News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಉದ್ಯೋಗ

ಸಾಫ್ಟ್ ವೇರ್ ಉದ್ಯೋಗಿಗಳಲ್ಲಿ ಕವಿದ ಆತಂಕದ ಕಾರ್ಮೋಡ!!!

216

ಆತ ಸಾಫ್ಟವೇರ್ ಟೆಕ್ಕಿ. ಒಳ್ಳೆಯ ಪ್ಯಾಕೇಜ್‌ನ ಸಂಬಳ. ಪ್ರತಿಷ್ಠಿತ ಶಾಲೆಯಲ್ಲಿ ಓದುವ ಇಬ್ಬರು ಮುದ್ದಾದ ಮಕ್ಕಳ ಸಂಸಾರ. ಸಕಲ ಆಧುನಿಕ ಸೌಲಭ್ಯಗಳಿರುವ ಅಪಾರ್ಟ್‌ಮೆಂಟ್‌ನಲ್ಲಿ ಬ್ಯಾಂಕ್ ಸಾಲದಿಂದ ಖರೀದಿಸಿದ ಮೂರು ಬೆಡ್ ರೂಮ್‌ನ ಐಷಾರಾಮಿ ಫ್ಲ್ಯಾಟ್.

ಸದಾ ಚಟುವಟಿಕೆಯಿಂದ, ನಗುವಿನಿಂದ ತುಂಬಿರುತ್ತಿದ್ದ ಮನೆಯಲ್ಲಿ ಇತ್ತೀಚೆಗೆ ಸ್ವಲ್ಪ ಆತಂಕ ಕಾಣುತ್ತಿದೆ. ಮಕ್ಕಳ ವಿದ್ಯಾಭ್ಯಾಸ, 30-40 ಲಕ್ಷದಷ್ಟಿರುವ ಗೃಹಸಾಲ ಅವನನ್ನು ಅಣಕಿಸುತ್ತಿವೆ.

ಸಹೋದ್ಯೋಗಿಗಳು ಬಿಟ್ಟು ಹೋದ ತಿರುಗುವ ಕುರ್ಚಿಗಳು ಅವನನ್ನು ಬೆವರಿಸುತ್ತವೆ. ತನ್ನ ಕುರ್ಚಿಯೂ ಹೀಗೆ ಬರಿದಾಗಬಹುದೇನೋ ಎನ್ನುವ ಅವ್ಯಕ್ತ ಭಯ ಅವನನ್ನು ಕಾಡಲು ಶುರು ಮಾಡಿದೆ.

ಸಂಜೆ ಆಫೀಸು ಮುಗಿಯುವಾಗ ಬರುವ ಇ ಮೇಲ್ ತೆರೆಯುವಾಗ ಕೈ ನಡುಗುತ್ತದೆ. ಹಾಗೆಯೇ ಮುಂಜಾನೆ ಆಫೀಸಿನಲ್ಲಿ ಲಾಗ್ ಇನ್ ಮಾಡುವಾಗ ಎಸಿ ಕ್ಯಾಬಿನ್‌ನಲ್ಲಿಯೂ ಬೆವರುತ್ತಾನೆ.

ಇದು ಇವನೊಬ್ಬನ ಕಥೆಯಲ್ಲ. ಭಾರತದ ಐಟಿ ಉದ್ಯಮದಲ್ಲಿ ಸುಮಾರು 13,000 ಕಂಪನಿಗಳಲ್ಲಿ ದುಡಿಯುವ 28 ಲಕ್ಷ ಟೆಕ್ಕಿಗಳು ನೇರವಾಗಿ ಮತ್ತು ಇದರ ಮೂಲಕ ಪರೋಕ್ಷವಾಗಿ ಕೆಲಸ ಮಾಡುವ 89 ಲಕ್ಷ ಜನರು ಎದುರಿಸುತ್ತಿರುವ ಭಯ, ಆತಂಕ.

ಬೆಂಗಳೂರು ನಗರವೊಂದರಲ್ಲೇ ಸುಮಾರು 5,000 ಟೆಕ್ ಕಂಪನಿಗಳಿವೆ. ಇತ್ತೀಚೆಗಿನ ದಿನಗಳಲ್ಲಿ ಇನ್ ಫೋಸಿಸ್, ವಿಪ್ರೋ, ಟೆಕ್ ಮಹೀಂದ್ರ, ಕಾಗ್ನಿಜೆಂಟ್ ಮತ್ತು ಐಬಿಎಂನಂಥ ಕಂಪನಿಗಳು ಸುಮಾರು 58,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿವೆ ಎಂದು ಹೇಳಲಾಗುತ್ತಿದ್ದು, ಈ ಹಾದಿಯಲ್ಲಿ ಇನ್ನೂ ಕೆಲವು ಕಂಪನಿಗಳು ಇವೆಯಂತೆ.

ಹಾಗೆಯೇ ಈ ದೊಡ್ಡ ಕಂಪನಿಗಳ ಹಾದಿಯಲ್ಲಿಯೇ ಸಣ್ಣ ಸಣ್ಣ ಕಂಪನಿಗಳು ಇನ್ನೂ ದೂರ ಸಾಗಿದರೆ ಆಶ್ಚರ್ಯವಿಲ್ಲ.

ಈ ಕಂಪನಿಗಳ ಪ್ರಕಾರ ಇದು ಸಾಧಿಸಿದವರನ್ನು ಉಳಿಸಿಕೊಳ್ಳುವ ಮತ್ತು ಸಾಧಿಸದವರನ್ನು ಕೆಲಸದಿಂದ ತೆಗೆದು ಹಾಕುವ ವಾರ್ಷಿಕ ಪ್ರಕ್ರಿಯೆಯಷ್ಟೆ. ಇದು ಸಿಬ್ಬಂದಿ ವೇತನದ ಬಿಲ್‌ನ್ನು ಕಡಿಮೆ ಮಾಡುವ ಮತ್ತು ನಿರ್ವಹಣಾ ವೆಚ್ಚವನ್ನು ತಗ್ಗಿಸಲು shifting to automation, robotic, manning legacy system to digital and cloud  ಎನ್ನುವ ಸತ್ಯವನ್ನು ಮರೆಮಾಚಲಾಗುತ್ತದೆ ಎಂದು ಸಾಫ್ಟವೇರ್ ತಜ್ಞರು ಅಭಿಪ್ರಾಯ ಪಡುತ್ತಾರೆ.

ಟೆಕ್ಕಿಗಳ ಉದ್ಯೋಗ ಉಳಿಯಬೇಕಾದರೆ ಅವರು ತಮ್ಮ ತಾಂತ್ರಿಕ ಕೌಶಲ ಮತ್ತು ವಿದ್ಯಾರ್ಹತೆಯನ್ನು ಹೆಚ್ಚಿಸಿಕೊಬೇಕಾದ ಅನಿವಾರ್ಯ ಉಂಟಾಗಿದೆ.

ಸಾಫ್ಟ್‌ವೇರ್ ಉದ್ಯಮದಲ್ಲಿನ ಕಳೆದ ಒಂದೆರಡು ವರ್ಷಗಳ ಆಗುಹೋಗುಗಳನ್ನು ಮತ್ತು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂಥ ಪರಿಸ್ಥಿತಿಯ ಆಗಮನದ ಸಂಕೇತ ಮತ್ತು ಸೂಚನೆಗಳು ಎದ್ದು ಕಾಣುತ್ತಿದ್ದವು ಮತ್ತು ಅದನ್ನು ಗೋಡೆಯ ಮೇಲೆ ನಿಚ್ಚಳವಾಗಿ ಬರೆಯಲಾಗಿತ್ತು ಕೂಡಾ.

ಆದರೆ, ವ್ಯಾಧಿ ಪಸರಿಸಿ ಹತೋಟಿ ತಪ್ಪುವ ಹಂತಕ್ಕೆ ಬಂದಾಗ ಮಾತ್ರ ಎಚ್ಚೆತ್ತುಕೊಳ್ಳುವ ನಮ್ಮ ಮನೋಸ್ಥಿತಿಗೆ ಇದು ಬೇಗ ಅರ್ಥವಾಗಲಿಲ್ಲವಷ್ಟೆ. ಉದ್ಯೋಗಿಗಳು ಕೂಡ ಸ್ವಲ್ಪ ನಿರ್ಲಿಪ್ತತೆ ತೋರಿಸಿದರು.

ಐಟಿ ಕ್ಷೇತ್ರದ ಮಾಜಿ ದಿಗ್ಗಜರೊಬ್ಬರ ಪ್ರಕಾರ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಅಡಿಯಿಡುತ್ತಿರುವ ಅಟೋಮೇಷನ್ ವ್ಯವಸ್ಥೆ, ಭಾರತದಲ್ಲಿ ಇನ್ನು 9 ವರ್ಷಗಳಲ್ಲಿ 20 ಕೋಟಿ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡುವ ಸಾಧ್ಯತೆ ಇದೆ.

ಸುಮಾರು 2ರಿಂದ 2.50 ಲಕ್ಷ ಹೆಚ್ಚುವರಿ ಉದ್ಯೋಗಗಳು ಬೆಳಕು ಕಾಣುವ ಸಾಧ್ಯತೆ ಕಡಿಮೆ. ಹಾಗೆಯೇ 2.25 ಲಕ್ಷ ಮಧ್ಯಮ ದರ್ಜೆ ಉದ್ಯೋಗಗಳು ಕಡಿಮೆಯಾಗಬಹುದು. ವಿಶೇಷ ತಂತ್ರಜ್ಞಾನ ಇದ್ದವರು ಮಾತ್ರ ಉಳಿಯಬಲ್ಲರು.

ಈಗಿನಂತೆ ಕೇವಲ ಒಂದು ಎಂಜಿನಿಯರಿಂಗ್ ಪದವಿ ಉದ್ಯೋಗ ಕೊಡಲಾರದು. ವಿಶ್ವ ಬ್ಯಾಂಕಿನ ಒಂದು ವರದಿ ಪ್ರಕಾರ ಸಾಫ್ಟ್ ವೇರ್ ಉದ್ಯಮದ ಈ ಹೊಸ ಆವಿಷ್ಕಾರ ಭಾರತದಲ್ಲಿ 69% ಉದ್ಯೋಗಿಗಳನ್ನು ಎತ್ತಂಗಡಿ ಮಾಡುವ ಸಾಧ್ಯತೆ ಇದೆ.

ಬರಗಾಲದಲ್ಲಿ ಅಧಿಕ ಮಾಸ ಅಥವಾ ಗಾಯದ ಮೇಲೆ ಬರೆ ಎನ್ನುವಂತೆ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್1ಬಿ ವೀಸಾ ಹೆಸರಿನಲ್ಲಿ ಭಾರತದ ಸಾಫ್ಟ್ ವೇರ್ ಉದ್ಯಮವನ್ನು ಹಳಿ ತಪ್ಪಿಸುತ್ತಿದ್ದಾರೆ.

ಈ ವರದಿಯ ಪ್ರಕಾರ ತಂತ್ರಜ್ಞಾನ ವಲಯದಲ್ಲಿ ಅಟೋಮೇಷನ್ ನುಸುಳುವುದರಿಂದ ಮುಂದಿನ 5 ವರ್ಷಗಳಲ್ಲಿ 5 ರಿಂದ 6.50 ಲಕ್ಷ ಟೆಕ್ಕಿಗಳು ನಿರುದ್ಯೋಗಿಗಳಾಗುವ ಸಂಭವ ಇದೆ.

2021ರ ಹೊತ್ತಿಗೆ ತಂತ್ರಜ್ಞಾನ ವಲಯದಲ್ಲಿ ಸುಮಾರು 9% ಅಥವಾ 14 ಲಕ್ಷ ಉದ್ಯೋಗ ಕಡಿತವಾಗಲಿದೆ. ಇದು ನಿಜವಾದರೆ, ದೇಶದ ಹತ್ತು ಲಕ್ಷ ಕೋಟಿ ಮೌಲ್ಯದ ಉದ್ಯಮಕ್ಕೆ ಆಘಾತಕಾರಿ ಅಥವಾ ಮಾರಣಾಂತಿಕ ಪೆಟ್ಟು ಬೀಳಲಿದೆ ಎನ್ನಬಹುದು.

ಕೆಲವು ಮೂಲಗಳ ಪ್ರಕಾರ ಆರಂಭದಲ್ಲಿ ಈ ಅಟೋಮೇಷನ್ ಆವಿಷ್ಕಾರ 37 ಲಕ್ಷ ಉದ್ಯೋಗಿಗಳನ್ನು ಹೊಂದಿದ ಬಿಪಿಓ ವಲಯವನ್ನು ಹೆಚ್ಚು ಸಂಕಷ್ಟಕ್ಕೆ ದೂಡಬಹುದು.

ಹಾಗೆಯೇ ಮಧ್ಯಮ ಕೌಶಲದ 8% ಉದ್ಯೋಗಗಳನ್ನು ಮತ್ತು ಕಡಿಮೆ ಕೌಶಲದ 30% ಉದ್ಯೋಗಗಳನ್ನು ಕಡಿತಗೊಳಿಸಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಇವರ ಪ್ರಕಾರ 30-50 ಲಕ್ಷ ಸಂಬಳ ದುಡಿಯುವ 50% ಮ್ಯಾನೇಜರ್‌ಗಳು ಪ್ರತಿವರ್ಷ ಉದ್ಯೋಗ ಕಳೆದು ಕೊಳ್ಳಬಹುದು. ಆರಂಭಿಕ ಹಂತದ ನೇಮಕದಲ್ಲಿ 10-12% ಕಡಿಮೆಯಾಗುವ ಸಾಧ್ಯತೆ ಇದೆ. ಪ್ರತಿವರ್ಷ ಕಾಲೇಜುಗಳು 15 ಲಕ್ಷ ಎಂಜಿನಿಯರ್‌ಗಳನ್ನು ಕಳಿಸುತ್ತಿದ್ದು, ಉದ್ಯೋಗ ಲಭ್ಯತೆ ಕೇವಲ 2ರಿಂದ 2.25 ಲಕ್ಷ ಎಂದು ಹೇಳಲಾಗುತ್ತಿದೆ.

