ಸುದ್ದಿ

ವ್ಯಕ್ತಿಯ ಹೊಟ್ಟೆಯಲ್ಲಿದ್ದವು 8 ಚಮಚ, 2 ಸ್ಕ್ರೂ ಡ್ರೈವರ್, 2 ಹಲ್ಲುಜ್ಜುವ ಬ್ರಷ್ , 1 ಚಾಕು, ನಂತರ ಏನಾಯ್ತು..?

169

ಮಂಡಿ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೊಬ್ಬನನ್ನು ಪರೀಕ್ಷಿಸಿದ ವೈದ್ಯರು ಆತನ ಹೊಟ್ಟೆಯಲ್ಲಿರುವ ವಸ್ತುಗಳನ್ನು ಕಂಡು ಬೆಚ್ಚಿ ಬಿದ್ದ ಪ್ರಸಂಗ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

35 ವರ್ಷದ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಸಹಿಸಲಾಗದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಮಂಡಿಯಲ್ಲಿರುವ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರೀ ಸರಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದ. ಎಕ್ಸ್‌ರೇ ಮಾಡಿ ನೋಡಿದಾಗ ಆತನ ಹೊಟ್ಟೆಯಲ್ಲಿ ಚಮಚ, ಚಾಕು ಸೇರಿದಂತೆ ಏನೇನೋ ಕಂಡಿವೆ. ಗಾಬರಿ ಬಿದ್ದ ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಪರೇಶನ್ ನಡೆಸಿದಾಗ ಹೊಟ್ಟೆಯಲ್ಲಿ ಕಂಡ ವಸ್ತುಗಳು ವೈದ್ಯರನ್ನು ಕಂಡು ವೈದ್ಯರು ಮತ್ತಷ್ಟು ಹೌಹಾರಿ ಹೋಗಿದ್ದಾರೆ.

ಆತನ ಹೊಟ್ಟೆಯಲ್ಲಿದ್ದುದು ಏನು ಗೊತ್ತೇ?
ಬರೋಬ್ಬರಿ 8 ಚಮಚ, 2 ಸ್ಕ್ರೂ ಡ್ರೈವರ್, 2 ಹಲ್ಲುಜ್ಜುವ ಬ್ರಷ್ ಮತ್ತೊಂದು ಚಾಕು.

ಮಾನಸಿಕ ಅಸ್ವಸ್ಥ : ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯ ಡಾ. ನಿಖಿಲ್ ಹೊಟ್ಟೆ ನೋವೆಂದು ನಮ್ಮಲ್ಲಿಗೆ ಬಂದ ವ್ಯಕ್ತಿಯ ಹೊಟ್ಟೆಯಲ್ಲಿ ಲೋಹದ ವಸ್ತುಗಳೇ ತುಂಬಿರುವುದು ಪತ್ತೆಯಾಯಿತು. ತಕ್ಷಣ ನಮ್ಮ ಸರ್ಜನ್ ತಂಡ ಶಸ್ತ್ರಚಿಕಿತ್ಸೆ ನಡೆಸಿತು. ಮತ್ತೀಗ ಆತನ ಆರೋಗ್ಯ ಸ್ಥಿರವಾಗಿದೆ. ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಸಾಮಾನ್ಯ ವ್ಯಕ್ತಿ ಚಮಚ ಮತ್ತು ಚಾಕುವನ್ನು ತಿನ್ನಲು ಸಾಧ್ಯವಿಲ್ಲ. ಇದೊಂದು ವಿಲಕ್ಷಣ ಪ್ರಸಂಗ ಎಂದಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