ಸಿನಿಮಾ

ಬಿಗ್ ಬಾಸ್ ಹೊಸ ಸಂಚಿಕೆಗೆ ಬಾಹುಬಲಿ ನಾಯಕಿ ಅನುಷ್ಕಾ ಶೆಟ್ಟಿ ನಿರೂಪಣೆ..!

65

ದಕ್ಷಿಣ ಭಾರತದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ತೆಲುಗಿನ ಬಿಗ್ ಬಾಸ್ ಸೀಸನ್ -3 ರಿಯಾಲಿಟಿ ಶೋಗೆ ನಿರೂಪಣೆ ಮಾಡುತ್ತಾರೆ ಎಂಬ ಮಾತು ಟಿ-ಟೌನ್‍ನಲ್ಲಿ ಕೇಳಿಬರುತ್ತಿದೆ.

ಬಿಗ್ ಬಾಸ್ ಮೊದಲ ಸೀಸನ್ ನಟ ಜೂ. ಎನ್‍ಟಿಆರ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ನಂತರ ಎರಡನೇ ಸೀಸನ್ ನಟ ನಾನಿ ನಿರೂಪಣೆ ಮಾಡಿದ್ದರು. ಈಗ ಮೂರನೇ ಸೀಸನ್‍ಗೆ ಜೂ. ಎನ್‍ಟಿಆರ್ ಅವರ ಜೊತೆ ಮಾತುಕತೆ ನಡೆಸಲಾಗಿತ್ತು. ಆದರೆ ಅವರು ರಾಜಮೌಳಿ ನಿರ್ದೇಶನದ ‘ಆರ್‍ಆರ್‍ಆರ್’ ಚಿತ್ರದಲ್ಲಿ ಬ್ಯುಸಿ ಇರುವ ಕಾರಣ ಈ ಶೋ ನಿರೂಪಣೆ ಮಾಡಲು ನಿರಾಕರಿಸಿದ್ದಾರೆ. 

ಜೂ. ಎನ್‍ಟಿಆರ್ ಅಲ್ಲದೆ ನಾಗಾರ್ಜುನ, ವೆಂಕಟೇಶ್, ರಾಣಾ ದಗ್ಗುಬಾಟಿ ಹಾಗೂ ವಿಜಯ್ ದೇವರಕೊಂಡ ಅವರನ್ನು ಬಿಗ್ ಬಾಸ್ ಸೀಸನ್ -3 ನಿರೂಪಣೆ ಮಾಡಲು ಅಪ್ರೋಚ್ ಮಾಡಲಾಗಿದೆ. ಆದರೆ ಕಾರಣಾಂತರದಿಂದ ನಟರು ಈ ಅವಕಾಶವನ್ನು ತಿರಸ್ಕರಿಸಿದ್ದಾರೆ.

ನಟರು ನಿರೂಪಣೆ ಮಾಡಲು ಒಪ್ಪದ ಕಾರಣ ಖಾಸಗಿ ವಾಹಿನಿ ನಿರೂಪಕಿಯಿಂದ ಕಾರ್ಯಕ್ರಮವನ್ನು ನಡೆಸಿಕೊಡಲು ಪ್ಲಾನ್ ಮಾಡಿದೆ. ಹಾಗಾಗಿ ರಿಯಾಲಿಟಿ ಶೋ ತಂಡ ನಟಿ ಅನುಷ್ಕಾ ಶೆಟ್ಟಿ ಅವರಿಗೆ ನಿರೂಪಣೆ ಮಾಡಲು ಅಪ್ರೋಚ್ ಮಾಡಿದೆ ಎನ್ನಲಾಗಿದೆ. ಆದರೆ ಇದರ ಬಗ್ಗೆ ಅನುಷ್ಕಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಮೊದಲ ಸೀಸನ್ ನಿರೂಪಣೆ ಮಾಡಿದ ಜೂ. ಎನ್‍ಟಿಆರ್ ಅವರು ಒಂದು ಸಂಚಿಕೆಗೆ 50 ಲಕ್ಷ ರೂ. ಸಂಭಾವನೆ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ. ಎರಡನೇ ಸೀಸನ್ ನಟ ನಾನಿ ಅವರಿಗೆ ಒಂದು ಸಂಚಿಕೆಗೆ 10 ಲಕ್ಷ ರೂ. ಸಂಭಾವನೆ ನೀಡಲಾಗುತ್ತಿತ್ತು ಎನ್ನಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಇಲ್ಲಿ ಅ ಅಕ್ಷರಗಳಿಂದ ಪ್ರಾರಂಭವಾಗುವ ಎಲ್ಲಾ ಕನ್ನಡ ಸಿನಿಮಾಗಳ ಪಟ್ಟಿಯನ್ನು ಕೊಟ್ಟಿದ್ದೇವೆ..ಯಾವುದಾದ್ರೂ ಸಿನಿಮಾ ಹೆಸರು ತಪ್ಪಿ ಹೋಗಿದ್ದಾರೆ ಕಾಮೆಂಟ್ ಮಾಡಿ ತಿಳಿಸಿ…

