ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆತ ಸಾಫ್ಟವೇರ್ ಟೆಕ್ಕಿ. ಒಳ್ಳೆಯ ಪ್ಯಾಕೇಜ್‌ನ ಸಂಬಳ. ಪ್ರತಿಷ್ಠಿತ ಶಾಲೆಯಲ್ಲಿ ಓದುವ ಇಬ್ಬರು ಮುದ್ದಾದ ಮಕ್ಕಳ ಸಂಸಾರ. ಸಕಲ ಆಧುನಿಕ ಸೌಲಭ್ಯಗಳಿರುವ ಅಪಾರ್ಟ್‌ಮೆಂಟ್‌ನಲ್ಲಿ ಬ್ಯಾಂಕ್ ಸಾಲದಿಂದ ಖರೀದಿಸಿದ ಮೂರು ಬೆಡ್ ರೂಮ್‌ನ ಐಷಾರಾಮಿ ಫ್ಲ್ಯಾಟ್.
ಸದಾ ಚಟುವಟಿಕೆಯಿಂದ, ನಗುವಿನಿಂದ ತುಂಬಿರುತ್ತಿದ್ದ ಮನೆಯಲ್ಲಿ ಇತ್ತೀಚೆಗೆ ಸ್ವಲ್ಪ ಆತಂಕ ಕಾಣುತ್ತಿದೆ. ಮಕ್ಕಳ ವಿದ್ಯಾಭ್ಯಾಸ, 30-40 ಲಕ್ಷದಷ್ಟಿರುವ ಗೃಹಸಾಲ ಅವನನ್ನು ಅಣಕಿಸುತ್ತಿವೆ.
ಸಹೋದ್ಯೋಗಿಗಳು ಬಿಟ್ಟು ಹೋದ ತಿರುಗುವ ಕುರ್ಚಿಗಳು ಅವನನ್ನು ಬೆವರಿಸುತ್ತವೆ. ತನ್ನ ಕುರ್ಚಿಯೂ ಹೀಗೆ ಬರಿದಾಗಬಹುದೇನೋ ಎನ್ನುವ ಅವ್ಯಕ್ತ ಭಯ ಅವನನ್ನು ಕಾಡಲು ಶುರು ಮಾಡಿದೆ.
ಸಂಜೆ ಆಫೀಸು ಮುಗಿಯುವಾಗ ಬರುವ ಇ ಮೇಲ್ ತೆರೆಯುವಾಗ ಕೈ ನಡುಗುತ್ತದೆ. ಹಾಗೆಯೇ ಮುಂಜಾನೆ ಆಫೀಸಿನಲ್ಲಿ ಲಾಗ್ ಇನ್ ಮಾಡುವಾಗ ಎಸಿ ಕ್ಯಾಬಿನ್‌ನಲ್ಲಿಯೂ ಬೆವರುತ್ತಾನೆ.
ಇದು ಇವನೊಬ್ಬನ ಕಥೆಯಲ್ಲ. ಭಾರತದ ಐಟಿ ಉದ್ಯಮದಲ್ಲಿ ಸುಮಾರು 13,000 ಕಂಪನಿಗಳಲ್ಲಿ ದುಡಿಯುವ 28 ಲಕ್ಷ ಟೆಕ್ಕಿಗಳು ನೇರವಾಗಿ ಮತ್ತು ಇದರ ಮೂಲಕ ಪರೋಕ್ಷವಾಗಿ ಕೆಲಸ ಮಾಡುವ 89 ಲಕ್ಷ ಜನರು ಎದುರಿಸುತ್ತಿರುವ ಭಯ, ಆತಂಕ.
ಬೆಂಗಳೂರು ನಗರವೊಂದರಲ್ಲೇ ಸುಮಾರು 5,000 ಟೆಕ್ ಕಂಪನಿಗಳಿವೆ. ಇತ್ತೀಚೆಗಿನ ದಿನಗಳಲ್ಲಿ ಇನ್ ಫೋಸಿಸ್, ವಿಪ್ರೋ, ಟೆಕ್ ಮಹೀಂದ್ರ, ಕಾಗ್ನಿಜೆಂಟ್ ಮತ್ತು ಐಬಿಎಂನಂಥ ಕಂಪನಿಗಳು ಸುಮಾರು 58,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿವೆ ಎಂದು ಹೇಳಲಾಗುತ್ತಿದ್ದು, ಈ ಹಾದಿಯಲ್ಲಿ ಇನ್ನೂ ಕೆಲವು ಕಂಪನಿಗಳು ಇವೆಯಂತೆ.
ಹಾಗೆಯೇ ಈ ದೊಡ್ಡ ಕಂಪನಿಗಳ ಹಾದಿಯಲ್ಲಿಯೇ ಸಣ್ಣ ಸಣ್ಣ ಕಂಪನಿಗಳು ಇನ್ನೂ ದೂರ ಸಾಗಿದರೆ ಆಶ್ಚರ್ಯವಿಲ್ಲ.
ಈ ಕಂಪನಿಗಳ ಪ್ರಕಾರ ಇದು ಸಾಧಿಸಿದವರನ್ನು ಉಳಿಸಿಕೊಳ್ಳುವ ಮತ್ತು ಸಾಧಿಸದವರನ್ನು ಕೆಲಸದಿಂದ ತೆಗೆದು ಹಾಕುವ ವಾರ್ಷಿಕ ಪ್ರಕ್ರಿಯೆಯಷ್ಟೆ. ಇದು ಸಿಬ್ಬಂದಿ ವೇತನದ ಬಿಲ್‌ನ್ನು ಕಡಿಮೆ ಮಾಡುವ ಮತ್ತು ನಿರ್ವಹಣಾ ವೆಚ್ಚವನ್ನು ತಗ್ಗಿಸಲು shifting to automation, robotic, manning legacy system to digital and cloud ಎನ್ನುವ ಸತ್ಯವನ್ನು ಮರೆಮಾಚಲಾಗುತ್ತದೆ ಎಂದು ಸಾಫ್ಟವೇರ್ ತಜ್ಞರು ಅಭಿಪ್ರಾಯ ಪಡುತ್ತಾರೆ.
ಟೆಕ್ಕಿಗಳ ಉದ್ಯೋಗ ಉಳಿಯಬೇಕಾದರೆ ಅವರು ತಮ್ಮ ತಾಂತ್ರಿಕ ಕೌಶಲ ಮತ್ತು ವಿದ್ಯಾರ್ಹತೆಯನ್ನು ಹೆಚ್ಚಿಸಿಕೊಬೇಕಾದ ಅನಿವಾರ್ಯ ಉಂಟಾಗಿದೆ.
ಸಾಫ್ಟ್‌ವೇರ್ ಉದ್ಯಮದಲ್ಲಿನ ಕಳೆದ ಒಂದೆರಡು ವರ್ಷಗಳ ಆಗುಹೋಗುಗಳನ್ನು ಮತ್ತು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂಥ ಪರಿಸ್ಥಿತಿಯ ಆಗಮನದ ಸಂಕೇತ ಮತ್ತು ಸೂಚನೆಗಳು ಎದ್ದು ಕಾಣುತ್ತಿದ್ದವು ಮತ್ತು ಅದನ್ನು ಗೋಡೆಯ ಮೇಲೆ ನಿಚ್ಚಳವಾಗಿ ಬರೆಯಲಾಗಿತ್ತು ಕೂಡಾ.
ಆದರೆ, ವ್ಯಾಧಿ ಪಸರಿಸಿ ಹತೋಟಿ ತಪ್ಪುವ ಹಂತಕ್ಕೆ ಬಂದಾಗ ಮಾತ್ರ ಎಚ್ಚೆತ್ತುಕೊಳ್ಳುವ ನಮ್ಮ ಮನೋಸ್ಥಿತಿಗೆ ಇದು ಬೇಗ ಅರ್ಥವಾಗಲಿಲ್ಲವಷ್ಟೆ. ಉದ್ಯೋಗಿಗಳು ಕೂಡ ಸ್ವಲ್ಪ ನಿರ್ಲಿಪ್ತತೆ ತೋರಿಸಿದರು.
ಐಟಿ ಕ್ಷೇತ್ರದ ಮಾಜಿ ದಿಗ್ಗಜರೊಬ್ಬರ ಪ್ರಕಾರ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಅಡಿಯಿಡುತ್ತಿರುವ ಅಟೋಮೇಷನ್ ವ್ಯವಸ್ಥೆ, ಭಾರತದಲ್ಲಿ ಇನ್ನು 9 ವರ್ಷಗಳಲ್ಲಿ 20 ಕೋಟಿ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡುವ ಸಾಧ್ಯತೆ ಇದೆ.
ಸುಮಾರು 2ರಿಂದ 2.50 ಲಕ್ಷ ಹೆಚ್ಚುವರಿ ಉದ್ಯೋಗಗಳು ಬೆಳಕು ಕಾಣುವ ಸಾಧ್ಯತೆ ಕಡಿಮೆ. ಹಾಗೆಯೇ 2.25 ಲಕ್ಷ ಮಧ್ಯಮ ದರ್ಜೆ ಉದ್ಯೋಗಗಳು ಕಡಿಮೆಯಾಗಬಹುದು. ವಿಶೇಷ ತಂತ್ರಜ್ಞಾನ ಇದ್ದವರು ಮಾತ್ರ ಉಳಿಯಬಲ್ಲರು.
ಈಗಿನಂತೆ ಕೇವಲ ಒಂದು ಎಂಜಿನಿಯರಿಂಗ್ ಪದವಿ ಉದ್ಯೋಗ ಕೊಡಲಾರದು. ವಿಶ್ವ ಬ್ಯಾಂಕಿನ ಒಂದು ವರದಿ ಪ್ರಕಾರ ಸಾಫ್ಟ್ ವೇರ್ ಉದ್ಯಮದ ಈ ಹೊಸ ಆವಿಷ್ಕಾರ ಭಾರತದಲ್ಲಿ 69% ಉದ್ಯೋಗಿಗಳನ್ನು ಎತ್ತಂಗಡಿ ಮಾಡುವ ಸಾಧ್ಯತೆ ಇದೆ.
ಬರಗಾಲದಲ್ಲಿ ಅಧಿಕ ಮಾಸ ಅಥವಾ ಗಾಯದ ಮೇಲೆ ಬರೆ ಎನ್ನುವಂತೆ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್1ಬಿ ವೀಸಾ ಹೆಸರಿನಲ್ಲಿ ಭಾರತದ ಸಾಫ್ಟ್ ವೇರ್ ಉದ್ಯಮವನ್ನು ಹಳಿ ತಪ್ಪಿಸುತ್ತಿದ್ದಾರೆ.
ಈ ವರದಿಯ ಪ್ರಕಾರ ತಂತ್ರಜ್ಞಾನ ವಲಯದಲ್ಲಿ ಅಟೋಮೇಷನ್ ನುಸುಳುವುದರಿಂದ ಮುಂದಿನ 5 ವರ್ಷಗಳಲ್ಲಿ 5 ರಿಂದ 6.50 ಲಕ್ಷ ಟೆಕ್ಕಿಗಳು ನಿರುದ್ಯೋಗಿಗಳಾಗುವ ಸಂಭವ ಇದೆ.
2021ರ ಹೊತ್ತಿಗೆ ತಂತ್ರಜ್ಞಾನ ವಲಯದಲ್ಲಿ ಸುಮಾರು 9% ಅಥವಾ 14 ಲಕ್ಷ ಉದ್ಯೋಗ ಕಡಿತವಾಗಲಿದೆ. ಇದು ನಿಜವಾದರೆ, ದೇಶದ ಹತ್ತು ಲಕ್ಷ ಕೋಟಿ ಮೌಲ್ಯದ ಉದ್ಯಮಕ್ಕೆ ಆಘಾತಕಾರಿ ಅಥವಾ ಮಾರಣಾಂತಿಕ ಪೆಟ್ಟು ಬೀಳಲಿದೆ ಎನ್ನಬಹುದು.
ಕೆಲವು ಮೂಲಗಳ ಪ್ರಕಾರ ಆರಂಭದಲ್ಲಿ ಈ ಅಟೋಮೇಷನ್ ಆವಿಷ್ಕಾರ 37 ಲಕ್ಷ ಉದ್ಯೋಗಿಗಳನ್ನು ಹೊಂದಿದ ಬಿಪಿಓ ವಲಯವನ್ನು ಹೆಚ್ಚು ಸಂಕಷ್ಟಕ್ಕೆ ದೂಡಬಹುದು.
