ಸುದ್ದಿ

ಶಾಕಿಂಗ್ ಸುದ್ದಿ..!ಪ್ರೀತಿಸಿದ ಯುವಕನೊಂದಿಗೆ ತನ್ನ ಪತ್ನಿಯನ್ನು ಮದ್ವೆ ಮಾಡಿದ್ದಲ್ಲದೇ ತನ್ನ ಮಗುವನ್ನು ಧಾರೆ ಎರೆದ ಪತಿಮಹಾರಾಯ..!

267

ಪ್ರೀತಿ ಅನ್ನೋದು ನಿಸ್ವಾರ್ಥವಾಗಿರಬೇಕು. ಈ ವಾಕ್ಯಕ್ಕೆ ತಕ್ಕಂತಹ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಸಂತೋಷದಿಂದ ಇರಲಿ ಅಂತಾ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ. ಇದರ ಜೊತೆಗೆ ತಮ್ಮಿಬ್ಬರ ದಾಂಪತ್ಯದಲ್ಲಿ ಹುಟ್ಟಿದ ಮಗುವನ್ನು ಉಡುಗೊರೆಯಾಗಿ ನೀಡಿದ್ದಾನೆ.

ಬಿಹಾರದ ಭಗಲ್ಪುರ ಜಿಲ್ಲೆಯ ನಿವಾಸಿ ನಾಲ್ಕು ವರ್ಷಗಳ ಹಿಂದೆ, ಜಾರ್ಖಂಡನ ಗೊಡ್ಡಾ ಜಿಲ್ಲೆಯ ಗ್ರಾಮವೊಂದರ ಯುವತಿಯನ್ನು ಮದುವೆಯಾಗಿದ್ದ. ದಂಪತಿಗೆ ಒಂದು ಮಗುವಿತ್ತು. ಆದ್ರೆ ಕೆಲ ದಿನಗಳ ಹಿಂದೆ ಪ್ರಕರಣವೊಂದರಲ್ಲಿ ಸಿಲುಕಿ ಪತಿ ಜೈಲಿಗೆ ಹೋಗಿದ್ದನು.

ಈ ಸಂದರ್ಭದಲ್ಲಿ ಆತನ ಪತ್ನಿ ಮತ್ತು ಮನೆ ಮಾಲೀಕನ ಮಗ ಮನು ಕುಮಾರ್ ಸಿಂಗ್ ಜೊತೆ ಸ್ನೇಹ ಬೆಳೆದು, ಪ್ರೀತಿ ಹುಟ್ಟಿತ್ತು. ಬಳಿಕ ಇಬ್ಬರು ಒಟ್ಟಿಗೆ ಜೀವಿಸಲು ನಿರ್ಧರಿಸಿದ್ರು.

ಆದ್ರೆ ಜೈಲಿನಲ್ಲಿದ್ದ ಪತಿ ಬಿಡುಗಡೆಗೊಂಡು ಮನೆಗೆ ಹಿಂದಿರುಗಿದಾಗ, ಪತ್ನಿ ಹಾಗು ಮಾಲೀಕನ ಮಗ ಮನು ಕುಮಾರ್ ಜೊತೆಗಿನ ಪ್ರೀತಿಯ ವಿಷಯ ತಿಳಿದು ಆಘಾತಕ್ಕೊಳಗಾಗಿದ್ದಾನೆ. ಆದ್ರೂ ಪತ್ನಿಯನ್ನು ತನ್ನ ಜೊತೆಗಿರಲು ಮನವೊಲಿಸಲು ಪ್ರಯತ್ನಿಸಿದ್ದಾನೆ.

ಆದ್ರೆ ಆಕೆ ಒಪ್ಪಲಿಲ್ಲ. ಕೊನೆಗೆ ಪತಿ ಇಬ್ಬರು ಕುಟುಂಬದ ಒಪ್ಪಿಗೆಯೊಂದಿಗೆ ಸ್ಥಳೀಯ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಮನು ಕುಮಾರ್ ಸಿಂಗ್ ಜೊತೆ ತನ್ನ ಪತ್ನಿಯನ್ನು ಧಾರೆ ಎರೆದು ಕೊಟ್ಟಿದ್ದಾನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ನೀತಿ ಕಥೆ

    ಸ್ವರ್ಗ..ನರಕಗಳ ನಡುವೆ ಇರುವ ವ್ಯತ್ಯಾಸವೇನೆಂದು ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ …

    ಅದೊಂದು ಶಾಲೆ…ಅದರಲ್ಲಿ ಒಬ್ಬ ವಿದ್ಯಾರ್ಥಿಗೆ ಯಾವುದಾದರೂ ಹೊಸ ವಿಷಯವನ್ನು ತಿಳಿದುಕೊಳ್ಳುವು ದೆಂದರೆ ಬಹಳ ಇಷ್ಟ. ಈ ನಿಟ್ಟಿನಲ್ಲಿ ಒಂದು ದಿನ ಆ ಹುಡುಗ ತನ್ನ ಟೀಚರ್ ಬಳಿ ಸ್ವರ್ಗ ಹಾಗೂ ನರಕ ಎಂದರೇನು. ಇವೆರಡರ ನಡುವೆ ಇರುವ ವ್ಯತ್ಯಾಸವೇನು? ಎಂದು ಪ್ರಶ್ನಿಸುತ್ತಾನೆ.

  • ಸಿನಿಮಾ

    TRP ರೇಟಿಂಗ್ಸ್ ನಲ್ಲೂ ಇತಿಹಾಸ ಬರೆದ ‘ದೊಡ್ಮನೆ ಹುಡುಗ’ “ಪುನೀತ್”!ಈ ಲೇಖನಿ ಓದಿ….

    ಕನ್ನಡ ರಾಜರತ್ನ ಪುನೀತ್ ರಾಜ್ ಕುಮಾರ್ ನಟಿಸಿರುವ “ದೊಡ್ಮನೆ ಹುಡುಗ” ಚಿತ್ರವು, ಪ್ರಪ್ರಥಮ ಬಾರಿಗೆ ದೂರದರ್ಶನ(ಟೆಲಿವಿಷನ್) ಇತಿಹಾಸದಲ್ಲಿ ಹೊಸದಂದು ಐತಿಹಾಸಿಕ ದಾಖಲೆ ಮಾಡಿದೆ. ಕನ್ನಡದ ಝೀ ಕನ್ನಡ ವಾಹಿನಿಯಲ್ಲಿ  ಮೇ 28, ಭಾನುವಾರ ಸಂಜೆ 7.30 ರ ವೇಳೆ ಪ್ರಸಾರವಾದ ದೊಡ್ಮನೆ ಹುಡುಗ ಚಿತ್ರವು 12,162 (ಟಿವಿಟಿ)ರೇಟಿಂಗ್ಸ್ ಗಳಿಸಿದೆ.    ಇದು ದೂರದರ್ಶನ ಪ್ರದರ್ಶನ ಇತಿಹಾಸದಲ್ಲಿ ಅತಿ ಹೆಚ್ಚು ರೇಟಿಂಗ್ಸ್ ಪಡೆದ ಕನ್ನಡದ ಮೊದಲ ಚಿತ್ರ. ಹಾಗೂ ಈ ಚಲನಚಿತ್ರವು ನಗರ ಮಾರುಕಟ್ಟೆಯಲ್ಲಿ 4,490 ಟಿವಿಟಿ(ರೇಟಿಂಗ್ಸ್ಗ)ಳನ್ನು ಗಳಿಸಿದೆ. ಈ…

  • ಸುದ್ದಿ

    ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋತರೂ ಸಹ ನೀಡಬೇಕಂತೆ ಸಚಿವ ಸ್ಥಾನ..!ಏಕೆ ಗೊತ್ತಾ..?

    ರಾಜ್ಯದಲ್ಲಿ ಚುನಾವಣೆ ಕಾವು ಮುಗಿದಿದೆ. ಆದ್ರೆ ಮೇ 23ರ ಫಲಿತಾಂಶದ ಮೇಲೆ ಎಲ್ಲಾ ರಾಜಕೀಯ ಪಕ್ಷಗಳು ಉಸಿರು ಬಿಗಿ ಹಿಡಿದು ಕಾಯುತ್ತಿವೆ. ಅದ್ರಲ್ಲೂ ಈ ಬಾರಿ ಹೈವೋಲ್ಟೇಜ್‍ ಕ್ಷೇತ್ರವಾಗಿದ್ದ ಮಂಡ್ಯದತ್ತ ಇಡೀ ದೇಶದ ಚಿತ್ತ ನೆಟ್ಟಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ನಿಖಿಲ್‍ ಕುಮಾರಸ್ವಾಮಿ ಕಣಕ್ಕಿಳಿದಿದ್ದು, ಜೆಡಿಎಸ್‍ ನಾಯಕರು ಸೋಲು-ಗೆಲುವಿನ ಲೆಕ್ಕಾಚಾರ ಹಾಕ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಒಂದು ವೇಳೆ ಚುನಾವಣೆ ಫಲಿತಾಂಶ ಜೆಡಿಎಸ್‍ಗೆ ವ್ಯತಿರಿಕ್ತವಾಗಿ ಬಂದ್ರೆ ನಿಖಿಲ್‍ ಅವರನ್ನು ಸಚಿವರನ್ನಾಗಿ ಮಾಡಲೇಬೇಕು ಎಂಬ ಒತ್ತಾಯ ಕೇಳಿ ಬಂದಿದೆ….