    ನಾವು ಇಲ್ಲಿ ಅ, ಆ ಅಕ್ಷರಗಳಿಂದ ಪ್ರಾರಂಭವಾಗುವ ಎಲ್ಲಾ ಕನ್ನಡ ಸಿನಿಮಾಗಳ ಪಟ್ಟಿಯನ್ನು ಕೊಟ್ಟಿದ್ದೇವೆ.ಅ ಮತ್ತು ಆ ಅಕ್ಷರಗಳಿಂದ ಪ್ರಾರಂಭವಾಗುವ ಯಾವುದಾದರೂ ಸಿನಿಮಾ ಹೆಸರು ತಪ್ಪಿ ಹೋಗಿದ್ದಾರೆ ಕಾಮೆಂಟ್ ಮಾಡಿ ತಿಳಿಸಿ… 1. ಅಗ್ರಜ 2.ಅಜ್ಜು 3.ಅಣ್ಣ ಬಾಂಡ್ 4.ಅನುರಾಗ ಸಂಗಮ 5.ಅಪ್ಪಾಜಿ 6.ಅಮೃತಧಾರೆ 7.ಅರಮನೆ 8.ಅರುಣರಾಗ 9.ಅಲ್ಲಮ 10.ಅವಳೇ ನನ್ನ ಹೆಂಡತಿ 11.ಅವ್ವ 12.ಅಹಂ ಪ್ರೇಮಾಸ್ಮಿ 13.ಆಕಾಶ ಗಂಗೆ 14.ಆಕಾಶ್ 15.ಆಕ್ಸಿಡೆಂಟ್ ೨೦೦೮ 16.ಆಗೋದೆಲ್ಲ ಒಳ್ಳೇದಕ್ಕೆ 17.ಆಘಾತ 18.ಆಟಗಾರ 19.ಆದಿ 20.ಆಪ್ತ ರಕ್ಷಕ 21.ಆಪ್ತಮಿತ್ರ 22.ಆಯುಧ 23.ಆಹಾ ನನ್ನ…

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ರಾಶಿಗಳಿಗೆ ವಿಪರೀತ ಧನಯೋಗವಿದ್ದು, ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(24 ಫೆಬ್ರವರಿ, 2019) ನಿಮ್ಮ ಸಕಾಲಿಕ ಸಹಾಯ ಇನ್ನೊಬ್ಬರ ಜೀವ ಉಳಿಸುತ್ತದೆ. ಈ ಸುದ್ದಿ ನಿಮ್ಮ ಕುಟುಂಬದ…

  • ಸುದ್ದಿ

    ಇಂದು ಚಂದನ್ ಶೆಟ್ಟಿ-ನಿವೇದಿತಾ ಗೌಡ ನಿಶ್ಚಿತಾರ್ಥ..ಎಲ್ಲಿ ಗೊತ್ತ ?

    ಗಾಯಕ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ನಿಶ್ಚಿತಾರ್ಥ ಇಂದು (ಸೋಮವಾರ) ನಡೆಯಲಿದೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಿವೇದಿತಾ ಮತ್ತು ಚಂದನ್ ಪ್ರೇಮ ಜೋಡಿಗಳ ರೀತಿಯಲ್ಲಿಯೇ ಬಿಂಬಿತವಾಗಿದ್ದರು. ರಿಯಾಲಿಟಿ ಶೋ ಬಳಿಕ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಂತಾ ಹೇಳಿದ್ದರು. ಕಳೆದ ಎರಡು ವರ್ಷಗಳಿಂದ ಚಂದನ್ ಮತ್ತು ನಿವೇದಿತಾ ನಡುವೆ ಪ್ರೇಮಾಂಕುರವಾಗಿದೆ…

  • ಸುದ್ದಿ

    ನೆಲ್ಲಿಕಾಯಿಯಲ್ಲಿದೆ ಇಷ್ಟೆಲ್ಲಾ ಪರಿಹಾರ ಗೊತ್ತಾದರೆ ಶಾಕ್ ಆಗ್ತೀರಾ,..!!

    ಸಹಜವಾಗಿ ಎಲ್ಲರಲ್ಲೂ  ಕಾಣಿಸಿಕೊಳ್ಳುವ ಹಲವಾರು ಸೌಂದರ್ಯ ಸಮಸ್ಯೆಗಳಿಗೆ ಬೆಟ್ಟದ ನೆಲ್ಲಿಕಾಯಿ ರಾಮಬಾಣ ಎಂದರೆ ಹೇಳಿದರೆ  ತಪ್ಪಾಗಲಾರದು. ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿಯನ್ನು ನೈಸರ್ಗಿಕ ಸೌಂದರ್ಯ ವರ್ಧಕ ಎನ್ನಬಹುದು. ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ  ನೆಲ್ಲಿಕಾಯಿ ಮನೆಮದ್ದು ಎಂದರೆ ತಪ್ಪಾಗಲಾರದು . ಹೀಗೆ ಹಲವಾರು ಗುಣಗಳಿರುವ  ಬೆಟ್ಟದ  ನೆಲ್ಲಿಕಾಯಿಂದ ಸಿಗುವ ಇನ್ನಷ್ಟು  ಪ್ರಯೋಜನಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ತ್ವಚೆಯ ಸೌಂದರ್ಯವನ್ನು ಸಹ  ಹೆಚ್ಚಿಸುತ್ತದೆ: ವಾರದಲ್ಲಿ ಮೂರರಿಂದ ನಾಲ್ಕು ಬಾರಿ ನೆಲ್ಲಿಕಾಯಿಯ ನೀರಿನಿಂದ ತ್ವಚೆಯನ್ನು ಆರೈಕೆ ಮಾಡಿಕೊಳ್ಳುವುದರಿಂದ ಚರ್ಮವು…

