ಸುದ್ದಿ

ಪತಿ ಕಣ್ಮುಂದೆಯೇ ಪತ್ನಿಯ ಮೇಲೆ ಗ್ಯಾಂಗ್ ರೇಪ್- ದೂರು ನಿರಾಕರಿಸಿದಂತಹ ಯುಪಿ ಪೊಲೀಸ್ ನವರು…!

403

ಪತಿಯ ಎದುರೇ ಪತ್ನಿಯನ್ನು ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಮ್‍ಪುರ್ ಜಿಲ್ಲೆಯಲ್ಲಿ ಜೂನ್ 11ರಂದು ನಾಲ್ವರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ದಂಪತಿ ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ. ಆದರೆ ಈಗ ಪತಿಯೊಂದಿಗೆ ಸೆಕ್ಸ್ ಮಾಡಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಂತ್ರಸ್ತೆ ಪೊಲೀಸ್ ಮೆಟ್ಟಿಲೇರಿದ್ದಾಳೆ.

ಪತಿಯೊಂದಿಗೆ ಬರುತ್ತಿದ್ದಾಗ ನಾಲ್ಕು ಜನರ ಗುಂಪು ನಮ್ಮನ್ನು ತಡೆಯಿತು. ಬಳಿಕ ಪತಿಯ ಮೇಲೆ ಹಲ್ಲೆ ಮಾಡಿ, ಮರಕ್ಕೆ ಕಟ್ಟಿ ಹಾಕಿದ್ದರು. ಈ ವೇಳೆ ನಾಲ್ವರು ಸೇರಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ.

ಈ ಸಂಬಂಧ ಸಂತ್ರಸ್ತೆ ಆರೋಪಿಸಿದ್ದರೂ ಪೊಲೀಸರು ಮಾತ್ರ ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದರು ಎಂದು ವರದಿಯಾಗಿದೆ. ಆದರೆ ತಡವಾಗಿ ಸಂತ್ರಸ್ತೆ ದೂರು ಸ್ವೀಕರಿಸಿದ ಪೊಲೀಸರು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಸಬ್ ಇನ್‍ಸ್ಪೆಕ್ಟರ್ ಬ್ರಿಜೇಶ್ ಕುಮಾರ್ ಅವರು, ದಂಪತಿಗಳೇ ತಮ್ಮ ಸೆಕ್ಸ್ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗಷ್ಟೇ ಅತ್ಯಾಚಾರ ಸಂತ್ರಸ್ತೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿರಲಿಲ್ಲ. ಇದರಿಂದ ಮನನೊಂದ ಮಹಿಳೆ ಅತ್ಯಾಚಾರಕ್ಕೆ ಒಳಗಾದ ಮರುದಿನವೇ ಆತ್ಮಹತ್ಯೆಗೆ ಶರಣಾಗಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Animals

    ಕೋಲಾರದಲ್ಲಿಆನೆಗಳ ಆರೈಕೆ ಕೇಂದ್ರ ಸ್ಥಾಪನೆ!

    ಕೋಲಾರ: ಕೋಲಾರ ತಾಲೂಕಿನ ಖಾಜಿಕಲ್ಲಹಳ್ಳಿ ಗ್ರಾಮದ ಬಳಿಯ ಮಾಲೂರು ಅರಣ್ಯ ವಲಯದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ WRRC (Wildlife Rescue and Rehabilitation Centre) ಅವರು ಆನೆಗಳ ಆರೈಕೆ ಕೇಂದ್ರವನ್ನು ಸ್ಥಾಪನೆ ಮಾಡಿದ್ದಾರೆ. ಈ ಕೇಂದ್ರದಲ್ಲಿ ದುರ್ಗಾ, ಅನೀಶಾ, ಗೌರಿ ಹಾಗೂ ಜಾನುಮಣಿ ಎಂಬ ನಾಲ್ಕು ಹೆಣ್ಣಾನೆಗಳಿವೆ. ಬೆಂಗಳೂರಿನಿಂದ ದುರ್ಗಾ, ತಮಿಳುನಾಡಿನ ತೂತುಕುಡಿಯಿಂದ ಅನಿಶಾ, ನಂಜನಗೂಡಿನಿಂದ ಗೌರಿ ಹಾಗೂ ಗೋವಾದಿಂದ ಜಾನುಮಣಿ ಎಂಬ ಆನೆಗಳನ್ನು ಇಲ್ಲಿಗೆ ತಂದು ಆರೈಕೆ ಮಾಡಲಾಗುತ್ತಿದೆ. ಸದ್ಯ ನಾಲ್ಕು ಆನೆಗಳಿದ್ದು, ಮುಂದಿನ…

