ಸುದ್ದಿ

ವಿಚಿತ್ರವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ – ಆಶ್ಚರ್ಯಕ್ಕೆ ಒಳಗಾದ ಶೋರೂಂ ಸಿಬ್ಬಂದಿ,!ಕಾರಣವೇನು ಎಂದು ತಿಳಿದರೆ ಶಾಕ್,.!

51

ದೀಪಾವಳಿಯ ಹಿನ್ನೆಲೆಯಲ್ಲಿ ಕಂಪನಿಗಳ ಮಾರಾಟವು ಮತ್ತೆ ಚೇತರಿಸಿಕೊಂಡಿದೆ. ದೀಪಾವಳಿಗೆ ಜನರು ಹೊಸ ವಾಹನಗಳನ್ನು ಕೊಳ್ಳುವುದು ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯವಾಗಿರುವ ಕಾರಣಕ್ಕೆ ವಾಹನಗಳ ಮಾರಾಟವು ಹೆಚ್ಚಾಗಿದೆ.ಇದೇ ರೀತಿ ಮಧ್ಯ ಪ್ರದೇಶದಲ್ಲಿರುವ ಸಾತ್ನಾ ಜಿಲ್ಲೆಯ ರಾಕೇಶ್ ಕುಮಾರ್ ಗುಪ್ತಾರವರು ಸಹ ಹೊಸ ಸ್ಕೂಟರ್ ಖರೀದಿಸಲು ಬಯಸಿದ್ದಾರೆ. ಅದರಂತೆ ಇತ್ತೀಚಿನ ಹೊಸ ಹೋಂಡಾ ಆಕ್ಟಿವಾ 125 ಸ್ಕೂಟರ್ ಖರೀದಿಸಲು ಡೀಲರ್ ಬಳಿ ಹೋಗಿದ್ದಾರೆ.

ಇದರಲ್ಲೇನು ವಿಶೇಷ ಅಂತೀರಾ? ವಿಶೇಷ ಇರೋದು ಇದರಲ್ಲೆ. ಎಲ್ಲರಂತೆ ರಾಕೇಶ್ ಕುಮಾರ್‍‍ರವರು ಚೆಕ್‍‍ನಲ್ಲೋ, ಡಿಡಿಯಲ್ಲೋ, ಇ‍ಎಂ‍ಐನಲ್ಲೊ ಅಥವಾ ನೂರು, ಇನ್ನೂರು, ಐನೂರು, ಎರಡು ಸಾವಿರ ಮುಖ ಬೆಲೆಯ ನೋಟುಗಳನ್ನು ನೀಡಿ ಹೋಂಡಾ ಆಕ್ಟಿವಾ ಖರೀದಿಸಿದ್ದರೆ ಸುದ್ದಿಯಾಗುತ್ತಿರಲಿಲ್ಲ. ರಾಕೇಶ್‍‍ರವರು ಹೊಸ ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ಸಾತ್ನಾದ ಪನ್ನಾ ನಾಗಾದಲ್ಲಿರುವ ಕೃಷ್ಣ ಹೋಂಡಾ ಡೀಲರ್‍‍ಶಿಪ್‍‍ನಿಂದ ಖರೀದಿಸಿದ್ದಾರೆ. ಖರೀದಿಸಲು ಪೂರ್ತಿ ಹಣವನ್ನೇ ನೀಡಿದ್ದಾರೆ. ಆದರೆ ಈ ಪೂರ್ತಿ ಹಣವು 5 ರೂಪಾಯಿ ಹಾಗೂ 10 ರೂಪಾಯಿ ನಾಣ್ಯಗಳಿಂದ ಕೂಡಿತ್ತು ಎಂಬುದು ವಿಶೇಷ.

ರಾಕೇಶ್‍‍ರವರು ನೀಡಿದ ಹಣವನ್ನು ನೋಡಿ ಡೀಲರ್ ಸಿಬ್ಬಂದಿ ಬೆಸ್ತು ಬಿದ್ದಿದ್ದಾರೆ. ಅವರು ನೀಡಿದ ಎಲ್ಲಾ ನಾಣ್ಯಗಳನ್ನು ಎಣಿಸಲು ಮೂರಕ್ಕೂ ಹೆಚ್ಚು ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಅಂದ ಹಾಗೆ ರಾಕೇಶ್‍‍ರವರು ಖರೀದಿಸಿದ್ದು, ಹೋಂಡಾ ಆಕ್ಟಿವಾ 125 ಸ್ಕೂಟರ್‍‍ನ ಟಾಪ್ ಎಂಡ್ ಮಾದರಿಯನ್ನು.ಈ ಮಾದರಿಯ ಸ್ಕೂಟರ್ ಡಿಸ್ಕ್ ಬ್ರೇಕ್ ಹಾಗೂ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಈ ಸ್ಕೂಟರಿನ ಬೆಲೆಯು ಮಧ್ಯ ಪ್ರದೇಶದ ಸಾತ್ನಾದ ಆನ್‍‍ರೋಡ್ ದರದಂತೆ ರೂ.83,000ಗಳಾಗುತ್ತದೆ. ಡೀಲರ್‍‍ಗಳ ಪುಣ್ಯಕ್ಕೆ ರಾಕೇಶ್‍‍ರವರು 5 ರೂಪಾಯಿ ಹಾಗೂ 10 ರೂಪಾಯಿ ನಾಣ್ಯಗಳನ್ನು ನೀಡಿದ್ದಾರೆ.

ಇವುಗಳ ಬದಲು ಒಂದು ರೂಪಾಯಿ ಹಾಗೂ ಎರಡು ರೂಪಾಯಿ ನಾಣ್ಯಗಳನ್ನು ನೀಡಲಿಲ್ಲವೆಂದು ಡೀಲರ್‍‍ಗಳು ನಿಟ್ಟುಸಿರು ಬಿಟ್ಟಿರುವುದು ಗ್ಯಾರಂಟಿ. ರಾಕೇಶ್ ಕುಮಾರ್ ಗುಪ್ತಾರವರು ಯಾವ ಕಾರಣಕ್ಕೆ ಈ ರೀತಿಯಾಗಿ ಹಣವನ್ನು ಪಾವತಿಸಿದರು ಎಂಬುದು ತಿಳಿದು ಬಂದಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