ಜ್ಯೋತಿಷ್ಯ

150 ವರ್ಷಗಳಿಗೆ ಒಮ್ಮೆ ಮಾತ್ರ ಬರುವ ಈ ಗ್ರಹಣದಿಂದ ಯಾವ ರಾಶಿಗೆ ಏನು ಫಲ..?ತಿಳಿಯಲು ಈ ಲೇಖನ ಓದಿ..

5834

ಈ ತಿಂಗಳ 31ರಂದು ಸಂಪೂರ್ಣ ಚಂದ್ರಗ್ರಹಣದ ಇದೆ. 150 ವರ್ಷಗಳಿಗೆ ಒಮ್ಮೆ ಮಾತ್ರ ಬರುವ ಈ ಗ್ರಹಣ ತುಂಬಾ ವರ್ಚ್ಯುವಲ್ ಎಂದು ಹೇಳುತ್ತಾರೆ. ಹುಣ್ಣಿಮೆ ದಿನ ಉಂಟಾಗುವ ಚಂದ್ರಗ್ರಹಣ ಸಂದರ್ಭದಲ್ಲಿ ಚಂದ್ರನು ’ಸೂಪರ್ ಬ್ಲೂ ಬ್ಲಡ್ ಮೂನ್’ ಆಗಿ ಕಾಣಿಸುತ್ತಾನೆಂದು, ಇದು ಅತ್ಯಂತ ಅಪರೂಪ ಎನ್ನುತ್ತಿದ್ದಾರೆ ತಜ್ಞರು.

ಖಂಡಗ್ರಾಸ ಚಂದ್ರಗ್ರಹಣ ಜನವರಿ 31, 2018 ರಂದು | ಯಾವ ರಾಶಿಗೆ ಏನು ಫಲ:-

ಇದೇ ತಿಂಗಳು ಅಂದರೆ ಜನವರಿ 31ರ ಬುಧವಾರದಂದು ಖಂಡಗ್ರಾಸ ಚಂದ್ರಗ್ರಹಣ ಇದ್ದು, ಅಶ್ಲೇಷ ನಕ್ಷತ್ರದಲ್ಲಿ ಚಂದ್ರನಿಗೆ ಪೂರ್ಣ ರಾಹು ಗ್ರಹಣವು ಗ್ರಸ್ತೋದಯವಾಗಿ ಗೋಚರವಾಗುತ್ತದೆ. ಅಂದು ಸಂಜೆ 5.17ಕ್ಕೆ ಗ್ರಹಣದ ಸ್ಪರ್ಶ ಕಾಲ ಆಗಲಿದ್ದು, ರಾತ್ರಿ 7.19ಕ್ಕೆ ಗ್ರಹಣ ಮಧ್ಯಕಾಲವಾಗಲಿದ್ದು, ರಾತ್ರಿ 8.41ಕ್ಕೆ ಗ್ರಹಣ ಮೋಕ್ಷ ಆಗಲಿದೆ.

ಗ್ರಹಣ ಕಾಲದ ವಿಶೇಷ ಸೂಚನೆಗಳು:-

* ಗ್ರಹಣದ ಆರಂಭ ಹಾಗೂ ಬಿಟ್ಟ ನಂತರ ಉಟ್ಟ ಬಟ್ಟೆಯಲ್ಲಿ ಸ್ನಾನ ಮಾಡಬೇಕು

* ಗ್ರಹಣ ದೋಷ ಇರುವವರು ಚಂದ್ರ ಬಿಂಬ ಹಾಗೂ ಅಕ್ಕಿಯನ್ನು ದಾನ ಮಾಡಬೇಕು

ಮೇಷ:–

ಮೇಷ ರಾಶಿಯವರಿಗೆ ಹಲವು ಬಗೆಯಲ್ಲಿ ಸಮಸ್ಯೆಗಳು ಕಾಣುತ್ತಿವೆ. ನೀವೇ ಹುಡುಕಿಕೊಂಡು ಹೋಗಿ, ಸಮಸ್ಯೆಗೆ ಸಿಲುಕುವ ಸಂಭವವೂ ಇದೆ. ಹೊಸ ಸಾಹಸಗಳಿಗೆ ಕೈ ಹಾಕಲೇ ಬೇಡಿ.