  • Archive

    ಏಷ್ಯಾ ಬುಕ್ ಆಫ್ ರೆಕಾರ್ಡ್

    ಕೋಲಾರ: ತಾಲೂಕಿನ ಐತರಾಸನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಜ್ಞಾನ ಸಹ ಶಿಕ್ಷಕರಾದ ಸಿ.ಮುನಿರಾಜು ಅವರಿಗೆ ಕರ್ನಾಟಕದಲ್ಲಿ ಏಕಕಾಲಕ್ಕೆ ಅತೀ ಹೆಚ್ಚು ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಕರ್ನಾಟಕದ ವಿವಿಧ ವಿಭಾಗಗಳಲ್ಲಿ ಒಂದೇ ಬಾರಿಗೆ ಆಯೋಜಿಸಿ ಅನುಷ್ಠಾನಗೊಳಿಸಿದ್ದಕ್ಕೆ ಏಷ್ಯಾ ಬುಕ್ ಆಫ್ ರೆಕಾರ್ಡ್ 2023 ಅವಾರ್ಡ್ ನೀಡಲಾಗಿದೆ. ಈ ರೆಕಾರ್ಡನ್ನು ಕರ್ನಾಟಕ ಜೂನಿಯರ್ ಚೆಂಬರ್ ಇಂಟರ್‌ನ್ಯಾಷನಲ್ ಕರ್ನಾಟಕ ತಂಡದಿಂದ ಆಯೋಜಿಸಿದ್ದು, ಕರ್ನಾಟಕದ 253 ಶಾಲೆಗಳಲ್ಲಿ 13 ರಿಂದ 18 ವರ್ಷದೊಳಗಿನ ಮಕ್ಕಳಿಗೆ “ಬದುಕಿನಲ್ಲಿ ನಿರ್ಧಾರ ತೆಗೆದುಕೊಳ್ಳು…

  • ರಾಜಕೀಯ

    ರಾಹುಲ್ ಗಾಂಧಿಯವರಿಗೆ ಯಾವಾಗ ಮದುವೆ ಎಂದು ಕೇಳಿದ್ದು ಯಾರು ಗೊತ್ತಾ…? ತಿಳಿಯಲು ಈ ಲೇಖನ ಓದಿ…

    ಕಾಂಗ್ರೆಸ್ಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವಾಗ ಮದುವೆಯಾಗ್ತಾರೆ ಅನ್ನೋ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ರಾಹುಲ್ ಗಾಂಧಿ ಉತ್ತರಿಸಿದ್ದಾರೆ.

  • ರಾಜಕೀಯ

    ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಹೊಸ ಕ್ರಾಂತಿ..!ತಿಳಿಯಲು ಈ ಲೇಖನ ಓದಿ …

    ರಾಜ್ಯದ ಮೂಲೆ ಮೂಲೆಗಳಲ್ಲೂ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ ಸಂಗ್ರಾಮದ ಮಾದರಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಸಂಘಟನೆ ಚಟುವಟಿಕೆಗಳು ನಡೆಯುತ್ತಿದ್ದು, ಡಿಸಂಬರ್.19 ರಂದು ಕೂಡಲ ಸಂಗಮದಲ್ಲಿ ನಡೆಯುವ ಐತಿಹಾಸಿಕ ಸಮಾವೇಶವು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಕ್ರಾಂತಿ ಆಗಲಿದೆಯೆಂದು ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಹೇಳಿದ್ದಾರೆ.

  • ಸುದ್ದಿ

    ಕಾಫಿ ಡೇ ಮಾಲೀಕ,ಮಾಜಿ ಸಿ ಎಂ ಎಸ್‌.ಎಂ.ಕೃಷ್ಣ ಅಳಿಯ, ಸಿದ್ಧಾರ್ಥ ನೇತ್ರಾವತಿ ನದಿ ಬಳಿ ಕಾಣೆ……!

    ಮಾಜಿ ವಿದೇಶಾಂಗ ಸಚಿವ, ಮಾಜಿ ರಾಜ್ಯಪಾಲ, ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಕರ್ನಾಟಕದ ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ಧಾರ್ಥ ಅವರು ಸೋಮವಾರ ದಿಢೀರ್‌ ನಾಪತ್ತೆಯಾಗಿದ್ದು, ಕುಟುಂಬ ಹಾಗೂ ಆಪ್ತ ವಲಯದಲ್ಲಿ ಆತಂಕ ಮನೆ ಮಾಡಿದೆ.ಕೆಫೆ ಕಾಫಿ ಡೇ ಸೇರಿದಂತೆ ಹಲವು ಉದ್ಯಮಗಳನ್ನು ಮುನ್ನಡೆಸುತ್ತಿದ್ದ ಸಿದ್ಧಾರ್ಥ್ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಅವರು ಕಾಣೆಯಾಗಿದ್ದಾರೆ ಎಂಬ ಮಾಹಿತಿ ಇದ್ದು, ಅವರಿಗಾಗಿ ಸ್ಥಳೀಯ ಪೊಲೀಸರು ಭಾರೀ ಹುಡುಕಾಟ ನಡೆಸಿದ್ದಾರೆ. ಆಗಿದ್ದೇನು?: ಸಿದ್ಧಾರ್ಥ ಅವರು ಸೋಮವಾರ ವ್ಯವಹಾರ ನಿಮಿತ್ತ ತಮ್ಮ ಇನ್ನೋವಾ ವಾಹನದಲ್ಲಿ ಬೆಂಗಳೂರಿನಿಂದ…

  • ಸುದ್ದಿ

    ಕೋಲಾರದಲ್ಲಿ ಹೆರಿಗೆ ನೋವಿಂದ ಆಸ್ಪತ್ರೆಯಲ್ಲಿ ನೆಲದ ಮೇಲೆ 4 ಗಂಟೆ ನರಳಿದ ಮಹಿಳೆ, ವೀಡಿಯೋ ವೈರಲ್….!

    ಚಿನ್ನದ ನಾಡು ಕೆಜಿಎಫ್ ನ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬಳು ಹೆರಿಗೆ ನೋವಿನಿಂಡ ಬಳಲುತ್ತಿದ್ದರೂ ಸೂಕ್ತ ಸಮಯಕ್ಕೆ ವೈದ್ಯರು ಶುಶ್ರೂಷೆ ಮಾಡದ ಕಾರಣ ತಾಯಿಯೊಬ್ಬಳು ತನ್ನ ಮಗುವನ್ನು ಕಳೆದುಕೊಂಡ ಅಮಾನವೀಯ ಘಟನೆ ನಡೆದಿದೆ. ಗರ್ಭಿಣಿ ಮಹಿಳೆ ಹೆರಿಗೆ ನೋವಿನಿಂದ ಒದ್ದಾಡುತ್ತಿರುವ ವೀಡಿಯೋ ದೃಶ್ಯಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆಜಿಎಫ್ 8ನೇ ಬ್ಲಾಕ್‍ನ ರಿಯಾಜ್ ಎಂಬವರ ಪತ್ನಿ ಸಮೀನಾ ಅವರಿಗೆ ಸೋಮವ್ರ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿದೆ. ಆಕೆಯನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ…