ಸುದ್ದಿ

ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದಂತಹ ಹೆಬ್ಬುಲಿ ನಟಿ – ಅಮಲಾ ಪೌಲ್…!

418

ಬಹುಭಾಷಾ ನಟಿ ಅಮಲಾ ಪೌಲ್ ಅವರು ತಮಿಳಿನಲ್ಲಿ ನಟಿಸಿದ ‘ಅದಾಯಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್‍ನಲ್ಲಿ ನಟಿ ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮ ಟ್ವಿಟ್ಟರಿನಲ್ಲಿ ನಟಿ ಅಮಲಾ ಪೌಲ್ ನಟಿಸಿದ ಅದಾಯಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಟೀಸರ್ ಒಂದೂವರೆ ನಿಮಿಷವಿದ್ದು, ಅಮಲಾ ಈ ಟೀಸರ್ ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ತಾಯಿ ತನ್ನ ಕಾಣೆಯಾದ ಮಗಳನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ. ಇಲ್ಲಿಂದ ಶುರುವಾಗುವ ಈ ಟೀಸರ್ ಕೊನೆಯಲ್ಲಿ ಪ್ರತ್ಯೇಕ ಬಹುಮಹಡಿ ಕಟ್ಟಡದಲ್ಲಿ ಅಮಲಾ ಸಂಪೂರ್ಣವಾಗಿ ನಗ್ನಳಾಗಿ ಏಳುವ ದೃಶ್ಯದೊಂದಿಗೆ ಕೊನೆ ಆಗಿದೆ. ಈ ಚಿತ್ರದಲ್ಲಿ ಅಮಲಾ ಬೋಲ್ಡ್ ಯುವ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ದೊರೆತಿದ್ದು, ಚೆನ್ನೈ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆದಿದೆ. ಪ್ರದೀಪ್ ಕುಮಾರ್ ಹಾಗೂ ಬಾಂಡ್ ಓರ್ಕಾ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದಾಗ ನೋಡುಗರನ್ನು ಬೆಚ್ಚಿ ಬೀಳಿಸಿತ್ತು. ಫಸ್ಟ್ ಲುಕ್‍ನಲ್ಲಿ ಅಮಲಾ, ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಕಂಬವನ್ನು ಹಿಡಿದು ಸಹಾಯಕ್ಕಾಗಿ ಅಂಗಲಾಚುತ್ತಿರುವ ರೂಪದಲ್ಲಿ ಅಮಲಾ ಪೌಲ್ ಕಾಣಿಸಿಕೊಂಡಿದ್ದರು. ಅಲ್ಲದೆ ಅಮಲಾ ದೇಹದಲ್ಲಿ ಗಾಯಗಳಾಗಿದ್ದು, ರಕ್ತ ಕಾಣುತ್ತಿತ್ತು. ಟಾಯ್ಲೆಟ್ ನಲ್ಲಿರುವ ಪೇಪರ್ ಬಳಸಿ ಮೈಯನ್ನು ಮುಚ್ಚಿಕೊಂಡಿದ್ದರು. ಸಿನಿಮಾ ಟೈಟಲ್ ಕೆಳಗೆ ಅಹಂಕಾರ, ಕೌಶಲ್ಯ ಮತ್ತು ಧೈರ್ಯಶಾಲಿ ಎಂಬ ಪದಗಳನ್ನು ಬರೆಯಲಾಗಿತ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