ಸುದ್ದಿ

ಮಂಡ್ಯದ ಗ್ರಾಮವೊಂದರಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಕೂಡಿಹಾಕಿದ ಪೊಲೀಸರು!ಕಾರಣ ಏನು ಗೊತ್ತಾ?

211

ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಇಂದು ನಾಗಮಂಗಲ ತಾಲೂಕಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು, ಪೊಲೀಸರು ಸುಮಲತಾ ಅವರು ಬರುವ ದಾರಿಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರನ್ನು ಸ್ವಲ್ಪ ಹೊತ್ತು ಕೂಡಿ ಹಾಕಿದ್ದರು.

ನಾಗಮಂಗಲದ ಚಾಮಲಾಪುರ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಪ್ರಚಾರ ನಡೆಸುತ್ತಿದ್ದ ಹಿನ್ನೆಲೆ ಈ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದೇ ವೇಳೆ ಸುಮಲತಾ ಅವರು ಕೂಡ ಚಾಮಲಾಪುರ ಮಾರ್ಗವಾಗಿ ಬೆಳ್ಳೂರು ಕಡೆಗೆ ಹೋಗುತ್ತಿದ್ದರು. ಹೀಗಾಗಿ ಮುಂಜಾಗೃತೆ ಕ್ರಮವಾಗಿ ಚಾಮಲಾಪುರ ಗ್ರಾಮದಲ್ಲಿದ್ದ ಜೆಡಿಎಸ್ ಕಾರ್ಯಕರ್ತರನ್ನು ಬಂಗಲೆಯೊಂದರ ಕಾಂಪೌಂಡ್‍ನಲ್ಲಿ ಪೊಲೀಸರು ಕೂಡಿ ಹಾಕಿದ್ದರು.

ಬೆಳ್ಳೂರು ಗ್ರಾಮ ಅತಿಸೂಕ್ಷ್ಮ ಪ್ರದೇಶ ಆಗಿರುವುದರಿಂದ ಇಬ್ಬರು ಅಭ್ಯರ್ಥಿಗಳು ಮುಖಾಮುಖಿಯಾದಾಗ ಯಾವುದೇ ಸಮಸ್ಯೆ ಆಗಬಾರದೆಂದು, ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಭಾರೀ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿತ್ತು. ಸುಮಾರು ಒಂದು ಕಿಲೋಮೀಟರ್ ರಸ್ತೆಯುದ್ದಕ್ಕೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲದೆ ಸುಮಲತಾ ಅವರು ಹೋಗುವಾಗ ವಿರೋಧವಾಗಿ ಜೈಕಾರ ಕೂಗದಂತೆ ಜೆಡಿಎಸ್ ಕಾರ್ಯಕರ್ತರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು.

ಸುಮಲತಾ ಅವರು ಚಾಮಲಾಪುರ ಮಾರ್ಗದಲ್ಲಿ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಇದೇ ಸ್ಥಳದಲ್ಲಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಕೂಡ ಐದು ನಿಮಿಷ ಗೇಟಿನಲ್ಲೇ ಪೊಲೀಸರು ತಡೆಹಿಡಿದಿದ್ದರು. ಈ ವೇಳೆ ಪೊಲೀಸರನ್ನು ಜೆಡಿಎಸ್ ಶಾಸಕ ಸುರೇಶ್ ಗೌಡ ತರಾಟೆಗೆ ತೆಗೆದುಕೊಂಡ ಬಳಿಕ ನಿಖಿಲ್ ಅವರ ವಾಹನವನ್ನು ಪೊಲೀಸರು ಬಿಟ್ಟು ಕಳುಹಿಸಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ, ಭವಿಷ್ಯ

    ಪರಮೇಶ್ವರನನ್ನು ಭಕ್ತಿಯಿಂದ ಸ್ಮರಿಸುತ್ತ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ತಿಳಿಯಿರಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ ನೀವು ಧೀರ್ಘಕಾಲೀನ…

  • ವಿಚಿತ್ರ ಆದರೂ ಸತ್ಯ

    ಈ ಕೋತಿ ಮಾಡಿದ ವಿಚಿತ್ರ ಚೇಷ್ಟೆಯ ಬೆಲೆ ಲೀಟರ್‌ಗೆ 70 ರೂ..!ಮಂಗಗಳು ಹೀಗೂ ಮಾಡ್ತವೆ…

    ಕೋತಿ ಚೇಷ್ಟೆ ಬಗ್ಗೆ ನಿಮಗೆ ಹೆಚ್ಚು ಹೇಳಬೇಕಿಲ್ಲ. ಅದು ಚೇಷ್ಟೆಯಿಂದಲೇ ಗುರುತಿಸಿಕೊಳ್ಳುವಂತಹ ಪ್ರಾಣಿ. ತನ್ನ ಆಹಾರಕ್ಕಾಗಿ ಅಂಗಡಿಗಳಿಗೆ ನುಗ್ಗುವುದು, ಸಿಕ್ಕ ಸಿಕ್ಕ ಜನರ ಕೈಲಿರುವ ಆಹಾರ ಪೊಟ್ಟಣಗಳನ್ನು ಕಿತ್ತುಕೊಳ್ಳುವುದು ಮಾಡುತ್ತದೆ.

