ಸ್ಪೂರ್ತಿ

ಪಂಕ್ಚರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಕುಸುಮ ಹಳ್ಳಿ ಹುಡುಗಿ ದ್ವಿತೀಯ ಪಿಯುಸಿನಲ್ಲಿ ರಾಜ್ಯಕ್ಕೆ ಪ್ರಥಮ..!

729

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ ಚಿತ್ರದುರ್ಗ ಕೊನೆಯ ಸ್ಥಾನ ಪಡೆದು ಕಳಪೆ ಫಲಿತಾಂಶ ಪಡೆದ ಜಿಲ್ಲೆಯಾಗಿದೆ.

ಈ ಸಲದ ದ್ವಿತೀಯ ಪರೀಕ್ಷೆಯಲ್ಲಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಪಂಕ್ಚರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಕುಸುಮ ಎಂಬುವವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ವಿಶೇಷವಾಗಿದೆ.

ಬಳ್ಳಾರಿಯ ಕೊಟ್ಟೂರಿನಲ್ಲಿ ಸೈಕಲ್ ಶಾಪ್‌ನಲ್ಲಿ ನಡೆಸುತ್ತಿದ್ದ ದೇವೇಂದ್ರಪ್ಪ ಮತ್ತು ಜಯಮ್ಮ ಎಂಬುವವರ ಪುತ್ರಿ ಕುಸುಮಾ ಸೈಕಲ್ ಶಾಪ್‌ನಲ್ಲಿ ಪಂಕ್ಚರ್ ಹಾಕುವ ಕೆಲಸ ಕೂಡ ಮಾಡುತ್ತಿದ್ದು, ಕುಸುಮ ಉಜ್ಜಿನಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಅತ್ಯುತ್ತಮ ದರ್ಜೆ ಗಳಿಸಿದ್ದಾರೆ. ಆ ಮೂಲಕ ತನ್ನ ತಂದೆ ತಾಯಿಗಳಿಗೆ ಹೆಮ್ಮೆ ತಂದಿದ್ದಾರೆ.

ಕೊಟ್ಟೂರಿನ ಇಂದು ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಕುಸುಮ ಪ್ರತಿದಿನ ಕಾಲೇಜಿಗೆ ಹೋಗಿ ಬಂದು ತನ್ನ ವಿಧ್ಯಾಭ್ಯಾಸದ ಸಮಯದಲ್ಲೇ ತಂದೆಗೆ ಸಹಾಯ ಮಾಡುವ ಸಲುವಾಗಿ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.

ಕಡಿಮೆ ಆದಾಯದಲ್ಲಿ ಸೈಕಲ್ ಶಾಪ್ ನಡೆಸಿಕೊಂಡು ಜೀವನ ಸಾಗುತ್ತಿರುವ ದೇವೇಂದ್ರಪ್ಪನವರಿಗೆ ೫ ಜನ ಪುತ್ರಿಯರಲ್ಲಿ ಕುಸುಮಾ ಕೂಡ ಒಬ್ಬರು. ಕಡಿಮೆ ಆದಾಯ ಒಂದಿದ್ದರೂ ಸಹ ಕುಸುಮಾರವರಿಗೆ ಓದಲು ಯಾವುದೇ ರೀತಿಯ ಬಡತನದ ಅಡ್ಡಿ ಬರಲಿಲ್ಲ.

ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಬಂದಿರುವುದರ ಬಗ್ಗೆ ಸಂತಸ ಹಂಚಿಕೊಂಡಿರುವ ಕುಸುಮಾ ಬಿಡುವಿನ ವೇಳೆಯಲ್ಲಿ ಸೈಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದು ಸಮಯದ ಮಿತೀ ಇಲ್ಲದೆ ತನಗೆ ಇಷ್ಟವಾದ ವಿಷಯ ಓದುತ್ತಿದ್ದೆ.ಜೊತೆಗೆ ತಂದೆ ತಾಯಿ ಮತ್ತು ನನ್ನ ಗುರುಗಳ ಆಶಿರ್ವಾದದಿಂದ ಇದು ಸಾಧ್ಯವಾಗಿದೆ ಎಂದು ಕುಸುಮ ಹೇಳುತ್ತಾರೆ.

