ಸುದ್ದಿ

ನಟ ಕಮಲ್ ಹಾಸನ್ ಅವರ ಮೇಲೆ ಚಪ್ಪಲಿ ತೂರಾಟ….ಧೂರು ದಾಕಲು….!

30

ಮಕ್ಕಳ ನೀಧಿ ಮಯ್ಯಂ ಪಕ್ಷದ ನಾಯಕ ಕಮಲ್ ಹಾಸನ್ ಅವರ ಮೇಲೆ ಅಪರಿಚಿತರು ಚಪ್ಪಲಿ ಎಸೆದ ಘಟನೆ ಬುಧವಾರ ನಡೆದಿದೆ.

ಬುಧವಾರ ಸಂಜೆ ತಮಿಳುನಾಡಿನ ತಿರುಪ್ಪರನಕುಂಡ್ರಂ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಕಮಲ್ ಹಾಸನ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಸಮಯದಲ್ಲ ಚಪ್ಪಲಿ ಎಸೆಯಲಾಗಿದ್ದು, ಅದು ಅವರಿಗೆ ತಾಕದೆ, ಜನರ ಗುಂಪಿನ ನಡುವೆ ಬಂದು ಬಿದ್ದಿದೆ.ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಹನುಮಾನ್ ಸೇನೆಯ ಒಟ್ಟು ಹನ್ನೊಂದು ಜನರ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ.

ತಮಿಳುನಾಡಿನ ಅರವಕುರಿಚಿಯಲ್ಲಿ ಮೇ 19 ರಂದು ನಡೆಯಲಿರುವ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಕಮಲ್ ಹಾಸನ್ ಮೇ 13 ರಂದು ಮಾತನಾಡುತ್ತ, “ಇದು ಮುಸ್ಲಿಂ ಜನರೇ ಹೆಚ್ಚಿರುವ ಪ್ರದೇಶ ಎಂಬ ಕಾರಣಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ನಾನು ಗಾಂಧಿಜೀ ಅವರ ವಿಗ್ರಹದ ಮುಂದೆ ನಿಂತಿರುವ ಕಾರಣಕ್ಕೆ ಹೀಗೆ ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದು, ಅವನ ಹೆಸರು ನಾಥುರಾಮ್ ಗೋಡ್ಸೆ. ಅಲ್ಲಿಂದ ಭಯೋತ್ಪಾದನೆ ಶುರುವಾಯಿತು” ಎಂದಿದ್ದರು.

“ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಗೋಡ್ಸೆ ಎಂದರೆ ಸಾಕಿತ್ತು, ಆದರೆ ಮೊದಲ ಭಯೋತ್ಪಾದಕ ‘ಹಿಂದು’ ಎಂಬ ಪದವನ್ನು ಬಳಕೆ ಮಾಡುವ ಅಗತ್ಯ ಏನಿತ್ತು. ಮುಸ್ಲಿಮರು ಭಯೋತ್ಪಾದನೆ ಮಾಡಿದರೆ ಭಯೋತ್ಪಾದನೆಗೆ ಧರ್ಮವಿಲ್ಲ ಎನ್ನುತ್ತಿರಿ. ಆದರೆ ಈಗ ನೀವು ‘ಹಿಂದು’ ಎಂಬ ಪದ ಬಳಕೆ ಮಾಡುತ್ತಿರುವುದೇಕೆ” ಎಂದು ಅವರನ್ನು ಹಲವರು ಪ್ರಶ್ನಿಸಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