ಎಲ್ಲವೂ ಸಮಸ್ಯೆ ಎಂಬುದನ್ನೇ ಸೂಚಿಸುತ್ತಿದೆ ಆದ್ದರಿಂದ ಈ ಲೇಖನದಲ್ಲಿ ತಿಳಿಸಿರುವಂತೆ ಪರಿಹಾರವನ್ನು ಕಡ್ಡಾಯವಾಗಿ ಅನುಸರಿಸಿ.  ಅತಿ ಮುಖ್ಯವಾದ ಕೆಲಸಗಳಿಗೆ ಮಾತ್ರ ಪ್ರಾಮುಖ್ಯತೆ ಕೊಡಿರಿ. ದಿಢೀರ್‌ ಪ್ರಯಾಣ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ವೃಷಭ:-

ಈ ಗ್ರಹಣದಿಂದ ವೃಷಭ ರಾಶಿಯವರಿಗೆ ಕೆಲ ಶುಭ ಫಲಗಳನ್ನು ಹೇಳಬಹುದಾಗಿದೆ. ಅದರಲ್ಲೂ ಹಣಕಾಸಿನ ಅನುಕೂಲಗಳು ಗೋಚರಿಸುತ್ತಿವೆ. ಅಚ್ಚರಿಯ ಧನಾಗಮಗಳಿಗೆ ಸಿದ್ಧವಾಗಿರಿ. ಅನಿರೀಕ್ಷೆತ ಧನಪ್ರಾಪ್ತಿ.

ಅದು ಕೂಡ ನಿಮ್ಮ ಎಂದಿನ ಆದಾಯ ಮೂಲವಲ್ಲ. ಇದು ಹೊಸದಾದ ಆದಾಯ ಮೂಲದಿಂದ ಸಿಗುವ ಧನಲಾಭ.

ಮಿಥುನ:–

ಈ ರಾಶಿಯವರಿಗೆ ಚಂದ್ರಗ್ರಹಣದ ಫಲಿತಾಂಶ ದಿಂದ ಒಳ್ಳೆಯದು ಮತ್ತು ಕೆಟ್ಟದ್ದು ಎರಡು ಸಹ ಲಭಿಸುತ್ತವೆ. ತುಂಬ ಸಾಮಾನ್ಯವಾಗಿ ಕಂಡುಬರುವುದು ಆರ್ಥಿಕ ನಷ್ಟ. ಯಾರಿಗಾದರೂ ಸಾಲ ಕೊಡಲಿಕ್ಕೆ ಹೋಗಬೇಡಿ.

ರಿಸ್ಕ್ ಇರುವಂಥ ಹೂಡಿಕೆಯಂತೂ ಮಾಡಲೇಬೇಡಿ. ಒಟ್ಟಾರೆ ಹಣಕಾಸಿನ ವ್ಯವಹಾರದಲ್ಲಿ ಬಹಳ ಎಚ್ಚರವಾಗಿರಬೇಕು.

ಕರ್ಕಾಟಕ :-

ಎಲ್ಲದಕ್ಕೂ ಹಿರಿಯರ ಮಾರ್ಗದರ್ಶನ ಪಡೆಯುವುದರಿಂದ ಬಲಬರಲಿದೆ.ಏನಾಗುತ್ತಿದೆ ಅಂತಲೇ ಗೊತ್ತಾಗದಂಥ ಸನ್ನಿವೇಶ ನಿಮ್ಮದು.

ಏಕೆ ತೊಂದರೆ ಆಗುತ್ತಿದೆ, ಇಂಥ ಸನ್ನಿವೇಶದಲ್ಲಿ ಸಿಕ್ಕಿಬಿದ್ದಿದ್ದು ಹೇಗೆ ಎಂದು ಗೊತ್ತಾಗುವಷ್ಟರಲ್ಲಿ ತಲೆ ಹಾರಿ ಹೋಗಿರುತ್ತದೆ.

 ಸಿಂಹ:–

ಈ ದಿನ ವೈಯಕ್ತಿಕ ಸಮಸ್ಯೆಗಳ ನಿರ್ವಹಣೆಗೆ ಅಧಿಕ ಪ್ರಯತ್ನ ಬೇಡ ತಾನಾಗಿಯೇ ಪರಿಹಾರಗೊಳ್ಳಲಿದೆ. ಹಣಕಾಸಿನ ವಿಚಾರವಾಗಿ ಎಷ್ಟು ಹುಷಾರಾಗಿರುತ್ತೀರೋ ಅಷ್ಟು ಒಳ್ಳೆಯದು.

ದಿಢೀರ್ ನಷ್ಟ ತಂದೊಡ್ಡುವ ಗ್ರಹಣ ಇದು. ತುರ್ತು ಯೋಜನೆಗೆ ಕೈ ಹಾಕಲು ಹೋಗಬೇಡಿ. ಹಣ ಕಾಸಿನ ವಿಷಯಕ್ಕೆ ಸಂಬಂಧಿಸಿದ್ದು ಅನ್ನೋವಾಗ ಒಂದಕ್ಕೆ ಎರಡು ಸಲ ಪರಿಶೀಲಿಸಿ, ಸಹಿ ಮಾಡಿ. ಇನ್ನೊಬ್ಬರನ್ನು ಕುರುಡಾಗಿ ನಂಬಬೇಡಿ.

ಕನ್ಯಾ :-

ಹಣ ತರುವ ಅವಕಾಶಗಳು ಬರುವಾಗ ನೀವಾಗಿಯೇ ಅದನ್ನು ನಿರಾಕರಿಸಬೇಡಿ. ಮುಖ್ಯವಾಗಿ ನಿಮ್ಮ ಪ್ರತಿಭೆ ಯಾವುದರಲ್ಲಿದೆ ಆ ವಿಚಾರವಾಗಿಯೇ ಕೆಲ ಅವಕಾಶಗಳು ಹುಡುಕಿಕೊಂಡು ಬಂದು ಬಾಗಿಲು ತಟ್ಟುತ್ತವೆ.

ಈ ಗ್ರಹಣದಿಂದ ನಿಮಗೆ ಶುಭ ಫಲಗಳು ಇವೆ. ಅದರ ಸದುಪಯೋಗ ಮಾಡಿಕೊಳ್ಳಬೇಕಷ್ಟೇ.

ತುಲಾ:–

ಚಂದ್ರ ಗ್ರಹಣದ ಫಲಿತಾಂಶ ಶುಭವಾಗಿದೆ. ಕುಟುಂಬದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲಿದೆ. ಕುಟುಂಬದಲ್ಲಿನ ಹಿರಿಯರ ಸಹಕಾರ ಮತ್ತು ಸ್ನೇಹಿತರಿಂದ ದೈಹಿಕ ಬಲ, ಆರ್ಥಿಕ ಬಲ ಹೆಚ್ಚಲಿದೆ.

ಸಹಾಯ ಅನ್ನೋದರ ಜತೆಗೆ ನಿಮಗೆ ಬೇಕಾದ ಸಹಕಾರ ದೊರೆಯುತ್ತದೆ.

ವೃಶ್ಚಿಕ :-

ವೃಶ್ಚಿಕ ರಾಶಿಯವರು ತಮ್ಮ ವರ್ಚಸ್ಸು ಹಾಗೂ ಸಮಾಜದಲ್ಲಿನ ಗೌರವದ ಬಗ್ಗೆ ಎಚ್ಚರ ವಹಿಸಬೇಕು. ಏಕೆಂದರೆ ಈ ಗ್ರಹಣವು ನಷ್ಟ ಮತ್ತು ಅವಮಾನವನ್ನು ಸೂಚಿಸುತ್ತಿದೆ. ದುಷ್ಟ ಆಲೋಚನೆ ಇರುವ ಜನರಿಂದ ದೂರ ಇರಿ.ನಿಮ್ಮ ಹೆಸರು ಹಾಳು ಮಾಡಬಹುದಾದ ಚಟುವಟಿಕೆಯಿಂದ ದೂರ ಇರಿ.

ಧನಸ್ಸು:–

ಈ ಗ್ರಹಣವು ಅತ್ಯಂತ ಕೆಡಕು ತರುವುದು ನಿಮ್ಮ ರಾಶಿಗೆ ಎಚ್ಚರ ಎಚ್ಚರ!. ಆದ್ದರಿಂದ ಈ ತಿಂಗಳಿಡೀ ದೂರ ಪ್ರಯಾಣ ಮಾಡಲೇಬೇಡಿ.

ಮನೆಯಲ್ಲಿ ಕೂಡ ವಿದ್ಯುತ್ ಉಪಕರಣ, ಗ್ಯಾಸ್ ಸ್ಟೌ ಇತ್ಯಾದಿಗಳ ಬಗ್ಗೆ ಎಚ್ಚರವಿರಲಿ. ಯಾವುದೇ ಅಪಾಯಕ್ಕೆ ನೀವಾಗಿಯೇ ಕೈ ಹಾಕದಿರುವುದು ಉತ್ತಮ. ತಾಳ್ಮೆಯ ವರ್ತನೆಗೆ ನಿಧಾನ ಶುಭ ವೆನಿಸಲಿದೆ.

ಮಕರ :-

ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆ. ಅಂದರೆ ಅದು ಕಳತ್ರ ಸ್ಥಾನ. ಆದ್ದರಿಂದ ಬಾಳ ಸಂಗಾತಿಯೊಂದಿಗೆ ಯಾವುದೇ ವಿಚಾರದಲ್ಲಿ ಜಗಳ ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ.ಆ ಮೂಲಕ ಯಾವುದೇ ಬಿಕ್ಕಟ್ಟು ಎದುರಾಗದಂತೆ ಎಚ್ಚರ ವಹಿಸಿ.

ಕುಂಭ:-

ನಿಮ್ಮ ರಾಶಿಗೆ ಸಂತೋಷದ ಫಲಿತಾಂಶ ಕೊಡುತ್ತದೆ ಚಂದ್ರ ಗ್ರಹಣ. ಹೊಸ ಉದ್ಯೋಗಿಗಳಿಗೆ ಔದ್ಯೋಗಿಕ ರಂಗದಲ್ಲಿ ಅನುಕೂಲ, ಪ್ರಗತಿ ಇದೆ. ನಿಮ್ಮ ವಯಕ್ತಿಕ ಸಂಬಂಧಗಳು ವೃದ್ಧಿಯಾಗುತ್ತವೆ. ಎಲ್ಲದರಲ್ಲೂ ಗೌರವ-ಮನ್ನಣೆಗಳು ಹೆಚ್ಚಾಗುತ್ತವೆ.

ಸಾಮಾಜಿಕ ಬದುಕಿನಲ್ಲಿ ಮಿಂಚುತ್ತೀರಿ. ಒಟ್ಟಿನಲ್ಲಿ ಈ ಗ್ರಹಣದಿಂದ ನಿಮಗೆ ಶುಭ ಫಲಗಳೇ ಜಾಸ್ತಿ.

ಮೀನ:-

ಮೀನ ರಾಶಿಯವರಿಗೆ ಈ ಬಾರಿಯ ಗ್ರಹಣ ಅಂಥ ಶುಭವಲ್ಲ. ಇದರಿಂದ ಆಗುವ ಮುಖ್ಯ ಸಮಸ್ಯೆ ಅಂದರೆ, ಮಾನಸಿಕ ಒತ್ತಡ.

ಅದರಲ್ಲೂ ನಾನಾ ಬಗೆಯ ಸಮಸ್ಯೆ ಹಾಗೂ ಸವಾಲುಗಳು ಎದುರಾಗುತ್ತವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ನೀವು ಬಸ್ಸಿನಲ್ಲಿ ಪ್ರಯಾಣಿಸುವಾಗ ವಾಕರಿಕೆ ಬರುತ್ತಿದಿಯಾ..? ಹಾಗದ್ರೆ ಇಲ್ಲಿದೆ ಸುಲಭವಾದ ಮನೆ ಮದ್ದು ..!

    ಒಬ್ಬೊಬ್ಬರಿಗೆ ಒಂದು ರೀತಿಯ ಕಾಯಿಲೆ ಇರುತ್ತದೆ. ಹೆಚ್ಚಿನ ಮಹಿಳೆಯರಿಗೆ ಬಸ್‌ನಲ್ಲಿ ಪ್ರಯಾಣ ಮಾಡಿದರೆ ವಾಕರಿಕೆ ಬರುತ್ತದೆ. ಬಸ್ಸಿನ ಏರಿಳಿತ ಅಥವಾ ಸರಿಯಾಗಿ ಗಾಳಿಯಾಡದೆ ಇರುವಂತಹ ಸ್ಥಿತಿ. ಇದೆಲ್ಲದರ ಪರಿಣಾಮವಾಗಿ ವಾಕರಿಕೆ ಬಂದು ಮುಜುಗರ ತರಿಸುತ್ತದೆ.

  • ಆಧ್ಯಾತ್ಮ

    ಮಾರ್ಚ್ 4 ಮಹಾಶಿವರಾತ್ರಿ..ಇಂದು ತಪ್ಪದೆ ಈ ಕೆಲಸ ಮಾಡಿ…

    ಈ ಬಾರಿ ಮಾರ್ಚ್ 4 ರಂದು ಮಹಾಶಿವರಾತ್ರಿ ಆಚರಣೆ ಮಾಡಲಾಗ್ತಿದೆ. ಶಿವ ಭಕ್ತರಿಗೆ ವಿಶೇಷವಾದ ದಿನವಿದು. ಶಿವ ಭಕ್ತರು ದೇವಸ್ಥಾನಗಳಿಗೆ ತೆರಳಿ ಶಿವನ ಆರಾಧನೆಯಲ್ಲಿ ನಿರತರಾಗ್ತಾರೆ. ಶಿವ ಪೂಜೆ, ಆರಾಧನೆ ಜೊತೆ ಈ ಮೂರು ಕೆಲಸಗಳನ್ನು ಶಿವರಾತ್ರಿ ದಿನ ಮಾಡಿದ್ರೆ ಈಶ್ವರ ಬಹುಬೇಗ ಭಕ್ತರಿಗೆ ಒಲಿಯುತ್ತಾನೆ. ಶೀಘ್ರವೇ ನಿಮ್ಮ ಆಸೆ ಈಡೇರಲಿದೆ. ನಿಮ್ಮೆಲ್ಲ ಆಸೆ ಈಡೇರಬೇಕೆಂದ್ರೆ ಮಹಾಶಿವರಾತ್ರಿ ದಿನ ಶಿವನ ಪೂಜೆ ಜೊತೆ ಓಂ ಮಹಾಶಿವಾಯ ಸೋಮಾಯ ನಮಃ ಮಂತ್ರವನ್ನು ಜಪಿಸಿ. ನೀವು ಶಿವನ ಪೂಜೆ ವೇಳೆ…

  • ಸುದ್ದಿ

    ಅಗ್ನಿಸಾಕ್ಷಿ ಖ್ಯಾತಿಯ ನಟಿ ಪ್ರಿಯಾಂಕಾರಿಗೆ ಒಂದೇ ಒಂದು ಆಸೆ ಇದೆಯಂತೆ, ಏನದುಗೊತ್ತಾ?

    ಬಿಗ್ ಬಾಸ್ ಮನೆಯಲ್ಲಿ ಇನ್ನೂ ಸಪ್ತಾಶ್ವ ಹಾಗೂ ಸಿಡಿಲು ತಂಡದ ನಡುವೆ ಹಲವಾರು ಟಾಸ್ಕ್‌ಗಳು, ಚಟುವಟಿಕೆಗಳು ನಡೆಯುತ್ತಲೇ ಇವೆ. ಕೆಲವುದರಲ್ಲಿ ಸಪ್ತಾಶ್ವ ತಂಡ ಗೆದ್ದರೆ, ಇನ್ನೂ ಕೆಲವೊಂದರಲ್ಲಿ ಸಿಡಿಲು ತಂಡ ಗೆಲ್ಲುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಇನ್ನೂ ಸಪ್ತಾಶ್ವ ಹಾಗೂ ಸಿಡಿಲು ತಂಡದ ನಡುವೆ ಹಲವಾರು ಟಾಸ್ಕ್‌ಗಳು, ಚಟುವಟಿಕೆಗಳು ನಡೆಯುತ್ತಲೇ ಇವೆ. ಕೆಲವುದರಲ್ಲಿ ಸಪ್ತಾಶ್ವ ತಂಡ ಗೆದ್ದರೆ, ಇನ್ನೂ ಕೆಲವೊಂದರಲ್ಲಿ ಸಿಡಿಲು ತಂಡ ಗೆಲ್ಲುತ್ತಿದೆ. “ಬಾಲೊಂದು ನಂದಾದೀಪ” (ಚೆಂಡಿನಾಟ) ಟಾಸ್ಕನ್ನು ನೀಡಿದರು ಬಿಗ್ ಬಾಸ್. ಈಗಾಗಲೆ ಹಲವಾರು…

  • ದೇವರು, ದೇವರು-ಧರ್ಮ

    ರಾಮ ರಾವಣನ್ನು ವಿಜಯ ದಶಮಿ ಯಂದು ಕೊಂದು ಶ್ರೀಲಂಕಾ ದಿಂದ ಅಯೋಧ್ಯೆಗೆ ತೆರಳಲು 21 ದಿನ ಅಂದು ದಿಪಾವಳಿ

    ದಿಪಾವಳಿ ಯಾಕೆ 21 ದಿನಗಳ ನಂತರ ಆಚರಿಸಲಾಗುತ್ತದೆ?
    ಇದು ನಿಜನ? ರಾಮ ರಾವಣನ್ನು ವಿಜಯ ದಶಮಿ ಯಂದು ಕೊಂದು ಶ್ರೀಲಂಕಾ ದಿಂದ ಅಯೋಧ್ಯೆಗೆ ತೆರಳಲು 21 ದಿನ ಅಂದು ದಿಪಾವಳಿ

  • ಭವಿಷ್ಯ

    ಶ್ರೀ ರಾಮ ನವಮಿ ಶುಭದಿನದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ರವಿವಾರ, 25/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಸಮಸ್ಯೆಗಳ ಪರಿಹಾರಕ್ಕೆ ಹೊಸ ಜಾಣ್ಮೆ ಬಳಬೇಕಾದ ಸಂದರ್ಭ ಬರಬಹುದು. ಮಕ್ಕಳ ಪುರೋಭಿವೃದ್ಧಿ ತೋರಿ ಬಂದೀತು. ವಿವಾಹಾದಿ ಶುಭಮಂಗಲ ಕಾರ್ಯಗಳು ನಡೆದಾವು. ಉಷ್ಣ ಪ್ರಕೋಪದಿಂದ ಆಗಾಗ ದೇಹಾರೋಗ್ಯದಲ್ಲಿ ಸಮಸ್ಯೆ ತರಲಿದೆ. ನಿಮ್ಮ ದಿಟ್ಟ ಮಾತುಗಳಿಂದಾಗಿ ಅನಾವಶ್ಯಕ ಹೊರೆ ಹೊರಬೇಕಾದೀತು. ಸಾಂಸಾರಿಕ ಸಂತೋಷ ಅನುಭವಿಸುವಿರಿ. ವೃಷಭ:- ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿ ಇರುತ್ತದೆ. ಕಷ್ಟಗಳೆಲ್ಲವೂ ಕರಗಿ ಹೋಗಿ ಕಾರ್ಯ ಯೋಜನೆಗಳು ಸುಲಭವಾಗಿ ಸಾಕಾರಗೊಳ್ಳುವವು. ಕೆಲಸಕಾರ್ಯಗಳಿಗೆ ಸ್ಪೂರ್ತಿ ದೊರಕುವುದು. ಬಂಧುವರ್ಗದವರಿಂದ ಸಕಾಲಿಕ…

  • ಕ್ರೀಡೆ

    RCB ಸೋಲಿಗೆ ಕಾರಣವಾಗಿದ್ದು ಅದೊಂದು ಬಾಲ್.!ಆಕ್ರೋಶ ಹೊರಹಾಕಿದ ವಿರಾಟ್…

    ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ.) ತಂಡ 5 ರನ್ ನಿಂದ ಸೋಲು ಕಂಡಿದೆ. 1 ನೋಬಾಲ್ ನಿಂದಾಗಿ ಆರ್.ಸಿ.ಬಿ. ಪಂದ್ಯ ಕಳೆದುಕೊಳ್ಳುವಂತಾಗಿದ್ದು, ತಂಡದ ನಾಯಕ ವಿರಾಟ್ ಕೊಹ್ಲಿ ಆಕ್ರೋಶ ಹೊರಹಾಕಿದ್ದಾರೆ. ಮುಂಬೈ ತಂಡ ನೀಡಿದ 187 ರನ್ ಗೆಲುವಿನ ಗುರಿ ಬೆನ್ನತ್ತಿದ್ದ ಆರ್.ಸಿ.ಬಿ.ಗೆ ಕೊನೆಯ ಓವರಿನಲ್ಲಿ 17 ರನ್ ಗಳಿಸುವ ಅವಶ್ಯಕತೆ ಇತ್ತು. ಲಸಿತ್ ಮಾಲಿಂಗ ಎಸೆದ ಕೊನೆಯ ಓವರ್ ನ ಮೊದಲ ಎಸೆತದಲ್ಲಿ…