ಉಪಯುಕ್ತ ಮಾಹಿತಿ

ಜನಸಂಖ್ಯೆಯನ್ನು ನಿಯಂತ್ರಿಸಲು ಈ ಸಲಹೆ ನೀಡಿದ ಬಾಬಾ ರಾಮ್‌ ದೇವ್…!

27

ದೇಶದಲ್ಲಿ ಹೊಸ ಸರ್ಕಾರ ರಚನೆಗೂ ಮುನ್ನ ಯೋಗ‌ ಗುರು ಬಾಬಾ ರಾಮ್‌ ದೇವ್ ದೇಶದ ಜನಸಂಖ್ಯೆ ನಿಯಂತ್ರಣದ ಬಗ್ಗೆ ಸಲಹೆಯೊಂದನ್ನು ನೀಡಿದ್ದಾರೆ.

ದೇಶದ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿಗೆ ಬರಬೇಕೆಂದಿರುವ ಬಾಬಾ ರಾಮ್‌ ದೇವ್, ಎರಡು ಮಕ್ಕಳ ನಂತ್ರ ಮೂರನೇ ಮಗುವಿಗೆ ಮತದಾನದ ಹಕ್ಕು ನೀಡಬಾರದು. ಜೊತೆಗೆ ಯಾವುದೇ ಸರ್ಕಾರಿ ಸೌಲಭ್ಯವನ್ನು ನೀಡಬಾರದು ಎಂದು ಹೇಳಿದ್ದಾರೆ.

ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಭಾರತ ಸಿದ್ಧವಿಲ್ಲ. ಭಾರತದಲ್ಲಿ 150 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರಬಾರದು ಎಂದು ಯೋಗ ಗುರು ಹೇಳಿದ್ದಾರೆ. ಈ ಬಗ್ಗೆ ಕಠಿಣ ಕಾನೂನು ಜಾರಿಗೆ ತಂದಾಗ ಮಾತ್ರ ಜನಸಂಖ್ಯೆ ನಿಯಂತ್ರಣ ಸಾಧ್ಯ. ಮೂರನೇ ಮಗುವಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು, ಮತದಾನ ಮಾಡಲು ಅವಕಾಶ ನೀಡಬಾರದು. ಆಗ ಮಾತ್ರ ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತದೆ ಎಂದಿದ್ದಾರೆ.

ಗೋ ರಕ್ಷಣೆ ಬಗ್ಗೆಯೂ ಮಾತನಾಡಿದ ಬಾಬಾ ರಾಮ್‌ ದೇವ್, ಗೋ ರಕ್ಷಕರು ಹಾಗೂ ಭಕ್ಷಕರ ಮಧ್ಯೆ ಗಲಾಟೆ ನಿಲ್ಲಬೇಕೆಂದ್ರೆ ಗೋಮಾಂಸವನ್ನು ಸಂಪೂರ್ಣ ನಿಷೇಧಿಸಬೇಕೆಂದಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