ಸಿನಿಮಾ

ಅಂಬರೀಶ್ ರವರ ಅಂತಿಮ ದರ್ಶನ ಪಡೆಯಲು ದರ್ಶನ್ ತುಂಬಾ ಲೇಟಾಗಿ ಬಂದಿದ್ದೇಕೆ ಗೊತ್ತಾ?ಏನೆಲ್ಲಾ ಕಷ್ಟಗಳನ್ನು ನಿವಾರಿಸಿಕೊಂಡು ಬಂದು ದರ್ಶನ ಪಡೆದಿದ್ದಾರೆ ಗೊತ್ತಾ ಚಾಲೆಂಜಿಂಗ್ ಸ್ಟಾರ್!

787

ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನ ಸುದ್ದಿ ಕೇಳಿ ವಿದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಚಿತ್ರೀಕರಣವನ್ನು ನಿಲ್ಲಿಸಿ ಬಹಳ ಅಡೆ ತಡೆಗಳನ್ನು ದಾಟಿ ಬೆಂಗಳೂರಿಗೆ ಬಂದಿದ್ದಾರೆ.

ಅಂಬರೀಶ್ ಅವರ ನಿಧನದ ಸುದ್ದಿ ಕೇಳಿ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ ,”ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದರು.

ಬಹುಶಃ ದರ್ಶನ್ ಅವರು ಭಯ ಪಡುವ ಏಕೈಕ ವ್ಯಕ್ತಿ ಎಂದರೆ ಅದು ಅಂಬರೀಶ್ ಅವರೇ ಎನ್ನಬಹುದು.. ಅಷ್ಟು ಪ್ರೀತಿ.. ಅಷ್ಟು ಗೌರವ.. ಆ ಸಂಬಂಧವನ್ನು ಹೇಳಲು ಅಸಾಧ್ಯ..ಸುಮಲತಾ ಅವರೂ ಅಷ್ಟೇ ಅಭಿಶೇಕ್ ಹಾಗೂ ದರ್ಶನ್ ಅವರನ್ನು ಒಂದೇ ರೀತಿಯಾಗಿ ನೋಡುತ್ತಿದ್ದರು..‌ ಅಷ್ಟು ಆತ್ಮೀಯತೆ ಪ್ರೀತಿ ಇತ್ತು..ಅದೇ ರೀತಿಯಾಗಿ ದರ್ಶನ್ ಅವರೂ ಕೂಡ ಸುಮಲತಾ ಅವರನ್ನು ಮದರ್ ಇಂಡಿಯಾ ಎನ್ನು ತ್ತಿದ್ದರು..

ಅಂಬರೀಶ್ ಅವರು ಶನಿವಾರ ರಾತ್ರಿ ಇಹಲೋಕ ತ್ಯಜಿಸಿದಾಗ ದರ್ಶನ್ ಅವರು ಯಜಮಾನ ಸಿನಿಮಾದ ಶೂಟಿಂಗ್ ನಿಮಿತ್ತ ಸ್ವೀಡನ್ ನಲ್ಲಿದ್ದರು.. ವಿಷಯ ತಿಳಿಯುತ್ತಿದ್ದಂತೆ ಅರಗಿಸಿಕೊಳ್ಳಲಾಗದೆ ಎಲ್ಲವನ್ನು ರದ್ದುಗೊಳಿಸಿ ಬೆಂಗಳೂರಿಗೆ ಬರಲು ತಯಾರಾದರು.. ಆದರೆ ದರ್ಶನ್ ಅವರಿಗೆ ಅಲ್ಲಿಯೂ ಕೂಡ ದುರ್ವಿಧಿ ಟಿಕೇಟ್ ಸಿಗದೆ ಪರದಾಡಿ ನಂತರ ಹೇಗೋ ಕಷ್ಟಪಟ್ಟು ಟಿಕೇಟ್ ಪಡೆದು ಇಂದು ಬೆಳಿಗ್ಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ..

ತಮ್ಮ ಅಪ್ಪಾಜಿಯ ಅಂತ್ಯ ಸಂಸ್ಕಾರಕ್ಕೆ ತಡವಾಗಿ ಬರಲು ಕಾರಣ ಏನು ಗೊತ್ತಾ?

ಭಾರತ ಹಾಗೂ ಸ್ವೀಡನ್ ದೇಶಕ್ಕೆ ನೇರವಾದ ವಿಮಾನವಿಲ್ಲ. ದುಬೈ ಮೂಲಕ ಭಾರತಕ್ಕೆ ಪ್ರಯಾಣ ಮಾಡಬೇಕು. ಸ್ವೀಡನ್‍ನಿಂದ ಭಾರತಕ್ಕೆ ಅಂದಾಜು 7 ಸಾವಿರ ಕಿ.ಮೀ ದೂರವಿದೆ. ಹೀಗಾಗಿ ದರ್ಶನ್ ಸ್ವೀಡನ್‍ನಿಂದ ದುಬೈಗೆ ಬಂದು, ದುಬೈನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಬಂದಿದ್ದಾರೆ.
ಸ್ವೀಡನ್‍ನಿಂದ ದುಬೈ, ಟರ್ಕಿ, ಇರಾಕ್, ರೋಮೆನಿಯಾ, ಪೋಲೆಂಡ್ ಸೇರಿದಂತೆ ಹಲವು ದೇಶಗಳನ್ನು ದಾಟಿ ಭಾರತಕ್ಕೆ ಬರಬೇಕು.

ಮೊದಲೇ ಟಿಕೆಟ್ ಬುಕ್ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಶನಿವಾರ ರಾತ್ರಿಯೇ ತುರ್ತಾಗಿ ಭಾನುವಾರ ವಿಮಾನ ಟಿಕೆಟ್ ಬೇಕಾದರೆ ಅಷ್ಟು ಸುಲಭವಾಗಿ ಸಿಗುವುದಿಲ್ಲ. ನಮಗೆ ಬೇಕಾದ ಸಮಯಕ್ಕೆ ಸಿಗುವುದು ಬಹಳ ಕಷ್ಟ. ಈ ಎಲ್ಲ ಕಷ್ಟಗಳನ್ನು ನಿವಾರಿಸಿ ದರ್ಶನ್ ಸೋಮವಾರ ಅಂದರೆ ಇಂದು ಬೆಳಗ್ಗೆ ಬೆಂಗಳೂರು ತಲುಪಿ ತಮ್ಮ ಪ್ರೀತಿಯ ಅಪ್ಪಾಜಿಯ ದರ್ಶನ ಮಾಡಿದ್ದರೆ.

About the author / 

Basavaraj Gowda

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