  • ಸುದ್ದಿ

    ಮದ್ವೆ ಆಗಲು ಏಳು ಸಮುದ್ರ ದಾಟಿ ಬಂದಳು!ಯಾವ ಲವ್ ಸ್ಟೋರಿಗೂ ಕಡಿಮೆಯಿಲ್ಲ ಇವರ ಪ್ರೀತಿ…

    ಪ್ರೀತಿ ಕುರುಡು. ಅದಕ್ಕೆ ವಯಸ್ಸು, ಜಾತಿ, ಊರಿನ ನಿರ್ಬಂಧವಿಲ್ಲ. ಏಳು ಸಮುದ್ರಗಳನ್ನು ದಾಟಿ ಬರುವ ತಾಕತ್ತು ಪ್ರೀತಿಗಿದೆ ಎನ್ನಲಾಗುತ್ತದೆ. ಈ ಮಾತು ಮಧ್ಯಪ್ರದೇಶದ ಹೋಷಂಗಾಬಾದ್ ಯುವಕನ ಪ್ರೀತಿ ವಿಚಾರದಲ್ಲಿ ನಿಜವಾಗಿದೆ. ದೀಪಕ್ ರಜಪೂತ್ ಎಂಬಾತನನ್ನು ಅಮೆರಿಕಾ ಪ್ರೇಯಸಿ ಮದುವೆಯಾಗಿದ್ದಾಳೆ. 36 ವರ್ಷದ ದೀಪಕ್ ಹಾಗೂ ಅಮೆರಿಕಾದ 40 ವರ್ಷದ ಜೂಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂಲಿ, ಯುಎಸ್ಎಯ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದಾಳೆ. ಫೇಸ್ಬುಕ್ ನಲ್ಲಿ ಶುರುವಾದ ಸ್ನೇಹ, ವಾಟ್ಸಾಪ್, ಕರೆ ಮೂಲಕ ಪ್ರೀತಿಗೆ ತಿರುಗಿತ್ತು….

  • ಸುದ್ದಿ, ಸ್ಪೂರ್ತಿ

    15 ವರ್ಷಗಳಿಂದ ಹೆಗಲ ಮೇಲೆ ನೀರು ಹೊತ್ತು ಬರಡು ಭೂಮಿಯಲ್ಲಿ ಬಂಗಾರದಂತಹ ಬೆಳೆ ತೆಗೆದ ರೈತ, ಈ ಸುದ್ದಿ ನೋಡಿ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಗುಡಪಳ್ಳಿ ಗ್ರಾಮದ ವಿಲಾಸ್‍ರಾವ್ ಹೂಗಾರ್ ಇವತ್ತಿನ ನಮ್ಮ ಹೀರೋ. ಭೀಕರ ಬರಗಾಲದಿಂದ ನಲುಗಿ ಹೋಗಿರುವ ಜಿಲ್ಲೆಯಲ್ಲಿ ರೈತರು ತತ್ತರಿಸಿ ಹೋಗಿದ್ದಾರೆ. ಆದರೆ 15 ವರ್ಷಗಳ ಹಿಂದೆ ವಿಲಾಸ್‍ರಾವ್ ಬರಡು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಬಿಸಿಲ ನಾಡು ಬೀದರ್ ನ ಔರಾದ್ ತಾಲೂಕಿನ ವಿಲಾಸ್‍ರಾವ್ ಹೂಗಾರ್ ಅವರು ಬರಡು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದಿದ್ದಾರೆ. ಇದಕ್ಕಾಗಿ 15 ವರ್ಷಗಳಿಂದ ಹೆಗಲ ಮೇಲೆ ನೀರು ಹೊತ್ತಿದ್ದಾರೆ. ಸಾಹಸಿ ಜೀವನ ನೋಡಿದ ಸ್ಥಳೀಯ…

  • ಸಿನಿಮಾ

    ಸ್ವಾತಂತ್ರ್ಯ ಬಂದ ನಂತರ ಮೊದಲ ಉಗ್ರ ಹಿಂದೂ ಎಂದು ವಿವಾಧಾತ್ಮಕ ಹೇಳಿಕೆ ಕೊಟ್ಟ ನಟ ಕಮಲ್ ಹಾಸನ್..!

    ಭಾರತ ಸ್ವತಂತ್ರ ಪಡೆದ ನಂತರ ಮೊದಲ ಉಗ್ರ ಒಬ್ಬ `ಹಿಂದೂ’ ಆಗಿದ್ದ ಎಂದು ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಹೇಳುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಎಂಎನ್ಎಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಮುಸ್ಲಿಂ ಪ್ರಾಬಲ್ಯ ಹೊಂದಿರುವ ಪ್ರದೇಶ ಎಂಬ ಕಾರಣಕ್ಕೆ ನಾನು ಈ ಮಾತು ಹೇಳುತ್ತಿಲ್ಲ. ಗಾಂಧಿ ಪ್ರತಿಮೆಯ ಮುಂದೆ ನಿಂತು ಈ ಮಾತು ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಆಗಿದ್ದನು. ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದು…