ಆರೋಗ್ಯ

ಕಂಪ್ಯೂಟರ್‌ನ ಮುಂದೆ ಹೆಚ್ಚು ಹೊತ್ತು ಕೆಲಸ ಮಾಡ್ತೀರಾ?ಹಾಗಾದರೆ ಇದನ್ನು ನೀವು ಓದಲೇಬೇಕು….

607

ಬಹುತೇಕರು ಈಗಂತೂ ಕಂಪ್ಯೂಟರ್‌ನ ಮುಂದೆ ಕುಳಿತು ಬಿಟ್ಟರೆ ಎಲ್ಲವನ್ನೂ ಮರೆತು ಬಿಡುತ್ತಾರೆ.

ಕಂಪ್ಯೂಟರ್‌ನ ಮುಂದೆ ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ದೇಹ ದುರ್ಬಲವಾಗುತ್ತದೆ.

ಇದರಿಂದ ಆಗುವ ಪರಿಣಾಮಗಳಿಂದ ತಪ್ಪಿಸಿ ಕೊಳ್ಳಲು ಕೆಳಗೆ ಕೊಟ್ಟಿರುವ ಕೆಲುವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ :-

  • ತಾಸುಗಟ್ಟಲೆ ಕಂಪ್ಯೂಟರ್ ಪರದೆಯನ್ನು ನೋಡಿ ಕೆಲಸ ಮಾಡುವಾಗ ಅದರ ಮಧ್ಯೆ ಅಂದರೆ ಪ್ರತಿ ಅರ್ಧ ಗಂಟೆಗೊಮ್ಮೆ ಸ್ವಲ್ಪ ನಡೆದಾಡುವ ಅಭ್ಯಾಸ ರೂಢಿಸಿಕೊಳ್ಳಿ.
  • ಸುಮಾರು ಎರಡು ನಿಮಿಷಗಳ ಕಾಲ ನಡೆದಾಡಿ ಭುಜಗಳನ್ನು ಕೈಗಳಲ್ಲಿ ಹಿಡಿದುಕೊಂಡು ಮೇಲೆ ಕೆಳಗೆ ಮಾಡಿ. ಈ ರೀತಿ 30 ಸೆಕೆಂಡುಗಳ ಕಾಲ ಮಾಡಿದರೆ ಕೈಗಳಿಗೆ ಸಾಕಷ್ಟು ವ್ಯಾಯಾಮ ಸಿಗುತ್ತದೆ.
  • ಇದೇ ರೀತಿ ಕಂಪ್ಯೂಟರ್‌ನ ಮುಂದೆ ಕುಳಿತುಕೊಳ್ಳುವಾಗ ನಿಮ್ಮ ತಲೆಯನ್ನು ನೇರವಾಗಿ ಇರಿಸಿಕೊಳ್ಳಿ. ತಲೆಯನ್ನು ಬಾಗಿಸಿ ಅಥವಾ ಭುಜಗಳಿಗೆ ಓರೆಯಾಗಿ ಇರಿಸಿ ಕೆಲಸ ಮಾಡಬೇಡಿ.
  •  ಗದ್ದವನ್ನು 5 ಸೆಕೆಂಡುಗಳ ಕಾಲ ಮೇಲೆ ಕೆಳಗೆ ಮಾಡಿ. ಇದನ್ನು ದಿನದಲ್ಲಿ 10 ಬಾರಿ ಮಾಡಿದರೆ ಕುತ್ತಿಗೆಯ ಸ್ನಾಯುಗಳು ಸಾಮಾನ್ಯ ಸ್ಥಿತಿಗೆ ಮರಳುತ್ತವೆ.
  •  ನೀವು ಕುಳಿತುಕೊಳ್ಳುವ ಕುರ್ಚಿಯ ಮೇಲೆ ಕುಷನ್ ಅಥವಾ ದಿಂಬನ್ನು ಇಡಿ. ಇದರಿಂದ ಬೆನ್ನು ಹುರಿ ನೆಟ್ಟಗಿರುತ್ತದೆ ಮತ್ತು ಬೆನ್ನು ನೋವು ಬರುವುದಿಲ್ಲ.
  • ದೇಹದಲ್ಲಿ ಸೂಕ್ತವಾದ ರಕ್ತ ಪರಿಚಲನೆಗೆ ಕಾಲುಗಳ ಪಾತ್ರ ಮುಖ್ಯವಾದುದು. ಆದ್ದರಿಂದ ಕಾಲುಗಳಿಗೂ ಸೂಕ್ತ ವ್ಯಾಯಾಮ ಅತ್ಯಗತ್ಯ. ಪಾದದ ಅಡಿಭಾಗವನ್ನು ಪೂರ್ತಿಯಾಗಿ ನೆಲಗಳಿಗೆ ಸ್ಪರ್ಶಿಸಿ. ಬಳಿಕ ಅದನ್ನು ವೃತ್ತಾಕಾರವಾಗಿ ತಿರುಗಿಸಿ.
  •  ದಿನವಿಡೀ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳಬೇಡಿ. ಮಂಡಿಗಳನ್ನು ತೊಡೆಗಳಿಗೆ ಸಮನಾಗುವಂತೆ ಅಗಲವಾಗಿಡಿ ಅಥವಾ ತೊಡೆಗಳ ಕೆಳಗೆ ಇಡಿ. ಆಗ ಪಾದಗಳು ನೆಲಕ್ಕೆ ಸ್ಪರ್ಶಿಸುತ್ತವೆ.
  • ಎತ್ತರ ಹಿಮ್ಮಡಿಯಿರುವ ಪಾದರಕ್ಷೆಗಳನ್ನು ಧರಿಸುವವರು ಕೆಲಸದ ಮಧ್ಯೆ ಆಗಾಗ ಪಾದರಕ್ಷೆ ಇಲ್ಲದೆ ನಡೆಯಬೇಕು. ಇದರಿಂದ ಕಾಲುಗಳಿಗೆ ರಕ್ತ ಪರಿಚಲನೆ ಸುಗಮಗೊಳ್ಳುವುದು ಮಾತ್ರವಲ್ಲದೆ, ದೇಹದ ಎಲ್ಲಾ ಭಾಗಗಳಿಗೂ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