ಕಲಾ ವಿಭಾಗದಲ್ಲಿ 600 ಕ್ಕೆ ಬರೋಬ್ಬರಿ 594 ಅಂಕಗಳನ್ನು ಪಡೆದು ಪ್ರಥಮ rank ಪಡೆದಿದ್ದಾರೆ ಕುಸುಮ ಉಜ್ಜಿನಿ. ಇವರು ಪಿಯುಸಿ ಕಲಿತ ಇಂದು ಕಾಲೇಜಿನ ಒಟ್ಟು 9 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 rank ಪಟ್ಟಿಯಲ್ಲಿದ್ದಾರೆ. ಕಳೆದ ಕೆಲ ವರ್ಷದಿಂದಲೂ ಕಲಾ ವಿಭಾಗದಲ್ಲಿ ಇಂದು ಕಾಲೇಜಿನ ವಿದ್ಯಾರ್ಥಿಗಳೇ ರಾಜ್ಯಕ್ಕೆ ಟಾಪ್.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬೆಂಗಳೂರಲ್ಲಿ ಬಿದ್ದ ಮಳೆಗೆ, ಬಿದ್ದಿದ್ದು ಬರೋಬ್ಬರಿ 83 ಮರಗಳು…!

    ಬೆಂಗಳೂರು, ಜೂನ್ 7: ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಅರ್ಧಗಂಟೆ ಮಳೆಗೆ ವಿವಿಧೆಡೆ ಒಟ್ಟು 83 ಮರಗಳು ಧರೆಗುರುಳಿವೆ. ರಾಜರಾಜೇಶ್ವರಿನಗರ ಹಾಗೂ ಬಸವನಗುಡಿಯಲ್ಲಿ ಅತಿ ಹೆಚ್ಚು ಮರಗಳು ಬಿದ್ದಿದೆ ಅತಿ ಹೆಚ್ಚು ಹಾನಿಯೂ ಉಂಟಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎಲ್ಲಿ ನೋಡಿದರೂ ಮರ ಉರುಳಿರುವುದು, ಟ್ರಾನ್ಸ್‌ಫಾರ್ಮರ್ ವಾಹನಗಳ ಮೇಲೆ ಬಿದ್ದಿರುವುದು, ವಿದ್ಯುತ್ ಕಂಬಗಳು ಧರೆಗುರಳಿರುವುದು, ಟ್ರಾಫಿಕ್ ಜಾಮ್ ನೋಡಿ ಅರ್ಧ ಗಂಟೆ ಮಳೆ ಎಷ್ಟೊಂದು ಅವಾಂತರವನ್ನು ಸೃಷ್ಟಿಸಿದೆ. ಬಸವನಗಗುಡಿ, ಕೆಂಗೇರಿ, ರಾಜರಾಜೇಶ್ವರಿನಗರ, ಗಿರಿನಗರ ಪ್ರದೇಶದಲ್ಲಿ ಅತಿ ಹೆಚ್ಚು…

  • Village

    ನಿಮ್ಮ ಹಳ್ಳಿಯಲ್ಲಿ ಕರೊನಾ ಜಾಸ್ತಿ ಆಗಲು ಈ ಕಾರಣ ಇರಬಹುದು.

    ಕೊರೊನಾ ಈ ದೇಶಕ್ಕೆ ಕಾಲಿಟ್ಟಾಗ ಹಳ್ಳಿಗಳು ಕೊರೊನಾ ವೈರಸ್ ನಿಂದ ಬಹುದೂರದಲ್ಲಿದ್ದವು. ಪೇಟೆಗಳಲ್ಲಿ ಮಾತ್ರ ಜನ ಕೊರೊನಾಕ್ಕೆ ಬಲಿ ಆಗ್ತಾ ಇದ್ರು. ಆದ್ರೆ ಕೊರೊನಾ ಎರಡನೇ ಅಲೆ ಹಳ್ಳಿಗರನ್ನು ತೀವ್ರವಾಗಿ ಬಾಧಿಸುತ್ತಿದೆ. ಇದಕ್ಕೆ ಹಳ್ಳಿಗರ ಸ್ವಯಂಕೃತ ಅಪರಾಧವೇ ಕಾರಣವಾಗಿದೆ.

  • ಆರೋಗ್ಯ

    ಸೌತೆಕಾಯಿಯ ಜೂಸ್ ಕುಡಿಯೋದ್ರಿಂದ, ನಮ್ಮ ದೇಹಕ್ಕೆ ಏನೆಲ್ಲಾ ಉಪಯೋಗಗಳು ಇವೆ ಗೊತ್ತಾ..?

    ದಿನನಿತ್ಯ ಬೆಳಗಿನ ಜಾವದಲ್ಲಿ ಖಾಲಿ ಹೊಟ್ಟೆಯಲ್ಲಿ ಒ೦ದು ಲೋಟದಷ್ಟು ತಾಜಾ ಸೌತೆಕಾಯಿಯ ರಸವನ್ನು ಕುಡಿಯಲು ಪ್ರಯತ್ನಿಸಿದರೆ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಹಾಗು ನಿಮ್ಮ ಶರೀರದ ತೂಕನು ಕಡಿಮೆ ಮಾಡಿಕೊಳ್ಳಬಹುದು.

  • ಸಿನಿಮಾ

    ರಾಜಮೌಳಿ ಮುಂದಿನ ಚಿತ್ರದಲ್ಲಿ ಕನ್ನಡದ ನಾಯಕ ನಟ! ಯಾರು ಗೊತ್ತೇ???

    ಸಾವಿರಾರು ಕೋಟಿ ಹಣ ಗಳಿಕೆಯ ಜೊತೆ ವಿಶ್ವದಾದ್ಯಂತ ಅದ್ಭುತ ಯಶಸ್ಸು ಗಳಿಸಿದ ಬಾಹುಬಲಿ-2 ಚಿತ್ರದ ನಿರ್ದೆಶಕ ಎಸ್.ಎಸ್.ರಾಜಮೌಳಿ ತಮ್ಮ ಮುಂದಿನ ಚಿತ್ರಕ್ಕೆ ಸ್ಯಾಂಡಲ್’ವುಡ್ ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.

  • ಆರೋಗ್ಯ, ಉಪಯುಕ್ತ ಮಾಹಿತಿ

    ‘ಒಣ ದ್ರಾಕ್ಷಿ’ಯಲ್ಲಿರುವ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಒಣದ್ರಾಕ್ಷಿ ಎಂದರೆ ಒಣಗಿಸಿದ ದ್ರಾಕ್ಷಿ. ಒಣದ್ರಾಕ್ಷಿಯನ್ನು ವಿಶ್ವದ ಹಲವು ಪ್ರದೇಶಗಳಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಅಡುಗೆ, ಬೇಕಿಂಗ್ ಮತ್ತು ಮದ್ಯ ತಯಾರಿಕೆಯಲ್ಲಿ ಬಳಸಬಹುದು.

  • ಸಿನಿಮಾ

    ನಮ್ಮ ಮೈಯಲ್ಲಿರುವ ರಕ್ತ ತೆಗೆದು ನಿಮ್ಮ ಕಾಲು ತೊಳಿಬೇಕು ಎಂದ ದರ್ಶನ್..!

    ಇಂದು ನೀವು ತೋರಿಸುತ್ತಿರುವ ಪ್ರೀತಿಗೆ ನಮ್ಮ ಮೈಯಲ್ಲಿರುವ ರಕ್ತವನ್ನು ತೆಗೆದು ನಿಮ್ಮ ಕಾಲನ್ನು ತೊಳೆದರೂ ಅದು ಕಡಿಮೆಯೇ ಎಂದು ನಟ ದರ್ಶನ್ ಅವರು ಅಭಿಮಾನಿಗಳಿಗೆ ಹೇಳಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ದರ್ಶನ್ ನಮ್ಮ ಬಗ್ಗೆ ಏನೇ ಮಾತಾಡಿದ್ರೂ ನಾವು ಕೋಪ ಮಾಡ್ಕೊಳಲ್ಲ, ಬೇಜಾರಿಲ್ಲ, ನೊಂದುಕೊಳ್ಳಲ್ಲ. ನಾವು ಅಂಬರೀಶ್​ ಅವರಿಗಾಗಿ, ಸುಮಲತಾ ಅಮ್ಮನಿಗಾಗಿ ಬಂದಿದ್ದೇವೆ ಎಂದು ನಟ ದರ್ಶನ ಹೇಳಿದರು. ಮಂಡ್ಯದ ಸಿಲ್ವರ್​ ಜ್ಯುಬಿಲಿ ಪಾರ್ಕ್​ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ದರ್ಶನ್,…