ಹಾಗೆಯೇ ಮಧ್ಯಮ ಕೌಶಲದ 8% ಉದ್ಯೋಗಗಳನ್ನು ಮತ್ತು ಕಡಿಮೆ ಕೌಶಲದ 30% ಉದ್ಯೋಗಗಳನ್ನು ಕಡಿತಗೊಳಿಸಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಇವರ ಪ್ರಕಾರ 30-50 ಲಕ್ಷ ಸಂಬಳ ದುಡಿಯುವ 50% ಮ್ಯಾನೇಜರ್‌ಗಳು ಪ್ರತಿವರ್ಷ ಉದ್ಯೋಗ ಕಳೆದು ಕೊಳ್ಳಬಹುದು. ಆರಂಭಿಕ ಹಂತದ ನೇಮಕದಲ್ಲಿ 10-12% ಕಡಿಮೆಯಾಗುವ ಸಾಧ್ಯತೆ ಇದೆ. ಪ್ರತಿವರ್ಷ ಕಾಲೇಜುಗಳು 15 ಲಕ್ಷ ಎಂಜಿನಿಯರ್‌ಗಳನ್ನು ಕಳಿಸುತ್ತಿದ್ದು, ಉದ್ಯೋಗ ಲಭ್ಯತೆ ಕೇವಲ 2ರಿಂದ 2.25 ಲಕ್ಷ ಎಂದು ಹೇಳಲಾಗುತ್ತಿದೆ.
ಯಾವುದು ಸತ್ಯ?
ವಿಪರ್ಯಾಸವೆಂದರೆ ಪಿಂಕ್ ಸ್ಲಿಪ್ ಭಯದಲ್ಲಿ ಐಟಿ ಸೆಕ್ಟರ್ ತಳಮಳಗೊಳ್ಳುತ್ತಿರುವಾಗ ಟೆಕ್ ಕಂಪನಿಗಳ ಮಹಾ ಸಂಘ (Nasscom) ಅಧ್ಯಕ್ಷ ಆರ್. ಚಂದ್ರಶೇಖರ ಅವರು ವ್ಯತಿರಿಕ್ತ ಹೇಳಿಕೆ ನೀಡಿದ್ದು, 2017ರಲ್ಲಿ ಟೆಕ್ ಕಂಪನಿಗಳು 1.70 ಲಕ್ಷ ನೇಮಕ ಮಾಡಿದ್ದು, ಮಾರ್ಚ್ 2017ರ ತ್ರೈಮಾಸಿಕದಲ್ಲಿಯೇ 50,000 ನೇಮಕ ಮಾಡಿವೆಯಂತೆ.
2025ರ ಹೊತ್ತಿಗೆ ಐಟಿ ಸೆಕ್ಟರ್‌ನಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿಯಾಗುವ ಆಶಾಭಾವನೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ. ಈ ಹೇಳಿಕೆಗೆ ಪುಷ್ಟಿ ಕೊಡುವಂತೆ ಟೆಕ್ ಕಂಪನಿಗಳ ಹಿರಿಯಣ್ಣ ಇನ್‌ಫೋಸಿಸ್ 2017ರಲ್ಲಿ 20,000 ನೇಮಕ ಮಾಡುವುದಾಗಿ ಹೇಳಿದೆ.
ಇದು ಸತ್ಯವೋ ಅಥವಾ ಮಿಥ್ಯವೋ ಎನ್ನುವುದನ್ನು ಮುಂದಿನ ದಿನಗಳಲ್ಲಿ ನೋಡಬೇಕು. ಐಟಿ ಕಂಪನಿಗಳಲ್ಲಿ ಉಂಟಾದ ಪಿಂಕ್ ಸ್ಲಿಪ್ ತಳಮಳದ ದಾವಾಗ್ನಿಯನ್ನು ತಣ್ಣಗಾಗಿಸುವ ಪ್ರಯತ್ನ ಇದು ಎಂದು ವಿಶ್ಲೇಷಕರು ಭಾಷ್ಯ ಬರೆಯುತ್ತಿದ್ದಾರೆ.
ಸಾಫ್ಟವೇರ್ ಕ್ಷೇತ್ರದ ಇಂದಿನ ತಳಮಳವನ್ನು ಕಂಪನಿಗಳ ಸ್ವಯಂಕೃತ ಅಪರಾಧ ಎಂದು ಧಾರಾಳವಾಗಿ ಹೇಳಬಹುದು. ತನ್ನ ಸಿಬ್ಬಂದಿಯ ವೇತನ, ಸೌಲಭ್ಯವನ್ನು ನಿಗದಿ ಮಾಡುವಾಗ ಅದು ಇನ್ನಿತರ ರಂಗಗಳಲ್ಲಿಯ ವೇತನ ಸೌಲಭ್ಯವನ್ನು ಪರಿಗಣನೆಗೆ ತೆಗೆದುಕೊಂಡಂತೆ ಕಾಣುವುದಿಲ್ಲ.
ಜಗತ್ತಿನಲ್ಲಿ ಯಾರೂ ಮಾಡದ, ತೋರದ ಕೆಲಸ ಮತ್ತು ನೈಪುಣ್ಯವನ್ನು ಟೆಕ್ಕಿಗಳು ಮಾಡುತ್ತಾರೆ ಎನ್ನುವ ಭ್ರಮಾಲೋಕವನ್ನು ಸೃಷ್ಟಿಸಲಾಯಿತು ಮತ್ತು ಆರಂಭದ ಹಂತದಲ್ಲಿಯೇ ಐದಂಕಿ ವೇತನ ನೀಡಲಾಯಿತು. ಮುಂಬರಲಿರುವ ಪರಿಣಾಮವನ್ನು ಯಾರೂ ಯೋಚಿಸುವ ಪ್ರಯತ್ನ ಮಾಡಲಿಲ್ಲ. ಟೆಕ್ಕಿಗಳು ಕೂಡ ಇಂಥ ಒಳ್ಳೆಯ ಪರಿಸ್ಥಿತಿಯೇ ಯಾವಾಗಲೂ ಇರುತ್ತದೆ ಎಂದು ಬಲವಾಗಿ ನಂಬಿದ್ದರು.
ಬದಲಾವಣೆಯ ಸಾಧ್ಯತೆಯನ್ನು ಎಂದೂ ಚಿಂತಿಸಲಿಲ್ಲ. ಆರಂಭದ ದಿನಗಳಲ್ಲಿ ಸಾಫ್ಟ್‌ವೇರ್ ಬಿಜಿನೆಸ್‌ನಲ್ಲಿ ಪೂರೈಕೆ ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿತ್ತು. ಹಾಗೆಯೇ ವ್ಯವಹಾರದಲ್ಲಿ ಬೇರೆ ಉದ್ಯಮದವರು ಹೊಟ್ಟೆ ಕಿಚ್ಚು ಪಡುವಷ್ಟು ಮಾರ್ಜಿನ್ ಕೂಡಾ ಇತ್ತು.
ದಿನಗಳು ಕಳೆದಂತೆ ಪೂರೈಸುವ ಕಂಪನಿಗಳು ನಾಯಿಕೊಡೆಗಳಂತೆ ಹೆಚ್ಚಿ, ಬೇಡಿಕೆ ಕಡಿಮೆಯಾಗಿ ಮಾರ್ಜಿನ್ ಕಡಿಮೆಯಾಯಿತು. ಅದೇ ರೀತಿ ನಿರ್ವಹಣಾ ವೆಚ್ಚ ಕಡಿಮೆಯಾಗಲಿಲ್ಲ.
ಒಂದು ಟೆಕ್ ಕಂಪನಿಯ ಮುಖ್ಯಸ್ಥನ ವಾರ್ಷಿಕ ಸಂಬಳ 67 ಕೋಟಿ ಎಂದರೆ, ಬಹುತೇಕ ಟೆಕ್ಕಿಗಳ ಸಂಬಳದ ಗಾತ್ರದ ಪರಿಚಯವಾಗಬಹುದು. ಈ ಸಂಬಳ ಸೌಲಭ್ಯಗಳಿಗೆ ಜೀವನ ಚಕ್ರವನ್ನು ಹೊಂದಿಸಿಕೊಂಡವರು, ಎಲ್ಲೂ ಕೆಲಸ ಪಡೆಯದೆ, ಅಥವಾ ಕಡಿಮೆ ಸಂಬಳಕ್ಕೆ ಒಪ್ಪಿಕೊಳ್ಳದೆ ಜೀವನ ರಥ ಓಡಿಸಬಹುದೇ ಎನ್ನುವುದು ಮುಖ್ಯಪ್ರಶ್ನೆ. ಇದೇ ಅವರ ದುಃಸ್ವಪ್ನದ ಹಿಂದಿನ ವ್ಯಾಕುಲತೆ.
ಕೆಲವರಿಗೆ ಪಿಂಕ್ ಸ್ಲಿಪ್ ಕೊಡಲು ಸಿಬ್ಬಂದಿಯ ಪಟ್ಟಿ ತಯಾರಿಸುವಂತೆ ಕಂಪನಿಯೊಂದರ ಮುಖ್ಯಸ್ಥರು ಮಾನವ ಸಂಪನ್ಮೂಲ ಅಧಿಕಾರಿ (ಎಚ್‌ಆರ್)ಗೆ ಹೇಳಿದಾಗ, ಯಾರನ್ನು ಮನೆಗೆ ಕಳಿಸುವುದು ಎಂದು ಸುಲಭಕ್ಕೆ ನಿರ್ಣಯಿಸಲಾಗದೆ ವಾರಗಟ್ಟಲೆ ಸಂದಿಗ್ಧದಲ್ಲಿ ಒದ್ದಾಡಿದ್ದರಂತೆ. ಒಬ್ಬರ ಅನ್ನ ಕಸಿಯುವಾಗ ಅನುಭವಿಸುವ ಪಾಪ ಪ್ರಜ್ಞೆ ಊಹೆಗೆ ನಿಲುಕದ್ದು!
ಗಣಕೀಕರಣ ಅಥವಾ ಸಾಫ್ಟವೇರ್ ಮೂಲಕ ಬ್ಯಾಂಕ್, ವಿಮಾ, ರೈಲ್ವೆ ಹೀಗೆ ಸಾವಿರಾರು ಇಲಾಖೆಗಳಲ್ಲಿ ಕೋಟ್ಯಂತರ ಉದ್ಯೋಗಿಗಳ ಬದುಕಿನ ಆಸರೆಯನ್ನು ಕಸಿದುಕೊಂಡ ಸಾಫ್ಟವೇರ್ ಉಧ್ಯಮ ಅದೇ ತಂತ್ರಜ್ಞಾನಕ್ಕೇ ಬಲಿಯಾಗುತ್ತಿರುವದು, ಆಧುನಿಕ ಜಗತ್ತಿನ ಒಂದು ಮಹಾ ವಿಪರ್ಯಾಸ ಎನ್ನಬಹುದು.
ಹಾಗೆಯೇ ತಮ್ಮ ಬೇಡಿಕೆಗಳಿಗೆ, ವೇತನ ಹೆಚ್ಚಳಕ್ಕೆ, ಸೌಲಭ್ಯಗಳಿಗೆ ಮತ್ತು ಉದ್ಯೋಗ ಸ್ಥಿರತೆಗಾಗಿ ಸದಾ ತಮ್ಮ ಕಾರ್ಯಾಲಯದ ದ್ವಾರದ ಮುಂದೆ ಕೆಂಪು ಬಾವುಟದಡಿಯಲ್ಲಿ ಮುಷ್ಟಿ ಎತ್ತಿ, ಕುತ್ತಿಗೆ ನರ ಉಬ್ಬಿಸಿ ಘೋಷಣೆ ಕೂಗುವ ದುಡಿಯುವ ವರ್ಗವನ್ನು ಆಶ್ಚರ್ಯದಿಂದ ನೋಡುತ್ತಿದ್ದ ಟೆಕ್ಕಿಗಳು ಮುಂದಿನ ದಿನಗಳಲ್ಲಿ ಅವರಿಗೆ ಕೈ ಜೋಡಿಸುವ ಮತ್ತು ಅವರೊಂದಿಗೆ ಧ್ವನಿಗೂಡಿಸುವ ಕಾಲ ಬಂದಿದ್ದು ಇನ್ನೊಂದು ವಿಪರ್ಯಾಸ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬ್ರಹ್ಮಾವರ ತಾಲೂಕಿನೆಲ್ಲೆಡೆ ಕುಂಭ ದ್ರೋಣ ಮಳೆಯ ಅಬ್ಬರ ಜೋರಾಗಿದ್ದು, ಮಂಗಳವಾರ ಬೆಳಗ್ಗಿನಿಂದಲೇ ಸುರಿದ ಮಳೆಯಿಂದಾಗಿ ಹಲವೆಡೆಗಳಲ್ಲಿ ನೆರೆ ಆವರಿಸಿದೆ. ಕೆಲವೆಡೆ ಮನೆಯೊಳಗೆ ನೀರು ನುಗ್ಗಿದ್ದರೆ, ಅನೇಕ ಕಡೆಗಳಲ್ಲಿ ಗದ್ದೆ, ಅಡಿಕೆ, ತೆಂಗಿನ ತೋಟ ಸಹಿತ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ. ಬ್ರಹ್ಮಾವರ ಪರಿಸರದ ಮಟಪಾಡಿ, ನೀಲಾವರ, ನಂದನಕುದ್ರು, ರಾಮನಕುದ್ರು, ಬಲ್ಜಿ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು ಇದರಿಂದಾಗಿ ವಾಹನ ಸವಾರರು ಕೂಡ ಸಮಸ್ಯೆಯನ್ನು ಅನುಭವಿಸಿದರು. ಅನೇಕ ಕಡೆಗಳಲ್ಲಿ ಭತ್ತದ ಕೃಷಿ ಬೆಳೆದಿರುವ ಗದ್ದೆ ಜಲಾವೃತಗೊಂಡಿದ್ದರೆ, ಅಡಿಕೆ ತೋಟಗಳಲ್ಲಿ ನೀರು ನಿಂತಿದೆ….
