ಸುದ್ದಿ

ಈ ಸಮ್ಮಿಶ್ರ ಸರ್ಕಾರಕ್ಕಿಂತ ಕುಮಾರಸ್ವಾಮಿ ಸರ್ಕಾರ ಸಾವಿರ ಪಟ್ಟು ಒಳ್ಳೆಯದು – ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ಎಂ.ಬಿ ಪಾಟೀಲ್- ಇದಕ್ಕೆ ನಿಮ್ಮ ಉತ್ತರ.!

74

ಸಮ್ಮಿಶ್ರ ಸರ್ಕಾರದಲ್ಲಿ ತಪ್ಪುಗಳಾಗಿವೆ ಅದು ಜೆಡಿಎಸ್ ಸರ್ಕಾರದ ಸಚಿವರು ಹಾಗೂ ಶಾಸಕರಿಂದ ಆಗಿವೆ ಇದನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಬುಧವಾರ ಹೇಳಿದರು. ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರ ನಿನ್ನೆ ಹದ್ದು ಗಿಣಿ ಟ್ವೀಟ್​ಗೆ ಬಗ್ಗೆ ಕಾಗವಾಡ ಮತಕ್ಷೇತ್ರದ ಮಂಗಸೂಳಿ ಗ್ರಾಮದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಇದ್ದಾಗೊಂದು, ಇಲ್ಲದಾಗೊಂದು ಹೇಳಿಕೆ ಸರಿಯಲ್ಲ, 14 ತಿಂಗಳು ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಮಾತನ್ನು ಹೇಳಬೇಳಕಿತ್ತು. ಆಗ ಹೇಳಿದರೆ ಒಂದು ಬೆಲೆ ಇರ್ತಿತ್ತು. ಆದರೆ, ಅವರು ಈಗ ಹೇಳುವುದನ್ನು ಬಿಡಬೇಕು. ನಮ್ಮ ಬೆಂಬಲದಿಂದ ಸರ್ಕಾರ ರಚಿಸಿದ್ದಾರೆ ಎಂದು ಕಾಂಗ್ರೆಸ್​ ಮುಖಂಡ ಎಂಬಿ ಪಾಟೀಲ್​ ಅವರು ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಇನ್ನು ಬಿಜೆಪಿ ಸರ್ಕಾರ ನೆರೆ ಪರಿಹಾರಕ್ಕೆ ಒಂದೇ ಒಂದು ರೂಪಾಯಿ ಹಣ ಇಲ್ಲಿತನಕ ಬಿಡುಗಡೆ ಮಾಡಿಲ್ಲ, ಈ ಸರ್ಕಾರ ನೋಡಿದ್ರೆ ಕುಮಾರಸ್ವಾಮಿ ಸರ್ಕಾರ ಸಾವಿರ ಪಟ್ಟು ಒಳ್ಳೆಯದು ಎಂದ ಅವರು, ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಏಜೆಂಟ್ ಆಗಿ ಕಾರ್ಯ ನಿರ್ವಸುತ್ತಿರುವುದು ನಿಶ್ಚಿತವಾಗಿದೆ ಜೊತೆಗೆ ಇಡಿ, ಐಟಿ ಕೂಡ ಕೇಂದ್ರದ ಕೈಗೊಂಬೆಯಾಗಿದೆ ಎಂದರು.

ಅಂತೆಯೇ ಇತ್ತೀಚಿಗೆ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರದ ಅನುದಾನ ಬೇಡ ಎನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತೇಜಸ್ವಿ ಸೂರ್ಯ ಒಬ್ಬ ಮೂರ್ಖ ಮನುಷ್ಯ. ಸೋಸಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಹೋಗುತ್ತಾರೆ ಎಂದು ಎಂಬಿ ಪಾಟೀಲ್​ ಅವರು ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಅಷ್ಟೇ ಅಲ್ಲದೇ, ಕೇಂದ್ರ ಸರ್ಕಾರ, ವಿಪತ್ತು ಪರಿಹಾರ ಎಂದರೆ ಏನು ಗೊತ್ತಿದೆಯಾ(?) ಪ್ರಬದ್ಧತೆ ಇಲ್ಲದವರು. ರಾಜ್ಯದ ಸಂಸದರಾಗಿ ಹೆಚ್ಚಿನ ಅನುದಾನ ತರುತ್ತೇನೆ ಎಂದು ಹೇಳಬೇಕು. ಅದು ಬೆಳಗಾವಿಯಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ, ಆದಷ್ಟು ಬೇಗನೆ ಸಂತ್ರಸ್ಥರಿಗೆ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಇದು ಕಪ್ಪು ಚುಕ್ಕೆಯಾಗುತ್ತದೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಆಗ್ರಹಿಸಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನಿಮ್ಮ ಇಪಿಎಫ್‌ ಬಡ್ಡಿ, ಬ್ಯಾಲೆನ್ಸ್ ಚೆಕ್ ಮಾಡುವ ಸುಲಭ ಉಪಾಯಗಳು,.!!

    ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದಡಿ ಕೆಲಸ ಮಾಡುತ್ತಿರುವ  ಕಾರ್ಮಿಕ ಭವಿಷ್ಯ ನಿಧಿ ಇಲಾಖೆ  ಇಪಿಎಫ್‌ ಯೋಜನೆಯ ಉಸ್ತುವಾರಿ ನೋಡಿಕೊಳ್ಳುತ್ತದೆ. ಇಪಿಎಫ್‌ ಖಾತೆ ಹೊಂದಿರುವ ಪ್ರತಿ ಕಾರ್ಮಿಕರ  ಸಂಬಳದಲ್ಲಿ ಪ್ರತಿ ತಿಂಗಳು ಇಪಿಎಫ್‌ ನಿಧಿಗಾಗಿ ಸ್ವಲ್ಪ  ಹಣ ಕಡಿತ ಮಾಡಿಕೊಳ್ಳಲಾಗುತ್ತದೆ. ಆದರೆ, ಪ್ರತಿ ತಿಂಗಳೂ ತನ್ನ ಸಂಬಳದಲ್ಲಿ ಕಡಿತಗೊಂಡ ಹಣ ಇಪಿಎಫ್‌ ಖಾತೆಗೆ ಸಂದಾಯವಾಗುತ್ತಿದೆಯೇ? ಇಪಿಎಫ್‌ ನಿಧಿಗೆ ನಿರ್ದಿಷ್ಟ ಬಡ್ಡಿಸಂದಾಯವಾಗುತ್ತಿದೆಯೇ ಎಂಬುದನ್ನು ತಿಳಿಯಲು ಮತ್ತು  ಇಪಿಎಫ್ ಖಾತೆಯ ಬ್ಯಾಲನ್ಸ್ ಹಣ ಚೆಕ್ ಮಾಡಲು  ಹಲವಾರು ವಿಧಾನಗಳಿವೆ….

  • ಸುದ್ದಿ

    ಕಾರ್ನಾಡ್ ಅವರ ಕೊನೆಯ ಇಚ್ಚೆಯಂತೆ ಅಂತ್ಯಸಂಸ್ಕಾರ…….

    ಗಿರೀಶ್ ಕಾರ್ನಾಡ್ ಅವರ ಆಸೆಯಂತೆ ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ಸಿದ್ಧತೆ ನಡೆಸುತ್ತಿದ್ದಾರೆ. ನನ್ನ ಅಂತ್ಯ ಸಂಸ್ಕಾರಕ್ಕೆ ಯಾವುದೇ ರಾಜಕಾರಣಿ, ಸಾರ್ವಜನಿಕರು ಬರಬಾರದು. ಸರ್ಕಾರಿ ಗೌರವ, ಸರ್ಕಾರಿ ಜಾಗದ ಅಗತ್ಯವಿಲ್ಲ. ಕುಟುಂಬದ ಸದಸ್ಯರು ಮಾತ್ರ ಬರಬೇಕು. ಯಾವುದೇ ವಿಧಿವಿಧಾನವನ್ನು ಅನುಸರಿಸಬಾರದು. ಅಂತಿಮ ನಮನವನ್ನು ಸಲ್ಲಿಸಬಾರದು ಎಂದು ಗಿರೀಶ್ ಕಾರ್ನಾಡ್ ತಮ್ಮ ಪತ್ನಿ ಸರಸ್ವತಿ ಜೊತೆ ಹೇಳಿದ್ದರು. ಮನೆ ಬಳಿ ಯಾರೂ ಬಂದು ನಮನ ಸಲ್ಲಿಸಬಾರದು. ಯಾವುದೇ ಸಂಪ್ರದಾಯ, ವಿಧಿ ವಿಧಾನ ಇಲ್ಲದೇ ಸಂಸ್ಕಾರ ಮಾಡಬೇಕು ಎಂದು ಕೊನೆಯ…