ಯಾವುದು ಸತ್ಯ?

ವಿಪರ್ಯಾಸವೆಂದರೆ ಪಿಂಕ್ ಸ್ಲಿಪ್ ಭಯದಲ್ಲಿ ಐಟಿ ಸೆಕ್ಟರ್ ತಳಮಳಗೊಳ್ಳುತ್ತಿರುವಾಗ ಟೆಕ್ ಕಂಪನಿಗಳ ಮಹಾ ಸಂಘ (Nasscom)  ಅಧ್ಯಕ್ಷ ಆರ್. ಚಂದ್ರಶೇಖರ ಅವರು ವ್ಯತಿರಿಕ್ತ ಹೇಳಿಕೆ ನೀಡಿದ್ದು, 2017ರಲ್ಲಿ ಟೆಕ್ ಕಂಪನಿಗಳು 1.70 ಲಕ್ಷ ನೇಮಕ ಮಾಡಿದ್ದು, ಮಾರ್ಚ್ 2017ರ ತ್ರೈಮಾಸಿಕದಲ್ಲಿಯೇ 50,000 ನೇಮಕ ಮಾಡಿವೆಯಂತೆ.

2025ರ ಹೊತ್ತಿಗೆ ಐಟಿ ಸೆಕ್ಟರ್‌ನಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿಯಾಗುವ ಆಶಾಭಾವನೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ. ಈ ಹೇಳಿಕೆಗೆ ಪುಷ್ಟಿ ಕೊಡುವಂತೆ ಟೆಕ್ ಕಂಪನಿಗಳ ಹಿರಿಯಣ್ಣ ಇನ್‌ಫೋಸಿಸ್ 2017ರಲ್ಲಿ 20,000 ನೇಮಕ ಮಾಡುವುದಾಗಿ ಹೇಳಿದೆ.

ಇದು ಸತ್ಯವೋ ಅಥವಾ ಮಿಥ್ಯವೋ ಎನ್ನುವುದನ್ನು ಮುಂದಿನ ದಿನಗಳಲ್ಲಿ ನೋಡಬೇಕು. ಐಟಿ ಕಂಪನಿಗಳಲ್ಲಿ ಉಂಟಾದ ಪಿಂಕ್ ಸ್ಲಿಪ್ ತಳಮಳದ ದಾವಾಗ್ನಿಯನ್ನು ತಣ್ಣಗಾಗಿಸುವ ಪ್ರಯತ್ನ ಇದು ಎಂದು ವಿಶ್ಲೇಷಕರು ಭಾಷ್ಯ ಬರೆಯುತ್ತಿದ್ದಾರೆ.

ಸಾಫ್ಟವೇರ್ ಕ್ಷೇತ್ರದ ಇಂದಿನ ತಳಮಳವನ್ನು ಕಂಪನಿಗಳ ಸ್ವಯಂಕೃತ ಅಪರಾಧ ಎಂದು ಧಾರಾಳವಾಗಿ ಹೇಳಬಹುದು. ತನ್ನ ಸಿಬ್ಬಂದಿಯ ವೇತನ, ಸೌಲಭ್ಯವನ್ನು ನಿಗದಿ ಮಾಡುವಾಗ ಅದು ಇನ್ನಿತರ ರಂಗಗಳಲ್ಲಿಯ ವೇತನ ಸೌಲಭ್ಯವನ್ನು ಪರಿಗಣನೆಗೆ ತೆಗೆದುಕೊಂಡಂತೆ ಕಾಣುವುದಿಲ್ಲ.

ಜಗತ್ತಿನಲ್ಲಿ ಯಾರೂ ಮಾಡದ, ತೋರದ ಕೆಲಸ ಮತ್ತು ನೈಪುಣ್ಯವನ್ನು ಟೆಕ್ಕಿಗಳು ಮಾಡುತ್ತಾರೆ ಎನ್ನುವ ಭ್ರಮಾಲೋಕವನ್ನು ಸೃಷ್ಟಿಸಲಾಯಿತು ಮತ್ತು ಆರಂಭದ ಹಂತದಲ್ಲಿಯೇ ಐದಂಕಿ ವೇತನ ನೀಡಲಾಯಿತು. ಮುಂಬರಲಿರುವ ಪರಿಣಾಮವನ್ನು ಯಾರೂ ಯೋಚಿಸುವ ಪ್ರಯತ್ನ ಮಾಡಲಿಲ್ಲ. ಟೆಕ್ಕಿಗಳು ಕೂಡ ಇಂಥ ಒಳ್ಳೆಯ ಪರಿಸ್ಥಿತಿಯೇ ಯಾವಾಗಲೂ ಇರುತ್ತದೆ ಎಂದು ಬಲವಾಗಿ ನಂಬಿದ್ದರು.

ಬದಲಾವಣೆಯ ಸಾಧ್ಯತೆಯನ್ನು ಎಂದೂ ಚಿಂತಿಸಲಿಲ್ಲ. ಆರಂಭದ ದಿನಗಳಲ್ಲಿ ಸಾಫ್ಟ್‌ವೇರ್ ಬಿಜಿನೆಸ್‌ನಲ್ಲಿ ಪೂರೈಕೆ ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿತ್ತು. ಹಾಗೆಯೇ ವ್ಯವಹಾರದಲ್ಲಿ ಬೇರೆ ಉದ್ಯಮದವರು ಹೊಟ್ಟೆ ಕಿಚ್ಚು ಪಡುವಷ್ಟು ಮಾರ್ಜಿನ್ ಕೂಡಾ ಇತ್ತು.

ದಿನಗಳು ಕಳೆದಂತೆ ಪೂರೈಸುವ ಕಂಪನಿಗಳು ನಾಯಿಕೊಡೆಗಳಂತೆ ಹೆಚ್ಚಿ, ಬೇಡಿಕೆ ಕಡಿಮೆಯಾಗಿ ಮಾರ್ಜಿನ್ ಕಡಿಮೆಯಾಯಿತು. ಅದೇ ರೀತಿ ನಿರ್ವಹಣಾ ವೆಚ್ಚ ಕಡಿಮೆಯಾಗಲಿಲ್ಲ.

ಒಂದು ಟೆಕ್ ಕಂಪನಿಯ ಮುಖ್ಯಸ್ಥನ ವಾರ್ಷಿಕ ಸಂಬಳ 67 ಕೋಟಿ ಎಂದರೆ, ಬಹುತೇಕ ಟೆಕ್ಕಿಗಳ ಸಂಬಳದ ಗಾತ್ರದ ಪರಿಚಯವಾಗಬಹುದು. ಈ ಸಂಬಳ ಸೌಲಭ್ಯಗಳಿಗೆ ಜೀವನ ಚಕ್ರವನ್ನು ಹೊಂದಿಸಿಕೊಂಡವರು, ಎಲ್ಲೂ ಕೆಲಸ ಪಡೆಯದೆ, ಅಥವಾ ಕಡಿಮೆ ಸಂಬಳಕ್ಕೆ ಒಪ್ಪಿಕೊಳ್ಳದೆ ಜೀವನ ರಥ ಓಡಿಸಬಹುದೇ ಎನ್ನುವುದು ಮುಖ್ಯಪ್ರಶ್ನೆ. ಇದೇ ಅವರ ದುಃಸ್ವಪ್ನದ ಹಿಂದಿನ ವ್ಯಾಕುಲತೆ.

ಕೆಲವರಿಗೆ ಪಿಂಕ್ ಸ್ಲಿಪ್ ಕೊಡಲು ಸಿಬ್ಬಂದಿಯ ಪಟ್ಟಿ ತಯಾರಿಸುವಂತೆ ಕಂಪನಿಯೊಂದರ ಮುಖ್ಯಸ್ಥರು ಮಾನವ ಸಂಪನ್ಮೂಲ ಅಧಿಕಾರಿ (ಎಚ್‌ಆರ್)ಗೆ ಹೇಳಿದಾಗ, ಯಾರನ್ನು ಮನೆಗೆ ಕಳಿಸುವುದು ಎಂದು ಸುಲಭಕ್ಕೆ ನಿರ್ಣಯಿಸಲಾಗದೆ ವಾರಗಟ್ಟಲೆ ಸಂದಿಗ್ಧದಲ್ಲಿ ಒದ್ದಾಡಿದ್ದರಂತೆ. ಒಬ್ಬರ ಅನ್ನ ಕಸಿಯುವಾಗ ಅನುಭವಿಸುವ ಪಾಪ ಪ್ರಜ್ಞೆ ಊಹೆಗೆ ನಿಲುಕದ್ದು!

ಗಣಕೀಕರಣ ಅಥವಾ ಸಾಫ್ಟವೇರ್ ಮೂಲಕ ಬ್ಯಾಂಕ್, ವಿಮಾ, ರೈಲ್ವೆ ಹೀಗೆ ಸಾವಿರಾರು ಇಲಾಖೆಗಳಲ್ಲಿ ಕೋಟ್ಯಂತರ ಉದ್ಯೋಗಿಗಳ ಬದುಕಿನ ಆಸರೆಯನ್ನು ಕಸಿದುಕೊಂಡ ಸಾಫ್ಟವೇರ್ ಉಧ್ಯಮ ಅದೇ ತಂತ್ರಜ್ಞಾನಕ್ಕೇ ಬಲಿಯಾಗುತ್ತಿರುವದು, ಆಧುನಿಕ ಜಗತ್ತಿನ ಒಂದು ಮಹಾ ವಿಪರ್ಯಾಸ ಎನ್ನಬಹುದು.

ಹಾಗೆಯೇ ತಮ್ಮ ಬೇಡಿಕೆಗಳಿಗೆ, ವೇತನ ಹೆಚ್ಚಳಕ್ಕೆ, ಸೌಲಭ್ಯಗಳಿಗೆ ಮತ್ತು ಉದ್ಯೋಗ ಸ್ಥಿರತೆಗಾಗಿ ಸದಾ ತಮ್ಮ ಕಾರ್ಯಾಲಯದ ದ್ವಾರದ ಮುಂದೆ ಕೆಂಪು ಬಾವುಟದಡಿಯಲ್ಲಿ ಮುಷ್ಟಿ ಎತ್ತಿ, ಕುತ್ತಿಗೆ ನರ ಉಬ್ಬಿಸಿ ಘೋಷಣೆ ಕೂಗುವ ದುಡಿಯುವ ವರ್ಗವನ್ನು ಆಶ್ಚರ್ಯದಿಂದ ನೋಡುತ್ತಿದ್ದ ಟೆಕ್ಕಿಗಳು ಮುಂದಿನ ದಿನಗಳಲ್ಲಿ ಅವರಿಗೆ ಕೈ ಜೋಡಿಸುವ ಮತ್ತು ಅವರೊಂದಿಗೆ ಧ್ವನಿಗೂಡಿಸುವ ಕಾಲ ಬಂದಿದ್ದು ಇನ್ನೊಂದು ವಿಪರ್ಯಾಸ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಗ್ಯಾಜೆಟ್

    ಜಿಯೋ ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್!ಮಾಹಿತಿಗೆ ಈ ಸುದ್ದಿ ನೋಡಿ

    ಜಿಯೋ ತನ್ನ ಲಕ್ಷಾಂತರ ಗ್ರಾಹಕರಿಗಾಗಿ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಪ್ರತಿ ದಿನ 1.5 ಜಿಬಿ ಡೇಟಾದಿಂದ 4 ಜಿಬಿ ಡೇಟಾವರೆಗೆ ಬೇರೆ ಬೇರೆ ಸಿಂಧುತ್ವದ ಪ್ಲಾನ್ ಶುರು ಮಾಡಿದೆ. ಇದ್ರ ಜೊತೆ ಅನಿಯಮಿತ ಸ್ಥಳೀಯ ಹಾಗೂ ಎಸ್ಡಿಡಿ ಕರೆಗಳು ಲಭ್ಯವಾಗಲಿವೆ. ಜಿಯೋದ ಹೊಸ ಪ್ಲಾನ್ ಕಾಂಬೋ ಪ್ಯಾಕ್ ಆಗಿದೆ. ಇದ್ರಲ್ಲಿ 197 ರೂಪಾಯಿ ಪ್ಲಾನ್ ಗ್ರಾಹಕರನ್ನು ಸೆಳೆದಿದೆ. 197 ರೂಪಾಯಿ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿದ್ದು, 2ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಸೌಲಭ್ಯದ…

  • ಸುದ್ದಿ

    ಹುಷಾರ್ ! ಫೇಸ್​ಬುಕ್​ನಲ್ಲಿ ನೀವು ಕಳುಹಿಸುವ ವಾಯ್ಸ್ ಮೆಸೇಜ್ ಮೂರನೇ ವ್ಯಕ್ತಿಯು ಕೇಳಬಹುದು!ಇದನ್ನೊಮ್ಮೆ ಓದಿ …..!

    ಫೇಸ್ ಬುಕ್  ಮೆಸೆಂಜರ್ನಲ್ಲಿ  ಕಳುಯಿಸುವ ವಾಯ್ಸ್ ಸಂದೇಶಗಳು ಮೂರನೇ ವ್ಯಕ್ತಿ ಕೇಳಿಸಿಕೊಳ್ಳುತ್ತಾನೆ ​ಎನ್ನುವ ವಿಚಾರ ಬೆಳಕಿಗೆ ಬಂದಿದೆ .ಇದು ಸಾಕಷ್ಟು ವಿರೋದಕ್ಕೆ ಕಾರಣವಾಗಿದೆ . ಫೇಸ್​ಬುಕ್​, ವಾಟ್ಸ್​​ಆ್ಯಪ್​ ಸೇರಿಸಾಕಷ್ಟುಮೆಸೆಂಜರ್​ಗಳಲ್ಲಿನಾವುಕಳುಹಿಸುವಸಂದೇಶಎಷ್ಟುಸುರಕ್ಷಿತಎನ್ನುವಪ್ರಶ್ನೆಆಗಾಗಕೇಳಿಬರುತ್ತಲೇಇರುತ್ತದೆ.  ಈಮೊದಲುಫೇಸ್​ಬುಕ್ಸಂಸ್ಥೆಗ್ರಾಹಕರಮಾಹಿತಿಯನ್ನುಮಾರಾಟಮಾಡಿದೆಎನ್ನುವಗಂಭೀರಆರೋಪಕೇಳಿಬಂದಿತ್ತು. ಈಗಮೆಸೆಂಜರ್​ನಲ್ಲಿಕಳುಹಿಸುವಆಡಿಯೋಹಾಗೂವಾಯ್ಸ್​ ಮೆಸೇಜ್​ಗಳುಎಷ್ಟುಖಾಸಗಿಯಾಗಿಉಳಿಯುತ್ತವೆಎನ್ನುವಪ್ರಶ್ನೆಮೂಡಿದೆ ಆಡಿಯೋಕಳುಹಿಸಿದರೆಅದನ್ನುಅಕ್ಷರರೂಪದಲ್ಲಿಸಿದ್ಧಪಡಿಸಿಕೊಡುವಆಯ್ಕೆಫೇಸ್​ಬುಕ್​ ಮೆಸೆಂಜರ್​ನಲ್ಲಿಲಭ್ಯವಿದೆ. ಆದರೆಇದರಲ್ಲಿಕೆಲಸಮಸ್ಯೆಗಳುಇರುವುದಾಗಿಬಳಕೆದಾರರುದೂರುನೀಡಿದ್ದರು. ಹೀಗಾಗಿಫೇಸ್​ಬುಕ್​ ಮೆಸೆಂಜರ್​ನಲ್ಲಿಕಳುಹಿಸುವ​ ವಾಯ್ಸ್​ ಸಂದೇಶಸರಿಯಾಗಿಅಕ್ಷರರೂಪಕ್ಕೆಬಂದಿದೆಯೇಎಂಬುದನ್ನುಪರೀಕ್ಷಿಸಲುಫೇಸ್​​ಬುಕ್​ ಸಿಬ್ಬಂದಿಯನ್ನುಆಯ್ಕೆಮಾಡಿಕೊಂಡಿತ್ತುಎನ್ನುವವಿಚಾರಬೆಳಕಿಗೆಬಂದಿದೆ. ಬಳಕೆದಾರರುಮೆಸೆಂಜರ್​ನಲ್ಲಿಕಳುಹಿಸುವವಾಯ್ಸ್​​ ಮೆಸೇಜ್​ ಹಾಗೂಅಕ್ಷರರೂಪಕ್ಕೆತರಲಾದಮೆಸೇಜ್​ ಸಂಗ್ರಹಿಸಿದ್ದಫೇಸ್​ಬುಕ್​ ಎರಡನ್ನೂಪರಿಶೀಲನೆನಡೆಸಿತ್ತು. ಈಬಗ್ಗೆಅನೇಕರುಅಪಸ್ವರಎತ್ತಿದ್ದಾರೆ. ಈಹಿನ್ನೆಲೆಯಲ್ಲಿಈಪ್ರಯತ್ನವನ್ನುಸಂಸ್ಥೆಕೈಬಿಟ್ಟಿದೆ. ಅಲ್ಲದೆ, ನಾವುವಾಯ್ಸ್​​ ಮೆಸೇಜ್ಅನ್ನುಸುರಕ್ಷಿತವಾಗಿಟ್ಟಿದ್ದೇವೆ, ಖಾಸಗಿತನಕ್ಕೆಧಕ್ಕೆಬಂದಿಲ್ಲಎಂದುಹೇಳಿದೆ.

  • inspirational

    ಶೈನ್, ಭೂಮಿ ಮಧ್ಯೆ ಫೈಟ್, ಭೂಮಿಗೆ ವಾರ್ನಿಂಗ್ ಕೊಟ್ಟ ಶೈನ್.

    ಬಿಗ್‍ಬಾಸ್ ಫಿನಾಲೆಗೆ ಉಳಿದಿರುವುದು ಇನ್ನೂ ಎರಡು ದಿನ ಮಾತ್ರ. ಈ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ. ಭೂಮಿ ಶೆಟ್ಟಿ ಮತ್ತು ಶೈನ್ ಶೆಟ್ಟಿ ಇಬ್ಬರೂ ಕುಂದಾಪುರದವರು. ಇವರಿಬ್ಬರು ಯಾವಾಗಲೂ ತಮಾಷೆಮಾಡಿಕೊಂಡು, ಹೊಡೆದಾಡಿಕೊಳ್ಳುತ್ತಾ, ತರ್ಲೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹ-ಬಾಂಧವ್ಯವಿದೆ. ಈ ವಿಚಾರ ಬಿಗ್‍ಬಾಸ್ ಮನೆಯ ಸದಸ್ಯರಿಗೂ ತಿಳಿದಿದೆ. ಆದರೆ ಬಿಗ್‍ಬಾಸ್ ಮುಗಿಯುತ್ತಿರುವ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ. ಶೈನ್, ದೀಪಿಕಾ, ಭೂಮಿ, ವಾಸುಕಿ, ಮತ್ತು ಕುರಿ…

  • ದೇವರು-ಧರ್ಮ

    ಸಹಸ್ರ ದೇವತೆಗಳ ಅನುಗ್ರಹಕ್ಕಾಗಿ ಕಾರ್ತಿಕ ಹುಣ್ಣಿಮೆಯಂದು ಹೀಗೆ ಮಾಡಿ…!

    ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಪೂರ್ಣಿಮೆಯು ಅತ್ಯಂತ ಶ್ರೇಷ್ಠವಾದ ದಿನ. ಧಾರ್ಮಿಕವಾಗಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡ ಈ ದಿನ ಸಮಸ್ತ ದೇವತೆಗಳಿಗೂ ಪೂಜೆ ಹಾಗೂ ಪ್ರಾರ್ಥನೆಯನ್ನುಸಲ್ಲಿಸಬೇಕು. ಈ ದಿನ ಹರಿ-ಹರರ ಭಕ್ತರು ತಮ್ಮ ದೇವರಿಗಾಗಿ ವಿಶೇಷ ಉಪವಾಸ ವ್ರತಗಳನ್ನು ಕೈಗೊಂಡರೆ ಅವರು ಪ್ರಸನ್ನರಾಗುವರು. ಜೊತೆಗೆ ಭಕ್ತರ ಜೀವನೋದ್ಧಾರಕ್ಕೆ ಆಶೀರ್ವದಿಸುವರು ಎನ್ನಲಾಗುವುದು. ಕಾರ್ತಿಕ ಹುಣ್ಣಿಮೆಯನ್ನು ಈ ಬಾರಿ ನವೆಂಬರ್12 ರಂದು ಆಚರಿಸಲಾಗುತ್ತದೆ, ಇದನ್ನು ವಿಶೇಷವಾಗಿ ಶಿವನಿಗೆ ಮೀಸಲಾದ ದಿನ ಎಂದು ಹೇಳಲಾಗುವುದು. ಕೆಲವು ಪುರಾಣ ಕಥೆಗಳ…

  • ಜ್ಯೋತಿಷ್ಯ

    ದೇವಿಯ ಕೃಪೆಯಿಂದ ಈ ರಾಶಿಗಳಿಗೆ ಶುಭಯೋಗವಿದ್ದು ನಿಮ್ಮ ರಾಶಿಯೂ ಇದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(8 ಮಾರ್ಚ್, 2019) ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಮೇಲೆ ನಿಮ್ಮ ಅಭಿಪ್ರಾಯ ಹೇರುವುದು ಅವರನ್ನು ಅನಗತ್ಯವಾಗಿ…

  • ಆರೋಗ್ಯ, ಉಪಯುಕ್ತ ಮಾಹಿತಿ

    ತುಂಬಾ ಜನಕ್ಕೆ ಮಧ್ಯಾಹ್ನದ ಲಂಚ್ ಮಾಡಿದ ತಕ್ಷಣ ನಿದ್ರೆ ಬರುತ್ತದೆ ಏಕೆ ಗೊತ್ತಾ..? ತಿಳಿಯಲು ಈ ಲೇಖನ ಓದಿ ..

    ಮನುಷ್ಯನಿಗೆ ಉಸಿರಾಡುವುದು, ನೀರು ಕುಡಿಯುವುದು, ಆಹಾರ ತಿನ್ನುವುದು ಎಷ್ಟು ಮುಖ್ಯವೋ ನಿದ್ರೆ ಮಾಡುವುದು ಸಹ ಅಷ್ಟೇ ಮುಖ್ಯ…ಆದರೆ ತುಂಬಾ ಜನರಿಗೆ ಆ ನಿದ್ರೆಯೇ ದೊಡ್ಡ ಸಮಸ್ಯೆಯಾಗಿದೆ, ರಾತ್ರಿಯೆಲ್ಲಾ ನಿದ್ರೆ ಬರುವುದಿಲ್ಲ ಹಗಲೆಲ್ಲಾ ಕಣ್ಣು ಮುಚ್ಚುತ್ತಲೇ ಇರುತ್ತಾರೆ, ಎಷ್ಟು ಪ್ರಯತ್ನಿಸಿದರು ರಾತ್ರಿ ಸಮಯ ಬಾರದ ನಿದ್ರೆ ಮಧ್ಯಾಹ್ನದ ಲಂಚ್ ಮಾಡಿದ ತಕ್ಷಣ ಅದು ಬಂದು ಬಿಡುತ್ತದೆ.