ಶಾಪಿಂಗ್‍ಗೆ ಅಂತ ಹೋದ್ರೆ ಹೆಣ್ಣುಮಕ್ಕಳು ಯಾವತ್ತೂ ಬೇಗನೆ ಅಂಗಡಿಯಿಂದ ಹೊರಬರಲ್ಲ ಅನ್ನೋದು ಸಾಮಾನ್ಯವಾಗಿ ಕೇಳಿಬರೋ ಮಾತು. ಆದ್ರೆ ಶಾಪಿಂಗ್ ಮಾಡೋದೂ ಒಂದು ಕಲೆ ಅನ್ನೋದು ನೆನಪಿರಲಿ. ಕಣ್ಣಿಗೆ ಚೆನ್ನಾಗಿ ಕಂಡಿದ್ದೆಲ್ಲಾ ಆರಿಸಿಕೊಂಡು ಬಿಲ್ ಮಾಡಿಸೋದು, ಅರ್ಜೆಂಟ್‍ನಲ್ಲಿ ಯಾವುದೋ ಒಂದು ಸೆಲೆಕ್ಟ್ ಮಾಡಿ ಖರೀದಿಸಿಬಿಡೋದು, ಇಂತಹ ತಪ್ಪುಗಳನ್ನ ಮಾಡಿದ್ರೆ ಕೊನೆಗೆ ಕೊಟ್ಟ ಹಣಕ್ಕೆ ತಕ್ಕ ಬಟ್ಟೆ ಖರೀದಿಸಲಿಲ್ಲವಲ್ಲ ಅಂತ ಪರಿತಪಿಸಬೇಕಾಗುತ್ತದೆ.
ಆತ ಸಾಫ್ಟವೇರ್ ಟೆಕ್ಕಿ. ಒಳ್ಳೆಯ ಪ್ಯಾಕೇಜ್‌ನ ಸಂಬಳ. ಪ್ರತಿಷ್ಠಿತ ಶಾಲೆಯಲ್ಲಿ ಓದುವ ಇಬ್ಬರು ಮುದ್ದಾದ ಮಕ್ಕಳ ಸಂಸಾರ. ಸಕಲ ಆಧುನಿಕ ಸೌಲಭ್ಯಗಳಿರುವ ಅಪಾರ್ಟ್‌ಮೆಂಟ್‌ನಲ್ಲಿ ಬ್ಯಾಂಕ್ ಸಾಲದಿಂದ ಖರೀದಿಸಿದ ಮೂರು ಬೆಡ್ ರೂಮ್‌ನ ಐಷಾರಾಮಿ ಫ್ಲ್ಯಾಟ್. ಸದಾ ಚಟುವಟಿಕೆಯಿಂದ, ನಗುವಿನಿಂದ ತುಂಬಿರುತ್ತಿದ್ದ ಮನೆಯಲ್ಲಿ ಇತ್ತೀಚೆಗೆ ಸ್ವಲ್ಪ ಆತಂಕ ಕಾಣುತ್ತಿದೆ. ಮಕ್ಕಳ ವಿದ್ಯಾಭ್ಯಾಸ, 30-40 ಲಕ್ಷದಷ್ಟಿರುವ ಗೃಹಸಾಲ ಅವನನ್ನು ಅಣಕಿಸುತ್ತಿವೆ. ಸಹೋದ್ಯೋಗಿಗಳು ಬಿಟ್ಟು ಹೋದ ತಿರುಗುವ ಕುರ್ಚಿಗಳು ಅವನನ್ನು ಬೆವರಿಸುತ್ತವೆ. ತನ್ನ ಕುರ್ಚಿಯೂ ಹೀಗೆ ಬರಿದಾಗಬಹುದೇನೋ ಎನ್ನುವ ಅವ್ಯಕ್ತ ಭಯ ಅವನನ್ನು ಕಾಡಲು ಶುರು ಮಾಡಿದೆ. ಸಂಜೆ ಆಫೀಸು ಮುಗಿಯುವಾಗ ಬರುವ ಇ ಮೇಲ್ ತೆರೆಯುವಾಗ ಕೈ ನಡುಗುತ್ತದೆ. ಹಾಗೆಯೇ ಮುಂಜಾನೆ ಆಫೀಸಿನಲ್ಲಿ ಲಾಗ್ ಇನ್ ಮಾಡುವಾಗ ಎಸಿ ಕ್ಯಾಬಿನ್‌ನಲ್ಲಿಯೂ ಬೆವರುತ್ತಾನೆ.
ಕುರಿಗಾಯಿ ಹನುಮಂತ ಆಯಿತು, ಕೊಪ್ಪಳದ ಗಂಗಮ್ಮ ಆಯಿತು. ಈಗ ಇವರ ಸಾಲಿಗೆ ಮತ್ತೊಂದು ಗಾನ ಕೋಗಿಲೆ ಸೇರಿಕೊಂಡಿದೆ. ಸರ್ಕಾರಿ ನೌಕರಿ ಮಾಡುತ್ತಲೇ, ಸಂಗೀತ ಸರಸ್ವತಿಯ ಸೇವೆ ಮಾಡುತ್ತಾ ಯಾದಗಿರಿಯ ಬಸ್ ಕಂಡಕ್ಟರ್ ಪರಶುರಾಮ್ ಪಬ್ಲಿಕ್ ಹೀರೋ ಆಗಿದ್ದಾರೆ. ಹೌದು. ಯಾದಗಿರಿ- ಕಲಬುರಗಿ ಮಧ್ಯೆ ಸಂಚರಿಸುತ್ತಿರುವ ಈಶಾನ್ಯ ಸಾರಿಗೆ ಬಸ್ ಹತ್ತಿದರೆ ನಿಮಗೆ ಫುಲ್ ಎಂಟರ್‌ಟೈನ್‌ಮೆಂಟ್ ಸಿಗೋದು ಗ್ಯಾರಂಟಿ. ಯಾಕಂದ್ರೆ ಬಸ್‍ನ ಕಂಡಕ್ಟರ್ ಕಂಠದಿಂದ ಹೊರಹೊಮ್ಮುವ ಹಾಡುಗಳು ಎಲ್ಲರ ಮನಸೋರೆಗೊಳ್ಳುತ್ತವೆ. ಬಸ್ಸಲ್ಲೇ ಕರೋಕೆ ಮ್ಯೂಸಿಕ್ ಹಾಕಿಕೊಂಡು ಕೈಯಲ್ಲಿ ಮೈಕ್…
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ವಿಷ ಮಿಶ್ರಿತ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 15 ಕ್ಕೆ ಏರಿದೆ. ಇನ್ನೂ ಹಲವಾರು ಮಂದಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಪ್ರಸಾದಕ್ಕೆ ವಿಷ ಬೆರೆಸಿದವರು ಯಾರು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹತ್ವದ ಮಾಹಿತಿ ದೊರೆತಿದೆ ಎನ್ನಲಾಗಿದೆ. ಸಾಲೂರು ಮಠದ ಸ್ವಾಮಿಗಳ ನಡುವಿನ ಒಳಜಗಳದ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಿರಿಯ ಸ್ವಾಮೀಜಿ ಮಹಾದೇವಸ್ವಾಮಿ ಚಿತಾವಣೆ ಮೇರೆಗೆ ದೊಡ್ಡಯ್ಯ ಎಂಬಾತ…
ಮೊಬೈಲ್ ಆಧಾರ್ ಲಿಂಕ್ ಮಾಡುವ ಸಲುವಾಗಿ ಈ ಮೊದಲು ಟೆಲಿಕಾಂ ಆಪರೇಟರ್ ಗಳ ಔಟ್ ಲೈಟ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಇದಕ್ಕೆ ಕಡಿವಾಣ ಹಾಕಿ ಅತ್ಯಂತ ಸುಲಭವಾಗಿ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲು, ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಮಾಡುವ ಅವಕಾಶವನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಾಡಿಕೊಟ್ಟಿದೆ.