  • ಸಿನಿಮಾ, ಸುದ್ದಿ

    ನೀವೇನು ಹರಿಶ್ಚಂದ್ರನ ತುಂಡುಗಳಾ?ಕೆಟ್ಟ ದಾಗಿ ಮಾತನಾಡಿದ್ರೆ ಸುಮ್ಮ ನಿರುವುದಿಲ್ಲ ಎಂದು ಟೀಕೆ ಮಾಡಿದವರಿಗೆ ಖಡಕ್ ಎಚ್ಚರಿಕೆ ಕೊಟ್ಟ ರಾಕಿ ಭಾಯ್…

    ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯವರ ಸ್ಪರ್ಧೆಯಿಂದಾಗಿ ಇಡೀ ದೇಶದ ಗಮನ ಸೆಳೆದಿದೆಮಂಡ್ಯ ಲೋಕಸಭಾ ಕ್ಷೇತ್ರ. ಅದರಲ್ಲೂ ಸುಮಲತಾ ಪರವಾಗಿ ಸ್ಟಾರ್ ನಟರಾದ ದರ್ಶನ್ ಮತ್ತು ಯಶ್ ಪ್ರಚಾರ ನಡೆಸುತ್ತಿದ್ದು ಸಿಎಂ ಸೇರಿದಂತೆ ಜೆಡಿಎಸ್ ನಾಯಕರು ಸುಮಲತಾ ಬೆಂಬಲಿಗರಾದ ಸ್ಟಾರ್ ನಟರ ಮೇಲೆ ವಾಗ್ದಾಳಿಯನ್ನೇ ನಡೆಸಿದ್ದಾರೆ.  ಸ್ಟಾರ್ ನಟರನ್ನು ಕಳ್ಳೆತ್ತು ಎಂದು ಸಿಎಂ ಟೀಕಿಸಿದ್ದಕ್ಕೆ ಯಶ್ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಚಾರದ ವೇಳೆ ಮಾತನಾಡಿದ ಯಶ್, ಯಾರ…

  • ಜ್ಯೋತಿಷ್ಯ

    ನಿಮ್ಮ ಹೆಸರು A ಅಕ್ಷರದಿಂದ ಆರಂಭ ವಾಗಿದ್ದರೆ ನಿಮ್ಮ ಗುಣ ನಡೆತೆ ಹೇಗಿರುತ್ತೆ ನೋಡಿ…

    ಹೆಸರು ಹಾಗೂ ವ್ಯಕ್ತಿ ಮಧ್ಯೆ ಒಂದು ಬಂಧವಿದೆ. ಅನೇಕ ಗಣ್ಯರು, ಸೆಲೆಬ್ರಿಟಿಗಳು ಯಶಸ್ಸಿಗಾಗಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಹೆಸ್ರು ಪ್ರತಿಯೊಬ್ಬ ವ್ಯಕ್ತಿ ಮೇಲೂ ಪರಿಣಾಮ ಬೀರುತ್ತದೆ. ಪ್ರತಿಯೊಂದು ಅಕ್ಷರಕ್ಕೂ ತನ್ನದೇ ಆದ ಶಕ್ತಿ ಹಾಗೂ ಗುಣಲಕ್ಷಣವಿದೆ. ನಿಮ್ಮ ಹೆಸ್ರು ಯಾವ ಅಕ್ಷರದಿಂದ ಶುರುವಾಗ್ತಿದೆ ಎಂಬುದರ ಮೇಲೆ ನಿಮ್ಮ ಸ್ವಭಾವವನ್ನು ಹೇಳಬಹುದು. ಕೆಲ ಅಕ್ಷರಗಳನ್ನು ಪ್ರಭಾವಶಾಲಿ ಎನ್ನಲಾಗುತ್ತದೆ. ಎ, ಜೆ, ಒ ಮತ್ತು ಎಸ್ ಅಕ್ಷರಗಳು ಪ್ರಭಾವಶಾಲಿಯಾಗಿರುತ್ತವೆ. ನಿಮ್ಮ ಅಕ್ಷರ ಎ ನಿಂದ ಶುರುವಾಗ್ತಿದ್ದರೆ ನಿಮ್ಮ ಸ್ವಭಾವದ ಬಗ್ಗೆ…

  • inspirational

    Célerus Casino : Démarches de dépôt

    Dans l’univers des casinos en ligne, la simplicité et la rapidité des dépôts constituent un facteur décisif pour les joueurs. Le celsius casino se démarque par la diversité de ses options, permettant à chacun de choisir la méthode qui lui convient le mieux, qu’il s’agisse de cartes bancaires, de crypto-monnaies ou de portefeuilles électroniques. Les…