ಟೆಕ್ ಗುರು ಎನಿಸಿಕೊಂಡಿರುವ ಗೂಗಲ್ ವಿಡಿಯೊ ಕಾಲಿಂಗ್ಗಾಗಿ ‘ಗೂಗಲ್ ಡುಯೋ'(Google Duo) ಆಪ್ ಅನ್ನು ಪರಿಚಯಿಸಿದೆ. ಈ ಆಪ್ನಲ್ಲಿ ವಿಡಿಯೊ ಕಾಲಿಂಗ್ ಗುಣಮಟ್ಟವು ಅತ್ಯುತ್ತಮವಾಗಿದ್ದು, ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ ವಿಡಿಯೊ ಕಾಲಿಂಗ್ ಭಾರೀ ಟ್ರೆಂಡ್ ಪಡೆದುಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ತನ್ನ ‘ಗೂಗಲ್ ಡುಯೋ’ ಆಪ್ನಲ್ಲಿ ಮತ್ತಷ್ಟು ಹೊಸತನಗಳನ್ನು ಅಳವಡಿಸಲು ಸಜ್ಜಾಗಿದೆ.
ಹೌದು, ಗೂಗಲ್ ತನ್ನ ‘ಗೂಗಲ್ ಡುಯೋ’ ಆಪ್ನಲ್ಲಿ ಇದೀಗ ‘ಗ್ರೂಪ್ ವಿಡಿಯೊ ಕಾಲಿಂಗ್’ ಮತ್ತು ‘ಡಾಟಾ ಸೇವಿಂಗ್ ಮೋಡ್’ ಫೀಚರ್ಸ್ಗಳನ್ನು ಸೇರಿಸಲಿದೆ. ಜನರು ತಮ್ಮ ಪ್ರೀತಿ ಪಾತ್ರರೊಂದಿಗೆ ಫೇಸ್ ಟು ಫೇಸ್ ವಿಡಿಯೊ ಕಾಲಿಂಗ್ ಮಾಡಲು ಇಚ್ಚಿಸುತ್ತಿದ್ದು, ಈಗಾಗಲೇ ಭಾರತದಲ್ಲಿ ದೊಡ್ಡ ಮಾರುಕಟ್ಟೆಯಾಗಿ ಗುರುತಿಸಿಕೊಂಡಿದೆ. ಹೀಗಾಗಿ ಗೂಗಲ್ ಡುಯೋ ಆಪ್ನ ಬಳಕೆದಾರರ ಸಂಖ್ಯೆಯು ಸಹ ಏರಿಕೆಗತಿಯಲ್ಲಿದೆ. ಎಂದು ಗೂಗಲ್ ಪ್ರೊಡೆಕ್ಟ್ ಮ್ಯಾನೇಜರ ಶ್ವೇತಾ ವೈದ್ಯ ಹೇಳಿದ್ದಾರೆ.ಎರಡು ಹೊಸ ಫೀಚರ್ಸ್ಗಳೊಂದಿಗೆ ಕಂಪನಿಯು ಬಳಕೆದಾರರು ಖಾಸಗಿತನದ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದು, ವಿಡಿಯೊ ಕಾಲಿಂಗ್ ಗುಣಮಟ್ಟವು ಹೈ ಕ್ವಾಲಿಟಿಯಲ್ಲಿರುತ್ತದೆ. ಹಾಗಾದರೇ ಗೂಗಲ್ ಡುಯೋ ಕಾಲಿಂಗ್ ಆಪ್ ನೂತನ ಫೀಚರ್ಸ್ಗಳು ಏನೆಲ್ಲಾ ಪ್ರಯೋಜನ ಒದಗಿಸಲಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಡೇಟಾ ಸೇವಿಂಗ್ ಹೆಚ್ಚು ಜನಪ್ರಿಯವಾಗುತ್ತಿರುವ ಗೂಗಲ್ ಡುಯೋ ವಿಡಿಯೊ ಕಾಲಿಂಗ್ ಆಪ್ನಲ್ಲಿ ಬಳಕೆದಾರರಿಗೆ ಅನುಕೂಲವಾಗಲೆಂದು ಡೇಟಾ ಸೇವಿಂಗ್ ಮೋಡ್ ಆಯ್ಕೆಯನ್ನು ಸೇರಿಸಲಿದ್ದು, ಈ ಆಯ್ಕೆಯನ್ನು ಸಕ್ರಿಯ ಮಾಡಿಕೊಳ್ಳುವ ಮೂಲಕ ಬಳಕೆದಾರರು ಶೇ.50% ಮೊಬೈಲ್ ಡಾಟಾ ಉಳಿಸಿಬಹುದು. ಸೆಟ್ಟಿಂಗ್ನಲ್ಲಿ ಈ ಆಯ್ಕೆ ಸೇರಿಕೊಳ್ಳಲಿದೆ ಎನ್ನಲಾಗಿದೆ. ಗ್ರೂಪ್ ವಿಡಿಯೊ ಕಾಲಿಂಗ್ ಗೂಗಲ್ ಡುಯೋ ಆಪ್ನಲ್ಲಿ ಸಂಸ್ಥೆಯು ಹೊಸದಾಗಿ ಗ್ರೂಪ್ ವಿಡಿಯೊ ಕಾಲಿಂಗ್ ಆಯ್ಕೆಯನ್ನು ಸೇರಿಸಲಿದ್ದು, ಗ್ರೂಪ್ ಕಾಲಿಂಗ್ ಫೀಚರ್ನಲ್ಲಿ ಒಂದು ಬಾರಿಗೆ ಗರಿಷ್ಠ 8 ಸದಸ್ಯರೊಂದಿಗೆ ಕಾಲ್ ಕನೆಕ್ಟ್ ಮಾಡಬಹುದಾಗಿದೆ. ಗ್ರೂಪ್ ವಿಡಿಯೊ ಕಾಲಿಂಗ್ ಆಯ್ಕೆ ಹೊಸ ಟ್ರೆಂಡ್ ಹುಟ್ಟುಹಾಕಲಿದೆ ಎನ್ನಲಾಗುತ್ತಿದೆ.
ಭದ್ರತೆ ಗೂಗಲ್ ಎರಡು ಮಹತ್ತರ ಫೀಚರ್ಸ್ಗಳನ್ನು ಸೇರಿಸಲಿದ್ದು, ಇದರೊಂದಿಗೆ ಬಳಕೆದಾರರ ಕಾಲಿಂಗ್ ಮತ್ತು ಮೆಸೆಜ್ಗೆ ಸುರಕ್ಷತೆ ಒಸಗಿಸಲು ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಭದ್ರತೆ ನೀಡುತ್ತದೆ. ಬಳಕೆದಾರಿಗೆ ತಮ್ಮ ಗ್ರೂಪ್ ಕಾಲಿಂಗ್ನಲ್ಲಿ ಖಾಸಗಿತನ ಕಾಪಾಡಲು ಈ ಆಯ್ಕೆ ಉಪಯುಕ್ತವೆನಿಸಲಿದೆ. ಡಾಟಾ ಬಳಕೆ ಲಿಮಿಟ್ ಡಾಟಾ ಬಳಕೆಯಲ್ಲಿ ಲಿಮಿಟ್ ಆಯ್ಕೆ ಸಹ ಇರಲಿದ್ದು, ಈ ಆಯ್ಕೆಯು ಮೊಬೈಲ್ ಡಾಟಾ ಮತ್ತು ವೈಫೈ ನೆಟವರ್ಕ್ ಸೌಲಭ್ಯದ ಬಳಕೆಯಲ್ಲಿಯು ಲಭ್ಯವಾಗಲಿದೆ. ಭಾರತ, ಇಂಡೊನೇಷ್ಯಾ ಮತ್ತು ಬ್ರೆಜಿಲ್ ರಾಷ್ಟ್ರಗಳ ಬಳಕೆದಾರರಿಗೆ ಡಾಟಾ ಬಳಕೆಯಲ್ಲಿ ಲಿಮಿಟ್ ಆಯ್ಕೆ ದೊರೆಯಲಿದೆ. ಫೀಚರ್ಸ್ ಸೇರ್ಪಡೆ ಗೂಗಲ್ನ ಎರಡು ಹೊಸ ಫೀಚರ್ಸ್ಗಳು ಭಾರತದ ಅಂಡ್ರಾಯ್ಡ್ ಓಎಸ್ ಬಳಕೆದಾರರಿಗೆ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಐಓಎಸ್ ಮಾದರಿಯ ಓಎಸ್ ಬಳಕೆದಾರರಿಗೂ ದೊರೆಯಲಿದೆ. ನೂತನ ಅಪ್ಡೇಟ್ ವರ್ಷನ್ನಲ್ಲಿ ಈ ಫೀಚರ್ಸ್ಗಳು ಸೇರಿಕೊಳ್ಳಲಿವೆ.
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೊಮ್ಮೆ ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದು, ಶೋಗೆ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಬಿಗ್ ಬಾಸ್ ಮನೆಯಲ್ಲೂ ಕಿರಿಕ್ ಮಾಡಿಕೊಂಡು ಹೊರ ಬಂದಿದ್ದಾರೆ.
ಮಿಶನ್ ಅಂತ್ಯೋದಯ ಯೋಜನೆ ಅಡಿ 50 ಸಾವಿರ ಗ್ರಾಮ ಪಂಚಾಯತ್ಗಳಲ್ಲಿ ಬಡತನ ನಿವಾರಣೆಗೆ ನಿರ್ಧರಿಸಿದ್ದು, ಇದರ ಅಡಿಯಲ್ಲಿ ಬಡತನದ ಮಾನದಂಡಗಳನ್ನು ಇದೀಗ ನಿಗದಿಸಲಾಗಿದೆ. ಒಂದು ಕುಟುಂಬದಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ಬ್ಯಾಂಕ್ ಖಾತೆಯಲ್ಲಿ 10 ಸಾವಿರಕ್ಕಿಂತ ಹೆಚ್ಚು ಮೊತ್ತವನ್ನು ಇಟ್ಟುಕೊಂಡಿದ್ದರೆ, ಆ ಕುಟುಂಬ ಬಡತನ ಅನುಭವಿಸುತ್ತಿಲ್ಲ ಎಂದು ಪಂಚಾಯತ್ಗಳು ನಿರ್ಧರಿಸಬಹುದಾಗಿದೆ.
ಲೋಕಸಭಾ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಗದಗ ರಾಜಕಾರಣದಲ್ಲಿ ಬಿಜೆಪಿಗೆ ಬಿಗ್ ಶಾಕ್ ಸಿಕ್ಕಿದೆ. ಗದಗದಲ್ಲಿ ರಾತ್ರೋ ರಾತ್ರಿ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತ ನಡೆಸಿದ್ದು, ಮಾಜಿ ಸಚಿವ ಹೆಚ್.ಕೆ. ಪಾಟೀಲ್, ಪ್ರಭಾವಿ ಲಿಂಗಾಯತ ಮುಖಂಡರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮಾಜಿ ಶಾಸಕ ಮತ್ತು ಪ್ರಭಾವಿ ಲಿಂಗಾಯತ ಮುಖಂಡ ಶ್ರೀಶೈಲಪ್ಪ ಬಿದರೂರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ. ಪಾಟೀಲ್ ಜೊತೆ ಶ್ರೀಶೈಲಪ್ಪ ಮಾತುಕತೆ ನಡೆಸಿರುವ…
ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಶುರುವಾದಾಗಿನಿಂದ ಒಡಿಶಾದ ಸುಮಾರು 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಅಂದಿನಿಂದ ಯುವತಿಯರು ತಮ್ಮ ಊರಿಗೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಈ ಯುವತಿಯ ಬಗ್ಗೆ ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರ ಮೂಲಕ ಸೋನು ಸೂದ್ ತಿಳಿದುಕೊಂಡಿದ್ದರು. ತಕ್ಷಣ ಯುವತಿಗೆ ಸಹಾಯ ಮಾಡಲು ಮುಂದಾಗಿದ್ದು, ನಂತರ ವಿಮಾನ ನಿಲ್ದಾಣಗಳನ್ನು ತೆರೆಯಲು ಕೇರಳ ಮತ್ತು ಒಡಿಶಾ ಸರ್ಕಾರಗಳಿಂದ ಅನೇಕ ಅನುಮತಿಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಸೋನು ಸೂದ್ ಯುವತಿಯರ ರಕ್ಷಣೆ ಮಾಡಿದ್ದು, ಅಲ್ಲಿಂದ ಅವರನ್ನು ವೈಮಾನಿಕ ಮಾರ್ಗದ ಮೂಲಕ…
ತಾಯಿಗೆ ಕಾರು ಡಿಕ್ಕಿ ಹೊಡೆದ ನಂತರ ಪುಟ್ಟ ಬಾಲಕ ಸಿಟ್ಟಿನಿಂದ ಕಾರಿಗೆ ಒದೆಯುವ ಮೂಲಕ ತಾಯಿಯ ಮೇಲಿನ ಪ್ರೀತಿಯನ್ನು ಹೊರಹಾಕಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೀನಾದ ಚಾಂಗ್ಕಿಂಗ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ತಾಯಿ ಝೀಬ್ರಾ ಕ್ರಾಸ್ ಮೂಲಕ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಆಗ ತಾಯಿ ನೆಲಕ್ಕೆ ಬಿದ್ದಿದ್ದು, ತಕ್ಷಣ ಎಚ್ಚೆತ್ತ ಬಾಲಕ ಮೊದಲು ತಾಯಿಯನ್ನು ಮಾತನಾಡಿಸುತ್ತಾನೆ. ನಂತರ ಸಿಟ್ಟಿಗೆದ್ದು ಕಾರಿಗೆ ಒದೆಯಲು…