  • ಉಪಯುಕ್ತ ಮಾಹಿತಿ

    ಪ್ರಪಂಚದ ಮೊದಲ ವರ್ಲ್ಡ್ ಮ್ಯಾಪ್ ಕಂಡುಹಿಡಿದದ್ದು ಯಾರೂ ಗೊತ್ತಾ..?ಗೊತ್ತಾದ್ರೆ ತುಂಬಾ ಹೆಮ್ಮೆ ಪಡ್ತೀರಾ!ಮುಂದೆ ಓದಿ…

    ಇಡೀ ಭೂಮಿ ಕೌತುಗಳ ಆಗರ, ಭಾರತ ಹಾಗು ಇಲ್ಲಿನ ಹಿಂದೂ ಧರ್ಮವನ್ನು ಇಂದು ಇಡೀ ವಿಶ್ವದಾದ್ಯಂತ ಇರುವ ಬಹತೇಕ ದೇಶಗಳು ಸಂಶೋಧನೆ ಮಾಡುತಿದ್ದಾವೆ..! ಶ್ರೀ ಕೃಷ್ಣನ ದ್ವಾರಕೆಯ ಒಂದು ಪ್ರಾಂತ್ಯ ಸ್ಯಾಟಲೈಟ್ ನಿಂದ ನೋಡಿದರೆ ಕೃಷ್ಣನಿಗೆ ಪ್ರಿಯವಾದ ನವಿಲುಗರಿಯಂತೆಯೇ ಕಾಣುತ್ತದೆ. ಮಾನಸ ಸರೋವರ ಹೃದಯದ ಆಕಾರದಲ್ಲಿರುವುದು, ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕುಮಾರ ಪರ್ವತ ಸರ್ಪಗಳ ಹೆಡೆಯನ್ನೇ ಹೋಲುವುದು.

  • ಸುದ್ದಿ

    ತನ್ನ ಹೆಂಡತಿಯ ರೂಮಿನಲ್ಲಿ ಆಕೆಯ ಪ್ರಿಯತಮನನ್ನು ನೋಡಿದ ಗಂಡ ಮಾಡಿದ್ದೇನು ಗೊತ್ತಾ?

    ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಕೆಯ ಪ್ರಿಯತಮನಿಗೆ ಬೆಂಕಿ ಹಚ್ಚಿರುವ ಘಟನೆ ತೆಲಂಗಾಣದ ಚೆವೆಲ್ಲಾದಲ್ಲಿ ನಡೆದಿದೆ.  ಗಂಡ ರವಿ, ಪತ್ನಿ ಭಾಗ್ಯಲಕ್ಷ್ಮಿ ಮತ್ತು ಆಕೆಯ ಪ್ರಿಯತಮನನ್ನು ರೂಮಿನಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸದ್ಯಕ್ಕೆ ಇಬ್ಬರ ಸ್ಥಿತಿ ಗಂಭೀರಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ವರ್ಷಗಳ ಹಿಂದೆ ಭಾಗ್ಯಲಕ್ಷ್ಮಿ ಮತ್ತು ರವಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರ ಸಂಸಾರಿಕ ಜೀವನ ಚೆನ್ನಾಗಿ ನಡೆಯುತ್ತಿತ್ತು. ಆದರೆ ಕೆಲವು ತಿಂಗಳ…

  • ಸುದ್ದಿ

    ರೆಫ್ರಿಜರೇಟರ್ ಸ್ಫೋಟಗೊಂಡು ಮೂವರ ದುರ್ಮರಣ…..!

    ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿ ದಂಪತಿ ಹಾಗೂ ತಾಯಿ ಒಟ್ಟು ಮೂವರು ಮೃತಪಟ್ಟಿರುವ ಘಟನೆ ಚೆನ್ನೈ ಬಳಿಯ ತಂಬರಂ ಪೂರ್ವದ ಸೆಲಾಯುರ್‍ನಲ್ಲಿ ನಡೆದಿದೆ. ಖಾಸಗಿ ಸುದ್ದಿ ವಾಹಿನಿ ವರದಿಗಾರ ಪ್ರಸನ್ನ(35) ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ರೆಫ್ರಿಜಿರೇಟರ್ ಗ್ಯಾಸ್ ಸ್ಫೋಟಗೊಂಡು ದಂಪತಿ ಹಾಗೂ ವ್ಯಕ್ತಿಯ ತಾಯಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿನ ವಸ್ತುಗಳು ಚೂರು ಚೂರಾಗಿದ್ದು, ಗೋಡೆ ಕಪ್ಪಾಗಿದ್ದರಿಂದ ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಗುರುವಾರ ಬೆಳಗ್ಗೆ ಪಕ್ಕದ…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 11 ಜನವರಿ, 2019 ಹಣಕಾಸಿನಲ್ಲಿಸುಧಾರಣೆ ದೀರ್ಘಕಾಲದಿಂದ ಬಾಕಿಯಿರುವ ನಿಮ್ಮ ಬಾಕಿಗಳು ಮತ್ತು ಬಿಲ್ಲುಗಳನ್ನು ಪಾವತಿಸುವುದನ್ನು ಅನುಕೂಲಕರವಾಗಿಸುತ್ತದೆ….