  • inspirational

    ಆಸ್ಪತ್ರೆಯಲ್ಲಿ ಬಿಲ್ ಪಾವತಿಸದೇ ಇರದ ಕಾರಣ ಪ್ರಭಾಕರ್ ಅವರ ಮೃತದೇಹವನ್ನು ಹೊರಗೆ ಬಿಟ್ಟಿರಲಿಲ್ಲ, ಆಗ ಬಂದವರು ಯಾರು ಗೊತ್ತಾ?

    ಟೈಗರ್ ಪ್ರಭಾಕರ್, ದಕ್ಷಿಣ ಭಾರತದಲ್ಲಿ ಈ ಸ್ಟಾರ್ ನಟ ಯಾರಿಗೆ ಗೊತ್ತಿಲ್ಲ ಹೇಳಿ, ಎಷ್ಟೋನಟರಿಗೆ ಆದರ್ಶ, ಚಿತ್ರರಂಗದಲ್ಲಿ ಘರ್ಜಿಸಿದ ನಟ, ಆದರೆ ಪ್ರಭಾಕರ್ ಅವರ ಕೊನೆಯ ದಿನಗಳು ಜನರು ಊಹಿಸಿದಷ್ಟು ಸುಂದರವಾಗಿರಲಿಲ್ಲ, ಅತಿಯಾದ ಅನಾರೋಗ್ಯದಿಂದ ಕೈಯಲ್ಲಿದ್ದ ಕಾಸು ಖಾಲಿ ಆಗಿತ್ತು. 25 ಮಾರ್ಚ್ 2001 ರಂದು ಟೈಗರ್ ಪ್ರಭಾಕರ್ ಅವರು ಬಹು ಅಂಗಾಂಗ ವೈಪಲ್ಯದಿಂದ ಇಹಲೋಕ ತ್ಯಜಿಸಿದರು, ಈ ಸುದ್ದಿ ಕೇಳಿ ಕಣ್ಣೀರು ಹಾಕಿದ ಲಕ್ಷಾಂತರ ಅಭಿಮಾನಿಗಳು, ಕೊನೆಯದಾಗಿ ಟೈಗರ್ ಪ್ರಭಾಕರ್ ಅವರ ಅಂತಿಮ ದರ್ಶನ ಪಡೆಯಲು…

  • ಸುದ್ದಿ

    ಪವಿತ್ರ ಲೋಹವಾದ ಬೆಳ್ಳಿಯನ್ನು ಶುಭ ಸಮಾರಂಭಗಳಲ್ಲಿ ಯಾಕೆ ಬಳಸುತ್ತಾರೆ ಗೊತ್ತಾ..?

    ಊಟಕ್ಕೆ ಬೆಳ್ಳಿ ತಟ್ಟೆ ಹಾಗೂ ನೀರು ಕುಡಿಯಲು ಬೆಳ್ಳಿ ಲೋಟ ಬಳಸಿದರೆ ಅದು ಶ್ರೀಮಂತರ ಶೋಕಿ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಹಳೆ ಕಾಲದವರು ಬೆಳ್ಳಿ ಪೂಜಾ ಸಾಮಗ್ರಿಗಳು, ಮಕ್ಕಳಿಗೆ ಊಟ ಹಾಕಲು ಬೆಳ್ಳಿ ಬಟ್ಟಲು, ಮನೆಗೆ ಬಂದವರಿಗೆ ನೀರು ಕುಡಿಯಲು ಬೆಳ್ಳಿ ಲೋಟ…. ಹೀಗೆ ಸಾಧ್ಯವಾದಷ್ಟು ಬೆಳ್ಳಿ ಪಾತ್ರೆಗಳನ್ನೇ ಬಳಸುತ್ತಿದ್ದರು. ಅದನ್ನು ಎಲ್ಲರೂ ಬಳಸಲಿ ಎಂದೇ ಬೆಳ್ಳಿಗೆ ಪವಿತ್ರ ಲೋಹ ಎಂಬ ಹಣೆಪಟ್ಟಿ ಕಟ್ಟಿದರು. ಇದಕ್ಕೆ ಕಾರಣ ಬೆಳ್ಳಿ ದುಬಾರಿ ಎಂಬುದಲ್ಲ. ಬದಲಿಗೆ, ಬೆಳ್ಳಿಯಲ್ಲಿರುವ ಆರೋಗ್ಯವರ್ಧಕ…