ಸುದ್ದಿ

ಸಾರ್ವಜನಿಕರ ಮುಂದೆಯೇ ಚಾಕುವಿನಿಂದ ಇರಿದು ಯುವತಿಯ ಬರ್ಬರ ಹತ್ಯೆ …!

243

20 ವರ್ಷದ ಯುವತಿಯನ್ನು ಸಾರ್ವಜನಿಕವಾಗಿ ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯ ಭೋಗಲ್ ಪ್ರದೇಶದಲ್ಲಿ ನಡೆದಿದೆ.ಈ ಘಟನೆ ಭೋಗಲ್ ಬಸ್ ನಿಲ್ದಾಣದ ಬಳಿ ನಡೆದಿದೆ. ಆರೋಪಿಯನ್ನು ಮುನಾಸೀರ್ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಆತನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ದೆಹಲಿ ಪೊಲೀಸರು ಆರೋಪಿ ಮತ್ತು ಮೃತ ಯುವತಿಗೆ ಸಂಬಂಧ ಇದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ಮೊದಲಿಗೆ ಮೃತ ಯುವತಿಯ ಬಳಿ ಬಂದು ಮಾತನಾಡುತ್ತಿದ್ದನು. ಆದರೆ ಆರೋಪಿ ಏಕಾಏಕಿ ಚಾಕು ತೆಗೆದುಕೊಂಡು ಯುವತಿಯ ಬೆನ್ನಿಗೆ ಇರಿದಿದ್ದಾನೆ. ಇದರಿಂದ ಆಕೆ ಭಯದಿಂದ ಬಸ್ ನಿಲ್ದಾಣದಲ್ಲಿ ಓಡಾಡಿದ್ದಾಳೆ ಎಂದು ಬಸ್ ನಿಲ್ದಾಣದಲ್ಲಿದ್ದ ಅಂಗಡಿಯವ ಕೈಲಾಶ್ ತಿಳಿಸಿದ್ದಾನೆ. ನಾನು ಆತನನ್ನು ತಡೆಯಲು ಪ್ರಯತ್ನಿಸಿದೆ. ಆದರೂ ಯುವತಿಯ ಜೀವವನ್ನು ಉಳಿಸಲು ನನಗೆ ಸಾಧ್ಯವಾಗಿಲ್ಲವೆಂದು ನಾನು ವಿಷಾದಿಸುತ್ತೇನೆ ಎಂದು ಮತ್ತೊಬ್ಬ ಅಂಗಡಿಯವರು ತಿಳಿಸಿದ್ದಾರೆ.

ಆರೋಪಿಯು ಆಕೆಗೆ ಸುಮಾರು ಆರು ಬಾರಿ ಚಾಕುವಿನಿಂದ ಇರಿದಿದ್ದಾನೆ. ಕೊನೆಯಲ್ಲಿ ಆಕೆಯ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಇದರಿಂದ ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಮೃತ ಯುವತಿ ಆತನ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ ಎನ್ನಿಸುತ್ತದೆ. ಇದರಿಂದ ಆತ ಕೋಪಗೊಂಡು ಈ ರೀತಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಆತ ಸಹೋದರಿಯೊಂದಿಗೆ ಸಂಬಂಧ ಹೊಂದಿದ್ದಾನೆಯೇ ಎಂದು ತನಗೆ ತಿಳಿದಿಲ್ಲ ಎಂದು ಯುವತಿಯ ಸಹೋದರ ಪೊಲೀಸರಿಗೆ ತಿಳಿಸಿದ್ದಾನೆ. ಮೃತ ಯುವತಿ ಸಾರೈ ಕೇಲ್ ಖಾನ್ ಪ್ರದೇಶದಲ್ಲಿ ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದಳು. ಆತನ ಸಹೋದರ ಆಟೋ ಡ್ರೈವರ್ ಆಗಿದ್ದನು. ಆರೋಪಿ ಮುನಾಸಿಯರ್ ಕೂಡ ಅದೇ ಪ್ರದೇಶದಲ್ಲಿಯೇ ಇದ್ದನು. ಆರೋಪಿ ಗುತ್ತಿಗೆ ಆಧಾರದ ಮೇಲೆ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ ಇತ್ತೀಚೆಗೆ ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿದ್ದು, ಇಬ್ಬರು ಸಹೋದರಿಯರೊಂದಿಗೆ ವಾಸಿಸುತ್ತಿದ್ದನು. ಆದರೆ ಯುವತಿಯನ್ನು ಕೊಲೆ ಮಾಡಲು ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ. ನಾವು ತನಿಖೆ ಮಾಡುತ್ತಿದ್ದೇನೆ ಎಂದು ಪೊಲೀಸರು ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