ಸುದ್ದಿ

ಇನ್ಮುಂದೆ ಗೂಗಲ್ ಡುಯೋ ; ಡೇಟಾ ಸೇವಿಂಗ್ ಮತ್ತು ಗ್ರೂಪ್‌ ವಿಡಿಯೊ ಕಾಲಿಂಗ್‌ ಆಯ್ಕೆ ಸೇರ್ಪಡೆ..!

56

ಟೆಕ್‌ ಗುರು ಎನಿಸಿಕೊಂಡಿರುವ ಗೂಗಲ್ ವಿಡಿಯೊ ಕಾಲಿಂಗ್‌ಗಾಗಿ ‘ಗೂಗಲ್ ಡುಯೋ'(Google Duo) ಆಪ್‌ ಅನ್ನು ಪರಿಚಯಿಸಿದೆ. ಈ ಆಪ್‌ನಲ್ಲಿ ವಿಡಿಯೊ ಕಾಲಿಂಗ್ ಗುಣಮಟ್ಟವು ಅತ್ಯುತ್ತಮವಾಗಿದ್ದು, ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ ವಿಡಿಯೊ ಕಾಲಿಂಗ್ ಭಾರೀ ಟ್ರೆಂಡ್‌ ಪಡೆದುಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ತನ್ನ ‘ಗೂಗಲ್ ಡುಯೋ’ ಆಪ್‌ನಲ್ಲಿ ಮತ್ತಷ್ಟು ಹೊಸತನಗಳನ್ನು ಅಳವಡಿಸಲು ಸಜ್ಜಾಗಿದೆ.

ಹೌದು, ಗೂಗಲ್ ತನ್ನ ‘ಗೂಗಲ್ ಡುಯೋ’ ಆಪ್‌ನಲ್ಲಿ ಇದೀಗ ‘ಗ್ರೂಪ್‌ ವಿಡಿಯೊ ಕಾಲಿಂಗ್’ ಮತ್ತು ‘ಡಾಟಾ ಸೇವಿಂಗ್ ಮೋಡ್‌’ ಫೀಚರ್ಸ್‌ಗಳನ್ನು ಸೇರಿಸಲಿದೆ. ಜನರು ತಮ್ಮ ಪ್ರೀತಿ ಪಾತ್ರರೊಂದಿಗೆ ಫೇಸ್‌ ಟು ಫೇಸ್‌ ವಿಡಿಯೊ ಕಾಲಿಂಗ್‌ ಮಾಡಲು ಇಚ್ಚಿಸುತ್ತಿದ್ದು, ಈಗಾಗಲೇ ಭಾರತದಲ್ಲಿ ದೊಡ್ಡ ಮಾರುಕಟ್ಟೆಯಾಗಿ ಗುರುತಿಸಿಕೊಂಡಿದೆ. ಹೀಗಾಗಿ ಗೂಗಲ್ ಡುಯೋ ಆಪ್‌ನ ಬಳಕೆದಾರರ ಸಂಖ್ಯೆಯು ಸಹ ಏರಿಕೆಗತಿಯಲ್ಲಿದೆ. ಎಂದು ಗೂಗಲ್‌ ಪ್ರೊಡೆಕ್ಟ್ ಮ್ಯಾನೇಜರ ಶ್ವೇತಾ ವೈದ್ಯ ಹೇಳಿದ್ದಾರೆ.ಎರಡು ಹೊಸ ಫೀಚರ್ಸ್‌ಗಳೊಂದಿಗೆ ಕಂಪನಿಯು ಬಳಕೆದಾರರು ಖಾಸಗಿತನದ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದು, ವಿಡಿಯೊ ಕಾಲಿಂಗ್‌ ಗುಣಮಟ್ಟವು ಹೈ ಕ್ವಾಲಿಟಿಯಲ್ಲಿರುತ್ತದೆ. ಹಾಗಾದರೇ ಗೂಗಲ್ ಡುಯೋ ಕಾಲಿಂಗ್ ಆಪ್‌ ನೂತನ ಫೀಚರ್ಸ್‌ಗಳು ಏನೆಲ್ಲಾ ಪ್ರಯೋಜನ ಒದಗಿಸಲಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡೇಟಾ ಸೇವಿಂಗ್‌ ಹೆಚ್ಚು ಜನಪ್ರಿಯವಾಗುತ್ತಿರುವ ಗೂಗಲ್ ಡುಯೋ ವಿಡಿಯೊ ಕಾಲಿಂಗ್ ಆಪ್‌ನಲ್ಲಿ ಬಳಕೆದಾರರಿಗೆ ಅನುಕೂಲವಾಗಲೆಂದು ಡೇಟಾ ಸೇವಿಂಗ್‌ ಮೋಡ್‌ ಆಯ್ಕೆಯನ್ನು ಸೇರಿಸಲಿದ್ದು, ಈ ಆಯ್ಕೆಯನ್ನು ಸಕ್ರಿಯ ಮಾಡಿಕೊಳ್ಳುವ ಮೂಲಕ ಬಳಕೆದಾರರು ಶೇ.50% ಮೊಬೈಲ್‌ ಡಾಟಾ ಉಳಿಸಿಬಹುದು. ಸೆಟ್ಟಿಂಗ್‌ನಲ್ಲಿ ಈ ಆಯ್ಕೆ ಸೇರಿಕೊಳ್ಳಲಿದೆ ಎನ್ನಲಾಗಿದೆ.
ಗ್ರೂಪ್‌ ವಿಡಿಯೊ ಕಾಲಿಂಗ್ ಗೂಗಲ್ ಡುಯೋ ಆಪ್‌ನಲ್ಲಿ ಸಂಸ್ಥೆಯು ಹೊಸದಾಗಿ ಗ್ರೂಪ್‌ ವಿಡಿಯೊ ಕಾಲಿಂಗ್ ಆಯ್ಕೆಯನ್ನು ಸೇರಿಸಲಿದ್ದು, ಗ್ರೂಪ್‌ ಕಾಲಿಂಗ್ ಫೀಚರ್‌ನಲ್ಲಿ ಒಂದು ಬಾರಿಗೆ ಗರಿಷ್ಠ 8 ಸದಸ್ಯರೊಂದಿಗೆ ಕಾಲ್‌ ಕನೆಕ್ಟ್‌ ಮಾಡಬಹುದಾಗಿದೆ. ಗ್ರೂಪ್‌ ವಿಡಿಯೊ ಕಾಲಿಂಗ್ ಆಯ್ಕೆ ಹೊಸ ಟ್ರೆಂಡ್‌ ಹುಟ್ಟುಹಾಕಲಿದೆ ಎನ್ನಲಾಗುತ್ತಿದೆ.

ಭದ್ರತೆ ಗೂಗಲ್‌ ಎರಡು ಮಹತ್ತರ ಫೀಚರ್ಸ್‌ಗಳನ್ನು ಸೇರಿಸಲಿದ್ದು, ಇದರೊಂದಿಗೆ ಬಳಕೆದಾರರ ಕಾಲಿಂಗ್‌ ಮತ್ತು ಮೆಸೆಜ್‌ಗೆ ಸುರಕ್ಷತೆ ಒಸಗಿಸಲು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್ ಭದ್ರತೆ ನೀಡುತ್ತದೆ. ಬಳಕೆದಾರಿಗೆ ತಮ್ಮ ಗ್ರೂಪ್‌ ಕಾಲಿಂಗ್‌ನಲ್ಲಿ ಖಾಸಗಿತನ ಕಾಪಾಡಲು ಈ ಆಯ್ಕೆ ಉಪಯುಕ್ತವೆನಿಸಲಿದೆ.
ಡಾಟಾ ಬಳಕೆ ಲಿಮಿಟ್ ಡಾಟಾ ಬಳಕೆಯಲ್ಲಿ ಲಿಮಿಟ್‌ ಆಯ್ಕೆ ಸಹ ಇರಲಿದ್ದು, ಈ ಆಯ್ಕೆಯು ಮೊಬೈಲ್‌ ಡಾಟಾ ಮತ್ತು ವೈಫೈ ನೆಟವರ್ಕ್‌ ಸೌಲಭ್ಯದ ಬಳಕೆಯಲ್ಲಿಯು ಲಭ್ಯವಾಗಲಿದೆ. ಭಾರತ, ಇಂಡೊನೇಷ್ಯಾ ಮತ್ತು ಬ್ರೆಜಿಲ್ ರಾಷ್ಟ್ರಗಳ ಬಳಕೆದಾರರಿಗೆ ಡಾಟಾ ಬಳಕೆಯಲ್ಲಿ ಲಿಮಿಟ್‌ ಆಯ್ಕೆ ದೊರೆಯಲಿದೆ.
ಫೀಚರ್ಸ್‌ ಸೇರ್ಪಡೆ ಗೂಗಲ್‌ನ ಎರಡು ಹೊಸ ಫೀಚರ್ಸ್‌ಗಳು ಭಾರತದ ಅಂಡ್ರಾಯ್ಡ್‌ ಓಎಸ್‌ ಬಳಕೆದಾರರಿಗೆ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಐಓಎಸ್‌ ಮಾದರಿಯ ಓಎಸ್‌ ಬಳಕೆದಾರರಿಗೂ ದೊರೆಯಲಿದೆ. ನೂತನ ಅಪ್‌ಡೇಟ್‌ ವರ್ಷನ್‌ನಲ್ಲಿ ಈ ಫೀಚರ್ಸ್‌ಗಳು ಸೇರಿಕೊಳ್ಳಲಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನಿಮ್ಮ ಬ್ಯಾಂಕ್ ಅಕೌಂಟ್, ಮೊಬೈಲ್ ಸಂಪರ್ಕಕ್ಕೆ ಇನ್ನುಮುಂದೆ ಇದು ಬೇಕಾಗಿಲ್ಲ..!

    ಮೊಬೈಲ್ ಸಿಮ್ ಪಡೆಯುವುದಕ್ಕಾಗಲಿ, ಯಾವುದೇ ಬ್ಯಾಂಕ್ ಗಳಲ್ಲಿ ಅಕೌಂಟ್ ತೆರೆಯಲು ಆಧಾರ್ ಅವಶ್ಯಕವಾಗಿತ್ತು. ಇದರ ಬಗ್ಗೆ ಅನೇಕ ಗೊಂದಲಗಳು ಕೂಡ ಇದ್ದವು. ಆದರೆ ಈಗ ಆಧಾರ್ ಕಡ್ಡಾಯ ಕುರಿತಂತೆ ಇದ್ದ ನಾನಾ ಗೊಂದಲಗಳಿಗೆ ತೆರೆ ಎಳೆಯಲಾಗಿದೇ. ಇನ್ಮುಂದೆ ಬ್ಯಾಂಕ್ ಖಾತೆ ಮಾಡಿಸುವುದಕ್ಕಾಗಲಿ ಅಥವಾ ಮೊಬೈಲ್ ಸಂಪರ್ಕಗಳಿಗೆ ಆಧಾರ್ ಕಡ್ಡಾಯವಲ್ಲ. ಹೌದು, ಆಧಾರ್ ಕುರಿತಂತೆ ಈಗ ಇರುವ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರೊಂದಿಗೆ ಇನ್ಮುಂದೆ ಬ್ಯಾಂಕ್ ಖಾತೆ ತೆರೆಯಲು ಹಾಗೂ ಮೊಬೈಲ್…

  • ಸುದ್ದಿ

    ದರ್ಶನ್ ಸ್ನೇಹಿತ ಸಿನಿಮಾ ಹಾಗೂ ಕಿರುತೆರೆ ಖ್ಯಾತ ನಟ ನಿಧನ…

    ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಖ್ಯಾತ ನಟ ೪೮ ವರ್ಷದ ಅನಿಲ್ ಕುಮಾರ್ ವಿಧಿವಶರಾಗಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರು ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ಹೆಗ್ಗೋಡಿನ ನೀನಾಸಂನಲ್ಲಿ ಅನಿಲ್‍ಕುಮಾರ್ ತರಬೇತಿ ಪಡೆದಿದ್ದರು. ಆಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಿಲ್ ಅವರ ಸಹಪಾಠಿಯಾಗಿದ್ದರು. ಮೂಡಲ ಮನೆ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಅನಿಲ್ ಅವರು, ಅನೇಕ ಸೀರಿಯಲ್, ರಂಗಭೂಮಿ ಹಾಗೂ ಸಿನಿಮಾದಲ್ಲಿ ನಟಿಸಿದ್ದಾರೆ. ಅನಿಲ್ ಕುಮಾರ್ ಅವರು…

  • ಆರೋಗ್ಯ, ಉಪಯುಕ್ತ ಮಾಹಿತಿ

    ಕೆಮ್ಮನ್ನು ನಿಯಂತ್ರಿಸುವ ಪವರ್ ಫುಲ್ ಮನೆಮದ್ದು ತಯಾರಿಸುವುದು ಹೇಗೆ.?ಎಲ್ಲರಿಗೂ ಶೇರ್ ಮಾಡಿ ಉಪಯೋಗವಾಗಲಿ…

    ಕೆಮ್ಮು ವಾಸ್ತವವಾಗಿ ಒಂದು ಕಾಯಿಲೆಯಲ್ಲ, ಒಂದು ರೋಗ ನಿರೋಧಕ ವ್ಯವಸ್ಥೆ. ಗಂಟಲಿನ ತೇವದಲ್ಲಿ ವೈರಸ್ಸುಗಳು ಮನೆ ಮಾಡಿದಾಗ ಇದನ್ನು ಕೆರೆದು ಹೊರ ಹಾಕುವ ಕ್ರಿಯೆಯೇ ಕೆಮ್ಮು. ಈ ಕೆಮ್ಮನ್ನು ಎರಡೇ ದಿನದಲ್ಲಿ  ನಿಯಂತ್ರಿಸುವ ಪವರ್ ಫುಲ್ ಮನೆಮದ್ದು ನೀವೆ ಸುಲಭವಾಗಿ ಮನೆಯಲ್ಲಿಯೇ ಸಿಗುವ ಸುಲಭ ಸಾಮಾಗ್ರಿಗಳಿಂದ ತಯಾರಿಸಬಹುದು. ಕೆಮ್ಮು ಮತ್ತು ಸಾವು ಯಾರನ್ನೂ ಕೇಳಿ ಬರುವುದಿಲ್ಲ ವಂತೆ. ಯಾವುದೋ ಮುಖ್ಯ ಕಾರ್ಯದಲ್ಲಿದ್ದಾಗ ಕೆಮ್ಮು ಕಾಡಿದರೆ ಆಗ ಎದು ರಾಗುವ ತಾಪತ್ರಯ ಒಂದೆರ ಡಲ್ಲ. ಅದರಲ್ಲೂ ಕೆಮ್ಮು ಸತತವಾದರೆ ಮುಖ್ಯ…

  • ಆರೋಗ್ಯ

    ಈ ತರಕಾರಿಗಳನ್ನು ಸೇವಿಸಿದ್ರೆ ಮಹಿಳೆಯರಿಗೆ ಕಿಡ್ನಿ ಸಮಸ್ಯೆ ಯಾವತ್ತು ಬರುವುದಿಲ್ಲ…!ತಿಳಿಯಲು ಈ ಲೇಖನ ಓದಿ..

    ಇತ್ತೀಚಿನ ದಿನಗಳಲ್ಲಿ ಎಲ್ಲರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಕಿಡ್ನಿ ಸಮಸ್ಯೆ, ಅದರಲ್ಲೂ ಮಹಿಳೆಯರನ್ನು ಹೆಚ್ಚು ಕಾಡಿಸುವ ಕಾಯಿಲೆಗಳಲ್ಲಿ ಕಿಡ್ನಿ ಸಮಸ್ಯೆಯೂ ಒಂದು. ಮೂತ್ರಕೋಶದಲ್ಲಿ ಸೋಂಕು ಮತ್ತು ಕಲ್ಲುಗಳು ಇತ್ಯಾದಿ ಸಮಸ್ಯೆಗಳು ಇವರಲ್ಲಿ ಸಾಮಾನ್ಯ

  • ಆರೋಗ್ಯ, ಜೀವನಶೈಲಿ

    ಫುಡ್ ಪಾಯಿಸನ್’ಗೆ ಇಲ್ಲಿದೆ ಸುಲಭ ಪರಿಹಾರ..!ತಿಳಿಯಲು ಈ ಲೇಖನ ಓದಿ…

    ತಿಂದ ಆಹಾರ ಸರಿಯಾಗ ಜೀರ್ಣವಾಗದೇ ವಿಷಮಯವಾಗುವುದನ್ನು ಫುಡ್ ಪಾಯಿಸನ್ ಎಂದು ಕರೆಯಲಾಗುತ್ತದೆ. ರಾಸಾಯನಿಕಗಳು, ಬ್ಯಾಕ್ಟೀರಿಯಾಗಳು, ಕೀಟಾಣುಗಳು ಸೇರಿಕೊಂಡಿರುವ ಆಹಾರವನ್ನು ತಿಂದ್ರೆ ಅದು ಜೀರ್ಣವಾಗದೇ ಫುಡ್ ಪಾಯಿಸನ್ ಉಂಟಾಗುತ್ತದೆ.

  • ಸಿನಿಮಾ

    ಈ ನಟ ‘ಮೆಗಾ ಸ್ಟಾರ್’ ಆದ್ರೂ ಈಗಲೂ ಬೀಡಿ ಸೇದುತ್ತಾರೆ..!ಯಾರು ಗೊತ್ತಾ..?ತಿಳಿಯಲು ಈ ಲೇಖನ ಓದಿ

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಸೇದುವವರಿಗೆ ಯಾವುದಾದರೇನಂತೆ..? ಬೀಡಿ, ಸಿಗರೇಟ್. ಜೇಬಿನಲ್ಲಿ ಹಣ ತುಂಬಿರುವಾಗ ಸಿಗರೇಟ್ ನಂತಹ ದುಬಾರಿಗಳೇ ಬೇಕಾಗುತ್ತದೆ. ಆದರೆ ಈ ನಟ ಹಾಗಲ್ಲ. ಇವರು ಮೆಗಾ ಸ್ಟಾರ್ ನಟ. ಹಣ, ಪ್ರಚಾರ ಇದ್ದರೂ ಸಿಂಪ್ಲಿಸಿಟಿ ಫಾಲೋ ಮಾಡುತ್ತಾರೆ. ಮಲಯಾಳಂನ ಮೆಗಾ ಸ್ಟಾರ್ ನಟ ಮಮ್ಮೂಟಿ ಇಲ್ಲಿಯವರೆಗೂ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮೂರು ಬಾರಿ ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಅಲ್ಲದೇ ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿದೆ. ಕೋಟಿ,…