತ್ತು ಸಾಯುವಾಗ ಒಬ್ಬರಾಗಿ ಸಾಯುತ್ತೇವೆ ಮತ್ತು ನಮ್ಮ ಸಾವನ್ನ ಯಾರಿಂದಲೂ ಕೂಡ ತಪ್ಪಿಸಲು ಸಾಧ್ಯವಿಲ್ಲ ಹಾಗೆ ನಮ್ಮ ನೋವನ್ನ ಯಾರು ಭರಿಸಲು ಕೂಡ ಸಾಧ್ಯವಿಲ್ಲ. ನಾವು ಕಷ್ಟದಲ್ಲಿ ಇದ್ದಾಗ ಒಂದು ಹಂತದ ತನಕ ಮಾತ್ರ ಯಾರಾದರೂ ಸಹಾಯ ಮಾಡಬಲ್ಲರು ಆದರೆ ಅದರಿಂದ ಆಚೆ ನಾವೇ ಹೋರಾಡಬೇಕು ಮತ್ತು ನಾವೇ ಬದುಕುವ ದಾರಿಯನ್ನ ಹುಡುಕಾಡಬೇಕು ಯಾಕೆ ಅಂದರೆ ಜೀವನ ಅನ್ನುವುದು ಪ್ರತಿ ಕ್ಷಣದ ಹೋರಾಟ. ಎಲ್ಲಾ ದಾರಿಗಳು ಮುಚ್ಚಿ ಹೋದಾಗ…
ಇತ್ತೀಚಿನ ದಿನಗಳಲ್ಲಿ ಗೋವುಗಳನ್ನು ಸಾಕುವ ಜಮಾನ ಕಡಿಮೆಯಾಗುತ್ತಾ ಬರುತ್ತಿದೆ. ಹೀಗಾಗಿ ಕೃಷಿಗೆ ಬೇಕಾದ ಗೊಬ್ಬರಕ್ಕಾಗಿ ಜನ ಅಲೆದಾಡುತ್ತಾರೆ. ಸಗಣಿಯನ್ನು ರಸಗೊಬ್ಬರವಾಗಿ ಕೃಷಿಗಳಿಗೆ ಬಳಸುವುದರಿಂದ ಸದ್ಯ ಇದಕ್ಕೆ ಬೇಡಿಕೆ ಇದೆ. ಇದರಂತೆಯೇ ಇದೀಗ ನಾಯಿಗಳ ಮಲಕ್ಕೂ ಬೇಡಿಕೆಯಿದೆ. ಹೌದು. ಪಿಲಿಫೈನ್ಸ್ ಶಾಲೆಯೊಂದರ ವಿದ್ಯಾರ್ಥಿಗಳು ಹೊಸ ಆವಿಷ್ಕಾರವೊಂದನ್ನು ಮಾಡಿದ್ದು, ಅದರಲ್ಲಿ ನಾಯಿಗಳ ಮಲದಿಂದಲೂ ಉಪಯೋಗವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ನಾಯಿಗಳ ಮಲಕ್ಕೂ ಹೆಚ್ಚಿನ ಬೇಡಿಕೆ ಬರಬಹುದಾದ ಸಾಧ್ಯತೆಗಳಿವೆ. ಸಿಮೆಂಟ್ ನೊಂದಿಗೆ ನಾಯಿ ಮಲವನ್ನು ಮಿಕ್ಸ್ ಮಾಡಿ ಇಟ್ಟಿಗೆ…
ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ್ದು, ಇದರಿಂದ ಒಳ್ಳೆದಾಯ್ತಲ್ಲ, ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ ಎಂದು ಪರೋಕ್ಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಕ್ಷೇತ್ರದ ಆಚಾರ, ಸಂಪ್ರದಾಯ ಪಾಲಿಸುವುದು ಮುಖ್ಯ. ಬ್ರಹ್ಮಚರ್ಯ, ಸಂಯಮ ಸಾಧಿಸಿ ವ್ರತಾಚರಣೆ ಮಾಡಿ ಕ್ಷೇತ್ರಕ್ಕೆ ತೆರಳುತ್ತಾರೆ. ಈಗೆಲ್ಲ ಬೆಳಗ್ಗೆ ಮಾಲೆ ಹಾಕಿ ಮಧ್ಯಾಹ್ನ ಸನ್ನಿಧಾನಕ್ಕೆ ಹೋಗುವ ಆಚಾರ ಇದೆ. ಹೀಗಾಗಿ ಇಂತಹ ಅಪಚಾರಗಳಾಗುತ್ತಿದೆಎಂದು ಡಾ. ವೀರೇಂದ್ರ ಹೆಗ್ಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆಯರಾದ ಬಿಂದು ಮತ್ತು ಕನಕ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ ಬುಧವಾರ…
ಇನ್ನೇನು ಲೋಕಸಭಾ ಚುನಾವಣಾ ಹತ್ತಿರ ಆಗುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ. ಇದೇ ಸಮಯದಲ್ಲಿ ದೇಶದ ಅತ್ಯಂತ ಜನಪ್ರಿಯ ರಾಜಕಾರಣಿ ಯಾರೆಂದು ಸಮೀಕ್ಷೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ರಾಜಕಾರಣಿ ಎಂದು ಜನರ ಅಭಿಪ್ರಾಯವಾಗಿದೆ. ರಾಜಕೀಯ ತಂತ್ರರೂಪಕ ಪ್ರಶಾಂತ್ ಕಿಶೋರ್ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(ಐ-ಪ್ಯಾಕ್) ನಡೆಸಿದ ಸಮೀಕ್ಷೆಯಲ್ಲಿ ದೇಶದ 712 ಜಿಲ್ಲೆಗಳ 57 ಲಕ್ಷ ಮಂದಿ ಮತ ನೀಡಿದ್ದು ಪ್ರಧಾನಿ ಮೋದಿ ಅತಿ ಜನಪ್ರಿಯ ಮತ್ತು…
ಈ ಬಾರಿಯ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಹಾಸನ ಮೊದಲ ಸ್ಥಾನ ಪಡೆದಿದ್ದು, ಈ ಮೂಲಕ ಜಿಲ್ಲೆ ಹೊಸ ದಾಖಲೆ ಬರೆದಿದೆ. ಹೌದು. ಫಲಿತಾಂಶದಲ್ಲಿ ಅರೆ ಮಲೆನಾಡು ರಾಜ್ಯದಲ್ಲೇ ನಂಬರ್ 1 ಸ್ಥಾನ ಪಡೆದಿದೆ. ಕಳೆದ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 7ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ಹಾಸನ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹಿಂದಿಕ್ಕಿದೆ. ಹಾಸನ ಪ್ರಥಮ ಸ್ಥಾನದ ಜೊತೆಗೆ ಹಾಸನದ ಇಬ್ಬರು ವಿದ್ಯಾರ್ಥಿಗಳು…
ಒಂದೇ ಒಂದು ದಿನ ಸ್ನಾನ ಮಾಡದಿದ್ದರೂ ಕೆಟ್ಟ ವಾಸನೆ ಬರುತ್ತದೆ. ಇನ್ನು 60 ವರ್ಷಗಳು ಎಂದರೆ ಹೇಗಿರುತ್ತದೆ!? ಇಷ್ಟಕ್ಕೂ ಅಷ್ಟು ವರ್ಷಗಳ ಕಾಲ ಸ್ನಾನ ಮಾಡದೆ ಯಾರಾದರೂ ಇರುತ್ತಾರಾ…? ನಿಜವಾಗಿಯೂ ಅಂತಹವರು ಇದ್ದರೆ ಅವರ ಬಳಿ ಹೋಗಬೇಕೆಂದರೇನೇ ಸಾಹಸ ಮಾಡಬೇಕು.